ಕೊರೊನಾ ಭಯಬೇಡ ಎಚ್ಚರ ಇರಲಿ


Team Udayavani, Mar 14, 2020, 7:15 AM IST

ಕೊರೊನಾ ಭಯಬೇಡ ಎಚ್ಚರ ಇರಲಿ

ಕೊರೊನಾ ವೈರಸ್‌ ತಡೆಗಟ್ಟಲು ಕೇಂದ್ರ ಆರೋಗ್ಯ ಸಚಿವಾಲಯ ಹಲವು ಮುನ್ನೆಚ್ಚರಿಕಾ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ಗ್ರಾಹಕರು ಒಂದಷ್ಟು ಎಚ್ಚರ ವಹಿಸಿಕೊಂಡರೆ ಸಂಭವನೀಯ ಅಪಾಯದಿಂದ ತಪ್ಪಿಸಿಕೊಳ್ಳಬಹುದು. ಸೋಂಕಿನ ಲಕ್ಷಣಗಳು ಕಂಡು ಬಂದರೆ ಆಸ್ಪತ್ರೆಯನ್ನು ಸಂಪರ್ಕಿಸಲು ಭಯಬೇಡ.

ಲಿಫ್ಟ್ ಬಟನ್‌, ಡೋರ್‌
ಎಲಿವೇಟರ್‌ನ ಬಟನ್‌ಗಳು ಹೆಚ್ಚು ಸೋಂಕಿಗೆ ಒಳಗಾಗುತ್ತವೆ. ಪ್ರತಿ ಬಾಗಿಲಿನ ಹ್ಯಾಂಡಲ್‌ಗ‌ಳನ್ನು ಹೆಚ್ಚು ಕಡಿಮೆ ಎಲ್ಲರೂ ಬಳಸುವುದರಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಇವುಗಳನ್ನು ಬಳಸಿದ ಕೂಡಲೇ ಕೈಗಳನ್ನು ತೊಳೆಯಬೇಕು.

ಮೆಟ್ರೋ ಮತ್ತು ಬಸ್‌ಗಳು
ಮೆಟ್ರೋ ಅಥವಾ ಬಸ್‌ಗಳಲ್ಲಿ ಪ್ರಯಾಣಿಸುವವರಾಗಿದ್ದರೆ ಮುಖಕ್ಕೆ ಮಾಸ್ಕ್ ಹಾಕಿಕೊಳ್ಳಲು ಮರೆಯದಿರಿ. ಮಾಸ್ಕ್ ಇಲ್ಲದಿದ್ದರೆ ಶೀತ ಮತ್ತು ಕೆಮ್ಮಿನಿಂದ ಅಂತರ ಕಾಯ್ದುಕೊಳ್ಳಿ. ನಿಮ್ಮಲ್ಲಿ ಮಾಸ್ಕ್ ಇಲ್ಲದೇ ಇದ್ದರೆ ಕರವಸ್ತ್ರವನ್ನೂ ಮುಖಕ್ಕೆ ಕಟ್ಟಿಕೊಳ್ಳಬಹುದಾಗಿದೆ. ಪ್ರಯಾಣದ ಸಂದರ್ಭದಲ್ಲೂ ಇದನ್ನು ಅನುಸರಿಸಿ.

ಎಚ್ಚರ ಅಗತ್ಯ
ಕೈಗಳನ್ನು ಮೂಗು, ಕಣ್ಣು ಮತ್ತು ಬಾಯಿಯಲ್ಲಿ ಪದೇ ಪದೆ ಇಡುವುದನ್ನು ತಪ್ಪಿಸಬೇಕು. ಅಜಾಗರೂಕತೆಯಿಂದ ಆ ವೈರಸ್‌ ದೇಹವನ್ನು ಪ್ರವೇಶಿಸಬಹುದು. ಮುಖವನ್ನು ಸುರಕ್ಷಿತವಾಗಿರಿಸಿ. ಸಿನೆಮಾ, ಅಥವಾ ಮಾಲ್‌ಗ‌ಳಿಗೆ ಪ್ರತಿ ದಿನ ನೂರಾರು ಮಂದಿ ಆಗಮಿಸುತ್ತಾರೆ. ಈ ಕಾರಣಕ್ಕೆ ಸಾರ್ವಜನಿಕ ಸ್ಥಳಗಳಲ್ಲಿ ಎಚ್ಚರ ವಹಿಸುವುದು ಅಗತ್ಯ.

ವೈದ್ಯರ ಸಂಪರ್ಕ ಸಾಧಿಸಿ
ಅನಾರೋಗ್ಯ ಅನಿಸಿದರೆ ಮನೆಯಲ್ಲೇ ಇರಿ. ಜ್ವರ, ಕೆಮ್ಮು ಮತ್ತು ಉಸಿರಾಟದ ತೊಂದರೆ ಇದ್ದರೆ ಚಿಕಿತ್ಸೆ ಪಡೆಯಿರಿ. ಸ್ಥಳೀಯ ಆರೋಗ್ಯ ಪ್ರಾಧಿಕಾರದ ಸಲಹೆಗಳನ್ನು ಪಾಲಿಸಿ. ಕೆಮ್ಮುವಾಗ ಅಥವಾ ಸೀನುವಾಗ ಕರವಸ್ತ್ರವನ್ನು ಅಡ್ಡಹಿಡಿಯಲೇಬೇಕು. ಇತರರ ಸುರಕ್ಷತೆಯೂ ಅಗತ್ಯ.

ಕೇರಳದ ಪ್ಲೋಚಾರ್ಟ್‌
ಕೇರಳ ಸರಕಾರ ಈ ವೈರಸ್‌ ಅನ್ನು ತಡೆಗಟ್ಟಲು ಚುರುಕಾಗಿ ಕೆಲಸಮಾಡುತ್ತಿದೆ. ಇಲ್ಲಿ ಆರೋಗ್ಯ ಇಲಾಖೆಯು ಕೊರೊನಾ ರೋಗಿಗಳು ಬಂದಿಳಿದ ಬಳಿಕ ಎಲ್ಲೆಲ್ಲೆ ಓಡಾಡಿದ್ದಾರೆ ಎಂಬುದರ ಮಾಹಿತಿಯನ್ನು ಕಳೆ ಹಾಕುತ್ತಿದ್ದಾರೆ. ಸೋಂಕಿತ ಅಥವಾ ಶಂಕಿತ ಓಡಾಡಿದ ಪ್ರತಿಯೊಂದು ಜಾಗಗಳು, ಜನರೊಂದಿಗಿದ್ದ ಆಯಕಟ್ಟಿನ ಸ್ಥಳಗಳೆಲ್ಲವನ್ನೂ ಪ್ಲೋಚಾರ್ಟ್‌ ಮೂಲಕ ಸಿದ್ಧಪಡಿಸಿಕೊಳ್ಳುತ್ತಿದೆ.

ವಿನಾಕಾರಣ ಆಸ್ಪತ್ರೆಗೆ ಹೋಗಬೇಡಿ
ಸಣ್ಣಪುಟ್ಟ ಜ್ವರ ಬಂದ ಕಾರಣ ಕೊರೊನಾ ಶಂಕೆಯಿಂದ ಆಸ್ಪತ್ರೆಗೆ ತೆರಳಬೇಡಿ. ಸೋಂಕಿಲ್ಲದೇ ಇದ್ದರೂ, ಅಲ್ಲಿ ಬಂದವರಿಗೆ ಯಾರಿಗಾದರೂ ತಗುಲಿದ್ದರೆ ಅದು ಹರಡುವ ಸಾಧ್ಯತೆ ಇದೆ. ಸೋಂಕಿನ ಲಕ್ಷಣ ಕಂಡು ಬಂದರೆ ಮಾತ್ರ ಕಡೆಗಣಿಸಲೇಬೇಡಿ.

ಯಾರು ಆಸ್ಪತ್ರೆಗೆ ತೆರಳಬೇಕು?
ಈ ಒಂದು ಗೊಂದಲ ಎಲ್ಲರಲ್ಲೂ ಇದೆ. ಸಣ್ಣಗೆ ಮೈ ಕೈ ನೋವಾಗಿ ಜ್ವರ ಬಂದಿದ್ದರೂ ನಾನು ಕೊರೊನಾ ರೋಗಿನಾ ಎಂದು ಅಂದುಕೊಳ್ಳಬೇಕಿಲ್ಲ. ನೀವು ಸೋಂಕಿತರೊಂದಿಗೆ ಗುರುತಿಸಿಕೊಂಡವರಾಗಿದ್ದು ಅಥವಾ ಅವರು ಪ್ರಯಾಣಿಸಿದ ಬಸ್‌ನಲ್ಲಿ ನೀವೂ ಪ್ರಯಾಣಿಸಿದ್ದರೆ ಅಗತ್ಯವಾಗಿ ಆಸ್ಪತ್ರೆಗೆ ತೆರಳಲೇಬೇಕು.

ಹೇಗೆ ಹೋಗಬೇಕು?
ಸೋಂಕಿತ ಅಥವಾ ಶಂಕಿತರು ಸಾರ್ವಜನಿಕ ವಾಹನಗಳಲ್ಲಿ ಆಸ್ಪತ್ರೆಗೆ ಹೋಗಲೇಬಾರದು. ಇಂತಹ ಪ್ರಕರಣಗಳಿಗೆ ಆರೋಗ್ಯ ಇಲಾಖೆ ಸಹಾಯವಾಣಿ 104 (ಆ್ಯಂಬುಲೆನ್ಸ್‌)ಗೆ ಕರೆಮಾಡಿ, ಸೌಲಭ್ಯ ಪಡೆಯಿರಿ.

ಬಳಿಕ ಏನು?
ನಿಮ್ಮನ್ನು ಪರೀಕ್ಷಿಸಿದ ಬಳಿಕ ಒಂದಷ್ಟು ಸ್ಯಾಂಪಲ್‌ಗ‌ಳನ್ನು ಪ್ರಯೋಗಾಲಯಕ್ಕೆ ಕೊಂಡೊಯ್ಯಲಾಗುತ್ತದೆ. ಅಲ್ಲಿ ನಿಮ್ಮ ಫ‌ಲಿತಾಂಶ ನೆಗೆಟಿವ್‌ ಆಗಿದ್ದರೆ ಸುರಕ್ಷೆ ವಹಿಸಲು ಹೇಳಿ ಮನೆಗೆ ಕಳುಹಿಸಬಹುದು. ಪಾಸಿಟಿವ್‌ ಆದರೆ ನಿಮ್ಮನ್ನು 14 ದಿನಗಳ ಕಾಲ ತೀವ್ರ ನಿಗಾ ಘಟಕಗಳಲ್ಲಿ ಇರಿಸಿ ಚಿಕಿತ್ಸೆ ಕೊಡಿಸಲಾಗುತ್ತದೆ.

ಟಾಪ್ ನ್ಯೂಸ್

8-panaji

Panaji: ಮತದಾರರನ್ನು ಸೆಳೆದ ಇಕೋ ಫ್ರೆಂಡ್ಲಿ ಮತಕೇಂದ್ರ

6-KAUP

Kaup: ಪಾಂಗಾಳದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸಲು ನೆರವಾದ ತಹಶೀಲ್ದಾರ್

Truth Behind MS Dhoni’s No. 9 Decision Out

CSK; ಧೋನಿ ಯಾಕೆ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದಾರೆ…: ಹೊರಬಿತ್ತು ಸತ್ಯ

5-

Rabakavi-Banahatti: ತೀವ್ರ ಅನಾರೋಗ್ಯದಲ್ಲಿಯೂ ಮತದಾನ ಮಾಡಿದ ವ್ಯಕ್ತಿ

Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ

Bidar; ಒಂದೂವರೆ ವರ್ಷದ ಮಗು ಅಪಹರಣ ಸುಖಾಂತ್ಯ; ಹೈದರಾಬಾದ್ ನಲ್ಲಿ ಮಹಿಳೆ ಬಂಧನ

Money Laundering Case; Kejriwal’s stay in jail continues

Money Laundering Case; ಕೇಜ್ರಿವಾಲ್ ಜೈಲು ವಾಸ ಮುಂದುವರಿಕೆ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ

Siddapura: ಶಾರ್ಟ್ ಸರ್ಕ್ಯೂಟ್ ಗೆ ಅಂಗಡಿಗಳು ಬೆಂಕಿಗಾಹುತಿ… ಲಕ್ಷಾಂತರ ರೂ ನಷ್ಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

Water Corridor: ಭಾರತಕ್ಕೆ ಅಗತ್ಯವಿದೆ ವಿಶೇಷ ವಾಟರ್‌ ಕಾರಿಡಾರ್‌!

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

8-panaji

Panaji: ಮತದಾರರನ್ನು ಸೆಳೆದ ಇಕೋ ಫ್ರೆಂಡ್ಲಿ ಮತಕೇಂದ್ರ

7-Panaji

Panaji: ಬಿಚೋಲಿಯಲ್ಲಿ ಮತಯಂತ್ರದಲ್ಲಿ ತಾಂತ್ರಿಕ ತೊಂದರೆ…

Gadag; Vinay came from England and voted

Gadag; ಇಂಗ್ಲೆಂಡ್‌ನಿಂದ ಆಗಮಿಸಿ ಮತದಾನ ಮಾಡಿದ ಗದಗದ ವಿನಯ್

6-KAUP

Kaup: ಪಾಂಗಾಳದಲ್ಲಿ ಆಕಸ್ಮಿಕ ಬೆಂಕಿ: ಬೆಂಕಿ ನಂದಿಸಲು ನೆರವಾದ ತಹಶೀಲ್ದಾರ್

Truth Behind MS Dhoni’s No. 9 Decision Out

CSK; ಧೋನಿ ಯಾಕೆ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದಾರೆ…: ಹೊರಬಿತ್ತು ಸತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.