ಕೋವಿಡ್ -19 ಸಮಯದಲ್ಲಿ ಆರೋಗ್ಯ ವಿಮೆಗಳು


Team Udayavani, Aug 16, 2020, 7:24 PM IST

ಕೋವಿಡ್ -19 ಸಮಯದಲ್ಲಿ ಆರೋಗ್ಯ ವಿಮೆಗಳು

ದೇಶಾದ್ಯಂತ ಕೋವಿಡ್‌ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆಯೇ ಕಳೆದ ಜೂನ್‌ ತಿಂಗಳಿನಲ್ಲಿ ದೇಶದ ವಿಮಾ ಕಂಪೆನಿಗಳ ನಿಯಂತ್ರಕ ಸಂಸ್ಥೆ (ಐ.ಆರ್‌.ಡಿ.ಎ.ಐ.) ವಿಮಾ ಕಂಪೆನಿಗಳಿಗೆ ಕೋವಿಡ್‌ನ‌ ಚಿಕಿತ್ಸಾ ವೆಚ್ಚ ಭರಿಸಲು ನೆರವಾಗುವಂತಹ ನಿರ್ದಿಷ್ಟ ಅಲ್ಪಾವಧಿ ವಿಮಾ ಯೋಜನೆಗಳ ಸೌಲಭ್ಯಒದಗಿಸುವಂತೆ ಸೂಚನೆ ನೀಡಿತು.ಅದರಂತೆ ಈಗ ಕೋವಿಡ್ ಕವಚ ಹಾಗೂ ಕೋವಿಡ್ ರಕ್ಷಕ ಎಂಬ ಅಲ್ಪಾವಧಿಯ ವಿಮಾ ಪಾಲಿಸಿ (ಪ್ರಾಡಕ್ಟ್) ಗಳು ಸುಮಾರು ಮೂವತ್ತರಷ್ಟು ಸರಕಾರಿ ಹಾಗೂ ಖಾಸಗಿ ವಿಮೆ ಕಂಪೆನಿಗಳು ಬಿಡುಗಡೆಗೊಳಿಸಿವೆ. ಈ ಪಾಲಿಸಿಗಳ ಹೆಸರುಗಳು ಎಲ್ಲ ವಿಮಾ ಕಂಪೆನಿಗಳಲ್ಲಿ ಒಂದೇ ಆಗಿದ್ದು ಈ ಪಾಲಿಸಿ ಹೆಸರಿನೊಂದಿಗೆ ವಿಮಾ ಕಂಪೆನಿ ಹೆಸರು ಸೇರಿಸಿಕೊಳ್ಳಲಾಗಿದೆ. ಅಲ್ಲದೆ ಇತರ ಅರ್ಹತೆಗಳು, ಮಾನದಂಡಗಳು, ವಿಮಾ ಮೊತ್ತ ಎಲ್ಲ ವಿಮಾ ಕಂಪೆನಿಗಳಲ್ಲಿ ಒಂದೇ ಆಗಿದೆ. ಆದರೆ ಪ್ರೀಮಿಯಂ ದರಗಳನ್ನು ವಿಮಾ ಕಂಪೆನಿಗಳೇ ನಿರ್ಧರಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಕೋವಿಡ್‌ ಕವಚ :  ಇದು ಒಂದು ಕೋವಿಡ್‌ ಪರೀಕ್ಷೆ ಪಾಸಿಟಿವ್‌ ಬಂದ ರೋಗಿಗೆ ಆಸ್ಪತ್ರೆ ಖರ್ಚನ್ನು ಆತ ಮಾಡಿದ ವಿಮಾ ಮೊತ್ತಕ್ಕೆ ಅನುಗುಣವಾಗಿ ಮರುಪಾವತಿಸುವ Indemnity  ಪಾಲಿಸಿಯಾಗಿದೆ. ಈ ಪಾಲಿಸಿಯ ವೈಶಿಷ್ಟ್ಯವೆಂದರೆ ಕೋವಿಡ್‌ ರೋಗಿಯು ವೈದ್ಯರ ಸಲಹೆಯಂತೆ ಮನೆಯಲ್ಲಿಯೇ ಪಡೆದ 14 ದಿನಗಳ ಚಿಕಿತ್ಸೆಗೆ ಸಹ ಮರುಪಾವತಿ ನೀಡುವುದು. ಅಲ್ಲದೇ ಆಯುಷ್‌ ಚಿಕಿತ್ಸೆ, ಆಸ್ಪತ್ರೆಗೆ ಸೇರುವ ಮೊದಲಿನ ದಿನಗಳ ಹಾಗೂ ಅನಂತರದ ದಿನಗಳ ವೆಚ್ಚವನ್ನು ಸಹ ಮರುಪಾವತಿಸಲಾಗುವುದು. ಈ ಪಾಲಿಸಿಯಲ್ಲಿ ಮೂರೂವರೆ (105 ದಿನ), ಆರೂವರೆ (195 ದಿನ) ಮತ್ತು ಒಂಬತುವರೆ ತಿಂಗಳ (285 ದಿನಗಳು) ಅಲ್ಪಾವಧಿ ವಿಮಾ ಸೌಲಭ್ಯ ವಿಮೆ ಪರಿಹಾರ ಮೊತ್ತ ಕನಿಷ್ಠ 50 ಸಾವಿರದಿಂದ ಗರಿಷ್ಠ 5 ಲಕ್ಷ ರೂ. ವರೆಗೆ ಇದೆ. ವೈಯಕ್ತಿಕ ಪಾಲಿಸಿಗಳು ಅಲ್ಲದೆ ಕುಟುಂಬ ಸದಸ್ಯರಿಗೆ ಸಹ ವಿಮೆ ಸೌಲಭ್ಯಗಳನ್ನು ಒಳಗೊಂಡ Family Floater ಪಾಲಿಸಿಗಳು ಸಹ ಲಭ್ಯವಿವೆ. ಪಾಲಿಸಿ ಪಡೆದುಕೊಂಡ 15 ದಿನಗಳ ಅನಂತರ ಸಕ್ರಿಯಗೊಳ್ಳುತ್ತವೆ.

ಕೋವಿಡ್ ರಕ್ಷಕ :  ಇದು ಸರಳವಾದ ಕೊರೊನಾ ವಿಮಾ ಬೆನಿಫಿಟ್‌ ಪಾಲಿಸಿಯಾಗಿದ್ದು ವಿಮೆ ಹೊಂದಿದ ವ್ಯಕ್ತಿಗೆ ಸರಕಾರಿ ನೋಂದಾಯಿತ ಪ್ರಯೋಗಾಲಯಗಳಲ್ಲಿ ಕೊರೊನಾ ಇರುವುದು ದೃಢಪಟ್ಟಲ್ಲಿ ಕನಿಷ್ಠ 72 ಗಂಟೆಗಳ ಒಳರೋಗಿ ಚಿಕಿತ್ಸೆ ಬೇಕಾದಲ್ಲಿ ನಿಗದಿತ ವಿಮೆ ಮೊತ್ತವನ್ನು ಪೂರ್ಣವಾಗಿ ಆ ವ್ಯಕ್ತಿಗೆ ನೀಡಲಾಗುವುದು. ಆ ರೋಗಿಯು ಬೇರೆ ಯಾವುದೇ ಆರೋಗ್ಯ ವಿಮೆ ಅಡಿಯಲ್ಲಿ ಆಸ್ಪತ್ರೆ ಚಿಕಿತ್ಸಾ ವೆಚ್ಚವನ್ನು ಮರುಪಾವತಿಸಿಕೊಂಡಿದ್ದರೂ ಅಥವಾ ಸರಕಾರಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆದುಕೊಂಡಿದ್ದರೂ ಸಹ ಸಂಪೂರ್ಣ ವಿಮಾ ಮೊತ್ತ ರೋಗಿಗೆ ಸಿಗಲಿದೆ. ಇದು ಮೂರೂವರೆ (105 ದಿನ), ಆರೂವರೆ (195 ದಿನ) ಮತ್ತು ಒಂಬತ್ತೂವರೆ ತಿಂಗಳ (285 ದಿನಗಳು) ಅಲ್ಪ ಕಾಲಾವಧಿಯದ್ದಾಗಿರುತ್ತದೆ. ಈ ಪಾಲಿಸಿಯೂ ಸಹ ಖರೀದಿಸಿದ 15 ದಿನಗಳ ನಂತರ ಸಕ್ರಿಯಗೊಳ್ಳುತ್ತದೆ. ವಿಮಾ ಪರಿಹಾರ ಮೊತ್ತವು ಕನಿಷ್ಠ 50,000ದಿಂದ ಗರಿಷ್ಠ 2,50,000 ಲಕ್ಷ ರೂ. ವರೆಗೆ ಇರುತ್ತದೆ.

ನಾವು ಇಂದು ವಾಸಿಸುವ ಪರಿಸರದಲ್ಲಿ ಮಾಲಿನ್ಯಗೊಂಡ ಗಾಳಿ, ಕುಡಿಯುವ ನೀರು, ರಾಸಾಯನಿಕಗಳು ಸೇರಿದ ಆಹಾರ ಪದಾರ್ಥಗಳು, ಸಾಕಷ್ಟು ದೈಹಿಕ ಪರಿಶ್ರಮಗಳಿಲ್ಲದ ಯಾಂತ್ರೀಕೃತ  ಒತ್ತಡಮಯ ಜೀವನ ಶೈಲಿ, ತಂಬಾಕು, ಆಲ್ಕೋಹಾಲ್‌ ಸೇವನೆಯಂತಹ ಅಪಾಯಕಾರಿ ನಡವಳಿಕೆಗಳು, ಮನೆಮನೆಗಳಲ್ಲಿ ಹೃದಯ ಸಂಬಂಧಿ ಕಾಯಿಲೆಗಳು, ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆಗಳು, ಡಯಾಬಿಟಿಸ್‌, ಕ್ಯಾನ್ಸರ್‌ನಂತಹ ರೋಗಿಗಳನ್ನು ಸೃಷ್ಟಿಸಿದೆ. ದುಬಾರಿಯಾಗುತ್ತಿರುವ ವೈದ್ಯಕೀಯ ಚಿಕಿತ್ಸಾ ವೆಚ್ಚ, ಹಣದುಬ್ಬರ ಈ ಕಾಲದಲ್ಲಿ ಸೀಮಿತ ಆದಾಯದಲ್ಲಿ ಬದುಕುತ್ತಿರುವ ಜನರಿಗೆ ವಿಮೆ/ಆರೋಗ್ಯ ವಿಮೆ ಹೊಂದಿರುವುದು ಈಗ ಅಗತ್ಯವಾಗಿದೆ. ದೇಶದಲ್ಲಿ ಇಂದಿಗೂ ಹೆಚ್ಚು ಜನರು ವೈದ್ಯಕೀಯ ಸೇವೆಗಳು ಬೇಕಾದಾಗ ತಮ್ಮ ಉಳಿತಾಯದ ಹಣದಿಂದ ಅಥವಾ ಸಾಲ ಮಾಡಿ ಪಡೆದುಕೊಳ್ಳಬೇಕಾದ ಸ್ಥಿತಿ ಇದೆ. ಸ್ವಾತಂತ್ರ್ಯ ನಂತರ 1948ರಲ್ಲಿ ಇ.ಎಸ್‌.ಐ. ಕಾಯ್ದೆ ಅಡಿಯಲ್ಲಿ ಸಂಘಟಿತ ಕಾರ್ಮಿಕರಿಗೆ ಮತ್ತು ಅವರ ಕುಟುಂಬದವರಿಗೆ ನಿರ್ದಿಷ್ಟ ಆದಾಯದವರೆಗೆ ಉಚಿತ ಚಿಕಿತ್ಸೆ ಲಭ್ಯವಾದರೆ, 1954ರ ಕೇಂದ್ರ ಸರಕಾರದ ಯೋಜನೆ ಸಿ.ಜಿ.ಎಚ್‌.ಎಸ್‌. ಅಡಿಯಲ್ಲಿ ಕೇಂದ್ರ ಆರೋಗ್ಯ ದೇಶಾದ್ಯಂತ ಕೋವಿಡ್‌ ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಮಧ್ಯೆಯೇ ಕಳೆದ ಜೂನ್‌ ತಿಂಗಳಿನಲ್ಲಿ ದೇಶದ ವಿಮಾ ಕಂಪೆನಿಗಳ ನಿಯಂತ್ರಕ ಸಂಸ್ಥೆ (ಐ.ಆರ್‌.ಡಿ.ಎ.ಐ.) ವಿಮಾ ಕಂಪೆನಿಗಳಿಗೆ ಕೋವಿಡ್‌ನ‌ ಚಿಕಿತ್ಸಾ ವೆಚ್ಚ ಭರಿಸಲು ನೆರವಾಗುವಂತಹ ನಿರ್ದಿಷ್ಟ ಅಲ್ಪಾವಧಿ ವಿಮಾ ಯೋಜನೆಗಳ ಸೌಲಭ್ಯ ಒದಗಿಸುವಂತೆ ಸೂಚನೆ ನೀಡಿತು.

ಅದರಂತೆ ಈಗ ಕೋವಿಡ್ ಕವಚ ಹಾಗೂ ಕೋವಿಡ್ ರಕ್ಷಕ ಎಂಬ ಅಲ್ಪಾವಧಿಯ ವಿಮಾ ಪಾಲಿಸಿ (ಪ್ರಾಡಕ್ಟ್) ಗಳು ಸುಮಾರು ಮೂವತ್ತರಷ್ಟು ಸರಕಾರಿ ಹಾಗೂ ಖಾಸಗಿ ವಿಮೆ ಕಂಪೆನಿಗಳು ಬಿಡುಗಡೆಗೊಳಿಸಿವೆ. ಈ ಪಾಲಿಸಿಗಳ ಹೆಸರುಗಳು ಎಲ್ಲ ವಿಮಾ ಕಂಪೆನಿಗಳಲ್ಲಿ ಒಂದೇ ಆಗಿದ್ದು ಈ ಪಾಲಿಸಿ ಹೆಸರಿನೊಂದಿಗೆ ವಿಮಾ ಕಂಪೆನಿ ಹೆಸರು ಸೇರಿಸಿಕೊಳ್ಳಲಾಗಿದೆ. ಅಲ್ಲದೆ ಇತರ ಅರ್ಹತೆಗಳು, ಮಾನದಂಡಗಳು, ವಿಮಾ ಮೊತ್ತ ಎಲ್ಲ ವಿಮಾ ಕಂಪೆನಿಗಳಲ್ಲಿ ಒಂದೇ ಆಗಿದೆ. ಆದರೆ ಪ್ರೀಮಿಯಂ ದರಗಳನ್ನು ವಿಮಾ ಕಂಪೆನಿಗಳೇ ನಿರ್ಧರಿಸಿಕೊಳ್ಳಲು ಅವಕಾಶ ನೀಡಲಾಗಿದೆ.

ಕೋವಿಡ್‌ – 19 ಸಮಯದಲ್ಲಿ ವಿಮೆಗಳು ಸರಕಾರದ ಉದ್ಯೋಗಿಗಳಿಗೆ ಆರೋಗ್ಯ ವಿಮೆ ಸೌಲಭ್ಯ ದೊರಕಿತು. ಅನಂತರ ಅದೇ ರೀತಿಯಲ್ಲಿ ರಾಜ್ಯ ಸರಕಾರದ ಉದ್ಯೋಗಿಗಳಿಗೆ, ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಿಬಂದಿಗೆ ಆರೋಗ್ಯ ವಿಮೆ ಸೌಲಭ್ಯ ಸಿಗಲಾರಂಭಿಸಿತು. 1956ರಲ್ಲಿ ದೇಶದಲ್ಲಿ ವಿಮಾ ವ್ಯವಹಾರವು ರಾಷ್ಟ್ರೀಕರಣಗೊಂಡ ಮೇಲೆ ಎಲ್‌.ಐ.ಸಿ., ಜಿ.ಐ.ಸಿ. ಸಂಸ್ಥೆಗಳು ನಿಗದಿತ ಪ್ರೀಮಿಯಂ ಪಾವತಿಗೆ ಅನುಗುಣವಾಗಿ ಸಾಮಾನ್ಯ ವಿಮೆ ಸೇವೆಗಳನ್ನು ಪ್ರಾರಂಭಿಸಿದವು. 1999ರಲ್ಲಿ ವಿಮಾ ಕಂಪೆನಿಗಳ ನಿಯಂತ್ರಕ ಸಂಸ್ಥೆ (ಐ.ಆರ್‌.ಡಿ.ಎ.ಐ.) ಸ್ಥಾಪನೆಗೊಂಡ ಅನಂತರ ಹಲವಾರು ಖಾಸಗಿ ಕಂಪೆನಿಗಳು ವಿಮಾ ಸೇವೆ/ ಆರೋಗ್ಯ ವಿಮಾ ಸೇವೆ ನಿಗದಿತ ಪ್ರೀಮಿಯಂ ಪಾವತಿಗೆ ಅನುಸಾರವಾಗಿ ನೀಡಲಾರಂಭಿಸಿವೆ. 2018ರಲ್ಲಿ ಭಾರತ ಸರಕಾರವು ಮುಖ್ಯವಾಗಿ ಬಡತನ ರೇಖೆಗಿಂತ ಕೆಳಗಿರುವವರಿಗೆ (SECC –    2011, ಕರ್ನಾಟಕದಲ್ಲಿ ಬಿ.ಪಿ.ಎಲ್‌. ಕಾರ್ಡ್‌ ಹೊಂದಿದವರಿಗೆ) ಆಯುಷ್ಮಾನ್‌ ಭಾರತ್‌ ಎಂಬ ಆರೋಗ್ಯ ಭರವಸೆ (Assurance) ಯೋಜನೆಯನ್ನು ಜಾರಿಗೊಳಿಸಿದೆ. ಈಗ ಈ ಮೇಲೆ ಕಾಣಿಸಿದ ವರ್ಗದವರನ್ನು ಬಿಟ್ಟು ಉಳಿದ ಕೆಳ ಮಧ್ಯಮ, ಮಧ್ಯಮ ವರ್ಗದವರಿಗೆ ವೈದ್ಯಕೀಯ ಚಿಕಿತ್ಸೆಯ ಅಗತ್ಯಬಿದ್ದಲ್ಲಿ ಸರಕಾರಿ ಆಸ್ಪತ್ರೆಗಳನ್ನು ಅಥವಾ ಆರೋಗ್ಯ ವಿಮೆ ಹೊಂದಿರುವ ಅಗತ್ಯ ಹೆಚ್ಚಾಗಿದೆ.

ವಿಮಾ ಕಂಪೆನಿಗಳು ತಮ್ಮ ಪಾಲಿಸಿಗಳಿಗೆ ಸಂಬಂಧಿಸಿದಂತೆ ನೀಡುವ ಜಾಹೀರಾತುಗಳು ಸ್ಪಷ್ಟವಾಗಿ ಇರುವುದಿಲ್ಲ ಹಾಗೂ ಕ್ಲಿಷ್ಟಕರ ಭಾಷೆಯಲ್ಲಿ ಇರುತ್ತದೆ. ಇದರಿಂದ ಸಾಮಾನ್ಯ ಗ್ರಾಹಕರು ಗೊಂದಲಕ್ಕೀಡಾಗುವ ಸಂದರ್ಭಗಳು ಹೆಚ್ಚು. ಆದ್ದರಿಂದ ಐ.ಆರ್‌.ಡಿ.ಐ. ಎಲ್ಲಾ ವಿಮಾ ಕಂಪೆನಿಗಳಿಗೆ ಅಕ್ಟೋಬರ್‌ 1, 2020ರಿಂದ ಅನ್ವಯವಾಗುವಂತೆ ವಿಮಾ ನಿಯಮಗಳನ್ನು ಗ್ರಾಹಕ ಸ್ನೇಹಿಯಾಗಿರುವ ಬದಲಾವಣೆಗಳನ್ನು ಮಾಡುವಂತೆ ಮಾರ್ಗದರ್ಶಿ ನೀಡಿದೆ. ಆ ಪ್ರಕಾರ ವಿಮಾ ಕಂಪೆನಿಗಳು ಪಾಲಿಸಿಯ ವಿವರ, ಷರತ್ತುಗಳು ಮತ್ತು ಪಾಲಿಸಿಯ ಪ್ರಯೋಜನಗಳನ್ನು ಸ್ಪಷ್ಟವಾಗಿ ವಿವರಿಸುವ ಮಾಹಿತಿಗಳನ್ನು ಸರಳ ಭಾಷೆಯಲ್ಲಿ ಪಾಲಿಸಿದಾರರಿಗೆ ನೀಡಬೇಕು. ಅದೇ ತೆರನಾಗಿ ಆರೋಗ್ಯ ವಿಮೆಗಳ ಮಹತ್ವದ ನಿಬಂಧನೆಗಳನ್ನು ಸರಳಗೊಳಿಸುವುದು ಅದರಿಂದಾಗಿ ಗ್ರಾಹಕರಿಗೆ ವಿಮಾ ಪಾಲಿಸಿಗಳನ್ನು, ಪ್ರಯೋಜನಗಳನ್ನು ಅರಿತುಕೊಳ್ಳಲು ಸುಲಭ ಹಾಗೂ ಇತರ ಪಾಲಿಸಿಗಳ ಜೊತೆ ತುಲನೆ ಮಾಡಲು ಸರಳವಾಗಲಿದೆ.

ಟರ್ಮ್ ಇನೂರೆನ್ಸ್‌  :  ಇದೊಂದು ಡೆತ್‌ ಬೆನಿಫಿಟ್‌ ಇರುವ ಪಾಲಿಸಿಯಾಗಿದ್ದು ವಿಮಾ ಮೊತ್ತ ಇತರ ಸಾಂಪ್ರದಾಯಿಕ ವಿಮಾ ಪ್ರೀಮಿಯಂ ಗಳಿಗೆ ಹೋಲಿಸಿದರೆ ತುಂಬಾ ಕಡಿಮೆ ಇರುತ್ತದೆ. ವಿಮಾ ಕಂಪೆನಿಗಳು ವಿಮಾ ಮೊತ್ತವನ್ನು ಮಾನವ ಜೀವನದ ಬೆಲೆ (Human Life Value) ಎಂಬ ಪರಿಕಲ್ಪನೆ ಮೇಲೆ ಮಾಡಲಾಗುವುದು. ಉದಾ: 30 ವರ್ಷದ ವ್ಯಕ್ತಿಗೆ ವರ್ಷಕ್ಕೆ ರೂ. 10 ಲಕ್ಷ ಆದಾಯ ಇರುವ ವ್ಯಕ್ತಿಯು ಆದಾಯದ 30 ಪಟ್ಟು ವಿಮಾ ಮೊತ್ತಕ್ಕೆ ವಿಮೆ ಮಾಡಲು ಅರ್ಹರಿರುತ್ತಾರೆ. ವ್ಯಕ್ತಿಗೆ ವಯಸ್ಸು ಹೆಚ್ಚಾದಂತೆ ಹೊಸದಾಗಿ ಈ ವಿಮೆ ಮಾಡಲು ವಿಮೆ ಮೊತ್ತದ ಅರ್ಹತೆ ಕಡಿಮೆಯಾಗುತ್ತದೆ. ಹಾಗೂ ವಾರ್ಷಿಕ ಪ್ರೀಮಿಯಂ ಹೆಚ್ಚಾಗುತ್ತದೆ. ಸಾಮಾನ್ಯವಾಗಿ 10 ಲಕ್ಷ ವಾರ್ಷಿಕ ಆದಾಯವಿರುವ 30 ವರ್ಷದ ವ್ಯಕ್ತಿಯು 30 ವರ್ಷಕ್ಕೆ ಒಂದು ಕೋಟಿ ರೂಪಾಯಿ ವಿಮಾ ಮೊತ್ತ ಬಯಸಿದ್ದಲ್ಲಿ ವಾರ್ಷಿಕ ಸುಮಾರು 15 ಸಾವಿರ ರೂಪಾಯಿ ಪ್ರೀಮಿಯಂ ಕಟ್ಟಬೇಕಾಗಬಹುದು. ಆ ವ್ಯಕ್ತಿಯು 60 ವರ್ಷದ ಒಳಗೆ ಮೃತಪಟ್ಟಲ್ಲಿ ವ್ಯಕ್ತಿಯ ನಾಮಿನಿಗೆ ಒಂದು ಕೋಟಿ ರೂಪಾಯಿ ವಿಮಾ ಮೊತ್ತ ದೊರೆಯುವುದಾದರೆ, ಒಂದು ವೇಳೆ ವ್ಯಕ್ತಿ 60 ವರ್ಷದವರೆಗೆ ಬದುಕಿದ್ದರೆ ಅವರಿಗೆ ಯಾವುದೇ ಮೆಚ್ಯುರಿಟಿ ಬೆನಿಫಿಟ್‌ ಸಿಗುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಮೆಚ್ಯುರಿಟಿ ಬೆನಿಫಿಟ್‌ ಮತ್ತು ಡೆತ್‌ ಬೆನಿಫಿಟ್‌ ಇರುವ ಹೈಬ್ರಿಡ್‌ ಪಾಲಿಸಿಗಳು ಸ್ವಲ್ಪ ಹೆಚ್ಚು ಪ್ರೀಮಿಯಂಗೆ ಲಭ್ಯವಿವೆ.

30 ವರ್ಷದ ಅದೇ ವ್ಯಕ್ತಿಯು ಸಾಂಪ್ರದಾಯಿಕವಾದ ಪಾಲಿಸಿಗಳಲ್ಲಿ ಒಂದು ಕೋಟಿ ವಿಮಾ ಮೊತ್ತ ಪಡೆಯಬೇಕಾದರೆ ವಾರ್ಷಿಕ ಸುಮಾರು 3 ಲಕ್ಷ ರೂಪಾಯಿಗೂ ಹೆಚ್ಚು ಪ್ರೀಮಿಯಂ ತೆರಬೇಕಾಗುತ್ತದೆ. ಟರ್ಮ್ ವಿಮೆಯ ಪ್ರೀಮಿಯಂ ಒಮ್ಮೆ ಖರೀದಿಸಿದರೆ ವಿಮೆ ಅವಧಿ ಮುಗಿಯುವವರೆಗೆ ಒಂದೇ ಆಗಿರುವುದರಿಂದ ಕಡಿಮೆ ವಯಸ್ಸಿನಲ್ಲಿ ಈ ಪಾಲಿಸಿಯೊಡನೆ ಬರುವ ಗಂಭೀರ ಖಾಯಿಲೆಗಳು, ಅಪಘಾತ ಚಿಕಿತ್ಸೆ ಕವರೇಜ್‌ ಪ್ಯಾಕೇಜ್‌ ಸೇರಿಸಿ ಪಡೆದುಕೊಳ್ಳುವುದು ಉತ್ತಮ. ಈ ವಿಮೆಯ ಪ್ರೀಮಿಯಂಗಳನ್ನು ಮಾಸಿಕ, ತ್ತೈಮಾಸಿಕ ಅಥವಾ ವರ್ಷಕ್ಕೊಮ್ಮೆ ಪಾವತಿಸಬಹುದು. ಒಂದು ವೇಳೆ ಪಾಲಿಸಿದಾರರಿಗೆ ಗಂಭೀರ ಖಾಯಿಲೆ, ಶಾಶ್ವತ ಅಂಗವೈಕಲ್ಯ ಉಂಟಾದರೆ ಮುಂದೆ ಆ ಪಾಲಿಸಿಯ ಪ್ರೀಮಿಯಂ ಪಾವತಿಸಬೇಕಾಗಿಲ್ಲ. ಆದರೆ ಆ

ಪಾಲಿಸಿಯ ಎಲ್ಲಾ ಬೆನಿಫಿಟ್‌ಗಳು ಹಾಗೆಯೇ ವಿಮಾ ಅವಧಿ ಮುಗಿಯುವರೆಗೆ ಮುಂದುವರಿಯುವುದು. ಈ ಎಲ್ಲಾ ವಿಮೆಗಳಿಗೆ ಕಟ್ಟಿದ ಪ್ರೀಮಿಯಂ ಹಣಕ್ಕೆ ಆದಾಯ ತೆರಿಗೆ ವಿನಾಯಿತಿ ಸಹ ಇದೆ.

ಆರೋಗ್ಯ ವಿಮೆಗಳು : ಗಮನಿಸಬೇಕಾದ ಅಂಶಗಳು :

ಮಾರುಕಟ್ಟೆಯಲ್ಲಿ ಇಂದು ಹಲವಾರು ವಿಮಾ ಕಂಪೆ‌ನಿಗಳ ಹಲವಾರು ತೆರನಾದ ಆರೋಗ್ಯ ವಿಮೆ ಪಾಲಿಸಿಗಳಿವೆ. ಈ ಎಲ್ಲ ಪಾಲಿಸಿಗಳು ಅವುಗಳದ್ದೇ ಆದ ಉದ್ದೇಶ, ಸ್ವರೂಪ ಹಾಗೂ ಪ್ರೀಮಿಯಂ ದರ ಹೊಂದಿದೆ. ಆದ್ದರಿಂದ ಪ್ರತೀ ವ್ಯಕ್ತಿ ಅವನಿಗೆ ಅಥವಾ ಅವನ ಕುಟುಂಬಕ್ಕೆ ಸರಿ ಹೊಂದುವ ಆರೋಗ್ಯ ವಿಮೆ ಕೊಳ್ಳುವುದು ಬಲು ಗೊಂದಲಮಯವಾದ ಕೆಲಸವಾಗಿದೆ. ಆರೋಗ್ಯ ವಿಮೆ ಕೊಳ್ಳುವಾಗ ಸಾಮಾನ್ಯವಾಗಿ ಗಮನ ನೀಡಬೇಕಾದ ಅಂಶಗಳೆಂದರೆ –

  • ­ ನೀವು ಸಾಮಾನ್ಯವಾಗಿ ಚಿಕಿತ್ಸೆ ಬಯಸುವ ಆಸ್ಪತ್ರೆಗಳಲ್ಲಿ ಆ ವಿಮಾ ಕಂಪೆ‌ನಿಯ ಸೇವಾ ಲಭ್ಯತೆ.
  • ಪಾಲಿಸಿಯ ಅಡಿಯಲ್ಲಿ ಕವರ್‌ ಆಗುವ ಕಾಯಿಲೆಗಳ ಚಿಕಿತ್ಸೆಗಳು. ಪಾಲಿಸಿಯ ಅಡಿಯಲ್ಲಿ ಕವರ್‌ ಆಗದೇ ಇರುವ ಚಿಕಿತ್ಸೆಗಳು , ಸೇವೆಗಳು.
  • ಆಸ್ಪತ್ರೆಗೆ ದಾಖಲಾದರೆ ಸಿಗುವ ಕೊಠಡಿ, ಐಸಿಯುಗಳ ದೈನಂದಿನ ವೆಚ್ಚದ ಮರುಪಾವತಿ ಮಿತಿ.
  • ವಿಮೆ ಖರೀದಿ ಮಾಡುವಾಗ ಆದಾಗಲೇ ಇರುವ ಕಾಯಿಲೆಗಳ ಚಿಕಿತ್ಸೆಗಳ ಮರುಪಾವತಿ ಸೌಲಭ್ಯ.
  • ಆಸ್ಪತ್ರೆಗೆ ದಾಖಲಾಗುವ ಮೊದಲಿನ ಕೆಲ ದಿನಗಳ ವೆಚ್ಚ ಹಾಗೂ ಆಸ್ಪತ್ರೆಯಿಂದ ಬಿಡುಗಡೆಯಾದ ಅನಂತರ ಕೆಲ ದಿನಗಳ ವೆಚ್ಚ ಮರುಪಾವತಿ ಲಭ್ಯತೆ.
  • ಆಸ್ಪತ್ರೆಗಳ ಟಿಪಿಎಗಳಿಲ್ಲದೇ ಕ್ಯಾಶ್‌ಲೆಸ್‌ ಇರುವ ಸೇವೆಗಳು.
  • ಒ.ಪಿ.ಡಿ. ಸೇವೆಗಳು, ಟೆಲಿ ಮೆಡಿಸಿನ್‌ ಸೇವೆಗಳ ಮರುಪಾವತಿ ಲಭ್ಯತೆ.
  • ಉತ್ತಮ ICR (Incurred Claim Ratio) ಇರುವ ಪಾಲಿಸಿಗಳು.
  • ಸ್ಪರ್ಧಾತ್ಮಕವಾಗಿರುವ ಪ್ರೀಮಿಯಂ ಮತ್ತು ಟಾಪ್‌ ಅಪ್‌ ಸೌಲಭ್ಯ ಇರುವ ಪಾಲಿಸಿಗಳು ವಯಸ್ಸು ಚಿಕ್ಕದಿದ್ದು ವ್ಯಕ್ತಿಯು ಆರೋಗ್ಯವಾಗಿದ್ದಲ್ಲಿ ಕಡಿಮೆ ಪ್ರೀಮಿಯಂಗೆ ಉತ್ತಮ ಆರೋಗ್ಯ ವಿಮೆ ದೊರಕುತ್ತದೆ. ವಯಸ್ಸು ಹೆಚ್ಚಿದಂತೆ ಕಾಯಿಲೆಗಳು ಆವರಿಸಿದಂತೆ ಪ್ರೀಮಿಯಂ ಮೊತ್ತ ಹೆಚ್ಚಾಗುತ್ತದೆ. ಆರೋಗ್ಯ ವಿಮೆ ಪಾಲಿಸಿಗಳನ್ನು ಕುಟುಂಬದ ಸದಸ್ಯರಿಗೂ ಜತೆಯಾಗಿಕೊಳ್ಳಬಹುದಾಗಿದೆ. ಕುಟುಂಬ ಆರೋಗ್ಯ ವಿಮೆ ಪತಿ, ಪತ್ನಿ ಹಾಗೂ ಇಬ್ಬರು ಮಕ್ಕಳಿರುವ ಕುಟುಂಬಕ್ಕೆ ಸಾಮಾನ್ಯವಾಗಿ ವಾರ್ಷಿಕ 10,000 ರೂ. ಪ್ರೀಮಿಯಂಗೆ ಐದು ಲಕ್ಷ ರೂ.ವರೆಗೆ ವಿಮಾ ಕವರೇಜ್‌ ಸೌಲಭ್ಯ ಸಿಗಬಹುದು. ಆದರೆ ಬೇರೆ ಬೇರೆ ವಿಮಾ ಕಂಪೆನಿಗಳಲ್ಲಿ ಪ್ರೀಮಿಯಂ ದರ ಬೇರೆ ಬೇರೆ ಆಗಿರುತ್ತದೆ ಹಾಗೂ ಪ್ರತೀ ವರ್ಷ ಆರೋಗ್ಯ ವಿಮೆಯ ಪ್ರೀಮಿಯಂ ಬದಲಾಗುವುದು/ಹೆಚ್ಚಾಗುವುದು.

 

ಡಾ| ಅಶ್ವಿ‌ನಿ ಕುಮಾರ್‌ ಗೋಪಾಡಿ

ಅಡಿಶನಲ್‌ ಪ್ರೊಫೆಸರ್‌, ಕಮ್ಯೂನಿಟಿ

ಮೆಡಿಸಿನ್‌, ಕೆ.ಎಂ.ಸಿ. ಮಣಿಪಾಲ

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-knee

Knee: ಮೊಣಗಂಟು ಸಮಸ್ಯೆ: ನಿಮ್ಮ ರೋಗಿಗಳಿಗೆ ಅರ್ಥ ಮಾಡಿಕೊಳ್ಳಲು ಸಹಾಯ ಮಾಡುವುದು ಹೇಗೆ?

6-Fibromyalgia

Fibromyalgia: ಫೈಬ್ರೊಮಯಾಲ್ಜಿಯಾ ಜತೆಗೆ ಜೀವನ

4-heart-diseases

Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.