ಗಲಭೆ ಪ್ರಕರಣ: ಸಂಪತ್‌ಗೆ ಕಷ್ಟಕಾಲ? 

ಮಾಜಿ ಮೇಯರ್‌ ಸಂಪತ್‌ ರಾಜ್‌, ಸದಸ್ಯ ಜಾಕೀರ್‌ ವಿಚಾರಣೆ

Team Udayavani, Aug 19, 2020, 6:30 AM IST

ಗಲಭೆ ಪ್ರಕರಣ: ಸಂಪತ್‌ಗೆ ಕಷ್ಟಕಾಲ? 

ಬೆಂಗಳೂರು: ಕೆ.ಜಿ. ಹಳ್ಳಿಯಲ್ಲಿ ಗಲಭೆ ಸಂದರ್ಭ ಹಾನಿಗೀಡಾದ ವಾಹನಗಳನ್ನು ಆರ್‌ಟಿಒ ಅಧಿಕಾರಿಗಳು ಪರಿಶೀಲನೆ ನಡೆಸಿದರು.

ಬೆಂಗಳೂರು: ಡಿ.ಜೆ. ಹಳ್ಳಿ ಮತ್ತು ಕೆ.ಜಿ. ಹಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಸಿಸಿಬಿ ಪೊಲೀಸರು ಕಾಂಗ್ರೆಸ್‌ನ ಮಾಜಿ ಮೇಯರ್‌ ಸಂಪತ್‌ ರಾಜ್‌ ಮತ್ತು ಬೆಂಗಳೂರು ಮಹಾನಗರಪಾಲಿಕೆ ಸದಸ್ಯ ಎ.ಆರ್‌. ಜಾಕೀರ್‌ ಅವರನ್ನು ಮಂಗಳವಾರ ತೀವ್ರವಾಗಿ ವಿಚಾರಣೆಗೊಳಪಡಿಸಿದ್ದಾರೆ.

ಈ ಇಬ್ಬರ ಮೊಬೈಲ್‌ನಿಂದ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಆರೋಪಿಗಳನ್ನು ಸಂಪರ್ಕಿಸಿರುವುದು ತಿಳಿದುಬಂದಿದೆ. ಘಟನೆಗೆ ಮುನ್ನವೂ ಈ ನಂಬರ್‌ಗಳಿಂದ ಬಹಳಷ್ಟು ಸಂದೇಶ ಮತ್ತು ಕರೆಗಳು ಹೋಗಿವೆ ಎಂಬುದು ಗೊತ್ತಾಗಿದೆ. ಹೀಗಾಗಿ ಇಬ್ಬರ ವಿಚಾರಣೆ ನಡೆಸಲಾಗಿದೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

ಲಿಖೀತ ಹೇಳಿಕೆ ದಾಖಲು
ಸಂಪತ್‌ ರಾಜ್‌ ಮತ್ತು ಜಾಕೀರ್‌ ವಿಚಾರಣೆ ಸಂದರ್ಭದಲ್ಲಿ ತನಿಖಾಧಿಕಾರಿಗಳು ಕೇಳಿದ ಪ್ರಶ್ನೆಗಳಿಗೆ ಲಿಖೀತ ರೂಪದಲ್ಲಿ ಉತ್ತರ ನೀಡಿದ್ದಾರೆ. ಸಂಪತ್‌ ರಾಜ್‌ 18 ಪುಟ ಮತ್ತು ಜಾಕೀರ್‌ 14 ಪುಟಗಳ ಹೇಳಿಕೆ ದಾಖಲಿಸಿದ್ದಾರೆ. ಸಂಪತ್‌ ರಾಜ್‌ ಆಪ್ತ ಅರುಣ್‌ ರಾಜ್‌ ಹೇಳಿಕೆ ಕೂಡ ದಾಖಲಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.

ಚಾಮರಾಜಪೇಟೆಯಲ್ಲಿರುವ ಸಿಸಿಬಿ ಕಚೇರಿಗೆ ಬೆಳಗ್ಗೆ 11 ಗಂಟೆ ಸುಮಾರಿಗೆ ತಮ್ಮ ವಕೀಲರ ಜತೆ ಆಗಮಿಸಿದ ಡಿ.ಜೆ. ಹಳ್ಳಿ ಪಾಲಿಕೆ ಸದಸ್ಯ ಮತ್ತು ಮಾಜಿ ಮೇಯರ್‌ ಸಂಪತ್‌ ರಾಜ್‌ ಹಾಗೂ ಪುಲಕೇಶಿನಗರದ ಪಾಲಿಕೆ ಸದಸ್ಯ ಎ.ಆರ್‌. ಜಾಕೀರ್‌ ಅವರನ್ನು ಸಂಜೆ ಐದು ಗಂಟೆಯ ವರೆಗೆ ವಿಚಾರಣೆ ನಡೆಸಲಾಗಿದೆ.

ಮೊಬೈಲ್‌ ಡಾಟಾ ಡಿಲೀಟ್‌
ಸಂಪತ್‌ ರಾಜ್‌, ಎ.ಆರ್‌. ಜಾಕೀರ್‌ ಮತ್ತು ಅರುಣ್‌ಗೆ ಸೇರಿದ ನಾಲ್ಕು ಮೊಬೈಲ್‌ಗ‌ಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆದರೆ ಮೊಬೈಲ್‌ನಲ್ಲಿರುವ ಡಾಟಾವನ್ನು ಸಂಪೂರ್ಣವಾಗಿ ಡಿಲೀಟ್‌ ಮಾಡಿದ್ದಾರೆ. ಹೀಗಾಗಿ ತಾಂತ್ರಿಕ ವಿಭಾಗದ ಅಧಿಕಾರಿಗಳು ಅವುಗಳನ್ನು ಮತ್ತೂಮ್ಮೆ ಸಂಗ್ರಹಿಸಲು ಸಿದ್ಧತೆ ನಡೆಸಿದ್ದಾರೆ.

ಗಲಭೆಗೂ ನನಗೂ ಸಂಬಂಧವಿಲ್ಲ
ಗಲಭೆಗೂ ನನಗೂ ಸಂಬಂಧವಿಲ್ಲ. ಸಿಸಿಬಿ ಅಧಿಕಾರಿಗಳು ಕೇಳಿದ ಎಲ್ಲ ಪ್ರಶ್ನೆಗಳಿಗೂ ಉತ್ತರಿಸಿದ್ದೇನೆ. ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಜತೆ ಉತ್ತಮ ಸಂಬಂಧವಿದೆ ಎಂದು ಸಂಪತ್‌ ರಾಜ್‌ ಹೇಳಿದರು.

ಆರೋಪಿಗಳ ಸಂಖ್ಯೆಯಲ್ಲಿ ಏರಿಕೆ
ಸೋಮವಾರ ತಡರಾತ್ರಿಯೂ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಮತ್ತೆ 30 ಮಂದಿ ಯನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 420ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ನಷ್ಟ ಮೊತ್ತ ಪರಿಶೀಲನೆಗೆ ತಂಡ
ಗಲಭೆಯಲ್ಲಿ ಆಗಿರುವ ನಷ್ಟದ ಮೊತ್ತ ಪರಿಶೀಲನೆಗೆ ಕೇಂದ್ರ ವಿಭಾಗದ ಡಿಸಿಪಿ ಎಂ.ಎನ್‌. ಅನುಚೇತ್‌ ನೇತೃತ್ವದಲ್ಲಿ “ಡ್ಯಾಮೆಜ್‌ ಆ್ಯಂಡ್‌ ಲಾಸ್‌ ಅಸೆಸ್‌ಮೆಂಟ್‌’ ತಂಡ ರಚಿಸಲಾಗಿದೆ. ಇದುವರೆಗೆ ದಾಖಲಾಗಿರುವ ಎಫ್‌ಐಆರ್‌ ಅನ್ವಯ 11 ಕೋಟಿ ರೂ.ಗೂ ಹೆಚ್ಚಿನ ಆಸ್ತಿ ನಷ್ಟ
ವಾಗಿದೆ ಎಂದು ಅಂದಾಜಿಸಲಾಗಿದೆ. ಇದರೊಂದಿಗೆ ಆರ್‌ಟಿಒ ಅಧಿಕಾರಿಗಳು ನೀಡುವ ಮೊತ್ತವನ್ನು ಆಧರಿಸಿ ಸರಕಾರಕ್ಕೆ ವರದಿ ನೀಡ
ಲಾಗುವುದು ಎಂದು ಮೂಲಗಳು ತಿಳಿಸಿವೆ.

ಇಬ್ಬರ ಆರೋಪಿಗಳ ಬಂಧನ
ಫೇಸ್‌ ಬುಕ್‌, ಇನ್‌ಸ್ಟಾಗ್ರಾಂನಲ್ಲಿ ಲೈವ್‌ ಮಾಡಿ ಗಲಭೆಗೆ ಪ್ರಚೋದನೆ ನೀಡಿದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಜಾಕೀರ್‌ ಮತ್ತು ಸೈಯದ್‌ ಸೋಹಿಲ್‌ ಬಂಧಿತರು. ಆರೋಪಿಗಳು ಘಟನೆ ವೇಳೆ ಸಾಮಾಜಿಕ ಜಾಲತಾಣದ ಲೈವ್‌ನಲ್ಲಿ ಡಿ.ಜೆ. ಹಳ್ಳಿ ಘಟನೆಯನ್ನು ತೋರಿಸಿದ್ದರು. ಮತ್ತೂಂದೆಡೆ ಮುಸ್ಲಿಂ ಸಮುದಾಯದ ಬಗ್ಗೆ ಅವಹೇಳನಕಾರಿ ಪೋಸ್ಟ್‌ ಮಾಡಿದ್ದ ನವೀನ್‌ ಮನೆಗೆ ಬೆಂಕಿ ಹಚ್ಚಿದ್ದ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ತುಮಕೂರಿನ ತಿಪಟೂರಿನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಗಳನ್ನು ಸೋಮವಾರ ರಾತ್ರಿ ಬಂಧಿಸಲಾಗಿದೆ.

ಮೊಬೈಲ್‌ ವಶಕ್ಕೆ
ಘಟನೆ ಸಂದರ್ಭದಲ್ಲಿ ಸಂಪತ್‌ ರಾಜ್‌, ಎ.ಆರ್‌. ಜಾಕೀರ್‌ ಹಾಗೂ ಅರುಣ್‌ ರಾಜ್‌ ಮೊಬೈಲ್‌ಗ‌ಳಿಂದ ಬಂಧಿತ ಆರೋಪಿಗಳಿಗೆ ಕರೆಗಳು ಹೋಗಿವೆ. ವಾಟ್ಸ್‌ ಆ್ಯಪ್‌ ಸಂದೇಶಗಳು ರವಾನೆಯಾಗಿವೆ. ಮುಖ್ಯವಾಗಿ ಎಸ್‌ಡಿಪಿಐಯ ಮುಜಾಮಿಲ್‌ ಪಾಷಾ ಮತ್ತು ಜೆಡಿಎಸ್‌ ಮುಖಂಡ ವಾಜೀದ್‌ ಪಾಷಾಗೆ ಸಾಕಷ್ಟು ಕರೆ ಮತ್ತು ಸಂದೇಶಗಳು ಹೋಗಿವೆ. ಹೀಗಾಗಿ ಇಬ್ಬರ ಮೊಬೈಲ್‌ ಜಪ್ತಿ ಮಾಡಲಾಗಿದ್ದು, ಪರಿಶೀಲನೆ ನಡೆಸಲಾಗುತ್ತಿದೆ. ಬುಧವಾರ ಸಂಜೆ ವೇಳೆಗೆ ಇಬ್ಬರು ಸದಸ್ಯರ ಪಾತ್ರದ ಬಗ್ಗೆ ಸ್ಪಷ್ಟತೆ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.

ಅರುಣ್‌ರಾಜ್‌ ವಶಕ್ಕೆ
ಅರುಣ್‌ ರಾಜ್‌ ತಮಿಳುನಾಡಿನ ಹೊಸೂರು ಮೂಲದ ವನು. ನಗರದಲ್ಲಿ ಗುತ್ತಿಗೆದಾರನಾಗಿದ್ದು, ಸಂಪತ್‌ ರಾಜ್‌ಗೆ
ಆಪ್ತನಾಗಿದ್ದಾನೆ. ಸದ್ಯ ಅರುಣ್‌ರಾಜ್‌ (43)ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಘಟನೆ ದಿನ ಅರುಣ್‌ ಮೊಬೈಲ್‌ನಿಂದ ಗಲಭೆಕೋರರಿಗೆ ಸಾಕಷ್ಟು ಕರೆಗಳು ಮತ್ತು ಸಂದೇಶಗಳು ಹೋಗಿವೆ. ಅಲ್ಲದೆ ಸಂಪತ್‌ ರಾಜ್‌ ಸೂಚನೆ ಮೇರೆಗೆ ಹಣ, ದಿನಸಿ ಹಂಚಿಕೆ ಮಾಡಿದ್ದಾರೆ ಎಂಬುದು ಪತ್ತೆಯಾಗಿದೆ.

ಟಾಪ್ ನ್ಯೂಸ್

ರಾಜ್ಯವನ್ನು ಡ್ರಗ್ಸ್‌ ಮುಕ್ತ ಮಾಡಲು ಹೊರಟಿದ್ದೇವೆ: ಡಾ| ಪರಮೇಶ್ವರ್‌

ರಾಜ್ಯವನ್ನು ಡ್ರಗ್ಸ್‌ ಮುಕ್ತ ಮಾಡಲು ಹೊರಟಿದ್ದೇವೆ: ಡಾ| ಪರಮೇಶ್ವರ್‌

1-medha-Patkar

V K Saxena ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಕೇಸ್: ಮೇಧಾ ಪಾಟ್ಕರ್ ದೋಷಿ

Prajwal Revanna

MEA action; ಪ್ರಜ್ವಲ್ ಗೆ ಶೋಕಾಸ್ ನೋಟಿಸ್ ಕಳುಹಿಸಿದ ವಿದೇಶಾಂಗ ಸಚಿವಾಲಯ

arrested

Koppa; ಪಾಕಿಸ್ಥಾನ ಪರ ಪೋಸ್ಟ್‌ ಹಾಕಿದ್ದ ಯುವಕನಿಗೆ ನ್ಯಾಯಾಂಗ ಬಂಧನ

1-adasdsd

Papua New Guinea; ಭಾರೀ ಭೂಕುಸಿತದಿಂದ 100 ಕ್ಕೂ ಹೆಚ್ಚು ಜನರು ಸಾವು: ವರದಿ

Watch Video:‌ ಕೇದಾರದಲ್ಲಿ ಲ್ಯಾಂಡ್‌ ಆಗುತ್ತಿದ್ದ ವೇಳೆ ನೆಲಕ್ಕಪ್ಪಳಿಸಿದ ಹೆಲಿಕ್ಯಾಪ್ಟರ್…

Watch Video:‌ ಕೇದಾರದಲ್ಲಿ ಲ್ಯಾಂಡ್‌ ಆಗುತ್ತಿದ್ದ ವೇಳೆ ನೆಲಕ್ಕಪ್ಪಳಿಸಿದ ಹೆಲಿಕ್ಯಾಪ್ಟರ್…

ಸ್ಟಾರ್ ವಾರ್, ಫ್ಯಾನ್ಸ್ ವಾರ್ ಮಾಮೂಲಿ… ಆದ್ರೆ ಕನ್ನಡ ಚಿತ್ರರಂಗ ಎಡವುತ್ತಿರುವುದೆಲ್ಲಿ?

ಸ್ಟಾರ್ ವಾರ್, ಫ್ಯಾನ್ಸ್ ವಾರ್ ಮಾಮೂಲಿ… ಆದ್ರೆ ಕನ್ನಡ ಚಿತ್ರರಂಗ ಎಡವುತ್ತಿರುವುದೆಲ್ಲಿ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಾಜ್ಯವನ್ನು ಡ್ರಗ್ಸ್‌ ಮುಕ್ತ ಮಾಡಲು ಹೊರಟಿದ್ದೇವೆ: ಡಾ| ಪರಮೇಶ್ವರ್‌

ರಾಜ್ಯವನ್ನು ಡ್ರಗ್ಸ್‌ ಮುಕ್ತ ಮಾಡಲು ಹೊರಟಿದ್ದೇವೆ: ಡಾ| ಪರಮೇಶ್ವರ್‌

arrested

Koppa; ಪಾಕಿಸ್ಥಾನ ಪರ ಪೋಸ್ಟ್‌ ಹಾಕಿದ್ದ ಯುವಕನಿಗೆ ನ್ಯಾಯಾಂಗ ಬಂಧನ

1-aaaaa

Mudigere; ಭೀಕರ ಅಪಘಾತದಲ್ಲಿ ಓಮ್ನಿ ನಜ್ಜುಗುಜ್ಜು: ನಾಲ್ವರು ಮೃತ್ಯು

POCSO Case: ಅನ್ಯ ಕೋಮಿನ ಯುವಕನಿಂದ ಅಪ್ರಾಪ್ತೆಗೆ ಕಿರುಕುಳ: ಪೋಕ್ಸೋ ಕೇಸ್ ದಾಖಲು!

POCSO Case: ಅನ್ಯ ಕೋಮಿನ ಯುವಕನಿಂದ ಅಪ್ರಾಪ್ತೆಗೆ ಕಿರುಕುಳ: ಪೋಕ್ಸೋ ಕೇಸ್ ದಾಖಲು!

ಸಿದ್ದರಾಮಯ್ಯ

Mysore; ಲೋಕಸಭೆ ಮುಗಿದ ಕೂಡಲೇ ಜಿಪಂ, ತಾಪಂ, ಬಿಬಿಎಂಪಿ ಚುನಾವಣೆ: ಸಿದ್ದರಾಮಯ್ಯ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

ರಾಜ್ಯವನ್ನು ಡ್ರಗ್ಸ್‌ ಮುಕ್ತ ಮಾಡಲು ಹೊರಟಿದ್ದೇವೆ: ಡಾ| ಪರಮೇಶ್ವರ್‌

ರಾಜ್ಯವನ್ನು ಡ್ರಗ್ಸ್‌ ಮುಕ್ತ ಮಾಡಲು ಹೊರಟಿದ್ದೇವೆ: ಡಾ| ಪರಮೇಶ್ವರ್‌

1-medha-Patkar

V K Saxena ಸಲ್ಲಿಸಿದ್ದ ಮಾನನಷ್ಟ ಮೊಕದ್ದಮೆ ಕೇಸ್: ಮೇಧಾ ಪಾಟ್ಕರ್ ದೋಷಿ

Prajwal Revanna

MEA action; ಪ್ರಜ್ವಲ್ ಗೆ ಶೋಕಾಸ್ ನೋಟಿಸ್ ಕಳುಹಿಸಿದ ವಿದೇಶಾಂಗ ಸಚಿವಾಲಯ

arrested

Koppa; ಪಾಕಿಸ್ಥಾನ ಪರ ಪೋಸ್ಟ್‌ ಹಾಕಿದ್ದ ಯುವಕನಿಗೆ ನ್ಯಾಯಾಂಗ ಬಂಧನ

ಗಂಗೊಳ್ಳಿ : ಅಳಿವೆ ಹೂಳೆತ್ತುವ ಗೋಳು-ಮೀನುಗಾರರಿಗೆ ಸಂಕಷ್ಟ

ಗಂಗೊಳ್ಳಿ : ಅಳಿವೆ ಹೂಳೆತ್ತುವ ಗೋಳು-ಮೀನುಗಾರರಿಗೆ ಸಂಕಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.