ಕಪ್ಪು ಬಟ್ಟೆ ಧರಿಸಿ ಕರಾಳ ದಿನ ಆಚರಣೆ

Team Udayavani, Mar 2, 2020, 5:36 PM IST

kolar-tdy-1

ಕೆಜಿಎಫ್: ಬಿಜಿಎಂಎಲ್‌ ಮುಚ್ಚಿ ಇಂದಿಗೆ 20 ವರ್ಷ ದಾಟಿದ ಹಿನ್ನೆಲೆಯಲ್ಲಿ ಕೆಜಿಎಫ್ ಕರಾಳ ದಿನ ಒಕ್ಕೂಟದ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಪೈಲೈಟ್ಸ್‌ ವೃತ್ತದಲ್ಲಿ ಕಪ್ಪು ಬಟ್ಟೆ ಧರಿಸಿದ ಕಾರ್ಯಕರ್ತರು, ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಘೋಷಣೆ ಕೂಗಿದರು. ಬಿಜಿಎಂಎಲ್‌ನಲ್ಲಿ ಇನ್ನೂ ಚಿನ್ನದ ನಿಕ್ಷೇಪಗಳು ಇವೆ. ಅದನ್ನು ಪ್ರಯೋಗಾಲಯಗಳು ಪುಷ್ಟೀಕರಿಸಿದೆ. ಆದರೆ, ರಾಜ್ಯ ಮತ್ತು ಕೇಂದ್ರ ಸರ್ಕಾರ ಮಾತ್ರ ಯಾವುದೇ ರೀತಿಯ ಕ್ರಮ ತೆಗೆದುಕೊಳ್ಳದೆ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಸೈನೈಡ್‌ ದಿಬ್ಬದಲ್ಲಿ ಚಿನ್ನದ ನಿಕ್ಷೇಪ ಇದೆ. ಭೂಮಿಯಲ್ಲಿ ಚಿನ್ನದ ನಿಕ್ಷೇಪ ಇನ್ನೂ ಇದ್ದು, ಅತ್ಯಾಧುನಿಕ ತಂತ್ರಜ್ಞಾನ ಬಳಸಿದರೆ ಚಿನ್ನ ತೆಗೆಯಬಹುದು. ಗಣಿ ಕಾರ್ಮಿಕರ ಪರ ಚುನಾವಣೆ ಸಮಯದಲ್ಲಿ ಮಾತನಾಡುವ ಜನಪ್ರತಿನಿಧಿಗಳು, ಕಾಲೋನಿಗಳಲ್ಲಿರುವ ಮೈನಿಂಗ್‌ ಕಾರ್ಮಿಕರ ಸ್ಥಿತಿಗತಿ ಬಗ್ಗೆ ಯೋಚನೆ ಮಾಡುತ್ತಿಲ್ಲ. ಕಾರ್ಮಿಕರು ವಾಸಿಸುತ್ತಿರುವ ಮನೆಗಳನ್ನು ಅವರಿಗೇ ಇನ್ನೂ ನೀಡಿಲ್ಲ. ಬಾಕಿ ಹಣವನ್ನು ವಿತರಣೆ ಮಾಡಿಲ್ಲ. ಬದಲಿ ಉದ್ಯೋಗಾವಕಾಶ ಕಲ್ಪಿಸಿಕೊಟ್ಟಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.

ಕೆಜಿಎಫ್ ನಾಗರಿಕರಿಗೆ ಕರಾಳ ದಿನವಾಗಿದೆ. ಇಪ್ಪತ್ತು ವರ್ಷ ದಾಟಿದರೂ ಒಂದು ನಿರ್ಧಾರ ತೆಗೆದುಕೊಂಡು ಕಾರ್ಮಿಕರಿಗೆ ಅನುಕೂಲ ಮಾಡಿಕೊಡಲು ಸರ್ಕಾರಗಳ ಕೈಯಲ್ಲಿ ಸಾಧ್ಯವಾಗಿಲ್ಲ. ಈಗ ನಮ್ಮ ರಾಜ್ಯದವರೇ ಗಣಿ ಸಚಿವರಾಗಿದ್ದಾರೆ. ಅವರಾದರೂಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದು ಒತ್ತಾಯಿಸಲಾಯಿತು.

ಒಕ್ಕೂಟದ ಪದಾಧಿಕಾರಿಗಳಾದ ರಮೇಶ್‌ ಲೋಗನಾಥನ್‌, ಸುರೇಶ್‌ ಬಾಬುಯ, ಅರಿ, ಸಂತೋಷ್‌, ರಂಜಿತ್‌, ಚರಣ್‌, ಜನಾಧಿಕಾರದ ರಾಮಮೂರ್ತಿ ಮತ್ತು ರಾಜಪ್ಪ ಹಾಜರಿದ್ದರು.

ಟಾಪ್ ನ್ಯೂಸ್

10-ಉವ-ಉಸಿಒನ

Madhur Temple: ಏಕದಂತನ ಚಿತ್ರವೇ ಮೂರ್ತಿ ಆದ ಪರಿ

CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ

CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ

Hubli; ಫಿನಾಯಿಲ್ ಸೇವಿಸಿದ ಅಂಜಲಿ ಅಂಬಿಗೇರ ಸಹೋದರಿ

9-pregnant

Pregnant: ಗರ್ಭಾವಸ್ಥೆ – ಬಾಣಂತನದ ಅವಧಿಯ ಮಾನಸಿಕ ಆರೋಗ್ಯ

8-Borderline-Personality-Disorder

Borderline Personality Disorder: ಬಾರ್ಡರ್‌ಲೈನ್‌ ಪರ್ಸನಾಲಿಟಿ ಡಿಸಾರ್ಡರ್‌

Election; ಮೋದಿ ನೇತೃತ್ವದ ‘ನವ ಭಾರತ’ಕ್ಕೆ ಮದರಸಾಗಳ ಅಗತ್ಯವಿಲ್ಲ: ಹಿಮಂತ ಬಿಸ್ವಾ ಶರ್ಮಾ

Election; ಮೋದಿ ನೇತೃತ್ವದ ‘ನವ ಭಾರತ’ಕ್ಕೆ ಮದರಸಾಗಳ ಅಗತ್ಯವಿಲ್ಲ: ಹಿಮಂತ ಬಿಸ್ವಾ ಶರ್ಮಾ

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

Air India Express ವಿಮಾನದ ಇಂಜಿನ್ ನಲ್ಲಿ ಬೆಂಕಿ; ಬೆಂಗಳೂರಿನಲ್ಲಿ ತುರ್ತು ಭೂಸ್ಪರ್ಶ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kolar: ಶಸ್ತ್ರಕ್ರಿಯೆ ನಡೆಸಿ ಬಾಣಂತಿ ದೇಹದಲ್ಲೇ ಬಟ್ಟೆ ಬಿಟ್ಟ ಕೋಲಾರ ಆಸ್ಪತ್ರೆ ವೈದ್ಯೆ?

Kolar: ಶಸ್ತ್ರಕ್ರಿಯೆ ನಡೆಸಿ ಬಾಣಂತಿ ದೇಹದಲ್ಲೇ ಬಟ್ಟೆ ಬಿಟ್ಟ ಕೋಲಾರ ಆಸ್ಪತ್ರೆ ವೈದ್ಯೆ?

ಸಾಲ ತೀರಿಸಲು 3 ತಿಂಗಳ ಮಗುವನ್ನೇ ಮಾರಿದ ಅಪ್ಪ!

ಸಾಲ ತೀರಿಸಲು 3 ತಿಂಗಳ ಮಗುವನ್ನೇ ಮಾರಿದ ಅಪ್ಪ!

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

Kolar: ಬಿಸಿಲಿನ ಝಳಕ್ಕೆ 2 ಸಾವಿರಕ್ಕೂ ಹೆಚ್ಚು ಕೋಳಿ ಸಾವು

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

Kolar; ಮೋದಿ ಶನಿ: ಮಾಜಿ ಸ್ಪೀಕರ್‌ ರಮೇಶ್‌ ಕುಮಾರ್‌ ಹೇಳಿಕೆ

MUST WATCH

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

ಹೊಸ ಸೇರ್ಪಡೆ

Hubli ಘಟನೆಗಳಿಗೆ ಪೋಲಿಸ್ ಇಲಾಖೆಯ ಭ್ರಷ್ಟಾಚಾರವೇ ಕಾರಣ: ಅರವಿಂದ ಬೆಲ್ಲದ್

Hubli ಘಟನೆಗಳಿಗೆ ಪೊಲೀಸ್ ಇಲಾಖೆಯ ಭ್ರಷ್ಟಾಚಾರವೇ ಕಾರಣ: ಅರವಿಂದ ಬೆಲ್ಲದ್

10-ಉವ-ಉಸಿಒನ

Madhur Temple: ಏಕದಂತನ ಚಿತ್ರವೇ ಮೂರ್ತಿ ಆದ ಪರಿ

CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ

CSKvsRCB; ಹಲವು ದಾಖಲೆಗಳಿಗೆ ಸಾಕ್ಷಿಯಾದ ಬೆಂಗಳೂರು – ಚೆನ್ನೈ ಪಂದ್ಯ

Hubli; ಫಿನಾಯಿಲ್ ಸೇವಿಸಿದ ಅಂಜಲಿ ಅಂಬಿಗೇರ ಸಹೋದರಿ

9-pregnant

Pregnant: ಗರ್ಭಾವಸ್ಥೆ – ಬಾಣಂತನದ ಅವಧಿಯ ಮಾನಸಿಕ ಆರೋಗ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.