ವಿದೇಶಿ ಆಟಗಾರನಲ್ಲಿ ಕೊರೊನಾ ಸೋಂಕು ಪತ್ತೆ ಶಂಕೆ: ಪಾಕಿಸ್ಥಾನ ಸೂಪರ್‌ ಲೀಗ್‌ ಮುಂದೂಡಿಕೆ

Team Udayavani, Mar 18, 2020, 9:32 AM IST

ವಿದೇಶಿ ಆಟಗಾರನಲ್ಲಿ ಕೊರೊನಾ ಸೋಂಕು ಪತ್ತೆ ಶಂಕೆ: ಪಾಕಿಸ್ಥಾನ ಸೂಪರ್‌ ಲೀಗ್‌ ಮುಂದೂಡಿಕೆ

ಕರಾಚಿ: ವಿದೇಶಿ ಆಟಗಾರನೋರ್ವನಲ್ಲಿ ಅಪಾಯಕಾರಿ ಕೋವಿಡ್‌-19 ಸೋಂಕು ಪತ್ತೆಯಾದ ಕಾರಣ ಸದ್ಯ ಸಾಗುತ್ತಿರುವ ಪಾಕಿಸ್ಥಾನ ಸೂಪರ್‌ ಲೀಗ್‌ (ಪಿಎಸ್‌ಎಲ್‌) ಕೂಟವನ್ನು ಮುಂದೂಡಲು ಪಾಕಿಸ್ಥಾನ ಕ್ರಿಕೆಟ್‌ ಮಂಡಳಿ (ಪಿಸಿಬಿ) ನಿರ್ಧರಿಸಿದೆ.

ಪಿಎಸ್‌ಎಲ್‌ ನಾಕೌಟ್‌ ಹಂತಕ್ಕೆ ತಲುಪಿತ್ತು ಮತ್ತು ಮಂಗಳವಾರ ಮತ್ತು ಬುಧವಾರ ಲಾಹೋರ್‌ನಲ್ಲಿ ಸೆಮಿಫೈನಲ್ಸ್‌ ಮತ್ತು ಫೈನಲ್‌ ಪಂದ್ಯ ನಡೆಯಬೇಕಿತ್ತು. ಕೊರೊನಾದಿಂದಾಗಿ ಲೀಗ್‌ ಹಂತದ ಪಂದ್ಯಗಳನ್ನು ನಾಲ್ಕು ದಿನಗಳಿಗೆ ಕಡಿಮೆಗೊಳಿಸಲಾಗಿತ್ತು. ಆದರೆ ವಿದೇಶಿ ಆಟಗಾರನೋರ್ವನಲ್ಲಿ ಸೋಂಕು ಪತ್ತೆಯಾದ ಕಾರಣ ಇದೀಗ ಕೂಟವನ್ನು ಮುಂದೂಡಬೇಕಾಯಿತು.

ಪಾಕಿಸ್ಥಾನವನ್ನು ತೊರೆದ ಆಟಗಾರ ಸೋಂಕಿಗೆ ಒಳಗಾಗಿರುವ ವಿಷಯ ತಿಳಿಸಿದ್ದರಿಂದ ಯಾರೂ ಕೂಡ ಆತಂಕಕ್ಕೆ ಒಳಗಾಗದಿರಲು ಸುದೀರ್ಘ‌ ಚರ್ಚೆಯ ಬಳಿಕ ಕೂಟವನ್ನು ಮುಂದೂಡಲು ನಿರ್ಧರಿಸಲಾಯಿತು ಎಂದು ಪಿಸಿಬಿ ಸಿಇಒ ವಸೀಮ್‌ ಖಾನ್‌ ಹೇಳಿದ್ದಾರೆ.

ಅಲೆಕ್ಸ್‌ ಹೇಲ್ಸ್‌ ಅವರಲ್ಲಿ ಸೋಂಕು ಪತ್ತೆಯಾಗಿದೆ ಎಂದು ಪಾಕಿಸ್ಥಾನದ ಮಾಜಿ ಟೆಸ್ಟ್‌ ನಾಯಕ ಮತ್ತು ವೀಕ್ಷಣೆಗಾರ ರಮೀಜ್‌ ರಾಜಾ ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಪಿಎಸ್‌ಎಲ್‌ನ ಆಟಗಾರರು ಮತ್ತು ವೀಕ್ಷಣೆಗಾರರೆಲ್ಲರನ್ನೂ ತಪಾಸಣೆಗೆ ಒಳಪಡಿಸಲಾಗಿದೆ.

ಹೇಲ್ಸ್‌ ಅವರು ಇನ್ನೂ ಪರೀಕ್ಷೆಗೆ ಒಳಗಾಗಬೇಕಾಗಿದೆ. ಅವರಲ್ಲಿರುವ ಸೋಂಕು ಕೋವಿಡ್‌ಗೆ ಸಂಬಂಧಿಸಿದ ಬಗ್ಗೆ ಗೊತ್ತಿಲ್ಲ. ಆದರೆ ನಾವು ಬಹಳ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ ಎಂದು ರಾಜಾ ತಿಳಿಸಿದರು.

ಇಂಗ್ಲೆಂಡಿಗೆ ತೆರಳಿದ ಬಳಿಕ ಹೇಲ್ಸ್‌ ಅವರಿಗೆ ಜ್ವರ ಕಾಣಿಸಿಕೊಂಡ ಕಾರಣ ಸರಕಾರದ ಸಲಹೆಯಂತೆ ತಪಾಸಣೆ ನಡೆಸಿ ನಿಗಾದಲ್ಲಿ ಇಡಲಾಗಿದೆ. ಅವರ ಚಿಕಿತ್ಸೆಯ ವರದಿ ಇನ್ನೂ ಬರಬೇಕಾಗಿದೆ. ಹಾಗಾಗಿ ಈ ಹಂತದಲ್ಲಿ ಏನೂ ಹೇಳಲು ಸಾಧ್ಯವಿಲ್ಲ

ಸುರಕ್ಷತೆ ಮುಖ್ಯ
ಕೊರೊನದಿಂದಾಗಿ ಆಟಗಾರರ ಆರೋಗ್ಯ ಮತ್ತು ಸುರಕ್ಷತೆಗೆ ಹೆಚ್ಚಿನ ಮಹತ್ವ ನೀಡಿದ್ದೇವೆ. ಕೂಟ ಮುಂದೂಡುವ ಮೊದಲು ಸರಕಾರ ಮತ್ತು ಆರೋಗ್ಯ ಇಲಾಖೆಯ ಸಲಹೆ ಪಡೆದಿದ್ದೇವೆ ಎಂದು ವಸೀಮ್‌ ಖಾನ್‌ ತಿಳಿಸಿದರು. ಕೋವಿಡ್‌ ಹಿನ್ನೆಲೆಯಲ್ಲಿ ಲೀಗ್‌ನಿಂದ ಯಾವುದೇ ಹಂತದಲ್ಲೂ ಹಿಂದೆ ಸರಿಯಬಹುದೆಂದು ಪಿಸಿಬಿ ವಿದೇಶಿ ಆಟಗಾರರಿಗೆ ಸೂಚಿಸಿತ್ತು. ಪಿಎಸ್‌ಎಲ್‌ನಲ್ಲಿ 34 ವಿದೇಶಿ ಆಟಗಾರರು ಆಡಿದ್ದರು ಮತ್ತು ಕಳೆದ ವಾರವೇ ಹೆಚ್ಚಿನ ಆಟಗಾರರು ತವರಿಗೆ ಮರಳಿದ್ದರು.

ಟಾಪ್ ನ್ಯೂಸ್

16

FIR; ಮೆಟ್ಟಿನಡ್ಕ: ಮಹಿಳೆ ಮೇಲೆ ಹಲ್ಲೆ; ದೂರು ದಾಖಲು

Prajwal ರೇವಣ್ಣಗೂ ನಮಗೂ ಯಾವುದೇ ಸಂಬಂಧವಿಲ್ಲ: ಜಿ.ಟಿ.ದೇವೇಗೌಡ

Prajwal ರೇವಣ್ಣಗೂ ನಮಗೂ ಯಾವುದೇ ಸಂಬಂಧವಿಲ್ಲ: ಜಿ.ಟಿ.ದೇವೇಗೌಡ

1-wwewewqe

Singapore Open; ವಿಶ್ವದ ನಂ.1 ಜೋಡಿ ಸಾತ್ವಿಕ್‌ -ಚಿರಾಗ್ ಗೆ ಆಘಾತಕಾರಿ ಸೋಲು

15-

Kundapura: ಕಾರುಗಳ ಢಿಕ್ಕಿ; ಚಾಲಕನಿಗೆ ಗಾಯ

Madhu Bangarappa ಬಿಜೆಪಿಯವರು ಕಲಾಂ ಹೇರ್‌ಕಟ್‌ ಬಗ್ಗೆ ಮಾತನಾಡುವರೇ?

Madhu Bangarappa ಬಿಜೆಪಿಯವರು ಕಲಾಂ ಹೇರ್‌ಕಟ್‌ ಬಗ್ಗೆ ಮಾತನಾಡುವರೇ?

14

Bantwala: ಪದ್ಮನಾಭ ಸಾಮಂತ್‌ ಸಾವಿನ ಪ್ರಕರಣ; ತನಿಖೆಗೆ ವಿಶೇಷ ತಂಡ ರಚನೆ

1-wqeqwewwqe

Bengaluru ಸಾವರ್ಕರ್ ಮೇಲ್ಸೇತುವೆ ಫಲಕಕ್ಕೆ ಮಸಿ ಬಳಿದ NSUI ಕಾರ್ಯಕರ್ತರ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wwewewqe

Singapore Open; ವಿಶ್ವದ ನಂ.1 ಜೋಡಿ ಸಾತ್ವಿಕ್‌ -ಚಿರಾಗ್ ಗೆ ಆಘಾತಕಾರಿ ಸೋಲು

5

Riyan Parag ಯೂಟ್ಯೂಬ್‌ ಹಿಸ್ಟರಿ ಲೀಕ್:‌ ʼಸಾರಾ ಆಲಿ, ಅನನ್ಯಾ ಪಾಂಡೆ ಹಾಟ್‌ʼ ಎಂದು ಸರ್ಚ್

1-qweewqewqe

Coach;ಕುತೂಹಲ ಮೂಡಿಸಿದ ಗೌತಮ್‌ ಗಂಭೀರ್‌-ಜಯ್‌ ಶಾ ಭೇಟಿ

1-qewqwewq

IPL 2024; ಮೈದಾನದ ಸಿಬಂದಿಗೆ ಬಹುಮಾನ

badminton

Badminton;ಸಿಂಗಾಪುರ್‌ ಓಪನ್‌  ಇಂದಿನಿಂದ :ಒಲಿಂಪಿಕ್ಸ್‌ ಅಭ್ಯಾಸಕ್ಕೆ ಮಹತ್ವದ ಕೂಟ

MUST WATCH

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

ಹೊಸ ಸೇರ್ಪಡೆ

16

FIR; ಮೆಟ್ಟಿನಡ್ಕ: ಮಹಿಳೆ ಮೇಲೆ ಹಲ್ಲೆ; ದೂರು ದಾಖಲು

Prajwal ರೇವಣ್ಣಗೂ ನಮಗೂ ಯಾವುದೇ ಸಂಬಂಧವಿಲ್ಲ: ಜಿ.ಟಿ.ದೇವೇಗೌಡ

Prajwal ರೇವಣ್ಣಗೂ ನಮಗೂ ಯಾವುದೇ ಸಂಬಂಧವಿಲ್ಲ: ಜಿ.ಟಿ.ದೇವೇಗೌಡ

1-wwewewqe

Singapore Open; ವಿಶ್ವದ ನಂ.1 ಜೋಡಿ ಸಾತ್ವಿಕ್‌ -ಚಿರಾಗ್ ಗೆ ಆಘಾತಕಾರಿ ಸೋಲು

15-

Kundapura: ಕಾರುಗಳ ಢಿಕ್ಕಿ; ಚಾಲಕನಿಗೆ ಗಾಯ

Madhu Bangarappa ಬಿಜೆಪಿಯವರು ಕಲಾಂ ಹೇರ್‌ಕಟ್‌ ಬಗ್ಗೆ ಮಾತನಾಡುವರೇ?

Madhu Bangarappa ಬಿಜೆಪಿಯವರು ಕಲಾಂ ಹೇರ್‌ಕಟ್‌ ಬಗ್ಗೆ ಮಾತನಾಡುವರೇ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.