ಅಭಿವೃದ್ಧಿ ದಾಹವೂ, ನದಿಯ ಆರ್ಭಟವೂ


Team Udayavani, Aug 25, 2019, 5:28 AM IST

r-18

ಕೆಲ ದಿನಗಳ ಹಿಂದೆ ನಾನೊಂದು ಶಾಲೆಯ ವನಮಹೋತ್ಸವ ಸಮಾರಂಭಕ್ಕೆ ಹೋಗಿದ್ದೆ. ವೇದಿಕೆಯ ಮುಂದೆ ಸಸಿಯಿದ್ದ ಕುಂಡವಿರಿಸಲಾಗಿತ್ತು. ಅಧ್ಯಾಪಕರೊಬ್ಬರು ನೀರಿನ ಕ್ಯಾನ್‌ ಹಿಡಿದು ವೇದಿಕೆಯಲ್ಲಿದ್ದ ಎಲ್ಲ ಅತಿಥಿಗಳನ್ನು ಸಸಿಗೆ ನೀರು ಹಾಕುವುದರ ಮೂಲಕ ಸಮಾರಂಭವನ್ನು ಉದ್ಘಾಟಿಸುವಂತೆ ಕೋರುತ್ತಿದ್ದರು. ಏಳೆಂಟು ಗಣ್ಯರು ಹಾಗೆ ನಡೆದುಕೊಂಡರು. ಆದರೆ ಅಧ್ಯಕ್ಷತೆ ವಹಿಸಿದ್ದವರು ಮಾತ್ರ ಭಿನ್ನವಾಗಿ ವರ್ತಿಸಿದರು.

ಸಸಿಗೆ ಒಬ್ಬರೊ ಇಬ್ಬರೊ ನೀರು ಚಿಮುಕಿಸಿದರಾಯ್ತು, ನಾವೆಲ್ಲ ಸಸಿಗೆ ಹೀಗೆ ನೀರು ಸುರಿದರೆ ಅದು ಬುಡಮೇಲಾಗುವುದು ಖಾತರಿ. ಅದು ಕೊಳೆಯಲೂಬಹುದು ಎಂದರು. ಪರಿಸರ ಕಾಳಜಿಯೆ ಇರಲಿ ಅತಿರೇಕವಾದರೆ ಅದು ಆಡಂಬರದ ದಿಕ್ಕು ಹಿಡಿದೀತೆನ್ನಲು ಈ ಸಂದರ್ಭ ಉದಾಹರಿಸಿದೆನಷ್ಟೆ. ಮೇರೆ ಮೀರಿದ ನಗರೀಕರಣದ ಮೋಹ, ಅಭಿವೃದ್ಧಿಯ ಅಮಲಿನಲ್ಲಿ ಮನುಷ್ಯ ತೇಲಿಹೋಗಿರುವ ಫ‌ಲವೇ ನೈಸರ್ಗಿಕ ವಿಕೋಪದ ಉಗ್ರತೆ, ವ್ಯಗ್ರತೆ. ನೆರೆ ನಮ್ಮ ವಾಸನೆಲೆ ಭೂಮಿಯಲ್ಲೇ ಅತಿ ಪ್ರಬಲ ಬಲ. ಅಂತರ್ಜಲವನ್ನೇ ಬರಿದಾಗಿಸುವಷ್ಟು ಅದು ರೌದ್ರಾವತಾರ ತಳೆಯಬಲ್ಲದು. ಪ್ರಕೃತಿಯ ಮುನಿಸನ್ನು ಯಾರೂ ತಡೆಯಲಾಗದು ನಿಜ. ಆದರೆ ಮನುಷ್ಯನೇ ಅದರ ಪೈಶಾಚಿಕ ನೃತ್ಯಕ್ಕೆ ಮೃದಂಗ ನುಡಿಸಿದರೆ? ಈಗಾಗುತ್ತಿರುವುದು ಅದೇ.

ಎಗ್ಗಿಲ್ಲದೆ ಸೇತುವೆ, ಅಣೆಕಟ್ಟುಗಳನ್ನು ನಿರ್ಮಿಸುವುದರ ಪರಿಣಾಮವನ್ನು ಅವನು ಅರಿತಿಲ್ಲ. 1975ರಲ್ಲಿ ಚೀನಾದಲ್ಲಿ ಬ್ಯಾನ್ಕಿಯೋ ಅಣೆಕಟ್ಟು ಒಡೆದು 1,71,000 ಮಂದಿಯ ಸಾವಿಗೆ ಕಾರಣವಾಗಿದ್ದು ಒಂದು ಉದಾಹರಣೆ. ನದಿಗೆ ಮೈಯೆಲ್ಲ ಕಾಲೆಂಬ ಮಾತಿದೆ. ಅದು ಪಯಣ ಆರಂಭಿಸಿದಲಾಗಾಯ್ತು ಗುಡ್ಡ, ಹಳ್ಳ, ತಿಟ್ಟು ಏನೇ ಸಿಗಲಿ ಹಾದಿ ಮಾಡಿಕೊಂಡು ಸಮುದ್ರದತ್ತ ಸಾಗುತ್ತದೆ. ಅಡೆತಡೆಯುಂಟೆಂದು ನೀರು ಹಿಂದಿರುಗಿ ನೋಡದು. ಅದರ ಸ್ವಭಾವವೇ ಹಾಗೆ. ಹಿಡಿದಿದ್ದೆ ದಾರಿ. ಗೊತ್ತು ಗುರಿಯಿಲ್ಲದೆ ಕೂಡಿಹಾಕಿದರೆ ‘ಜಲ ಬಾಂಬ್‌’ ಆಗುತ್ತದೆ. ಸೇತುವೆ, ಅಣೆಕಟ್ಟುಗಳು ನದಿ ನೀರು ಹಿಡಿದಿಡುವ ಸಾಮರ್ಥ್ಯವನ್ನು ಕುಗ್ಗಿಸುತ್ತವೆ. ಜಲಾಶಯಗಳಲ್ಲಿನ ನೀರು ತುಂಬಿದಾಗ ಅದು ಅತ್ತ ತ್ವರಿತವಾಗಿ ಆವಿಯಾಗಲಾರದು ಅಥವಾ ತಳ ಕಾಂಕ್ರೀಟಾದ್ದರಿಂದ ಇಂಗಲಾರದು. ಇದು ಸಾಮಾನ್ಯ ತಿಳಿವಳಿಕೆ. ದೂರದೃಷ್ಟಿರಹಿತ ಯೋಜನೆ ಭಾವೀ ಪೀಳಿಗೆಗಳನ್ನೂ ಬಾಧಿಸುತ್ತವೆ.

ನಾವು ಮಣ್ಣು ಮತ್ತು ಜಲಹರಿವಿನ ದಾರಿಯ ಸಮರ್ಪಕ ನಿರ್ವಹಣೆಗೆ ತಕ್ಕ ಗಮನ ನೀಡಿಲ್ಲ. ಸಸ್ಯಸಂಪತ್ತು ಮತ್ತು ಭೌಗೋಳಿಕ ಲಕ್ಷಣಗಳು ಪ್ರವಾಹವನ್ನು ಎದುರಿಸಲು ಬಹುಮಟ್ಟಿಗೆ ಸ್ವಾಭಾವಿಕವಾಗಿ ಸನ್ನದ್ಧವೆ. ಮಣ್ಣು, ನೀರನ್ನು ಬಂಧಿಸಲು ಅಲ್ಲಲ್ಲಿ ಬೆಳೆಯುವ ಹುಲ್ಲು, ಬಳ್ಳಿ, ಗಿಡ ಮರಗಳೇ ಸಾಕು. ಮರಗಿಡಗಳು ತಮ್ಮ ಬೇರುಗಳಿಂದ ಮಣ್ಣನ್ನು ಸಡಿಲಿಸಿ ಸುರಿದ ಮಳೆಯ ನೀರನ್ನು ನೆಲದಾಳಕ್ಕೆ ಸಲ್ಲಿಸುತ್ತದೆ. ಇದು ನಿಸರ್ಗದ ನಾಜೂಕು. ಆದರೆ ಪ್ರಗತಿಯ ಮದ ಎನ್ನುವುದುಂಟಲ್ಲ? ಅರಣ್ಯದತ್ತಲೇ ನಮ್ಮ ಕೆಂಗಣ್ಣು. ಕಾಡೇ ಸೂರೆಯಾದರೆ ನೀರು ನೆಲಹರವಿಗೆ ಸಂದು ಪ್ರವಾಹ ಕಟ್ಟಿಟ್ಟ ಬುತ್ತಿ. ‘ಕಡಿದು ಸುತ್ತಮುತ್ತಲಿದ್ದ ಅರಣ್ಯ ಸ್ಥಾಪಿಸಿದರು ಸಾಮ್ರಾಜ್ಯವ..’ ಎನ್ನುವುದೇ ಚರಿತ್ರೆಯ ಪಾಠವಾಗಿದೆ! ನಾವು ಬಳಸುವ ಹವಾ ನಿಯಂತ್ರಕ ಪರಿಕರಗಳು, ಶೀತಕ ಯಂತ್ರಗಳಿಗೆ ಕ್ಲೋರೋ ಫ್ಲೋರೋ ಕಾರ್ಬನ್‌ ರಾಸಾಯನಿಕ ಅಗತ್ಯ. ಇದು ಭೂಮಿಯ ಓಜೋನ್‌ ರಕ್ಷಾಕವಚಕ್ಕೆ ಹಾನಿಯೊಡ್ಡುತ್ತದೆ. ಕೈಗಾರಿಕೋದ್ಯಮಗಳು ಇಂಗಾಲದ ಡೈ ಆಕ್ಷೈಡ್‌ ಅಪಾರವಾಗಿ ಹೊರಸೂಸುತ್ತವೆ. ಇದರ ಪರಿಣಾಮವಾಗಿ ವಾತಾವರಣದ ತಾಪಮಾನ ಸತತ ಏರುತ್ತಿದೆ. ಒಟ್ಟಾರೆ ಜಾಗತಿಕ ತಪನದ ಭೀಕರತೆಗೆ ಆಹ್ವಾನ. ಪ್ರಾಣಿ, ಪಕ್ಷಿಗಳೇನೋ ತಮ್ಮ ಸಂತತಿಯ ಹೆಚ್ಚಳಕ್ಕೆ ಲಂಗರು ಹಾಕಿವೆ. ಆದರೆ ಜೀವವೈವಿಧ್ಯಗಳಲ್ಲೇ ತಾನು ಮೇಲೆಂದು ಬೀಗುವ ಮನುಷ್ಯ ಪೂರ್ಣವಾಗಿ ಅದಕ್ಕೊಳಪಡದೆ ದೂರ ಸರಿದಿದ್ದಾನೆ! ಹಾಗಾಗಿ ಜಗತ್ತಿನ ಜನಸಂಖ್ಯೆಯಲ್ಲಿ ಇಳಿಕೆಯಿರಲಿ, ಸ್ಥಿರತೆಯನ್ನೂ ಕಂಡಿಲ್ಲ.

ಅನ್ಯ ಗ್ರಹಗಳ ಮೇಲ್ಮೆ ೖನಲ್ಲಿ ಡೊಂಕು ಗೆರೆಗಳು ಗೋಚರಿಸಿದರೆ ಸಾಕು, ಅಲ್ಲಿ ಹಿಂದೊಮ್ಮೆ ನದಿ ಹರಿದಿದ್ದಿರಬಹುದಾಗಿ ತರ್ಕಿಸತ್ತೇವೆ. ಆದರೆ ನಾವು ವಾಸಿಸುತ್ತಿರುವ‌ ಮನೆಗಳು ಹರಿದಿದ್ದ ನದಿಗೆ ಅಡ್ಡವಾಗಿ ನಿರ್ಮಿಸಲಾಗಿರುವ ಸಾಧ್ಯತೆ ಬಗ್ಗೆ ಆಲೋಚಿಸುತ್ತೇವೆಯೇ?

ಒಂದು ನಿವೇಶನ ಖರೀದಿಸುವಾಗ ಅದರ ಉದ್ದಗಲಕ್ಕಿಂತಲೂ ಮಿಗಿಲಾಗಿ ಅಲ್ಲಿ ಮೊದಲು ಯಾವುದಾದರೂ ಜಲಮೂಲವಿತ್ತೆ? ನೀರು ಪ್ರವಹಿಸುವ ಸರಾಗ ಇಳಿಜಾರಿತ್ತೆ? ಎನ್ನುವ ಅರಿವು ಪ್ರಾಧಾನ್ಯವಾಗಬೇಕಿದೆ. ನೀರಿನ ದಾರಿಯನ್ನು ಅತಿಕ್ರಮಿಸಬಾರದೆಂಬ ಪರಿಸರ ಪ್ರಜ್ಞೆ ನಮ್ಮದಾಗಬೇಕು. ಮನೆ, ಕಟ್ಟಡ ನಿರ್ಮಿಸುವವರು ತಮ್ಮ ನಿವೇಶನವಿರುವುದು ಏರಿನಲ್ಲೋ, ತಗ್ಗಿನಲ್ಲೋ ಎನ್ನುವುದನ್ನು ಲಕ್ಷಿಸುವುದೂ ಅಪರೂಪವೆ! ಜಲ ವರವೋ ಕಂಟಕವೋ ಎನ್ನುವುದು ನಾವು ಯಾವ ತೆರದಿ ಅದನ್ನು ನಿರ್ವಹಿಸುತ್ತೇವೆ ಎನ್ನುವುದನ್ನು ಅವಲಂಬಿಸಿದೆ. ತನ್ನದೇ ತಾಳ, ಲಯ, ಗೊತ್ತು ಗುರಿಯುಳ್ಳ ನದಿಗೆ ರಾಕ್ಷಸ ಪ್ರವೃತ್ತಿಯನ್ನು ಆರೋಪಿಸಬಾರದು. ಸೇವೆಗೆ ಮತ್ತೂ ಅಧಿಕಾರ ಬೇಕೆಂದು ಹಠಹೂಡಿ ಐಷಾರಾಮಿ ಬಸ್ಸು, ವಿಶೇಷ ವಿಮಾನವೇ ರುತ್ತಿದ್ದವರು ಈಗೆಲ್ಲಿ? ಒಂದು ಹೆಲಿಕಾಪ‌rರ್‌ ಗೊತ್ತು ಮಾಡಿಕೊಂಡು ನೆರೆಪೀಡಿತರನ್ನು ಕಂಡು ಸಂತೈಸಲು, ಸಹಾಯ ಹಸ್ತ ಚಾಚಲು ತೆರಳಬಹುದಲ್ಲ? ರಾಜ್ಯದಲ್ಲಿ ಅದರಲ್ಲೂ ವಿಶೇಷವಾಗಿ ಕರ್ನಾಟಕದ ಉತ್ತರ ಭಾಗದಲ್ಲಿ ಬದುಕಿದರೆ ಸಾಕಪ್ಪ ಎನ್ನುವಷ್ಟು ಮಳೆ, ಪ್ರವಾಹ ಸಂಭವಿಸಿದೆ. ಮಳೆಗಾಗಿ ಪ್ರಾರ್ಥಿಸಿ, ಪೂಜೆ ಪುನಸ್ಕಾರಕ್ಕೆ ನಿರ್ದಿಷ್ಟ ಹಣ ಬಳಸಿಕೊಳ್ಳಿ ಎಂದು ಈಚೆಗಷ್ಟೆ ಸುತ್ತೋಲೆ ಹೊರಡಿಸಿದ್ದ ರಾಜ್ಯ ಸರ್ಕಾರ ಈಗ ನೆರೆ ತಗ್ಗಿಸಲು ಅಂಥದ್ದೆ ಆದೇಶ ಹೊರಡಿಸುವುದೇ? ನೀರಿನ ತೊಟ್ಟಿ, ಹಂಡೆಯಲ್ಲಿ ಕೂತು ವರ್ಷಧಾರೆಗೆ ಜಪಿಸುತ್ತಿದ್ದವರು ಇದೀಗ ನದಿಗಳ ಉಕ್ಕನ್ನು ಶಮನಗೊಳಿಸಲು ಕೆಂಡದಲ್ಲಿ ಬೇಡ, ಬೆಚ್ಚಗಿನ ನೀರಿರುವ ಬೋಗುಣಿಯಲ್ಲಿ ಕೂರುವರೇ? ಮಳೆ ಬರಲೆಂದು ಕಪ್ಪೆಗಳ ಮದುವೆ ಮಾಡಿಸಿದವರು ಈಗ ಅವುಗಳ ವಿಚ್ಛೇದನ ನಡೆಸುತ್ತಾರೆಯೇ? ವ‌ುಳೆ ಒಂದು ವೈಜ್ಞಾನಿಕ ವಿದ್ಯಮಾನ, ಪ್ರಾಕೃತಿಕ ಪ್ರಕ್ರಿಯೆ. ಅದನ್ನು ವಿಶ್ಲೇಷಣೆಗೊಳಪಡಿಸಿ ಕನಿಷ್ಠವಾಗಿಯಾದರೂ ಅತಿವೃಷ್ಟಿ, ಅನಾವೃಷ್ಟಿ ನಿಯಂತ್ರಿಸಿಕೊಳ್ಳುವ ಮಾರ್ಗ ಹುಡುಕಾಡಬೇಕು.

ಮಳೆ, ಬಿಸಿಲು, ಬರವನ್ನು ಮೂರ್ತಗೊಳಿಸಿ ‘ಸುರ'(‘ಅಸುರ’) ಎಂದು ಕಲ್ಪಿಸಿ ಹೋಮ, ಹವನ, ಯಾಗಗಳಿಗೆ ಮುಂದಾಗುವುದು ಮೌಡ್ಯ. ಎಲ್ಲವನ್ನೂ ದಹಿಸುವ ಅಗ್ನಿಯ ಗುಣ ಎಳೆಯ ಮಗುವಿಗೂ ಗೊತ್ತಿದೆ. ಯಾವುದೇ ಪದಾರ್ಥವನ್ನು ಸುಟ್ಟಾಗ ಪರಿಣಮಿಸುವುದು ಹೈಡ್ರೋಕಾರ್ಬನ್‌. ಹೇಳಿಕೇಳಿ ಆಹಾರ ವಸ್ತುಗಳ ಅಭಾವ ತಾಂಡವವಾಡಿದೆ. ಇಷ್ಟಾರ್ಥ ಈಡೇರಲೆಂದು ಹಣ್ಣು, ಕಾಯಿ, ವಸ್ತ್ರ, ದವಸ ಧಾನ್ಯಾದಿಗಳನ್ನು ಬೆಂಕಿಯ ಕುಂಡಕ್ಕೆ ಸುರಿಯುವುದೇ?! ಟರ್ಕಿಯ ನಾಟಕಕಾರ, ಕಥೆಗಾರ ಮೆಹಮತ್‌ ಮುರಾತ್‌ ಇಲ್ದಾನ್‌ ಕಲ್ಪನೆಯಲ್ಲಿ ಸಾಗರ ನೀಡುವ ಸಂದೇಶ ಇಂತಿದೆ: ‘ಪ್ರತೀ ನದಿ. ಮಳೆ, ನೆರೆ, ಚಿಲುಮೆ ಅಪಾಯವಿಲ್ಲದೆ ನಿಮ್ಮತ್ತ ಸರಾಗವಾಗಿ ಹರಿಯಗೊಟ್ಟರೆ ನೀವೂ ನನ್ನಂತೆ ಸಮುದ್ರವೇ ಆಗುವಿರಿ’.

ಬಿಂಡಿಗನವಿಲೆ ಭಗವಾನ್

ಟಾಪ್ ನ್ಯೂಸ್

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

Lok Sabha Polls: ಧರ್ಮಸ್ಥಳದಲ್ಲಿ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಮತದಾನ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಮಳೆ, ಬೆಳಕು, ಮಣ್ಣು ಸರ್ವರಿಗೂ ಸದಾ ಪೂಜನೀಯ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ಕಣ್ಮರೆಯಾಗುತ್ತಿರುವ ಹಿರಿಯರ ಕಲಿಕೆ‌, ಕೌಶಲ

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ದೃಢ ನಂಬಿಕೆಯೇ ಈ ಪ್ರಪಂಚದ ಬದುಕು

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಮನುಕುಲದ ಮಹಾನ್ವೇಷಣೆಯೇ ಚಕ್ರ 

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

ಖಗೋಳ ವಿಜ್ಞಾನಿಗಳಿಗೆ ವಿಸ್ಮಯವಾಗಿಯೇ ಉಳಿದ ಕ್ಷುದ್ರಗ್ರಹಗಳು!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಮೊದಲ ಬಾರಿ ಕುಂದಾನಗರಿಯಲ್ಲಿ ಪ್ರಧಾನಿ ಮೋದಿ ವಾಸ್ತವ್ಯ; 28ಕ್ಕೆ ಸಮಾವೇಶ

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

ಬಿಸಿಲ ಝಳದಿಂದ ಮೈದಾನಗಳು ಖಾಲಿ; ಮಕ್ಕಳ ಆಟಕ್ಕೂ ಉರಿ ಬಿಸಿಲು ಅಡ್ಡಿ!

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

INDIA ಒಕ್ಕೂಟ ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ, ನಿರುದ್ಯೋಗ ನಿವಾರಣೆಗೆ ಆದ್ಯತೆ: ರಾಹುಲ್

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

ಹೆಸ್ಕತ್ತೂರು ಕಟ್ಟಿನಬುಡ: ಕೃಷಿಗೆ ಆಸರೆಯಾಗದ ವಾರಾಹಿ ಕಾಲುವೆ ನೀರು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.