ಬದಲಾದ ಜೀವನಶೈಲಿ ಮನಸ್ಸು ಹದಗೆಡದಿರಲಿ

Team Udayavani, May 2, 2020, 5:32 AM IST

ಬದಲಾದ ಜೀವನಶೈಲಿ ಮನಸ್ಸು ಹದಗೆಡದಿರಲಿ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ದಿನ ಚರ್ಯೆಯಲ್ಲಿ ಎದುರಾಗಿರುವ ಹಠಾತ್‌ ಬದಲಾವಣೆ, ಭವಿಷ್ಯದ ಬಗ್ಗೆ ಆತಂಕ, ಒಂಟಿತನದಿಂದಾಗಿ ನಮ್ಮ ದೈಹಿಕ-ಮಾನಸಿಕ ಸ್ವಾಸ್ಥ್ಯದ ಮೇಲೆ ವ್ಯಾಪಕ ಪರಿಣಾಮ ಉಂಟಾಗುತ್ತಿದೆ ಎಂದು ತಜ್ಞರು ಎಚ್ಚರಿಸುತ್ತಿದ್ದಾರೆ.

ದೇಶವು ಲಾಕ್ಡೌನ್‌ನಲ್ಲಿರುವ ಈ ದಿನಗಳಲ್ಲಿ ದೇಶವಾಸಿಗಳಲ್ಲಿ ನಕಾರಾತ್ಮಕ ಪರಿಣಾಮವು ಗೋಚರಿಸಲಾರಂಭಿಸಿದೆ. ಹಿರಿಯರೆಂದಷ್ಟೇ ಅಲ್ಲ, ಅವರಿಗಿಂತ ಅಧಿಕವಾಗಿ ಮಕ್ಕಳು ಹೆಚ್ಚು ಸಮಸ್ಯೆ ಎದುರಿಸುತ್ತಿದ್ದಾರೆ.

ಅವರೂ ದಿನವಿಡೀ ಮನೆಯಲ್ಲೇ ಇರುವಂತಾಗಿದೆ. ಶಾಲೆಗಳು ಬಂದ್‌ ಆಗಿವೆ, ಹೊರಗೆ ಆಟವಾಡಲು-ಗೆಳೆಯರನ್ನು ಭೇಟಿಯಾಗಲು ಅನುಮತಿಯಿಲ್ಲ.

ಈ ಕಾರಣಕ್ಕಾಗಿಯೇ ಮಕ್ಕಳು ಮನರಂಜನೆಗಾಗಿ ದಿನವಿಡೀ ಟಿ.ವಿ., ಇಂಟರ್ನೆಟ್‌, ಮೊಬೈಲ್‌ ಗೇಮ್‌ಗಳಿಗೆ ಜೋತುಬಿದ್ದಿದ್ದಾರೆ. ಮನೆಯಲ್ಲಿ ಒಬ್ಬರಲ್ಲ ಒಬ್ಬರು ನ್ಯೂಸ್‌ ಚಾನೆಲ್‌ಗಳನ್ನು ನೋಡುತ್ತಿರುವುದರಿಂದಾಗಿ, ನಕಾರಾತ್ಮಕ ಸುದ್ದಿಗಳ ಋಣಾತ್ಮಕ ಪರಿಣಾಮವು ಮಕ್ಕಳ ಮೇಲೂ ಬೀಳಲಾರಂಭಿಸಿದೆ.

ಈ ಮುನ್ನವೇ ಮಕ್ಕಳ ಸ್ವಭಾವದ ಮೇಲೆ ಟೆಲಿವಿಷನ್‌ ಹಾಗೂ ಇಂಟರ್ನೆಟ್‌ನಿಂದ ಆಗುತ್ತಿರುವ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾ ಬರಲಾಗಿತ್ತು. ಈಗ ಈ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ.

ಮನರಂಜನೆಯ ಮಾಧ್ಯಮಗಳ ಅತಿಯಾದ ಬಳಕೆಯಿಂದಾಗಿ ಮಕ್ಕಳಲ್ಲಿ ಕಿರಿಕಿರಿ, ಸಿಟ್ಟು, ಆತಂಕ, ಅನಿದ್ರೆಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಇನ್ನು ಇವೇ ಲಕ್ಷಣಗಳೂ ಮನೆಯಿಂದ ಕೆಲಸ ಮಾಡುತ್ತಿರುವ ಉದ್ಯೋಗಿಗಳಲ್ಲೂ ಕಾಣಿಸಲಾರಂಭಿಸಿದೆ.

ಆದಾಗ್ಯೂ ಅನೇಕ ಶಾಲೆಗಳು ಆನ್ಲೈನ್‌ ತರಗತಿಗಳನ್ನು ಆರಂಭಿಸಿವೆ. ಇದರಿಂದ ಮಕ್ಕಳ ಧ್ಯಾನ ವಿದ್ಯಾಭ್ಯಾಸದ ಕಡೆಗಾದರೂ ಸ್ವಲ್ಪ ಹೋಗುತ್ತಿದೆ. ಆದರೆ, ಈ ಸೌಲಭ್ಯ ಎಲ್ಲಾ ಮಕ್ಕಳಿಗೂ ಇಲ್ಲ. ಇದ್ದ ಮಕ್ಕಳಿಗೂ ಕೂಡ ಮನೆಯಲ್ಲಿ ತರಗತಿಯ ವಾತಾವರಣ ಸಿಗುವುದಿಲ್ಲ. ಇನ್ನು ಬೆಳಗ್ಗೆ ಎದ್ದು ಶಾಲೆಗೆ ಹೋಗುವ, ತಮ್ಮ ಗೆಳೆಯರ ಜತೆಗೆ ಆಟವಾಡುವ ಅವಕಾಶ ಇಲ್ಲವಾಗಿದೆ.

ಈಗ ಹಠಾತ್ತನೇ ನವ ಜೀವನಶೈಲಿಯು ಅವರಲ್ಲಿ ಸೃಷ್ಟಿಸಿರುವ ಈ ಅಭಾವವು ಅವರ ಮನಸ್ಸು ಮತ್ತು ಶರೀರದ ಮೇಲೆಯೂ ಪರಿಣಾಮ ಉಂಟುಮಾಡುತ್ತದೆ. ತಡರಾತ್ರಿಯವರೆಗೆ ಮೊಬೈಲ್‌ ನೋಡುತ್ತಾ ಕೂಡುವುದರಿಂದಾಗಿ ಅವರ ನಿದ್ರಾ ಚಕ್ರದಲ್ಲಿ ಬೃಹತ್‌ ಬದಲಾವಣೆ ಆಗುತ್ತಿದ್ದು, ಇದು ಖಂಡಿತ ಒಳ್ಳೆಯದಲ್ಲ.

ಇದು ಮಕ್ಕಳಿಗಷ್ಟೇ ಅನ್ವಯವಾಗುವ ಮಾತಲ್ಲ. ಈಗ ಹಿರಿಯರೂ ಕೂಡ ಹಠಾತ್ತನೆ ಎದುರಾಗಿರುವ ಈ ಬದಲಾವಣೆಯಿಂದಾಗಿ ತತ್ತರಿಸಿದ್ದಾರೆ. ಸಹಜವಾಗಿಯೇ ಅವರಲ್ಲಿ ಭವಿಷ್ಯದ ಆತಂಕವೂ ಬಹಳ ಇರುತ್ತದೆ.

ಆದರೆ ಆತಂಕಪಡುತ್ತಾ ಕುಳಿತುಕೊಳ್ಳುವುದರಿಂದ, ನಿದ್ದೆಗೆಡುವುದರಿಂದ, ಮಾನಸಿಕ ಮತ್ತು ದೈಹಿಕ ಸ್ವಾಸ್ಥ್ಯಕ್ಕೆ ಪೆಟ್ಟುಬೀಳುತ್ತಾ ಹೋಗುತ್ತದಷ್ಟೇ ಹೊರತು, ಪರಿಹಾರವಂತೂ ಸಿಗುವುದಿಲ್ಲ. ಇದು ಖಂಡಿತ ಒಳ್ಳೆಯ ಬೆಳವಣಿಗೆಯಲ್ಲ.

ಹೀಗಾಗಿ, ಮನೆಯಲ್ಲಿ ಪ್ರತಿಯೊಬ್ಬರೂ ಯೋಗ-ಧ್ಯಾನದಂಥ ಮನೋ – ದೈಹಿಕ ಶಕ್ತಿ ವೃದ್ಧಿಸುವ ಅಭ್ಯಾಸಗಳನ್ನು ರೂಢಿಸಿಕೊಳ್ಳುವುದು ಒಳಿತು. ಫೋನ್‌ನ ಬಳಕೆಯನ್ನು ಆದಷ್ಟು ತಗ್ಗಿಸುವುದು ಹಾಗೂ ಒಂದು ದಿನಚರ್ಯೆಯನ್ನು ಕಟ್ಟುನಿಟ್ಟಾಗಿ ರೂಪಿಸಿಕೊಂಡು ಅದಕ್ಕೆ ಬದ್ಧವಾಗಿ ಬದುಕುವುದು ಬಹಳ ಮುಖ್ಯ.

ಟಾಪ್ ನ್ಯೂಸ್

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

1-ewqere

World Record;ಮಹಿಳಾ ಅಂತಾರಾಷ್ಟ್ರೀಯ ಟಿ20 ಪಂದ್ಯ: ರನ್‌ ನೀಡದೆ 7 ವಿಕೆಟ್‌!

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

Crime News; ಕಾಸರಗೋಡು ಭಾಗದ ಅಪರಾಧ ಸುದ್ದಿಗಳು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

ರಕ್ಷಣೆ: ಸ್ವಾವಲಂಬನೆಯತ್ತ ಭಾರತದ ದೃಢ ಹೆಜ್ಜೆ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಹಿರಿಯ ನಾಗರಿಕರಿಗೂ ಆರೋಗ್ಯ ವಿಮೆ: ದಿಟ್ಟ ನಿರ್ಧಾರ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಗುಕೇಶ್‌ ಗೆಲುವು- ಭಾರತದ ಯುವಶಕ್ತಿಯ ಸಂಕೇತ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Editorial: ಸುದೀರ್ಘ‌ ಕಾಲ ನೀತಿಸಂಹಿತೆ: ಸೂಕ್ತ ಪರಾಮರ್ಶೆ ಅಗತ್ಯ

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

Food Safety: ಆಹಾರ ಸುರಕ್ಷೆ- ನೂರು ಪ್ರತಿಶತ ಖಾತರಿ ಅಗತ್ಯ‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

varun gandhi

BJP; ರಾಯ್‌ಬರೇಲಿಯಲ್ಲಿ ಸ್ಪರ್ಧಿಸಲು ವರುಣ್‌ ಗಾಂಧಿ ನಕಾರ?

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Lok Sabha Election: ಪ್ರವಾಸಿ ತಾಣಗಳಲ್ಲಿ ಜನ ಕಡಿಮೆ

Kapu Assembly constituency: ನಕಲಿ ಮತದಾನ;ಆರೋಪ

Kapu Assembly constituency: ನಕಲಿ ಮತದಾನ;ಆರೋಪ

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Elections ನಡುವೆಯೇ ಸಾಲು ಸಾಲು ಮದುವೆ, ಸಮಾರಂಭಗಳು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.