ಭಾರತ-ಆಸೀಸ್‌ ಪಂದ್ಯಗಳಿಗೆ ಸಿಡ್ನಿ ಸಮ್ಮತಿ: ಆಸೀಸ್ ಗೆ ತೆರಳಲಿದೆ 32 ಸದಸ್ಯರ ಜಂಬೋ ತಂಡ

Team Udayavani, Oct 23, 2020, 8:33 AM IST

ಭಾರತ-ಆಸೀಸ್‌ ಪಂದ್ಯಗಳಿಗೆ ಸಿಡ್ನಿ ಸಮ್ಮತಿ: ಆಸೀಸ್ ಗೆ ತೆರಳಲಿದೆ 32 ಸದಸ್ಯರ ಜಂಬೋ ತಂಡ

ಸಿಡ್ನಿ: ಪ್ರವಾಸಿ ಭಾರತ ಮತ್ತು ಆಸ್ಟ್ರೇಲಿಯ ನಡುವಿನ ವರ್ಷಾಂತ್ಯದ ಸೀಮಿತ ಓವರ್‌ಗಳ ಸರಣಿಗೆ ನ್ಯೂ ಸೌತ್‌ ವೇಲ್ಸ್‌ ಸರಕಾರ ಅನುಮತಿ ನೀಡಿದೆ. ಇದರಂತೆ ಇತ್ತಂಡಗಳ ನಡುವಿನ ಏಕದಿನ ಹಾಗೂ ಟಿ20 ಸರಣಿ ಸಿಡ್ನಿ ಮತ್ತು ಕ್ಯಾನ್‌ಬೆರಾದಲ್ಲಿ ನಡೆಯುವುದು ಖಾತ್ರಿಯಾಗಿದೆ.

ಇದೇ ವೇಳೆ ಐಪಿಎಲ್‌ ಮುಗಿಸಿ ಆಗಮಿಸಲಿರುವ ಭಾರತ ಮತ್ತು ಆಸ್ಟ್ರೇಲಿಯ ತಂಡದ ಆಟಗಾರರು ಸಿಡ್ನಿಯಲ್ಲೇ ಕ್ವಾರಂಟೈನ್‌ ನಲ್ಲಿ ಇರಬೇಕಾಗುತ್ತದೆ. ಯುಎಇಯಿಂದ ನೇರವಾಗಿ ಬ್ರಿಸ್ಬೇನ್‌ಗೆ ಆಗಮಿಸಿ, 72 ಗಂಟೆಗಳ ಬಳಿಕ ಸಿಡ್ನಿಗೆ ಬರುವಂತೆ ಇವರಿಗೆ ಸೂಚಿಸಲಾಗಿತ್ತು. ಆದರೆ ಇದರಲ್ಲೀಗ ಬದಲಾವಣೆ ಮಾಡಲಾಗಿದ್ದು, ಕ್ರಿಕೆಟಿಗರೆಲ್ಲ ನೇರವಾಗಿ ಸಿಡ್ನಿಗೆ ಆಗಮಿಸಲಿದ್ದಾರೆ. ಐಪಿಎಲ್‌ ಆಡದ ಚೇತೇಶ್ವರ್‌ ಪೂಜಾರ, ಹನುಮ ವಿಹಾರಿ ಮೊದಲಾದ ಕ್ರಿಕೆಟಿಗರು ನೇರವಾಗಿ ಯುಎಇಗೆ ಹೋಗಿ, ಅಲ್ಲಿಯೇ ಕ್ವಾರಂಟೈನ್‌ ಪೂರೈಸಿ ತಂಡವನ್ನು ಕೂಡಿಕೊಳ್ಳಲಿದ್ದಾರೆ.

ಪಿಂಕ್‌ ಬಾಲ್‌ ಟೆಸ್ಟ್‌

ಸರಣಿಯ ಮೊದಲ ಟೆಸ್ಟ್‌ “ಅಡಿಲೇಡ್‌ ಓವಲ್‌’ನಲ್ಲಿ ನಡೆಯಲಿದ್ದು (ಡಿ. 17-21), ಇದು ಹಗಲು-ರಾತ್ರಿ ಸಾಗುವ ಪಿಂಕ್‌ ಬಾಲ್‌ ಪಂದ್ಯವಾಗಿರಲಿದೆ. ಅನಂತರದ ಬಾಕ್ಸಿಂಗ್‌ ಡೇ ಟೆಸ್ಟ್‌ (ಡಿ. 26-30) ಆತಿಥ್ಯ ಕೂಡ ಅಡಿಲೇಡ್‌ ಪಾಲಾಗಿದೆ. ಸಂಪ್ರದಾಯದಂತೆ ಇದು ಮೆಲ್ಬರ್ನ್ನಲಿ ನಡೆಯಬೇಕಿತ್ತು. ಆದರೆ ಅಲ್ಲಿ ಕೋವಿಡ್‌-19 ಪ್ರಕರಣ ಜಾಸ್ತಿ ಇರುವುದರಿಂದ ಎಂಸಿಜಿಗೆ ಈ ಅವಕಾಶ ತಪ್ಪಿದೆ. ಉಳಿದೆರಡು ಟೆಸ್ಟ್‌ ಪಂದ್ಯಗಳು ಸಿಡ್ನಿ ಮತ್ತು ಬ್ರಿಸ್ಬೇನ್‌ನಲ್ಲಿ ನಡೆಯಲಿದೆ.

ಇದನ್ನೂ ಓದಿ:IPL 2020: ಪಾಂಡೆ-ಶಂಕರ್‌ ಅಬ್ಬರ; ಹೈದರಾಬಾದ್‌ಗೆ 8 ವಿಕೆಟ್‌ ಜಯ

32 ಸದಸ್ಯರ ಜಂಬೋ ತಂಡ

ಈ ಸರಣಿಗಾಗಿ ಭಾರತ 32 ಆಟಗಾರರ ಬೃಹತ್‌ ತಂಡವೊಂದನ್ನು ಪ್ರಕಟಿಸುವ ಸಾಧ್ಯತೆ ಇದೆ. ಕೋವಿಡ್ ಮುನ್ನೆಚ್ಚರಿಕೆಯ ಕಾರಣ ತಂಡದಲ್ಲಿ ಆಗಾಗ ಬದಲಾವಣೆ ಮಾಡಿಕೊಳ್ಳಲು ಅಸಾಧ್ಯವಾಗಿರುವುದರಿಂದ ಒಮ್ಮೆಲೇ ಅಧಿಕ ಸಂಖ್ಯೆಯ ಆಟಗಾರರನ್ನು ಆರಿಸುವುದು ಬಿಸಿಸಿಐ ಯೋಜನೆ. ಈ ವಾರಾಂತ್ಯದೊಳಗೆ ತಂಡ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ನ. 27ರಿಂದ ಸರಣಿ ಆರಂಭ

ಭಾರತ ಏಕದಿನ ಸರಣಿಯೊಂದಿಗೆ ಆಸ್ಟ್ರೇಲಿಯ ಪ್ರವಾಸವನ್ನು ಆರಂಭಿಸಲಿದೆ. ಮೊದಲೆರಡು ಪಂದ್ಯಗಳನ್ನು ನ. 27 ಮತ್ತು 29ರಂದು “ಸಿಡ್ನಿ ಕ್ರಿಕೆಟ್‌ ಗ್ರೌಂಡ್‌’ನಲ್ಲಿ ಆಡಲಾಗುವುದು. ಕ್ಯಾನ್‌ಬೆರಾದಲ್ಲಿ ಅಂತಿಮ ಏಕದಿನ (ಡಿ.1) ಮತ್ತು ಮೊದಲ ಟಿ20 ಪಂದ್ಯ (ಡಿ. 4) ನಡೆಯಲಿದೆ. ಬಳಿಕ ಎರಡೂ ತಂಡಗಳು ಸಿಡ್ನಿಗೆ ವಾಪಸಾಗಿ ಉಳಿದೆರಡು ಟಿ20 ಪಂದ್ಯಗಳಲ್ಲಿ ಪಾಲ್ಗೊಳ್ಳಲಿವೆ (ಡಿ. 6 ಮತ್ತು ಡಿ. 8)

ಟಾಪ್ ನ್ಯೂಸ್

puPU ಪರೀಕ್ಷೆ-2: ವಿಜ್ಞಾನ ವಿದ್ಯಾರ್ಥಿಗಳದ್ದೇ ಸಿಂಹಪಾಲು

PU ಪರೀಕ್ಷೆ-2: ವಿಜ್ಞಾನ ವಿದ್ಯಾರ್ಥಿಗಳದ್ದೇ ಸಿಂಹಪಾಲು

ಸಾಲ ಮರುಪಾವತಿ ಮಾಡದಿದ್ದಕ್ಕೆ ಪತ್ನಿ, ಪುತ್ರನಿಗೆ ಗೃಹ ಬಂಧನ: ರೈತ ಆತ್ಮಹತ್ಯೆ

ಸಾಲ ಮರುಪಾವತಿ ಮಾಡದಿದ್ದಕ್ಕೆ ಪತ್ನಿ, ಪುತ್ರನಿಗೆ ಗೃಹ ಬಂಧನ: ರೈತ ಆತ್ಮಹತ್ಯೆ

T20 World Cup; Dwayne Bravo is the Afghanistan bowling consultant

T20 World Cup; ಡ್ವೇನ್‌ಬ್ರಾವೊ ಅಫ್ಘಾನ್‌ ಬೌಲಿಂಗ್‌ ಸಲಹೆಗಾರ

Molakalmuru ಆಸ್ಪತ್ರೆಯಲ್ಲಿ ಮೊಂಬತ್ತಿಯಲ್ಲಿ ಚಿಕಿತ್ಸೆ!

Molakalmuru ಆಸ್ಪತ್ರೆಯಲ್ಲಿ ಮೊಂಬತ್ತಿಯಲ್ಲಿ ಚಿಕಿತ್ಸೆ!

ಕಾಂಗ್ರೆಸ್‌ಗೆ 5 ಸ್ಥಾನದಲ್ಲಿ ಗೆಲುವು: ರಾಮಲಿಂಗಾ ರೆಡ್ಡಿ

ಕಾಂಗ್ರೆಸ್‌ಗೆ 5 ಸ್ಥಾನದಲ್ಲಿ ಗೆಲುವು: ರಾಮಲಿಂಗಾ ರೆಡ್ಡಿ

bjpMLC Elections: ಬಿಜೆಪಿಯಲ್ಲಿ 3 ಸ್ಥಾನಕ್ಕೆ 30 ಆಕಾಂಕ್ಷಿಗಳು

MLC Elections: ಬಿಜೆಪಿಯಲ್ಲಿ 3 ಸ್ಥಾನಕ್ಕೆ 30 ಆಕಾಂಕ್ಷಿಗಳು

DK Shivakumar ರಕ್ಷಿಸಿದರೆ ಮುಂದೆ ಬೆಲೆ ತೆರಬೇಕಾಗುತ್ತದೆ: ಎಚ್‌ಡಿಕೆ ಎಚ್ಚರಿಕೆ

DK Shivakumar ರಕ್ಷಿಸಿದರೆ ಮುಂದೆ ಬೆಲೆ ತೆರಬೇಕಾಗುತ್ತದೆ: ಎಚ್‌ಡಿಕೆ ಎಚ್ಚರಿಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup: McGurk is Australia’s reserve player

T20 World Cup: ಮೆಕ್‌ಗರ್ಕ್‌ ಆಸ್ಟ್ರೇಲಿಯದ ಮೀಸಲು ಆಟಗಾರ

T20 World Cup; Dwayne Bravo is the Afghanistan bowling consultant

T20 World Cup; ಡ್ವೇನ್‌ಬ್ರಾವೊ ಅಫ್ಘಾನ್‌ ಬೌಲಿಂಗ್‌ ಸಲಹೆಗಾರ

1-adsadasdas

IPL ಮೊದಲ ಕ್ವಾಲಿಫೈಯರ್‌ ಇಂದು; ಕೆಕೆಆರ್‌-ಹೈದರಾಬಾದ್‌ ಬಿಗ್‌ ಹಿಟ್ಟರ್ ಫೈಟ್‌

pvs

Malaysia Masters ಬ್ಯಾಡ್ಮಿಂಟನ್‌ ; ಬ್ರೇಕ್‌ ಮುಗಿಸಿ ಆಡಲಿಳಿದ ಪಿ.ವಿ.ಸಿಂಧು

Rohan Bopanna

Paris Olympics; ಬಾಲಾಜಿ, ಭಾಂಬ್ರಿ: ಜತೆಗಾರನ ಹೆಸರು ಸೂಚಿಸಿದ ಬೋಪಣ್ಣ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

puPU ಪರೀಕ್ಷೆ-2: ವಿಜ್ಞಾನ ವಿದ್ಯಾರ್ಥಿಗಳದ್ದೇ ಸಿಂಹಪಾಲು

PU ಪರೀಕ್ಷೆ-2: ವಿಜ್ಞಾನ ವಿದ್ಯಾರ್ಥಿಗಳದ್ದೇ ಸಿಂಹಪಾಲು

T20 World Cup: McGurk is Australia’s reserve player

T20 World Cup: ಮೆಕ್‌ಗರ್ಕ್‌ ಆಸ್ಟ್ರೇಲಿಯದ ಮೀಸಲು ಆಟಗಾರ

ಸಾಲ ಮರುಪಾವತಿ ಮಾಡದಿದ್ದಕ್ಕೆ ಪತ್ನಿ, ಪುತ್ರನಿಗೆ ಗೃಹ ಬಂಧನ: ರೈತ ಆತ್ಮಹತ್ಯೆ

ಸಾಲ ಮರುಪಾವತಿ ಮಾಡದಿದ್ದಕ್ಕೆ ಪತ್ನಿ, ಪುತ್ರನಿಗೆ ಗೃಹ ಬಂಧನ: ರೈತ ಆತ್ಮಹತ್ಯೆ

T20 World Cup; Dwayne Bravo is the Afghanistan bowling consultant

T20 World Cup; ಡ್ವೇನ್‌ಬ್ರಾವೊ ಅಫ್ಘಾನ್‌ ಬೌಲಿಂಗ್‌ ಸಲಹೆಗಾರ

Molakalmuru ಆಸ್ಪತ್ರೆಯಲ್ಲಿ ಮೊಂಬತ್ತಿಯಲ್ಲಿ ಚಿಕಿತ್ಸೆ!

Molakalmuru ಆಸ್ಪತ್ರೆಯಲ್ಲಿ ಮೊಂಬತ್ತಿಯಲ್ಲಿ ಚಿಕಿತ್ಸೆ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.