ಜಗತ್ತಿನ ಟ್ರೆಂಡ್‌ ಬದಲಾಯಿಸಿದ ಕೊರೊನಾ  

ನೋ ಶೇಕ್‌ಹ್ಯಾಂಡ್‌, ನೋ ಹಗ್‌, ನೋ ಕಿಸ್‌

Team Udayavani, Mar 6, 2020, 9:09 PM IST

ಜಗತ್ತಿನ ಟ್ರೆಂಡ್‌ ಬದಲಾಯಿಸಿದ ಕೊರೊನಾ  

ಜಗತ್ತನ್ನೇ ಬೆಚ್ಚಿಬೀಳಿಸಿದ ಕೊರೊನಾ ಜಾಗತಿಕವಾಗಿ ಒಂದಷ್ಟು ಹೊಸತನಕ್ಕೆ ನಾಂದಿ ಹಾಡಿದೆ. ಸಂಪರ್ಕದಿಂದ ಹರಡಬಹುದಾದ ವೈರಸ್‌ ಇದಾಗಿದ್ದು, ಜನರು ಜಾಗೃತಾರಾಗುತ್ತಿದ್ದಾರೆ. ಈ ನಡುವೆ ವಿವಿಧ ದೇಶಗಳ ಟ್ರೆಂಡ್‌ ಆಗಿರು ಶೇಕ್‌ಹ್ಯಾಂಡ್‌ ಹಾಗೂ ಆಪ್ಪುಗೆಯ ಮೂಲಕ ನಮಸ್ಕರಿಸುವುದಕ್ಕೂ ಈಗ ಕಡಿವಾಣ ಬಿದ್ದಿದ್ದು, ಸ್ವತಃ ಸರಕಾರ ಕೆಲವೊಂದು ಮಾನದಂಡವನ್ನು ಸೂಚಿಸಿದೆ. ಜನರು ಪರ್ಯಾಯ ಆಂಗಿಕ ಭಾಷೆಯ ಮೊರೆ ಹೋಗಿದ್ದಾರೆ. ಇಲ್ಲಿ ವಿವಿಧ ದೇಶಗಳಲ್ಲಿ ಕೊರೊನಾ ದೈನಂದಿನ ಜನ ಜೀವನದಲ್ಲಿ ಯಾವ ಪರಿಣಾಮ ಬೀರಿತು ಎಂಬುದನ್ನು ನೀಡಲಾಗಿದೆ.

ಚೀನ
ಚೀನ ಈ ವೈರಸ್‌ನ ತವರು. ಚೀನದ ನಗರದಾದ್ಯಂತ ಎಚ್ಚರಿಕೆಯ ಸೂಚನಾ ಫ‌ಲಕವನ್ನು ಅಳವಡಿಸಲಾಗಿದೆ. ಅದರಲ್ಲಿ ಮುಖ್ಯವಾಗಿ ಶೇಕ್‌ಹ್ಯಾಂಡ್‌ ಮಾಡದಂತೆ ಸೂಚಿಸಲಾಗಿದೆ. ಬದಲಾಗಿ ವಿವಿಧ ಆಂಗಿಕ ಭಾಷೆಗಳ ಮೂಲಕ ಬರಮಾಡಿಕೊಳ್ಳಲು ನಿರ್ದೇಶಿಸಲಾಗಿದೆ. ಕೈ ಮಡಚಿ ಆ ಮೂಲಕ ಶುಭಾಶಯ ಕೋರುವ ಪದ್ಧತಿಯ ಮೊರೆ ಹೋಗಲಾಗಿದೆ. ಜನರಲ್ಲಿ ಧ್ವನಿ ವರ್ಧಕ ಬಳಸಿ ಜಾಗೃತಿ ಕಾರ್ಯ ಮಾಡಲಾಗುತ್ತಿದೆ.

ಫ್ರಾನ್ಸ್‌
ಫ್ರಾನ್ಸ್‌ನಲ್ಲಿ ಕೆನ್ನೆಗೆ ಮುತ್ತಿಕುವ ಸಂಪ್ರದಾಯ. ಶೇಕ್‌ಹ್ಯಾಂಡ್‌ನ‌ಂತೆ ಇದು ಅಲ್ಲಿನ ಸಾಮಾನ್ಯ ಸಂಗತಿಯಾಗಿದೆ. ಇದೀಗ ಕೊರೊನಾ ಜಾಗೃತಿಯ ಹಿನ್ನೆಲೆಯಲ್ಲಿ ಆ ಪದ್ಧತಿಯನ್ನು ಸರಕಾರ ನಿಷೇಧಿಸಿದ್ದು, ಪರಸ್ಪರ ಕಣ್ಣುಗಳನ್ನು ನೋಡಿದರೆ ಅಷ್ಟೇ ಸಾಕು ಎಂದಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.

ಬ್ರೆಜಿಲ್‌
ಬ್ರೆಜಿಲ್‌ನ ತುಂಬಾ ಪರಿಚಿತ ಸೇವೆನೆಯಾದ ಕಿಮ್ಮಾರೋ ಅನ್ನು ಸೇವಿಸಲು ಸ್ಟ್ರಾದ ಅಗತ್ಯವಿದೆ. ಆದರೆ ಅಲ್ಲಿ ಇಂತಹ ಸ್ಟ್ರಾಗಳನ್ನು ಬಳಸದಂತೆ ಸರಕಾರ ಹೇಳಿದೆ. ಜತೆಗೆ ತುಟಿಗಳನ್ನು ಚುಂಬಿಸಿ ಸ್ವಾಗತಿಸುವ ಬದಲು, ಮುಖದ ಇತರ ಭಾಗಗಳನ್ನು ಚುಂಬಿಸುವುದು, ಮುಖಗಳ ಅಪ್ಪುಗೆಯನ್ನು ಬಳಸಲು ಸೂಚಿಸಲಾಗಿದೆ.

ಜರ್ಮನಿ
ಸೋಮವಾರ ಇಲ್ಲಿನ ಸರಕಾರದ ಸಭೆಯೊಂದರಲ್ಲಿ ಸಚಿವರೊಬ್ಬರಿಗೆ ಹಸ್ತಲಾಗವ ಮಾಡಲು ಮುಂದೆ ಬಂದಾಗ “ನೋ ಥ್ಯಾಂಕ್ಸ್‌’ ಎಂದು ಹೇಳಿದ್ದಾರೆ. ಬಳಿಕ ಅವರು ಎರಡು ಕೈಗಳನ್ನು ಮುಂದಕ್ಕೆ ಚಾಚಿ ವಿಶೇಷವಾಗಿ ಬರಮಾಡಿಕೊಂಡಿದ್ದಾರೆ. ಸಭೆ ನಗುವಿನ ಕಡಲಲ್ಲಿ ತೇಲಿತ್ತು.

ಸ್ಪೈನ್‌
ಕೊರೊನಾ ಸ್ಪೈನ್‌ನ ಸಂಪ್ರದಾಯವನ್ನು ಕಾಡಿದೆ. ಅಲ್ಲಿನ ಬಹಳ ವಿಶೇಷ ಸಂಪ್ರದಾಯವಾಗಿದ್ದ ವರ್ಜಿನ್‌ ಮೇರಿ ಪ್ರತಿಮೆಗೆ ಮುತ್ತಿಕ್ಕುವ ಆಚರಣೆ ಈ ಬಾರಿ ಬಹುಶಃ ನಿಷೇಧಗೊಳ್ಳುವ ಸಾಧ್ಯತೆ ಇದೆ. ಇನ್ನು ಒಂದು ತಿಂಗಳು ಮಾತ್ರ ಉಳಿದುಕೊಂಡಿದೆ.

ರೊಮಾನಿಯಾ
ರೊಮಾನಿಯಾದ ಮಾರ್ಟಿಸರ್‌ ಆಚರಣೆಯಲ್ಲಿ ಪುರುಷರು ಹೂ ಮತ್ತು “ತಾಲಿಸ್ಮನ್‌’ ಅನ್ನು ಮಹಿಳೆಯ ನೀಡಲಾಗುತ್ತದೆ. ಈ ಆಚರಣೆಯಲ್ಲಿ ಈ ಬಾರಿ ಹೂವನ್ನು ಮುತ್ತಿಕ್ಕದೇ ಹಂಸ್ತಾಂತರಿಸಬೇಕು ಆಚರಿಸಬೇಕು ಎಂದು ಅಲ್ಲಿನ ಸರಕಾರ ಜನರಲ್ಲಿ ಮನವಿ ಮಾಡಿದೆ.

ಪೊಲ್ಯಾಂಡ್‌
ಇದು ಯುರೋಪ್‌ನಲ್ಲಿ ಅತೀ ಹೆಚ್ಚು ಕೆಥೋಲಿಕ್‌ ಸಮುದಾಯದವರು ವಾಸವಿರುವ ದೇಶವಾಗಿದೆ. ಚರ್ಚ್‌ನಲ್ಲಿ “ಬ್ರೆಡ್‌’ ಸೇವಿಸುವ ಬದಲು ಮನಸ್ಸಿನಲ್ಲಿ ದೇವರನ್ನು ಸ್ಮರಿಸುವಂತೆ ಕೋರಲಾಗಿದೆ. ಜತೆಗೆ ಚರ್ಚ್‌ ಬಳಿ ಇರುವ ನೀರಿನ ಟ್ಯಾಂಕ್‌ನಲ್ಲಿ ಕೈ ಮುಳುಗಿಸುವ ಬದಲು “ತಮ್ಮ ಧಾರ್ಮಿಕ ಚಿಹ್ನೆ (ಕ್ರಾಸ್‌)’ ಯನ್ನು ಪ್ರದರ್ಶಿಸುವಂತೆ ಆದೇಶಿಸಲಾಗಿದೆ.

ಇರಾನ್‌
ಇರಾನ್‌ನಲ್ಲಿ ಈಗ ಹಸ್ತ ಲಾಘವದ ಬದಲು “ಫೋಟ್‌ ಶೇಕ್‌’ ಪದ್ಧತಿ ಬಂದಿಗೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿವೆ. ನಿಜವಾಗಿಯೀ ಅಲ್ಲಿನ ಜನರು ಇದೇ ಕ್ರಮದ ಮೊರೆ ಹೋಗಿದ್ದಾರೆ.

ನ್ಯೂಜಿಲ್ಯಾಂಡ್‌
ನ್ಯೂಜಿಲ್ಯಾಂಡ್‌ನ‌ಲ್ಲಿ ಪರಸ್ಪರ ಮೂಗನ್ನು ಸ್ಪರ್ಶಿಸಿ ಅಧುಮುವ “ಹೋಂಗಿ’ ಪದ್ದತಿಯನ್ನು ನಿಷೇಧಿಸಲಾಗಿದೆ. ಅಲ್ಲಿನ ಜನರು ಈ ಹೋಂಗಿ ಪದ್ದತಿಯನ್ನು ಪ್ರದರ್ಶಿಸುವಾಗ ಹಾಡೊಂದನ್ನು ಹಾಡುತ್ತಾರೆ. ಈ ಆ ಹಾಡಿನ ಮೂಲಕ ಸ್ವಾಗತಿಸಲಾಗುತ್ತದೆ.

ಆಸ್ಟ್ರೇಲಿಯಾ
ಆಸ್ಟ್ರೇಲಿಯಾದಲ್ಲಿ ಶೇಕ್‌ಹ್ಯಾಂಡ್‌ ಮಾಡುವುದು ಸಾಮಾನ್ಯ ಕ್ರಮವಾಗಿದೆ. ಇದೀಗ ಅದರ ಬದಲು ಬೆನ್ನು ತಟ್ಟುವ ಮೂಲಕ ವಿಶೇಷವಾಗಿ ಬರಮಾಡಿಕೊಳ್ಳಲಾಗುತ್ತಿದೆ.

ಯುಎಇ, ಕತ್ತಾರ್‌
ಅರಬ್‌ ರಾಷ್ಟ್ರಗಳಲ್ಲಿ “ನೋಸ್‌ ಟು ನೋಸ್‌’ ಗ್ರೀಟಿಂಗ್‌ಗೆ ನೋ ಎನ್ನಲಾಗಿದೆ. ಅದರ ಬದಲು ಕೈಯಲ್ಲಿ ಟಾಟ ಹೇಳುವ ಸಂಪ್ರದಾಯಕ್ಕೆ ನಾಂದಿ ಹಾಡಲಾಗಿದೆ.

ಟಾಪ್ ನ್ಯೂಸ್

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

HD Revanna, ಪ್ರಜ್ವಲ್‌ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌!

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

CET ಮೌಲ್ಯಮಾಪನ: 50 ಪಠ್ಯೇತರ ಪ್ರಶ್ನೆಗೆ ಕೊಕ್‌; ಮರು ಪರೀಕ್ಷೆ ನಡೆಸದಿರಲು ನಿರ್ಧಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.