ಚೂರಿ ದಾಳಿ: ವ್ಯಕ್ತಿ ಹತ್ಯೆ
Team Udayavani, Feb 3, 2020, 1:13 AM IST
ಲಂಡನ್: ದಕ್ಷಿಣ ಲಂಡನ್ನ ಸ್ಟ್ರೀಟ್ಹ್ಯಾಮ್ ಎಂಬಲ್ಲಿ ವ್ಯಕ್ತಿ ಚೂರಿ ಮೂಲಕ ದಾಳಿ ನಡೆಸಿ ಹಲವರನ್ನು ಗಾಯಗೊಳಿಸಿದ ಘಟನೆ ರವಿವಾರ ನಡೆದಿದೆ. ಕೂಡಲೇ ಕಾರ್ಯಪ್ರವೃತ್ತರಾದ ಸ್ಕಾಟ್ಲ್ಯಾಂಡ್ ಯಾರ್ಡ್ ಪೊಲೀಸರು ಆತನನ್ನು ಗುಂಡು ಹಾರಿಸಿ ಕೊಂದಿದ್ದಾರೆ.
ಇದೊಂದು ಭಯೋತ್ಪಾದನ ಕೃತ್ಯವೆಂದು ಪೊಲೀಸ್ ಅಧಿಕಾರಿಗಳು ಪ್ರಕಟಿಸಿದ್ದಾರೆ. ಅಸುನೀಗಿದ ವ್ಯಕ್ತಿ ನಡೆಸಿದ ಚೂರಿ ದಾಳಿಗೆ ಹಲವಾರು ಮಂದಿ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. 2019ರ ನವೆಂಬರ್ನಲ್ಲಿ ಉಸ್ಮಾನ್ ಖಾನ್ ಎಂಬಾತ ನಡೆಸಿದ್ದ ಚೂರಿ ದಾಳಿಯಲ್ಲಿ ಇಬ್ಬರು ಅಸುನೀಗಿದ್ದರು.