ಕೇಂದ್ರ ಸರಕಾರದಿಂದ ಈರುಳ್ಳಿ ಕೃತಕ ಅಭಾವ ಸೃಷ್ಟಿ: ಸಿಸೋಡಿಯಾ

Team Udayavani, Dec 1, 2019, 8:45 PM IST

ಹೊಸದಿಲ್ಲಿ: ಈರುಳ್ಳಿ ಬೇಕಾದಷ್ಟು ದಾಸ್ತಾನು ಇದ್ದರೂ ಕೇಂದ್ರ ಸರಕಾರ ಅದನ್ನು ಬಿಡುಗಡೆ ಮಾಡುತ್ತಿಲ್ಲ. ಈ ಮೂಲಕ ಸರಕಾರ ರಾಜಧಾನಿ ದಿಲ್ಲಿಯಲ್ಲಿ ಬೇಕೆಂದೇ ಕೃತಕ ಅಭಾವ ಸೃಷ್ಟಿಸುತ್ತಿದೆ ಎಂದು ದಿಲ್ಲಿ ಉಪಮುಖ್ಯಮಂತ್ರಿ ಮನೀಶ್‌ ಸಿಸೋಡಿಯಾ ಟೀಕಿಸಿದ್ದಾರೆ.

ಸೆ.5ರಂದು ತನ್ನ ಬಳಿ 56 ಸಾವಿರ ಮೆಟ್ರಿಕ್ ಟನ್ ಈರುಳ್ಳಿ ಇರುವುದಾಗಿ ಕೇಂದ್ರ ಸರಕಾರ ಲಿಖಿತ ರೂಪದಲ್ಲಿ ಹೇಳಿತ್ತು. ಆದರೆ, ಅದೀಗ ದಿಲ್ಲಿ ಸರಕಾರಕ್ಕೆ ಈರುಳ್ಳಿ ಪೂರೈಕೆ ಮಾಡುತ್ತಿಲ್ಲ. ಈಗ ನಗರಾದ್ಯಂತ ಬೆಲೆ 75-110 ರೂ. ವರೆಗೆ ಆಗಿದೆ.

ಕೂಡಲೇ ಕೇಂದ್ರ ನಿತ್ಯ 10 ಟ್ರಕ್‌ನಷ್ಟು ಈರುಳ್ಳಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಬೇಕು. 10 ಟ್ರಕ್‌ ಈರುಳ್ಳಿ ನಾವು ಕೇಳುತ್ತಿದ್ದಾಗ ಒಂದು, ಎರಡು, ಐದು ಟ್ರಕ್‌ ಎಂದು ಹೇಳುತ್ತಿದ್ದರು. ಆದರೆ ಈಗ ಈರುಳ್ಳಿಯನ್ನೇ ಕೊಡುತ್ತಿಲ್ಲ. ಹೀಗೆ ಯಾಕೆ ಮಾಡಲಾಗುತ್ತಿದೆ ಎಂದು ಅವರು ಪ್ರಶ್ನಿಸಿದ್ದಾರೆ.

ಕೇಂದ್ರ ಈರುಳ್ಳಿ ಕೊಡದೇ ಇರುವ ಉದ್ದೇಶ ರಾಜಧಾನಿಯಲ್ಲಿ ಬೆಲೆ ಏರಿಕೆಯಾಗುವಂತೆ ಮಾಡುವುದಾಗಿದೆ. ನ.24ರ ನಂತರ ಒಂದೇ ಒಂದು ಲಾರಿ ಈರುಳ್ಳಿಯನ್ನೂ ಕಳಿಸಿಲ್ಲ. ಹಾಗಿದ್ದರೆ, ದಾಸ್ತಾನು ಇರುವ ಈರುಳ್ಳಿಯನ್ನು ಕೊಳೆಯಲು ಬಿಡಲಾಗುತ್ತಿದೆಯೇ ಎಂದವರು ಪ್ರಶ್ನೆ ಮಾಡಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ