ಬಾಗಿಲು ತೆರೆದ ಬಾವಿ

Team Udayavani, Feb 10, 2020, 2:52 PM IST

isiri-tdy-8

ಸಾಂಧರ್ಬಿಕ ಚಿತ್ರ

ತೆರೆದ ಬಾವಿಗಳಲ್ಲಿ ನೀರಿಲ್ಲವೆಂದು ಅವುಗಳನ್ನು ನಿರ್ದಾಕ್ಷಿಣ್ಯವಾಗಿ ಮುಚ್ಚಿಹಾಕುತ್ತಿರುವ ಕಾಲವಿದು. ಉದಾಹರಣೆಗಳಿಗೆ ವ್ಯತಿರಿಕ್ತವಾಗಿ ಒಣಗುತ್ತಿದ್ದ ಕೊಳವೆಬಾವಿಗಳಿಗೆ ಆಸರೆಯಾದ ಒಂದು ತೆರೆದ ಬಾವಿಯ ಕಥೆ ಇದು..

ಹಿರಿಯೂರು ತಾಲ್ಲೂಕು, ಸೂಗೂರಿನ ತಿಪ್ಪಮ್ಮ 1983ರಲ್ಲಿ ಒಂದು ತೆರೆದ ಬಾವಿ ತೆಗೆಸಿದರು. ಆರಂಭದ 4- 5 ವರ್ಷ ನೀರಿಗೆ ಯಾವುದೇ ರೀತಿಯ ಸಮಸ್ಯೆ ಉಂಟಾಗಲಿಲ್ಲ. ಆನಂತರ ಮಳೆ ಕೊರತೆ ಹಾಗೂ ಅಂತರ್ಜಲ ಕುಸಿತದಿಂದ ನೀರು ಬತ್ತಿ ಹೋಯಿತು. 1990ರ ವೇಳೆಗೆ ಕ್ರಮೇಣ ದಡ ಕುಸಿದು ಮಣ್ಣುತುಂಬಿಕೊಂಡು ಅದು ಹಾಳು ಬಾವಿಯಾಗಿ ಮಾರ್ಪಾಡಾಯಿತು. ಕೊಳವೆಬಾವಿಯ ಆಗಮನವೂ ಸಹ ಇದನ್ನು ನಿರ್ಲಕ್ಷ್ಯ ಮಾಡಲು ಪ್ರಮುಖ ಕಾರಣ.

ಕೊಳವೆಬಾವಿಗೂ ಮರುಜೀವ :  ಇದಾಗಿ 28 ವರ್ಷಗಳ ನಂತರ- ಅಂದರೆ, 2018ರಲ್ಲಿ ತಿಪ್ಪಮ್ಮನವರಿಗೆ ಮತ್ತೆ ಬಾವಿಯ ನೆನಪಾಯಿತು. ಬಾವಿಯಲ್ಲಿ ತುಂಬಿದ್ದ ಐದು ಅಡಿಯಷ್ಟು ಹೂಳು ತೆಗೆಸಿದರು. ಕುಸಿದಿದ್ದ ದಡ ಕತ್ತರಿಸಿ ಆಕಾರ ಸರಿಪಡಿಸಿದರು. ಮಳೆ ನೀರು ಬರಬಹುದಾದ ಬಾವಿಯ ಮೇಲ್ಭಾಗದ ಹೊಲದಲ್ಲಿ ಕಾಲುವೆ ತೆಗೆದು ನೀರು ಸರಾಗವಾಗಿ ಹರಿಯಲು ಅನುವು ಮಾಡಿದರು. ನೀರು, ಬಾವಿಗೆ ಬೀಳುವ ಮುನ್ನ ಒಂದು ಹೂಳು ಸಂಗ್ರಹಣಾ ತೊಟ್ಟಿ ಸೇರುವಂತೆ ಮಾಡಿ ಸಿಮೆಂಟ್‌ ಪೈಪ್‌ ಕೂರಿಸಿದರು. ಇದರಿಂದ, ಹೊಲದ ಮಣ್ಣು ಮತ್ತು ಹೂಳು, ಬಾವಿಯಲ್ಲಿ ಶೇಖರವಾಗುವುದು ತಪ್ಪಿತು. 2018ರಲ್ಲಿ ಸುಮಾರಾಗಿ ಮಳೆ ಬಿದ್ದಾಗಲೇ ಹೊಲದ ನೀರೆಲ್ಲಾ ಕಾಲುವೆ ಮೂಲಕ ಹರಿದು 3 ಸಲ ಬಾವಿ ಭರ್ತಿಯಾಯಿತು. ಎಷ್ಟೋ ವರ್ಷಗಳ ನಂತರ ಬಾವಿಯಲ್ಲಿ ನೀರು ತುಂಬಿತ್ತು. 2019ರಲ್ಲಿಯೂ ಉತ್ತಮ ಮಳೆಯಾಗಿ 2 ಸಲ ನೀರು ತುಂಬಿ ನೆಲದಲ್ಲಿ ಇಂಗಿದೆ. ಈ ಬಾವಿಯಲ್ಲಿ ನೀರು ಇಂಗುವುದರಿಂದ ಸುತ್ತಮುತ್ತಲ ಕನಿಷ್ಠ 3 ಕೊಳವೆ ಬಾವಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗಿದೆ ಎನ್ನುತ್ತಾರೆ ಅಕ್ಕಪಕ್ಕದ ರೈತರು. ಸ್ವತಃ ವೀರಭದ್ರಪ್ಪನವರ ಕೊಳವೆಬಾವಿಯೇ, ತೆರೆದ ಬಾವಿಯ ಜೀರ್ಣೋದ್ಧಾರದ ಮೊದಲ ಫ‌ಲಾನುಭವಿ. ಏಕೆಂದರೆ, ಕೇವಲ ಒಂದಿಂಚು ನೀರು ಕೊಡುತ್ತಿದ್ದ ಕೊಳವೆಬಾವಿ ಈಗ 2.5 ಇಂಚು ನೀರು ಕೊಡುತ್ತಿದೆ.

ನಬಾರ್ಡ್‌ನಿಂದ ಸಹಾಯ :  ಶಿಥಿಲಗೊಂಡಿದ್ದ ತೆರೆದ ಬಾವಿಯನ್ನು ಸರಿಪಡಿಸುವ ಕೆಲಸಕ್ಕೆ ಉತ್ತೇಜನ ನೀಡಿದ್ದು ನಬಾರ್ಡ್‌ನ “ಮಣ್ಣು ಆರೋಗ್ಯ ಯೋಜನೆ’. ಬಾವಿ ಶಿಥಿಲಗೊಂಡಿದ್ದನ್ನು ಕಂಡು ನಬಾರ್ಡ್‌ ಸಿಬ್ಬಂದಿ ಅದನ್ನು ಜೀರ್ಣೋದ್ಧಾರ ಮಾಡುವ ಪ್ರಸ್ತಾಪವನ್ನು ಮುಂದಿಟ್ಟರು. ತಿಪ್ಪಮ್ಮನವರು ಒಪ್ಪಿದರು. ನಬಾರ್ಡ್‌ ನೆರವನ್ನು ಹೊರತುಪಡಿಸಿ, ತಗುಲಿದ 25 ಸಾವಿರ ವೆಚ್ಚವನ್ನು ಮನೆಯವರೇ ಭರಿಸಿದ್ದರು. ಇವರ 3.5 ಎಕರೆಗೂ ಯೋಜನೆ ಅನುದಾನದಿಂದ ಬದುಗಳ ನಿರ್ಮಾಣ ಮಾಡಲಾಗಿದೆ. ಮೊದಲೆಲ್ಲಾ ಹೊಲದಲ್ಲಿ ಬಿದ್ದ ನೀರು ಹರಿದು ಮೇಲ್ಮಣ್ಣಿನ ಸಮೇತ ಹಳ್ಳಕ್ಕೆ ಹೋಗುತ್ತಿತ್ತು. ಈಗ ಬದುಗಳ ನಿರ್ಮಾಣದ ನಂತರ ಬಿದ್ದ ಮಳೆಯ ಒಂದು ಹನಿಯೂ ಸಹ ಹೊರ ಹೋಗುತ್ತಿಲ್ಲ. ನೀರು ಅಲ್ಲಲ್ಲೇ ಇಂಗುತ್ತಿದೆ. ಮಣ್ಣಿನಲ್ಲಿ ತೇವಾಂಶದ ಪ್ರಮಾಣ ಹೆಚ್ಚಿಸಿದೆ. ಸ್ವಲ್ಪ ದಿವಸ ಮಳೆ ಬಾರದಿದ್ದರೂ ಬೆಳೆಗಳು ಒಣಗುವುದಿಲ್ಲ.

ಹೆಚ್ಚಿದ ‌ಅಂತರ್ಜಲ :  ಕೊಳವೆಬಾವಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದರಿಂದ ವೀರಭದ್ರಪ್ಪ 2018 ಮತ್ತು 2019ರಲ್ಲಿ ಎರಡು ಎಕರೆಗೆ ಹತ್ತಿ ಹಾಕಿದ್ದರು. ಎರಡೂ ವರ್ಷ ತಲಾ 10 ಕ್ವಿಂಟಾಲ್‌ ಹತ್ತಿ ಇಳುವರಿ ಬಂದಿದ್ದು ಪ್ರತಿ ಕ್ವಿಂಟಾಲಿಗೆ 6,000ದಂತೆ 60,000 ರೂ. ಆದಾಯ ಪಡೆದಿದ್ದಾರೆ. 2 ವರ್ಷದಿಂದ ಬಂದ ಒಟ್ಟು ಆದಾಯ 1,20,000 ರೂ.ಗಳು. ಇದರ ಜೊತೆಗೆ ಹತ್ತಿಯೊಂದಿಗೆ ತರಕಾರಿ ಬೆಳೆಗಳಾದ ಬದನೆ, ಮರಬೆಂಡೆ, ಮೆಣಸಿನಕಾಯಿ, ಅಗಸೆ ಇತ್ಯಾದಿ ಉಪಬೆಳೆಗಳನ್ನೂ ಬೆಳೆಯುತ್ತಿದ್ದಾರೆ. ಇದರಲ್ಲಿ ಬಹುತೇಕ ಮನೆ ಬಳಕೆಗೆ ಉಪಯೋಗಿಸಿ ಉಳಿದದ್ದನ್ನು ಮಾರಾಟ ಮಾಡುತ್ತಿದ್ದಾರೆ.

-ಮಲ್ಲಿಕಾರ್ಜುನ ಹೊಸಪಾಳ್ಯ

ಟಾಪ್ ನ್ಯೂಸ್

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Neha ಹತ್ಯೆ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ: ಸರಕಾರದ ವಿರುದ್ಧ ಆರ್.ಅಶೋಕ್ ಕಿಡಿ

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೋಟಿಸ್

Fake Video: ಅಮಿತ್ ಶಾ ನಕಲಿ ವಿಡಿಯೋ ಪ್ರಕರಣ… ಓರ್ವ ಬಂಧನ, 3 ವಿಪಕ್ಷ ನಾಯಕರಿಗೆ ನೊಟೀಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪದವೀಧರನ ಕೈ ಹಿಡಿದ ಜೇನು ಕೃಷಿ

article about life story

ಬದುಕು ಕೊಟ್ಟ ಜೋಳದ ರೊಟ್ಟಿ!

suggestion to the sugarcane grower

ಕಬ್ಬು ಬೆಳೆವವರಿಗೆ ಕಿವಿಮಾತು

Oppo F19

ಒಪ್ಪಬಹುದಾದ ಒಪ್ಪೋ ಎಫ್19

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

ಏಪ್ರಿಲ್‌ನಲ್ಲಿ ಕಾರುಗಳ ಸುಗ್ಗಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

60 ವರ್ಷಗಳ ಕಾಲ ಆಡಳಿತ ನಡೆಸಿದ ಕಾಂಗ್ರೆಸ್ ನಿಂದ ದಲಿತರ ಶೋಷಣೆ: ಜಗದೀಶ ಹಿರೇಮನಿ ಆರೋಪ

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Bribe: ಲಂಚ ಸ್ವೀಕರಿಸುವ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಶಿಡ್ಲಘಟ್ಟ ತಾ.ಪಂ ಇಒ ಮುನಿರಾಜು

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

Prajwal Revanna Case: ಮಾತೃಶಕ್ತಿಗೆ ಅವಮಾನವಾಗೋದನ್ನು ಸಹಿಸಿಕೊಳ್ಳಲ್ಲ: ಅಮಿತ್‌ ಶಾ

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

JDS: ಆಶ್ಲೀಲ ವಿಡಿಯೋ ಪ್ರಕರಣ; ಜೆಡಿಎಸ್‌ ಪಕ್ಷದಿಂದ ಪ್ರಜ್ವಲ್‌ ರೇವಣ್ಣ ಅಮಾನತು

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

ಈ ಪೆನ್‌ಡ್ರೈವ್‌ನಲ್ಲಿರುವ ವಿಡಿಯೋ ನಿಜ: ನಾನು, ಹೀರೊಯಿನ್ ಸೇರಿ ಮಾಡಿದ ವಿಡಿಯೋ ಇದು; ಪ್ರಥಮ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.