ಕುರುಡು ಹಮ್ಮು ಬೇಟೆಯಾಡಿ ಸ್ನೇಹ ನರಳಿದೆ!

ದೂರ ಇದ್ದಷ್ಟೂ ಬಾಂಧವ್ಯ ಗಟ್ಟಿ ಇರುತ್ತೆ!

Team Udayavani, Dec 30, 2020, 7:56 PM IST

ಕುರುಡು ಹಮ್ಮು ಬೇಟೆಯಾಡಿ ಸ್ನೇಹ ನರಳಿದೆ!

ಆ ಇಬ್ಬರು ಹೆಣ್ಣುಮಕ್ಕಳ ಪರಿಚಯವೂ ನನಗಿತ್ತು. “ಸಾಮಾಜಿಕ ಜಾಲತಾಣಗಳಿಂದ ಪರಿಚಿತರಾದೆವು. ಹವ್ಯಾಸ, ಅಭಿರುಚಿಗಳು ನಮ್ಮನ್ನು ಆಪ್ತ ಮಿತ್ರರನ್ನಾಗಿ ಮಾಡಿವೆ…”ಅಂದಿದ್ದರು. ಅವರ ಪತಿ, ಮಕ್ಕಳು ಕೂಡಾ ಪರಸ್ಪರ ಮಿತ್ರರಾದರು. ಅವರ ಸುತ್ತಾಟ, ಓಡಾಟಇತ್ಯಾದಿಗಳನ್ನು ದಾಖಲಿಸಿಸಾಮಾಜಿಕ ಜಾಲತಾಣಗಳಲ್ಲಿಬಿತ್ತರಿಸಿದ್ದೂ ಆಯಿತು. ಅಡುಗೆ, ಬಟ್ಟೆ, ಬಂಗಾರ.. ಇತ್ಯಾದಿ ಹಂಚಿಕೊಂಡಿದ್ದೂ ಆಯಿತು. ಕೆಲವೇ ತಿಂಗಳುಗಳು ಅಷ್ಟೇ..!

ಈಗ ಒಬ್ಬರ ಮುಖ ಅತ್ತ, ಒಬ್ಬರ ಮುಖ ಇತ್ತ. ಹಾಗಂತ ದೊಡ್ಡ ಜಗಳವೇನಿಲ್ಲ. ಸದಾ ಅಂಟಿಕೊಂಡು ಇದ್ದಂತಿದ್ದವರಿಗೆ.. ಈಗ ಮಾತೇಬೇಕಿಲ್ಲವೆನ್ನುವಷ್ಟು ಮೌನ..,ಅಸಹನೆ..! ಒಬ್ಬರನ್ನೊಬ್ಬರು ಬಹಿರಂಗವಾಗಿದೂಷಿಸುವಷ್ಟು ರೇಜಿಗೆ. ಏನು ಕಾರಣ..? ಊಹೂಂ..ಅದೇ ಸ್ಪಷ್ಟವಿಲ್ಲ.. ಹೆಣ್ಣುಮಕ್ಕಳ ಮಧ್ಯೆ ಬಹಳಷ್ಟು ಸಲ ಇಂಥವು ನಡೆಯುತ್ತೆ. ಏನಾಯಿತು ಅಂತಲೇ ಗೊತ್ತಾಗುವುದಿಲ್ಲ.

ಅರ್ಥವಾಗುವ ಹೊತ್ತಿಗೆ ಸಂಬಂಧ ಹಳಸಿದ ವಾಸನೆ ಬಂದುಬಿಟ್ಟಿರುತ್ತದೆ. ಇಬ್ಬರ ಮಧ್ಯೆ ಪ್ರತಿಷ್ಠೆಯ (EGO) ಮಾತೇ ಮುಖ್ಯವಾಗಿ ಮತ್ತೆ ಜೋಡಿಸುವುದೂ ಕಷ್ಟವಾಗಿಬಿಡು ತ್ತದೆ. ಸಂತೋಷಕ್ಕೆ, ಸಂಭ್ರಮಕ್ಕೆ ಕಾರಣವಾಗಿದ್ದ ಸ್ನೇಹವೊಂದು ಮನಃಶಾಂತಿಗೆ ಮಾರಕವಾಗಿ ನೋಡುಗರ ನಗೆಪಾಟಲಿಗೆ ಈಡಾಗಿಬಿಡುತ್ತದೆ. ಹಾಗಂತ ಅವರ್ಯಾರೂ ಕೆಟ್ಟವರಲ್ಲ.”ಅತೀ ಸರ್ವತ್ರ ವರ್ಜಯೇತ್‌.. ‘ ಎಂಬ ಮಾತಿದೆ. ಇಲ್ಲಿ ಆಗಿದ್ದೂ ಅದೇ..! ಈ “ಅತೀ’ ಒಡನಾಟವೇ ಒಮ್ಮೊಮ್ಮೆ ವಿಲನ್‌ ಆಗಿಬಿಡುತ್ತದೆ..!

ನಡುವೆ ಅಂತರವಿರಲಿ! :  ಸ್ನೇಹವೆಂಬುದು ಒಂದು ಸುಂದರ ಅನುಭೂತಿ.ಪರಸ್ಪರ ಪ್ರೀತಿ, ಗೌರವ, ನಂಬಿಕೆ ಇವುಗಳ ಜೊತೆಯಲ್ಲೇ ಒಂದು ಆರೋಗ್ಯಕರ “ಅಂತರ’ ವನ್ನೂ ಕಾಯ್ದುಕೊಳ್ಳಬೇಕಾಗುವುದು ಬಹಳ ಮುಖ್ಯ. ಒಂದಷ್ಟುಸಂಯಮದ ಬೇಲಿಯನ್ನು ಅವರಿಗವರೇ ಹಾಕಿಕೊಂಡರೆ ಒಳ್ಳೆಯದು ಹಾಗೆ ನೋಡಿದರೆ ಎಷ್ಟೋ ಸಲ ಈ ಮನಸ್ತಾಪಗಳಿಗೆ ನಿರ್ದಿಷ್ಟ ಕಾರಣಗಳೇ ಇರುವುದಿಲ್ಲ..! “ಫೋನ್‌ ಮಾಡಿಲ್ಲ. ನಾನು ಮಾಡಿದಾಗಲೂ ಉತ್ತರಿಸಿಲ್ಲ. ಸಮಯಕ್ಕೆ ಬೇಕಿತ್ತು, ನನ್ನ ಸ್ನೇಹ ಬಳಸ್ಕೊಂಡಳು ಅಷ್ಟೇ..” ಎಂಬಂಥ ಬಾಲಿಶ ಆರೋಪಗಳೂ ಇರಬಹುದು. ಸಣ್ಣದೊಂದುಪೂರ್ವಾಗ್ರಹ ಪೀಡಿತ ಅನಿಸಿಕೆಗೆ ಯಾರೋ ಕಿವಿ ಚುಚ್ಚಿದ ಮಾತೂ ಇರಬಹುದು. ಕೇಳಿಸಣ್ಣವರಾಗೋದ್ಯಾಕೆ ಎಂಬ ಪೆದ್ದು ತೀರ್ಮಾನವೂ ಇರಬಹುದು. ಒಟ್ಟಿನಲ್ಲಿ ಅವರವರ ಅಹಂ, ಪ್ರತಿಷ್ಠೆ ಯಿಂದಾಗಿ ಸುಂದರ ಸ್ನೇಹ ಬಲಿಯಾಗುತ್ತದೆ. ಸ್ನೇಹದ ರುಚಿ ಹದಗೆಡದಿರಲು ಕುತೂಹಲವನ್ನು ಉಳಿಸಿಕೊಳ್ಳಲು ಇಂಥ ಒಂದಷ್ಟು ನಿಯಮಗಳನ್ನು ಪಾಲಿಸುವುದು ಒಳ್ಳೆಯದು…

1.ಎಷ್ಟೇ ಸ್ನೇಹವಿರಲಿ, ಸಾಧ್ಯವಾದಷ್ಟೂ ಬೆಲೆಬಾಳುವ ವಸ್ತುಗಳ ವಿನಿಮಯಮಾಡಿಕೊಳ್ಳದಿರುವುದೇ ಕ್ಷೇಮ. ಒಮ್ಮೆ ಅಂಥಪರಿಸ್ಥಿತಿ ಬಂದಲ್ಲಿ ಅದರ ನಷ್ಟ ಭರಿಸುವ ಹೊಣೆಇರಬೇಕು. ಹಾಗೆಯೇ ನಮ್ಮ ವಸ್ತುವಿಗೆನಷ್ಟವಾದಲ್ಲಿ ಅದನ್ನು ಸ್ವೀಕರಿಸುವ ಮನೋಭಾವವೂ ಬೇಕು. ನೆನಪಿರಲಿ: ವಸ್ತುವಿಗಿಂತ ಸ್ನೇಹ ಮುಖ್ಯ.

2 .ಎಷ್ಟೇ ಸಲುಗೆ, ಸ್ನೇಹ ಇದ್ದರೂ ಪ್ರತೀ ದಿನ ಮಾತಿಗೆ, ಸಂಪರ್ಕಕ್ಕೆ ಸಿಗಬಾರದು. ಅಲ್ಲೊಂದು ಅಂತರವಿದ್ದರೇ ಚೆನ್ನ.

3 ಏನೇ ಅನುಮಾನ, ಆರೋಪಗಳಿದ್ದರೂ ಪರಸ್ಪರ ಕೂತು ಮಾತಾಡಿ ಪರಿಹರಿಸಿಕೊಳ್ಳಬೇಕು. ಇನ್ನೊಬ್ಬರ ಬಳಿದೂಷಿಸಬಾರದು. .ಹಂಚಿಕೊಂಡ ವೈಯಕ್ತಿಕ ವಿಷಯಗಳನ್ನು ಎಂಥದೇ ಸಂದರ್ಭದಲ್ಲೂಇನ್ನೊಬ್ಬರಲ್ಲಿ ಹೇಳಬಾರದು. ಗೌರವ, ನಂಬಿಕೆ ಸ್ನೇಹದ ಅಡಿಪಾಯ, ಭದ್ರ ಬುನಾದಿ.

4. ಮಿತ್ರರು ಸಂಕಟದಲ್ಲಿದ್ದರೆ ತಕ್ಷಣಕ್ಕೆ ಹೆಗಲು ಕೊಡುವ/ ನಿಭಾಯಿಸುವ / ವಿಚಾರಿಸುವ ಕನಿಷ್ಠ ಸೌಜನ್ಯವನ್ನು ಮರೆಯ  ಬಾರದು.

5. ಪರಸ್ಪರರ ಹವ್ಯಾಸ, ಕಲೆ, ಅಭಿರುಚಿ ಗಳಿಗೆ ಸ್ಪಂದಿಸುತ್ತ, ಪ್ರೋತ್ಸಾಹಿಸುತ್ತ ಬೆಳೆಸಬೇಕು.ಒಟ್ಟಿನಲ್ಲಿ ಜೀವನವೆಂಬ ಈ ಪಯಣದಲ್ಲಿ ಸ್ನೇಹವೆಂಬುದು ಒಂದು ಚೇತೋಹಾರಿಅನುಭವ. ಮಿತ್ರರಿಲ್ಲದ ಬದುಕು ರಸಹೀನ.ಕಷ್ಟ, ಸುಖ, ಯಶಸ್ಸು ಏನೇ ಬರಲಿ.. ಅದನ್ನುಹಂಚಿಕೊಳ್ಳಲು ಮಿತ್ರರಿದ್ದರೆ ಬದುಕು ಸಲೀಸು,ಅರ್ಥಪೂರ್ಣ. ಸ್ನೇಹವನ್ನೇನೋಗಳಿಸಿಬಿಡಬಹುದು. ಆದರೆ ಅದನ್ನು ನಿಭಾಯಿಸುವುದೇ ದೊಡ್ಡ ಸವಾಲು..! ಯಾವುದನ್ನೂ “ಅತೀ’ ಮಾಡಿಕೊಳ್ಳದೆ ಇರುವಂಥ ಸ್ನೇಹ ಸಂಬಂಧಗಳು ಎಲ್ಲರ ಬದುಕನ್ನೂ ಅರಳಿಸಲಿ.. ಕೊನೆತನಕ…!

ಸುಮನಾ ಮಂಜುನಾಥ

ಟಾಪ್ ನ್ಯೂಸ್

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

Yogendra Yadav:ಕೃಷಿ ಉಳಿಯಬೇಕಾದರೆ ರೈತರು ಕಾಂಗ್ರೆಸ್‌ಗೆ ಮತಹಾಕಲಿ: ಯೋಗೇಂದ್ರ ಯಾದವ್

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

ರಜಿನಿಕಾಂತ್‌ ʼಕೂಲಿʼಯಲ್ಲಿ ಅನುಮತಿಯಿಲ್ಲದೆ ಹಾಡು ಬಳಕೆ: ಲೀಗಲ್‌ ನೋಟಿಸ್‌ ಕಳುಹಿಸಿದ ಇಳಯರಾಜ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

Viral: ಮದುವೆಯ ದಿನ ವಧುವಿಗೆ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಭಾವಚಿತ್ರ ಉಡುಗೊರೆ ನೀಡಿದ ವರ

15-1

ಖಡಕ್ ಬಿಸಿಲು- ಪೊಲೀಸ್ ತಳ್ಳಾಟದಿಂದ ಸಂಸದ ಡಾ.‌ಜಾಧವ್ ಅಸ್ವಸ್ಥ: ಆಸ್ಪತ್ರೆಗೆ ದಾಖಲು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಪರೂಪದ ಅತಿಥಿ

ಅಪರೂಪದ ಅತಿಥಿ

Untitled-2

ಅವತಾರಪುರುಷ ಶ್ರೀರಾಮ

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಗರ್ಭಪಾತ ತಿದ್ದುಪಡಿ ಕಾಯ್ದೆಯಿಂದ ಏನೇನು ಅನುಕೂಲಗಳಿವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಅಮ್ಮನ ಸೀರೆಗೆ ಬೆಲೆ ಕಟ್ಟಲು ಸಾಧ್ಯವೆ?

ಮಾವಿನ ಬಗ್ಗೆ ಮನದ ಮಾತು…

ಮಾವಿನ ಬಗ್ಗೆ ಮನದ ಮಾತು…

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ

16

Goldy Brar: ಸಿಧು ಮೂಸೆವಾಲಾ ಹತ್ಯೆಯ ಮಾಸ್ಟರ್‌ ಮೈಂಡ್; ಗೋಲ್ಡಿ ಬ್ರಾರ್‌ ಶೂಟೌಟ್ – ವರದಿ

Gangolli: ಸ್ವಯಂ ಪ್ರೇರಣೆಯಿಂದ ಚಿತ್ರ ಕಲಾವಿದೆಯಾದ ತುಳಸಿ

Gangolli: ಸ್ವಯಂ ಪ್ರೇರಣೆಯಿಂದ ಚಿತ್ರ ಕಲಾವಿದೆಯಾದ ತುಳಸಿ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಸತ್ಯ ಆದಷ್ಟು ಬೇಗ ಹೊರಬರಲಿದೆ… ವಿಚಾರಣೆಗೆ ಕಾಲಾವಕಾಶ ಕೋರಿದ ಪ್ರಜ್ವಲ್ ರೇವಣ್ಣ

ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ

ಗುಲ್ವಾಡಿ: ಗುಜಿರಿ ಅಂಗಡಿಯಲ್ಲಿ ಅರಳಿದ ಗ್ರಂಥಾಲಯ-ತರಂಗ ವಾರಪತ್ರಿಕೆ ಪ್ರೇರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.