ಭರವಸೆಯ ಬಾಲ ಪ್ರತಿಭೆ ಶ್ರುತಿ ಆರ್‌. ಸನಿಲ್‌

1,500ಕ್ಕೂ ಅಧಿಕ ವೇದಿಕೆಗಳಲ್ಲಿ ಪ್ರದರ್ಶನ, ರಿಯಾಲಿಟಿ ಶೋದಲ್ಲೂ ಸ್ಥಾನ

Team Udayavani, Mar 5, 2020, 4:07 AM IST

ಭರವಸೆಯ  ಬಾಲ ಪ್ರತಿಭೆ ಶ್ರುತಿ ಆರ್‌. ಸನಿಲ್‌

ಮ ಕ್ಕಳಿಗೆ ಎಳವೆಯಲ್ಲಿಯೇ ಸೂಕ್ತ ಪ್ರೋತ್ಸಾಹ ಸಿಕ್ಕಿದರೆ ಅವರು ಮುಂದೆ ಏನನ್ನಾದರೂ ಸಾಧಿಸಬಲ್ಲರು ಎಂಬುದಕ್ಕೆ ಸೂಕ್ತ ಉದಾಹರಣೆ ಅಂಬಾಗಿಲಿನ ಬಾಲಕಲಾವಿದೆ ಶ್ರುತಿ ಆರ್‌ ಸನಿಲ್‌.

ಈಕೆ ಈಗ ಭರವಸೆಯ ಯುವ ಪ್ರತಿಭೆಯಾಗಿ ಹೊರ ಹೊಮ್ಮುತ್ತಿದ್ದಾಳೆ. 12ರ ವಯಸ್ಸಿನ ಈಕೆ ಪ್ರತಿಭೆಯ ಆಗರವಾಗಿದ್ದಾಳೆ. ಅತ್ಯಲ್ಪ ಅವಧಿಯಲ್ಲಿ 1,500 ವೇದಿಕೆ ಗಳಲ್ಲಿ ಪ್ರದರ್ಶನ ನೀಡಿದ ಅಪರೂಪದ ಪ್ರತಿಭೆ ಈಕೆ. ಬಾಲ್ಯದಿಂದಲೂ ಡ್ಯಾನ್ಸ್‌ ಎಂದರೆ ಬಲು ಇಷ್ಟ. ನಾಲ್ಕರ ವಯಸ್ಸಿನಲ್ಲಿ ಪ್ರದರ್ಶನ ನೀಡಲು ವೇದಿಕೆ ಹತ್ತಿದ್ದಳು. ಆಕೆಯಲ್ಲಿನ ಪ್ರತಿಭೆ ಕಂಡ ಪೋಷಕರು ಆಕೆಯ ಆಸಕ್ತಿಗೆ ಬೆಂಬಲವಾಗಿ ನಿಂತರು. ಆರಂಭದಲ್ಲಿ ನೃತ್ಯ ಶಿಕ್ಷಕ ರಾದ ದೊಡ್ಡಣಗುಡ್ಡೆಯ ಕೃಷ್ಟಾನಂದ್‌, ಅನಂತರ ಸಂತೋಷ್‌ ದೊಡ್ಡಣ ಗುಡ್ಡೆ ಇವರುಗಳ ಮಾರ್ಗದರ್ಶನ ದಲ್ಲಿ ಈಕೆ ಡ್ಯಾನ್ಸ್‌ ಕಲಿತಿದ್ದಾಳೆ. ಈಗ ಈಕೆ ಬ್ರಹ್ಮಗಿರಿಯ ರಾಕ್ಸ್‌ ಡ್ಯಾನ್ಸ್‌ ಸಂಸ್ಥೆಯ ವಸಂತ ನಾಯ್ಕ ಅವರಿಂದ ತರಬೇತಿ ಪಡೆಯುತ್ತಿದ್ದಾಳೆ. ಎಲ್ಲ ಪ್ರಕಾರಗಳಲ್ಲಿ ಡ್ಯಾನ್ಸ್‌ ಮಾಡುವುದರಲ್ಲಿ ಈಕೆ ಎತ್ತಿದ ಕೈ.

ಅಂಬಾಗಿಲು ತಾಂಗದಡಿ ನಿವಾಸಿಗಳಾದ ರೂಪೇಶ್‌ ಎಸ್‌. ಸನಿಲ್‌ ಮತ್ತು ರೋಹಿಣಿ ದಂಪತಿಯ ಪುತ್ರಿಯಾಗಿರುವ ಶ್ರುತಿ ಆರ್‌. ಸನಿಲ್‌ ವಿದ್ಯೋದಯ ಪಬ್ಲಿಕ್‌ ಸ್ಕೂಲ್‌ನಲ್ಲಿ ಓದುತ್ತಿ¨ªಾಳೆ. ಮುಂದೆ ಉನ್ನತ ವಿದ್ಯಾಭ್ಯಾಸದ ಜತೆಗೆ ಕಲೆಯಲ್ಲಿ ವಿಶೇಷ ಸಾಧನೆ ಮಾಡುವ ಆಸೆಯಿದೆ. ಎರಡನೇ ತರಗತಿಯಲ್ಲಿದ್ದಾಗ ಈಟಿವಿ ತೆಲುಗು ವಾಹಿನಿಯ ಡಿ. ಜೂನಿಯರ್‌ ರಿಯಾಲಿಟಿ ಶೋದಲ್ಲಿ ಅವಕಾಶ ಸಿಕ್ಕಿತು. ಬಳಿಕ ಒಂದೊಂದೇ ಹೆಜ್ಜೆ ಏರುತ್ತ ಈಗ ಬಹುಮುಖ ಪ್ರತಿಭೆಯಾಗಿ ಮಿಂಚುತ್ತಿದ್ದಾಳೆ.

ಹಲವಾರು ವಿಶೇಷ ಪುರಸ್ಕಾರ ಮತ್ತು ಬಹುಮಾನಗಳೂ ಈಕೆಗೆ ಸಂದಿವೆ. ಕರ್ನಾಟಕ ಪ್ರತಿಭಾ ರತ್ನ, ರಾಷ್ಟ್ರೀಯ ಪ್ರತಿಭಾ ಪುರಸ್ಕಾರ, ಮಡಿಲು ಸಮ್ಮಾನ ಪುರಸ್ಕಾರ, ಕರುನಾಡ ರಾಜ್ಯೋತ್ಸವ ಪ್ರಶಸ್ತಿ, ರಾಷ್ಟ್ರೀಯ ಕಲಾರತ್ನ ಪ್ರಶಸ್ತಿಗಳನ್ನು ಪಡೆದಿದ್ದಾಳೆ. ಸುವರ್ಣ ಚಾನೆಲ್‌ ಪುಟಾಣಿ ಪಂಟು, ಡಿಡಿ ಚಂದನ ಡ್ಯಾನ್ಸ್‌ ಸಮರ, ಕಲರ್ ಸೂಪರ್‌ ಚಾನೆಲ್‌ನ ಮಾಸ್ಟರ್‌ ಡಾನ್ಸರ್‌, ಸ್ಪಂದನ ಚಾನೆಲ್‌ನ ಡಾನ್ಸ್‌ ಕಾ. ಸೂಪರ್‌ ಸ್ಟಾರ್‌ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದಾಳೆ. ನಟಿಸುವಂತೆ ಹಲವು ಅವಕಾಶಗಳು ಬಂದಿವೆ.

ಅತೀ ಹೆಚ್ಚು ಪ್ರದರ್ಶನ ನೀಡಿದ್ದಕ್ಕಾಗಿ ಡಾ. ಅಬ್ದುಲ್‌ ಕಲಾಂ ರೆಕಾರ್ಡ್‌ ಮತ್ತು ಯುನಿವರ್ಸಲ್‌ ಬುಕ್‌ ಆಪ್‌ ರೆಕಾರ್ಡ್‌ ಗೌರವಕ್ಕೂ ಭಾಜನಳಾಗಿದ್ದಾಳೆ. ಮುಂದೆ ಕ್ಷೇತ್ರದಲ್ಲಿ ಮತ್ತಷ್ಟು ಸಾಧನೆ ಮಾಡುವ ಹಂಬಲ ಈಕೆಯದ್ದು.

ಎಳವೆಯಿಂದಲೂ ಆಕೆ ಚುರುಕು ಹಾಗೂ ಪ್ರತಿಭಾವಂತೆಯಾಗಿದ್ದಳು. ಆಕೆಯ ಪ್ರತಿಭೆ ಕಂಡು ಪ್ರೋತ್ಸಾಹಿಸಿದೆವು. ಉತ್ತಮ ಸಾಧನೆ ತೋರುತ್ತಿದ್ದಾಳೆ. ಸಂತಸ ತಂದಿದೆ.

-ರೂಪೇಶ್‌ ಎಸ್‌., ಸನಿಲ್‌, ತಂದೆ.

ಟಾಪ್ ನ್ಯೂಸ್

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

ಮಹೋಷದ ಕಲ್ಪ: ಅಮೆರಿಕದ ಪೇಟೆಂಟ್‌ ಹೊಂದಿರುವ ಕ್ಯಾನ್ಸರ್‌ ಚಿಕಿತ್ಸೆ ಕ್ರಮ

1-wqeewqe

Mumbai Indians ವಿರುದ್ಧ ತವರಿನ ಅಂಗಳ: ರಾಹುಲ್‌ಗೆ ಮಹತ್ವದ ಪಂದ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

Horoscope: ಯಾವುದೇ ಪರಿಸ್ಥಿತಿಯನ್ನು ಎದುರಿಸಿ  ಕೆಲಸ ಮಾಡುವ ಧೈರ್ಯ ನಿಮ್ಮದಾಗಿರಲಿದೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

ಕರಾವಳಿ ಜಿಲ್ಲೆಗಳಲ್ಲಿ ಗಗನಕ್ಕೇರಿದ ಹೂವಿನ ಧಾರಣೆ; ಖರೀದಿ ಪ್ರಮಾಣ ಇಳಿಕೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Manipal ಕಸ್ತೂರ್ಬಾ ಆಸ್ಪತ್ರೆ ; ಡಾ| ರಾಮದಾಸ್‌ ಎಂ. ಪೈ ಬ್ಲಾಕ್‌ ಇಂದು ಲೋಕಾರ್ಪಣೆ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

1-twin

Kerala; ಒಂದೇ ವೇದಿಕೆಯಲ್ಲಿ 150 ಅವಳಿಗಳ ಸಂಭ್ರಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.