ಬಾಲ್ಯದ ಬಂಗಾರದ ಕ್ಷಣಗಳು ಮತ್ತೆ ಸಿಗಲಿ


Team Udayavani, Aug 11, 2020, 1:52 PM IST

ಬಾಲ್ಯದ ಬಂಗಾರದ ಕ್ಷಣಗಳು ಮತ್ತೆ ಸಿಗಲಿ

ಸಾಂದರ್ಭಿಕ ಚಿತ್ರ

ಢಣ..ಢಣ… ಘಂಟೆ ಬಾರಿಸುವ ಮೊದಲೇ ಶಾಲೆಯ ಬಾಗಿಲು ತೆರೆದಿರುತ್ತಿತ್ತು. ನಾವು ಹಾಗೂ ನನ್ನಂಥ ಹಲವರು ಅವ್ವ ಕೊಟ್ಟ ಬುತ್ತಿ ಗಂಟನ್ನು ಕೈಲಿ ಹಿಡಿದು, ಪಾಟಿಚೀಲವನ್ನು ಬೆನ್ನಿಗೆ ಏರಿಸಿಕೊಂಡು ಸಂಭ್ರಮದಿಂದ ಶಾಲೆಗೆ ಓಡುತ್ತಿದ್ದೆವು. ಅಕ್ಕಾವ್ರು, ಮಾಸ್ತರ್ರು ಅ…ಆ…ಇ…ಈ.. ಕಲಿಸುತ್ತಿದ್ದರು. ಮಧ್ಯಾಹ್ನ ಆಗುತ್ತಿದ್ದಂತೆಯೇ ಊಟಕ್ಕೆ ಬಿಡುತ್ತಿದ್ದರು.

ಸಂಜೆ ಆಟದ ಸಮಯದಲ್ಲಿ ರಾಮು, ಶಾಮ, ಮಲ್ಲು , ಕೆಂಚಪ್ಪ ,ಶೀಲಾ, ಗೌರಿ, ಯಮುನವ್ವ ಎಲ್ಲರೂ ಸೇರಿ ಲಗೋರಿ, ಕಾಲ್ಚೆಂಡು, ಕುಂಟೋ ಬಿಲ್ಲೆ, ಡುಬ್ಬಕ್ಕೆ ಚೆಂಡು ಹೊಡೆಯುವ ಆಟ ಆಡಿ, ಕುಣಿದು ನಲಿಯುತ್ತಿದ್ದೆವು. ಸಂಜೆ ಮನೆಗೆ ಬರುವಾಗ ಹುಣಸೆಮರದಲಿ ಮರಕೋತಿ ಆಡುತ್ತಿದ್ದೆವು. ರಾತ್ರಿಯ ವೇಳೆ ಅಜ್ಜಿಯ ಕತೆಯನು ಕೇಳುತ ಮಲಗುತ್ತಿದ್ದೆವು. ಹೆಚ್ಚಿನ ಸಂದರ್ಭದಲ್ಲಿ ಮಳೆಗಾಲ ಶುರುವಾದ ದಿನವೇ ನಮ್ಮ ಶಾಲೆಯೂ ಆರಂಭವಾಗುತ್ತಿತ್ತು. ನಮ್ಮ ಹಾಜರಿ ಶಾಲೆಯಲ್ಲಿ, ಮಳೆಯ ಹಾಜರಿ ಊರಿನಲ್ಲಿ.

***

ಈಗ ಇದೆಲ್ಲಾ ಬರೀ ನೆನಪು. ನಮ್ಮ ಬಾಲ್ಯದ ಬಂಗಾರದ ದಿನಗಳು ಅವು. ಶಾಲೆ ಪ್ರಾರಂಭದ ದಿನದ ಸಂಭ್ರಮಕ್ಕೆ ಸರಿಸಾಟಿ ಅನ್ನಿಸುವಂಥ ದಿನ ಬೇರೊಂದಿಲ್ಲ. ಕೆಲವರಿಗೆ ಅದು ಸಜೆ, ಇನ್ನು ಕೆಲವರಿಗೆ ಖುಷಿಗೊಂದು ಹೊಸ ಕಾರಣ. ಭರ್ತಿ ಎರಡು ತಿಂಗಳ ಬಿಡುವಿನ ನಂತರ, ಎಲ್ಲಾ ಗೆಳೆಯರು ಸೇರುವ ತಾಣದಲ್ಲಿ ಕಲರವ. ಪಾಠ, ಆಟ, ಚೀರಾಟ, ತಿರುಗಾಟ, ಸಣ್ಣಪುಟ್ಟ ಹೊಡೆದಾಟಕ್ಕೆ ಚಾಲನೆ ಸಿಗುವ ದಿನವಿದು. ನಾವು ನಾಲ್ಕು ಗೋಡೆಗಳ ಮಧ್ಯೆ ಕಲಿತಿದ್ದಕ್ಕಿಂತಲೂ ಹೊರಗಡೆ ಕಲಿತಿದ್ದೇ ಹೆಚ್ಚು. ಆ ಬಾಲ್ಯದ ದಿನಗಳಿಗೆ ಯಾವ ಅಂಕೆ, ಅಡ್ಡಿ, ಆತಂಕ ಇರಲಿಲ್ಲ. ಅಲ್ಲಿ ಸ್ವತ್ಛಂದವಾಗಿ ಹಾರಾಡುತ್ತಾ, ಹಾಡುತ, ನಲಿಯುತ ಕಳೆದುಬಿಟ್ಟಿತು ಬಾಲ್ಯ. ಬದುಕಿನ ತಿರುವಿನಲ್ಲಿ ನಿಂತು ನೋಡಿದಾಗ, ಆ ದಿನಗಳು ಮತ್ತೆ ಮತ್ತೆ ಬರಲಿ ಎಂದು ಆ ದೇವರಿಗೆ ಅಪೀಲು ಹಾಕುತ್ತಲೇ ಇರುತ್ತೇವೆ. ಆದರೆ ಅದು ಬರುವುದಿಲ್ಲ, ನಾವು ಬಿಡುವುದಿಲ್ಲ. ಕಲಿತು ದೊಡ್ಡವರಾಗಿ ದೊಡ್ಡ ಕೆಲಸದಲ್ಲಿ ಇದ್ದರೂ, ಹುಟ್ಟೂರಿನ ನೆನಪು. ಬಾಲ್ಯದಲ್ಲಿ ಕಲಿತ ಶಾಲೆ, ಕಲಿಸಿದ ಮಾಸ್ತರ್‌, ಆತ್ಮೀಯ ಗೆಳೆಯರು, ಬದ್ಧ ವೈರಿಗಳು, ಹಳೆ ಲಡಕಾಸಿ ಸೈಕಲ್ಲು, ಹಳೆ ಹುಣಸೆ ಮರ, ಪ್ರೀತಿ ಪ್ರೇಮದ ಗುಂಗು ಹಿಡಿಸಿ ಎಲ್ಲರಿಗಿಂತ ಮುಂಚೆಯೇ ಮದುವೆ ಮಾಡಿಕೊಂಡು ಹೋದ ಹುಡುಗಿ, ಪೋಲಿ ಕತೆ ಹೇಳುತ್ತಿದ್ದ ತರ್ಲೆ ಗೆಳೆಯರು, ಊರ ಜಾತ್ರೆ, ಹನುಮನ ಗುಡಿಕಟ್ಟೆ, ಭಜನಾ ಮಂಡಳಿ ಹಾಡುಗಳು, ಇಂಥವೇ ಹಲವು ನೆನಪುಗಳು…

***

ಎಲ್ಲವೂ ಸರಿ ಇದ್ದಿದ್ದರೆ, ಈ ವೇಳೆಗೆ ಶಾಲೆ ಆರಂಭವಾಗಿ ಎರಡು ತಿಂಗಳೇ ಕಳೆದಿರಬೇಕಿತ್ತು. ಆದರೆ, ಜಾಗತಿಕ ಮಹಾಮಾರಿ ಕೋವಿಡ್ ದಿಂದ ಇನ್ನೂ ಎರಡು ತಿಂಗಳು ಶಾಲೆ ಶುರುವಾಗುವುದು ಅನುಮಾನ. ಮಳೆಗಾಲ ಮತ್ತು ಶಾಲೆ ಒಟ್ಟಿಗೇ ಆರಂಭವಾಗುತ್ತಿದ್ದ ಕ್ಷಣಕ್ಕೆ ಸಾಕ್ಷಿಯಾಗುವ ಅದೃಷ್ಟ ಇಂದಿನ ಪೀಳಿಗೆಗೆ ಇಲ್ಲ. ಆಟವೆಂದರೆ ಬರಿ ವಿಡಿಯೋ ಗೇಮ್ಸ್ ಮಾತ್ರ ಎಂಬ ಮನಸ್ಥಿತಿ ಬಂದು ಕುಳಿತಿದೆ. ನಮಗೆ ಸಿಕ್ಕಿದಂಥ ಬಾಲ್ಯದ ಅಮೂಲ್ಯ ನೆನಪುಗಳು ಮುಂದಿನ ಪೀಳಿಗೆಗೆ ಸಿಗುವುದು ಅಪರೂಪವೇ ಸರಿ. ಈ ವರ್ಷ ಮಕ್ಕಳ ಕಲಿಕೆಯು ಯಾಂತ್ರಿಕವಾಗಿದೆ.

ಕಲಿಕೆಯ ಮಾಧ್ಯಮವೂ ಬದಲಾಗಿದೆ. ಮಕ್ಕಳ ಶಿಕ್ಷಣ ಯಾವುದಿರಬೇಕೆಂದು, ಮಕ್ಕಳನ್ನು ಒಂದೇ ಒಂದು ಮಾತೂ ಕೇಳದೆ, ಹೆತ್ತವರೇ ನಿರ್ಧರಿಸುತ್ತಿದ್ದಾರೆ.

***

ಆದಷ್ಟು ಬೇಗ ಮಹಾಮಾರಿ ಕೊರೋನಾ ಹೊರಟು ಹೋಗಲಿ. ಮತ್ತೆ ಶಾಲೆ ತೆರೆಯಲಿ ಢಣ..ಢಣ.. ಘಂಟೆಯ ಸದ್ದು ಕೇಳಲಿ. ಸಂಭ್ರಮದಿಂದ ಮಕ್ಕಳು ಬ್ಯಾಗ್‌ ಹೆಗಲಿಗೇರಿಸಿಕೊಂಡು ಕುಣಿಯುತ್ತಾ, ನಲಿಯುತ್ತಾ ಶಾಲೆಯ ಹಾದಿ ಹಿಡಿಯಲಿ. ಮಕ್ಕಳ ಕಲರವವು ಶಾಲೆ ಆವರಣ ತುಂಬಲಿ. ವರ್ಗದ ಕೋಣೆಯಿಂದ ಅ..ಆ..ಇ…ಈ.. ಅ..ಆ… ಇ..ಈ. A..B..C..D.. ಕತೆ, ಹಾಡು, ಕುಣಿತ, ಗಲಾಟೆಯ ಸದ್ದು ಕೇಳಿ ಬರಲಿ. ಭವಿಷ್ಯ ಎಂಬ ಗೂಡೊಳಕ್ಕೆ ಮಕ್ಕಳು ಎಂಬ ಪುಟ್ಟ ಮರಿಗಳು ನುಗ್ಗಿಬರಲಿ.­

 

– ವೃಶ್ಚಿಕಮುನಿ

ಟಾಪ್ ನ್ಯೂಸ್

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ತತ್ವಜ್ಞಾನಿ ಶಾಲಾ ಮಾಸ್ತರ

ತತ್ವಜ್ಞಾನಿ ಶಾಲಾ ಮಾಸ್ತರ

ಬದುಕು ಬದಲಿಸಿದ ತಂದೂರಿ ಚಹಾ!

ಬದುಕು ಬದಲಿಸಿದ ತಂದೂರಿ ಚಹಾ!

ಮೂರ್ಖರ ದಿನ ಹುಟ್ಟಿದ್ದು ಹೀಗೆ…

ಮೂರ್ಖರ ದಿನ ಹುಟ್ಟಿದ್ದು ಹೀಗೆ…

Untitled-1

ಬಾಂಬರ್‌ ಬಾವಲಿ!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

ಅಜ್ಜನನ್ನು ನೋಡಿಯೇ ಮಾತಾಡಲು ಕಲಿತೆವು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

crime (2)

Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!

1-wweewq

Airstrike; ಹಿಂದಿನಿಂದ ದಾಳಿ ಮಾಡುವುದರಲ್ಲಿ ನನಗೆ ನಂಬಿಕೆ ಇಲ್ಲ: ಮೋದಿ

1-wqeqqweqwe

Not responding; ಶಿವರಾಮ್ ಹೆಬ್ಬಾರ್ ಅವರನ್ನು ಪ್ರಧಾನಿ ಕಾರ್ಯಕ್ರಮಕ್ಕೆ ಕರೆದಿಲ್ಲ: ಬಿಜೆಪಿ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.