ಪರೀಕ್ಷೆ ಗೆಲ್ಲುವ ಬಗೆ ಹೀಗೆ !


Team Udayavani, Jan 22, 2020, 4:58 AM IST

CHI-13

ಇನ್ನು ಪರೀಕ್ಷಾ ಕಾಲ. ಎಸ್‌ಎಸ್‌ಎಲ್‌ಸಿ, ಪಿಯುಸಿ ವಿದ್ಯಾರ್ಥಿಗಳ ಪೂರ್ವ ತಯಾರಿ ಪರೀಕ್ಷೆಗಳು, ಪಬ್ಲಿಕ್‌ ಪರೀಕ್ಷೆಗಳು. ಹೀಗೆ ವರ್ಷದುದ್ದಕ್ಕೂ ಓದಿದ ಪಾಠಗಳನ್ನು ಮನನ ಮಾಡಿ ಉತ್ತರ ಪತ್ರಿಕೆಗಿಳಿಸುವ ಅನಿವಾರ್ಯತೆ ವಿದ್ಯಾರ್ಥಿಗಳದ್ದು. ಅಧ್ಯಾಪನದ ಸಾರ್ಥ ಕತೆಯ ಅಳತೆಗೋಲು ಕೂಡ ಈ ಪರೀ ಕ್ಷೆಯೇ. ಪ್ರತಿಯೋರ್ವ ವಿದ್ಯಾರ್ಥಿಯೂ ಉತ್ತೀರ್ಣನಾಗಿ ಶೇ.100 ಫ‌ಲಿತಾಂಶ ತರಲೆಂಬ ಹೆಬ್ಬಯಕೆಯೂ ಶಿಕ್ಷಕ ವೃಂದದ್ದು. ತಮ್ಮ ಮಕ್ಕಳು ಅತ್ಯುತ್ತಮ ಅಂಕ ಗಳಿಸಿ ತಮಗೆ ಹೆಮ್ಮೆ, ಶಾಲೆಗೆ ಕೀರ್ತಿ ತರಲೆಂಬ ಆಸೆ ಪೋಷಕರದ್ದು. ಹೀಗೆ ಎಲ್ಲದರ ಮಿಶ್ರಣ ಶೈಕ್ಷಣಿಕ ವರ್ಷದ ಕೊನೆಯ 2-3 ತಿಂಗಳುಗಳು.

ತಮ್ಮ ಮಕ್ಕಳು ಅಪ್ರತಿಮರಾಗ ಬೇಕೆಂಬ ಆಸೆ ಸಹಜ. ಈ ನಿಟ್ಟಿನಲ್ಲಿ ಹೆತ್ತವರು‌ ಪ್ರಯತ್ನಿಸುವುದೂ ಅಷ್ಟೇ ಸಹಜ. ಓದಲು, ಅಂಕಗಳಿಸಲು ಪ್ರೇರಣೆ ನೀಡ ಬೇಕೇ ಹೊರತು ಒತ್ತಡ ಹೇರಬಾ ರದು. ಬದಲಾದ ಈ ಕಾಲಘಟ್ಟದಲ್ಲಿ ಸ್ಪರ್ಧಾತ್ಮಕ ಸಮಾಜದಲ್ಲಿ ಪೋಷಣೆಯ ಜತೆ ಮಕ್ಕಳಿಗೆ ಶಿಕ್ಷಣ ನೀಡಿ ನೈತಿಕ ಮೌಲ್ಯಗಳನ್ನು ಬೆಳೆಸುವ ಹೊಣೆಯೂ ಪೋಷಕರದ್ದು.

ಹೆತ್ತವರು ಶಿಕ್ಷಕರೊಂದಿಗೆ ಕೈಜೋ ಡಿಸಿದಾಗ ಮಕ್ಕಳ ಭವಿಷ್ಯ ಉಜ್ವಲವಾಗು ವುದು ನಿಸ್ಸಂದೇಹ. ಮಕ್ಕಳಿಗೆ ತರಗತಿಗ ಳಲ್ಲಿನ ಪ್ರತಿದಿನದ ಪಾಠವೂ ಮಹತ್ವದುc. ಪುನರಾವರ್ತನೆ ತರಗತಿಗಳಂತೂ ಅತ್ಯ ಮೂಲ್ಯ. ಮನೆಯ, ನೆಂಟರಿಷ್ಟರ ಮದುವೆ ಮುಂಜಿಗಳೆಂದು ಗೈರು ಹಾಜರಾದಾಗ ಮಕ್ಕಳಿಗೆ ಉಂಟಾಗುವ ನಷ್ಟ ಅಷ್ಟಿಷ್ಟಲ್ಲ. ಆದುದರಿಂದ ಇಂತಹ ಸನ್ನಿವೇಶಗಳನ್ನು ಆದಷ್ಟೂ ತಪ್ಪಿಸುವ ಹೊಣೆ ಪೋಷಕರದ್ದು.

ಆದಷ್ಟೂ ವಿದ್ಯಾರ್ಜನೆಗೆ ತೊಂದರೆ ಯಾಗದ ರೀತಿ ಯಲ್ಲಿ ಸಮಾರಂಭಗಳನ್ನು ಆಯೋಜಿಸುವುದು ಅಥವಾ ಭೇಟಿ ನೀಡುವುದನ್ನು ರೂಢಿಸಿಕೊಳ್ಳಬೇಕು. ಅತ್ಯಂತ ಅನಿವಾರ್ಯ ಕಾರ ಣದ ಹೊರತು ಪಾಠಗಳ ಪುನರಾವರ್ತನೆ ನಡೆ ಯುವ ಈ ಸಂದರ್ಭ ಮಕ್ಕಳು ಶಾಲೆ ಗಳಿಗೆ ಗೈರಾಗದಂತೆ ಎಚ್ಚರ ವಹಿಸಬೇಕು.

ವಿದ್ಯಾರ್ಥಿಗಳಿಗೆ ಪೂರಕವಾಗಿರಿ
ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳು ದಿನಕ್ಕೆ 6ರಿಂದ 8 ಗಂಟೆ ಗಳಷ್ಟು ಕಾಲ ಅಭ್ಯಾಸ ಮಾಡಬೇಕು. ಪರೀಕ್ಷಾ ಸಮಯದಲ್ಲಿ ಇನ್ನೂ ಹೆಚ್ಚಿನ ಅವಧಿ ಬೇಕು. ಕೆಲವು ವಿದ್ಯಾರ್ಥಿಗಳು ಪೂರ್ವಾಹ್ನದ ಓದನ್ನು ಇಷ್ಟಪಟ್ಟರೆ ಕೆಲವರು ರಾತ್ರಿ ಓದುವ ಅಭ್ಯಾಸ ರೂಢಿಸಿ ಕೊಂಡಿರುತ್ತಾರೆ.
ಸಹಜವಾಗಿಯೇ ಅಧ್ಯಯನದಿಂದುಂಟಾಗುವ ಮಾನಸಿಕ ಒತ್ತಡವು ದೈಹಿಕ ಆಯಾಸವಾಗಿ ಪರಿಣ ಮಿಸಿ ದೇಹ ದಣಿದು ನಿದ್ದೆಗೆ ಜಾರುತ್ತದೆ.

ಇಂಥ ಪರಿಸ್ಥಿತಿಯನ್ನು ತಪ್ಪಿಸಲು ಹೆತ್ತವರು ತಮ್ಮ ಮಕ್ಕಳನ್ನು ಗಮನಿಸುತ್ತಾ ಅವರ ಜತೆಗಿರಬೇಕಾದುದು ಅನಿ ವಾರ್ಯ. ನಿರಂತರ ಓದು ತ್ರಾಸದಾಯ ಕವಾಗಿದ್ದು ಆಗಾಗ್ಗೆ ಒಂದಷ್ಟು ವಿರಾಮ, ವಿಶ್ರಾಂತಿ, ಸನ್ನಿವೇಶ ಬದಲಾವಣೆ, ಲಘು ಆಹಾರ ಸೇವನೆಗಳೊಂದಿಗೆ ಮತ್ತೆ ಕಲಿಕೆಗೆ ತೊಡಗಿಸಿಕೊಳ್ಳುವಂತೆ ಸಹಕರಿಸಬೇಕು.

ನೋಡುವ ಕಣ್ಣಿಗೆ ಅಧ್ಯಯನವು ಸುಲಭ ಪ್ರಕ್ರಿಯೆ. ಆದರೆ ಓದುವ ಕೆಲಸ ಸುಲಭವಲ್ಲ. ಪರೀಕ್ಷೆಯನ್ನು ಕೇಂದ್ರೀಕರಿಸಿ ಓದುವ ವಿದ್ಯಾರ್ಥಿಗಳು ಮಾನಸಿಕ ವಾಗಿಯೂ ದೈಹಿಕವಾಗಿಯೂ ಆಯಾಸ ಗೊಳ್ಳುತ್ತಾರೆ. ಅದಕ್ಕಾಗಿ ಅವರಿಗೆ ಗುಣ ಮಟ್ಟದ ಆಹಾರ ನೀಡುವ ಹೊಣೆ ಪೋಷಕರದ್ದು. ತಾಜಾ ತರಕಾರಿಗಳು, ಹಣ್ಣುಹಂಪಲುಗಳು, ಮೊಳಕೆ ಬರಿಸಿದ ಕಾಳುಗಳು, ಹಾಲು ಮೊಸರು ಹೀಗಿರಲಿ ಆಹಾರದ ಅಂಶಗಳು. ಕರಿದ ತಿಂಡಿಗಳು, ರಸ್ತೆ ಬದಿ ತಿಂಡಿಗಳು, ಎಣ್ಣೆ ಪದಾರ್ಥಗಳ ಸೇವನೆಯಿಂದ ದೂರವಿಡಿ. ಯಥೇತ್ಛ ಶುದ್ಧ ನೀರಿನ ಸೇವನೆ ಆರೋಗ್ಯಕ್ಕೆ ಉತ್ತಮ. ಅಂತೆಯೇ ಮಾಂಸಾಹಾರ ಜೀರ್ಣವಾಗಲು ತೆಗೆದುಕೊಳ್ಳುವ ಅವಧಿ ಅಧಿಕವಾಗಿದ್ದು ಪರೀಕ್ಷಾ ಸಂದರ್ಭದಲ್ಲಿ ಆರೋಗ್ಯದ ದೃಷ್ಟಿಯಿಂದ ಇವುಗಳಿಂದ ದೂರವಿರುವುದೊಳಿತು.

ತ್ರಿಕೋನ ಸರಣಿ
ಕಲಿಕಾ ಪ್ರಕ್ರಿಯೆಯು ಒಂದು ತ್ರಿಕೋನ ಸರಣಿ. ಪೋಷಕ, ಶಿಕ್ಷಕ, ವಿದ್ಯಾರ್ಥಿಗಳೆಂಬ ಮೂರು ಗಾಲಿಗಳ ವಾಹನದಂತೆ. ತಮ್ಮ ವೈಯಕ್ತಿಕ ಕಷ್ಟ ಸುಖಗಳನ್ನೆಲ್ಲ ಬದಿಗೊತ್ತಿ ವಿದ್ಯಾರ್ಥಿಗಳ ಪ್ರಗತಿಗೆ ದುಡಿಯುತ್ತಿರುವ ಶಿಕ್ಷಕ ಸಮುದಾಯವೇ ವಿದ್ಯಾರ್ಥಿಗಳಿಗೆ ಶ್ರೀರಕ್ಷೆ. ನಿಸ್ವಾರ್ಥ ಮನದ ಗುರು ಪರಂಪರೆಯ ದುಡಿಮೆಗೆ ಪ್ರೋತ್ಸಾಹ ನೀಡಿ ಬೆನ್ನೆಲುಬಾಗಿ ಹೆತ್ತ ವರು ಸಹಕರಿಸಿದಾಗ ಅತ್ಯುತ್ತಮ ಫ‌ಲಿತಾಂಶ ನಮ್ಮದಾಗುವುದು ಸ್ಪಷ್ಟ.

ತಾಂತ್ರಿಕತೆಯ ಮಾಂತ್ರಿಕತೆ
ದರ್ಶನ, ದೂರವಾಣಿ, ಮೊಬೈಲ್, ಇಂಟರ್ನೆಟ್‌ಗಳೆಂಬ ಮಾಯಾಲೋಕ ಮಕ್ಕಳನ್ನು ಕೈಬೀಸಿ ಕರೆಯುತ್ತದೆ. ಪೋಷಕರು ಕೂಡಾ ಈ ನಿಟ್ಟಿನಲ್ಲಿ ಜಾಗ್ರತೆ ವಹಿಸಬೇಕು. ಮನೆಯವರೆಲ್ಲ ಟಿ.ವಿ. ನೋಡುತ್ತಾ ನೀನು ಓದು ಎಂದರೆ ಮಗುವಾದರೂ ಏನು ಮಾಡುವುದು ಹೇಳಿ? ಸಹಜವಾದ ಆಸೆಯಿಂದ ದೂರದರ್ಶನ, ಮೊಬೈಲ್‌ಗ‌ಳತ್ತ ಇಣುಕುತ್ತದೆ. ಅದಕ್ಕಾಗಿ ಪರೀಕ್ಷೆಯ ಈ ಅವಧಿಯಲ್ಲಾದರೂ ಆ ಮಾಂತ್ರಿಕ ಉಪಕರಣಗಳಿಂದ ಒಂದಷ್ಟು ದೂರವಿರುವ ಪ್ರಯತ್ನ ಆಗಬೇಕು. ತ್ಯಾಗ ನಮ್ಮ ಮಕ್ಕಳಿಗಾಗಿ ಎಂದು ಭಾವಿಸಿದಾಗ ಯಾವುದೇ ಕಾರ್ಯವೂ ಹೊರೆಯಾಗದು.

ಇದು ಪರೀಕ್ಷಾ ಕಾಲ. ಚಳಿಗಾಲ, ಬೇಸಗೆಗಾಲ, ಮಳೆಗಾಲವಿದ್ದ ಹಾಗೆಯೇ. ಪರೀಕ್ಷಾ ಕಾಲವೂ ಮೂರು ತಿಂಗಳು ಇದ್ದೇ ಇರುತ್ತದೆ. ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರೆಂಬ ಮೂರೂ ಗಾಲಿಗಳ ಸಂಘಟನಾ ಪ್ರಯತ್ನದಿಂದ ಮಾತ್ರ ಯಶಸ್ಸಿನ ಗಾಡಿ ಸಾಗಲು ಸಾಧ್ಯ. ಹಾಗಾಗಿ ಪ್ರತಿಯೊಬ್ಬರೂ ಪರಸ್ಪರ ಸಹಕಾರ, ಸಮನ್ವ ಯತೆಯಿಂದ ಸಾಗಬೇಕು. ಅದರೊಂದಿಗೆ ಅವರವರ ಪಾಲಿನ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿಭಾಯಿಸಬೇಕು ಎನ್ನುತ್ತಾರೆ ಶಿಕ್ಷಕಿ ಪುತ್ತೂರಿನ ಪುಷ್ಪಲತಾ ಎಂ.

ಟಾಪ್ ನ್ಯೂಸ್

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ಅರ್ಜಿ ನಿರಾಕರಿಸಿದ ನ್ಯಾಯಾಲಯ

Interim Bail: ಹೇಮಂತ್ ಸೋರೆನ್ ಗೆ ಮಧ್ಯಂತರ ಜಾಮೀನು ನಿರಾಕರಿಸಿದ ನ್ಯಾಯಾಲಯ

randeep surjewala

Davanagere; ವಿಧಾನಸಭೆ ಸೋಲಿನ ಕಾರಣದಿಂದ ಬರಪರಿಹಾರ ನೀಡದೆ ಮೋದಿ-ಶಾ ಸೇಡು: ಸುರ್ಜೆವಾಲ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

14

Tollywood: ಅಧಿಕೃತವಾಗಿ ರಿವೀಲ್‌ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್‌ ಡೇಟ್

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

Mumbai 26/11 ದಾಳಿಯ ವಕೀಲ ಉಜ್ವಲ್‌ ನಿಕಮ್‌ ಗೆ ಬಿಜೆಪಿ ಟಿಕೆಟ್‌, ಪೂನಮ್‌ ಗೆ ಕೊಕ್?

s suresh kumar

Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ

13

Sandalwood: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ‘777 ಚಾರ್ಲಿʼ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.