Udayavni Special

ಎಚ್ಚರಿಕೆಯಾಗಲಿ ಮಂಗಳೂರು ಪ್ರಕರಣ ; ಭದ್ರತೆಯ ಪ್ರಶ್ನೆ


Team Udayavani, Jan 23, 2020, 6:40 AM IST

led-32

ಈ ಪ್ರಕರಣ ಸಾರ್ವಜನಿಕ ಸ್ಥಳಗಳ ಭದ್ರತೆಗೆ ಸಂಬಂಧಿಸಿದಂತೆ ಇರುವ ಲೋಪಗಳನ್ನು ಬಯಲುಗೊಳಿಸಿದೆ. ವಿಮಾನ ನಿಲ್ದಾಣ, ರೈಲು ನಿಲ್ದಾಣ, ಮಾಲ್‌ಗಳು, ಪಾರ್ಕ್‌ಗಳು, ಪೂಜಾ ತಾಣಗಳು ಹೀಗೆ ಜನ ಸೇರುವ ಸ್ಥಳಗಳಲ್ಲಿ ಭದ್ರತೆ ಇನ್ನಷ್ಟು ಸುಧಾರಿಸುವ ಅಗತ್ಯವಿದೆ ಎನ್ನುವುದನ್ನು ಈ ಘಟನೆ ತೋರಿಸಿಕೊಟ್ಟಿದೆ.

ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್‌ ಇಟ್ಟಿದ್ದ ವ್ಯಕ್ತಿ ಪೊಲೀಸ್‌ ವಶವಾಗುವುದರೊಂದಿಗೆ ಈ ಪ್ರಕರಣದ ಸುತ್ತ ಹರಡಿದ್ದ ಊಹಾಪೋಹಗಳಿಗೆಲ್ಲ ಸದ್ಯಕ್ಕೆ ತೆರೆ ಬಿದ್ದಿದೆ. ಆದರೆ ಈ ಪ್ರಕರಣ ವಿಮಾನ ನಿಲ್ದಾಣಗಳು ಮಾತ್ರವಲ್ಲದೆ ಸಾರ್ವಜನಿಕ ಸ್ಥಳಗಳ ಭದ್ರತೆಗೆ ಸಂಬಂಧಿಸಿದ ವಿಚಾರದಲ್ಲಿ ಹಲವಾರು ಪ್ರಶ್ನೆಗಳನ್ನೆತ್ತಿದೆ.

ಸೋಮವಾರ ವಿಮಾನ ನಿಲ್ದಾಣದ ಆವರಣದ ಟಿಕೆಟ್‌ ಕೌಂಟರ್‌ನ ಪಕ್ಕದಲ್ಲಿ ಬಾಂಬ್‌ ಇದ್ದ ಬ್ಯಾಗ್‌ ಪತ್ತೆಯಾಗಿತ್ತು. ಕೂಡಲೇ ಬಾಂಬ್‌ ನಿಷ್ಕ್ರಿಯ ಪಡೆಯವರು ಬಂದು ನಿರ್ಜನ ಸ್ಥಳಕ್ಕೊಯ್ದು ಸ್ಫೋಟಿಸುವ ಮೂಲಕ ಸಂಭಾವ್ಯ ದುರಂತವನ್ನು ತಪ್ಪಿಸಿದರು. ಎರಡೇ ದಿನಗಳಲ್ಲಿ ಆರೋಪಿಯೂ ಪತ್ತೆಯಾಗುವುದರೊಂದಿಗೆ ಒಂದು ಹಂತಕ್ಕೆ ಪ್ರಕರಣ ಬಗೆಹರಿದಂತಾಗಿದೆ. ಆರೋಪಿ ಏಕಾಗಿ ಬಾಂಬ್‌ ಇಟ್ಟಿದ್ದ? ಅವನ ಹಿಂದೆ ಬೇರೆ ಯಾರಾದರೂ ಇದ್ದಾರೆಯೇ? ಸ್ಫೋಟಕ ಸಾಮಾಗ್ರಿಗಳು ಅವನಿಗೆ ಲಭಿಸಿದ್ದು ಹೇಗೆ? ವಿಮಾನ ನಿಲ್ದಾಣದ ತನಕವೂ ಅವನು ಅದನ್ನು ಯಾವುದೇ ತಡೆಯಿಲ್ಲದೆ ಒಯ್ದದ್ದು ಹೇಗೆ? ಎಂಬಿತ್ಯಾದಿ ಪ್ರಶ್ನೆಗಳಿಗೆಲ್ಲ ಇನ್ನಷ್ಟೇ ಉತ್ತರ ಲಭಿಸಬೇಕು.

ಆದರೆ ಈ ಪ್ರಕರಣ ಸಾರ್ವಜನಿಕ ಸ್ಥಳಗಳ ಭದ್ರತೆಗೆ ಸಂಬಂಧಿಸಿದಂತೆ ಇರುವ ಲೋಪಗಳನ್ನು ಬಯಲುಗೊಳಿಸಿದೆ. ವಿಮಾನ ನಿಲ್ದಾಣ, ರೈಲು ನಿಲ್ದಾಣ, ಮಾಲ್‌ಗಳು, ಪಾರ್ಕ್‌ಗಳು, ಪೂಜಾ ತಾಣಗಳು ಹೀಗೆ ಜನ ಸೇರುವ ಸ್ಥಳಗಳಲ್ಲಿ ಭದ್ರತೆ ಇನ್ನಷ್ಟು ಸುಧಾರಿಸುವ ಅಗತ್ಯವಿದೆ ಎನ್ನುವುದನ್ನು ಈ ಘಟನೆ ತೋರಿಸಿಕೊಟ್ಟಿದೆ.

ಸಾಮಾಜಿಕ ಶಾಂತಿ ಮತ್ತು ಸ್ವಾಸ್ಥ್ಯವನ್ನು ಕದಡಲು ಬಯಸುವ ವಿಕೃತಮತಿಯ ಕಿಡಿಗೇಡಿಗಳ ಪಾಲಿಗೆ ಪ್ರಮುಖ ಆಕರ್ಷಣೆ ವಿಮಾನ ನಿಲ್ದಾಣಗಳು. ಅಲ್ಲಿ ಬಾಂಬಿ ಟ್ಟಿದ್ದೇವೆ, ಇಲ್ಲಿ ಬಾಂಬಿಟ್ಟಿದ್ದೇವೆ ಎಂದು ಹುಸಿ ಬೆದರಿಕೆ ಕರೆಗಳನ್ನು ಮಾಡಿ ಭದ್ರತಾ ಸಿಬಂದಿ ಗೋಳು ಹೊಯ್ದುಕೊಳ್ಳುವುದು ಆಗಾಗ ಸಂಭವಿಸುತ್ತಿರುತ್ತದೆ. ಹೀಗೆ ಮಾಡಿದರೆ ಇಡೀ ವ್ಯವಸ್ಥೆಯೇ ಕೆಲವು ತಾಸುಗಳ ಮಟ್ಟಿಗೆ ಪರದಾಡಬೇಕಾಗುತ್ತದೆ. ಇಂಥ ಪ್ರಕರಣಗಳಲ್ಲಿ ಆರೋಪಿಗಳು ಸಿಕ್ಕಿ ಬೀಳುವುದು ಕಡಿಮೆ. ಹಾಗೊಂದು ವೇಳೆ ಸೆರೆಯಾದರೂ ಅವರಿಗೆ ಕಠಿನ ಶಿಕ್ಷೆಯಾಗುವುದಿಲ್ಲ. ಹೀಗಾಗಿ ವಿಘ್ನ ಸಂತೋಷಿಗಳು ಆಗಾಗ ಇಂಥ ಹುಸಿ ಬೆದರಿಕೆಗಳನ್ನು ಒಡ್ಡಿ ವಿಕೃತ ಸಂತೋಷ ಅನುಭವಿಸುತ್ತಿರುತ್ತಾರೆ.

ಹಾಗೆ ನೋಡಿದರೆ ನಮ್ಮ ವಿಮಾನ ನಿಲ್ದಾಣಗಳ ಒಳಗಿನ ಭದ್ರತೆ ಸಾಕಷ್ಟು ಬಿಗುವಾಗಿಯೇ ಇದೆ. ಭದ್ರತಾ ಸಿಬಂದಿ ಕಣ್ಣುತಪ್ಪಿಸಿ ಒಂದು ಚಿಕ್ಕ ಬ್ಲೇಡ್‌ ಕೂಡ ಒಯ್ಯಲು ಸಾಧ್ಯವಿಲ್ಲ. ಎರಡು ವರ್ಷಗಳ ಹಿಂದಿನಿಂದ ಇಲೆಕ್ಟ್ರಾನಿಕ್‌ ವಸ್ತುಗಳನ್ನು ಪ್ರತ್ಯೇಕವಾಗಿಯೇ ತಪಾಸಣೆಗೊಳಪಡಿಸುವ ವ್ಯವಸ್ಥೆಯೂ ಕೆಲವು ಪ್ರಮುಖ ವಿಮಾನ ನಿಲ್ದಾಣಗಳಲ್ಲಿವೆ. ಇಡೀ ವಿಮಾನ ನಿಲ್ದಾಣದ ಭದ್ರತೆಯನ್ನು ನೋಡಿಕೊಳ್ಳುವುದು ಕೇಂದ್ರೀಯ ಔದ್ಯೋಗಿಕ ಭದ್ರತಾ ಪಡೆ (ಸಿಐಎಸ್‌ಎಫ್) ಎಂಬ ವಿಶೇಷವಾಗಿ ತರಬೇತಿ ಹೊಂದಿರುವ ಯೋಧರ ಪಡೆ. ಆದರೆ ಚಿಂತೆಯಿರುವುದು ವಿಮಾನ ನಿಲ್ದಾಣಗಳ ಹೊರಗಿನ ಭದ್ರತೆ ಕುರಿತು. ಮಂಗಳೂರು ಪ್ರಕರಣದಲ್ಲಾಗಿರುವಂತೆ ವಿಮಾನ ನಿಲ್ದಾಣದ ಪ್ರವೇಶ ದ್ವಾರದ ತನಕ ತಪಾಸಣೆಯಿಲ್ಲದೆ ಹೋಗಬಹುದು. ಸಾಮಾನ್ಯವಾಗಿ ವಿಮಾನ ನಿಲ್ದಾಣಗಳ ಪ್ರವೇಶ ದ್ವಾರದಲ್ಲಿ ಹೋಗುವವರನ್ನು ಬೀಳ್ಕೊಡಲು, ಬರುವವರನ್ನು ಸ್ವಾಗತಿಸಲು ಬಂದವರಿಂದ ತುಂಬಿರುತ್ತದೆ. ಇಂಥ ಸಂದರ್ಭದಲ್ಲಿ ಸ್ಫೋಟವೇನಾದರೂ ಸಂಭವಿಸಿದರೆ ಸಾಕಷ್ಟು ಹಾನಿಯಾಗುವುದು ನಿಶ್ಚಿತ.

ಒಟ್ಟಾರೆಯಾಗಿ ವಿಮಾನ ನಿಲ್ದಾಣಗಳ ಭದ್ರತೆಯನ್ನು ಸಮಗ್ರವಾಗಿ ಸುಧಾರಿಸಬೇಕಾದ ಅಗತ್ಯವನ್ನು
ಮಂಗಳೂರು ಪ್ರಕರಣ ಒತ್ತಿ ಹೇಳಿದೆ. ವಿಮಾನ ನಿಲ್ದಾಣಗಳಲ್ಲಿ ಇಷ್ಟೆಲ್ಲ ಬಿಗು ಭದ್ರತೆ ಇದ್ದರೂ ಅಂತಾರಾಷ್ಟ್ರೀಯ ನಾಗರಿಕ ವಾಯುಯಾನ ಸಂಸ್ಥೆ (ಐಸಿಎಒ) ಸುಮಾರು ಎರಡು ವರ್ಷಗಳ ಹಿಂದೆಯಷ್ಟೇ ಭಾರತದ ವಿಮಾನ ನಿಲ್ದಾಣಗಳ ಭದ್ರತೆ ಬೆಳೆಯುತ್ತಿರುವ ಪ್ರಯಾಣಿಕರ ದಟ್ಟಣೆಗೆ ತಕ್ಕಂತೆ ಮೇಲ್ದರ್ಜೆಗೇರುತ್ತಿಲ್ಲ ಎಂಬ ವರದಿಯನ್ನು ನೀಡಿತ್ತು. ಈ ವರದಿಯನ್ನು ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಸಾರ್ವಜನಿಕ ಸ್ಥಳಗಳ ಭದ್ರತೆ ಎಂದರೆ ಅದು ಸರಕಾರ ಅಥವಾ ವ್ಯವಸ್ಥೆಯ ಜವಾಬ್ದಾರಿ ಮಾತ್ರ ಅಲ್ಲ. ಸಾರ್ವಜನಿಕರ ಸಹಕಾರ ಮತ್ತು ಸಕ್ರಿಯ ಸಹಭಾಗಿತ್ವವೂ ಅಗತ್ಯ. ನಮ್ಮ ದೇಶದಲ್ಲಿ ಭದ್ರತಾ ತಪಾಸಣೆಗಳನ್ನು ಅನಗತ್ಯ ಕಿರಿಕಿರಿ ಎಂದು ಭಾವಿಸುವವರೇ ಅಧಿಕ. ವಾಹನ ತಪಾಸಣೆಗಾಗಿ ಐದು ನಿಮಿಷ ನಿಲ್ಲಿಸಿದರೂ ರೇಗುವವರಿದ್ದಾರೆ. ಜನರ ಈ ಮನೋಭಾವ ಬದಲಾಗಬೇಕು. ಅಂತಿಮವಾಗಿ ಇಂಥ ಭದ್ರತೆ ಇರುವುದು ನಮ್ಮ ಸುರಕ್ಷತೆಗೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಗಳ ಹತ್ಯೆ ಆರೋಪಿ ಇಂದ್ರಾಣಿ ಮುಖರ್ಜಿಯ ಜಾಮೀನು ಅರ್ಜಿ ತಿರಸ್ಕೃತ

ಮಗಳ ಹತ್ಯೆ ಆರೋಪಿ ಇಂದ್ರಾಣಿ ಮುಖರ್ಜಿಯ ಜಾಮೀನು ಅರ್ಜಿ ತಿರಸ್ಕೃತ

ಬೆಳ್ತಂಗಡಿ: ಪ್ರವಾಹ ಭೀತಿ ಮುನ್ನೆಚ್ಚರಿಕೆ ಜನರ ಸ್ಥಳಾಂತರ

ಬೆಳ್ತಂಗಡಿ: ಪ್ರವಾಹ ಭೀತಿ ಮುನ್ನೆಚ್ಚರಿಕೆ ಜನರ ಸ್ಥಳಾಂತರ

ಕೋವಿಡ್ ಕಳವಳ-ಆಗಸ್ಟ್ 06: 6805 ಹೊಸ ಪ್ರಕರಣಗಳು ; 5602 ಡಿಸ್ಚಾರ್ಜ್ ; 93 ಸಾವು

ಕೋವಿಡ್ ಕಳವಳ-ಆಗಸ್ಟ್ 06: 6805 ಹೊಸ ಪ್ರಕರಣಗಳು ; 5602 ಡಿಸ್ಚಾರ್ಜ್ ; 93 ಸಾವು

Chamarajanagar-Covid-Hospital

ಚಾಮರಾಜನಗರ: ನಿತ್ಯ ಸೋಂಕು ಪ್ರಕರಣಗಳು ಶತಕದ ಅಂಚಿಗೆ : ಒಟ್ಟು ಪ್ರಕರಣಗಳು ಸಾವಿರದಂಚಿನಲ್ಲಿ

ತಲಕಾವೇರಿ ಗುಡ್ಡ ಕುಸಿತ ದುರಂತ: ಬಂಟ್ವಾಳ ಮೂಲದ ಅರ್ಚಕರೂ ನಾಪತ್ತೆ?

ತಲಕಾವೇರಿ ಗುಡ್ಡ ಕುಸಿತ ದುರಂತ: ಬಂಟ್ವಾಳ ಮೂಲದ ಅರ್ಚಕರೂ ನಾಪತ್ತೆ?

ATM-730

ಇನ್ನು ನಿಮ್ಮ ಕಾರ್ಡ್ ಮತ್ತು ಮೊಬೈಲ್ ಮೂಲಕ ಆಫ್ ಲೈನ್ ಪಾವತಿಗೂ ಅವಕಾಶ – ಇಲ್ಲಿದೆ ಮಾಹಿತಿ

Gold loan

ಚಿನ್ನದ ಮೌಲ್ಯದ ಶೇ. 90ರಷ್ಟು ಸಾಲ ನೀಡಲು ಆರ್‌ಬಿಐ ಅವಕಾಶ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಆರ್ಟಿಕಲ್‌ 370 ರದ್ದತಿಗೆ ವರ್ಷ ಐತಿಹಾಸಿಕ ದಿನ

ಆರ್ಟಿಕಲ್‌ 370 ರದ್ದತಿಗೆ ವರ್ಷ ಐತಿಹಾಸಿಕ ದಿನ

ಕುಂಟುತ್ತಿರುವ ವಿಶ್ವ ಆರ್ಥಿಕತೆ ಪುನಶ್ಚೇತನದ ಅನ್ವೇಷಣೆ

ಕುಂಟುತ್ತಿರುವ ವಿಶ್ವ ಆರ್ಥಿಕತೆ ಪುನಶ್ಚೇತನದ ಅನ್ವೇಷಣೆ

ಕೋವಿಡ್‌ 19 ಪ್ರಕರಣ ಹೆಚ್ಚಳ ತಗ್ಗದ ಅಪಾಯ

ಕೋವಿಡ್‌ 19 ಪ್ರಕರಣ ಹೆಚ್ಚಳ ತಗ್ಗದ ಅಪಾಯ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

MUST WATCH

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmer

udayavani youtube

ಮಕ್ಕಳನ್ನು ಬೆಳೆಸಬೇಡಿ; ಬೆಳೆಯಲು ಬಿಡಿ | How to Nurture a Child | Udayavani

udayavani youtube

ಆಸ್ಪತ್ರೆಯಲ್ಲೂ B. S. Yediyurappa ಕರ್ತವ್ಯ ಪ್ರಜ್ಞೆ ; ಪ್ರಮುಖ Files ಪರಿಶೀಲನೆ

udayavani youtube

MGM ಕಾಲೇಜಿನ ನವೀಕೃತ ನೂತನ ರವೀಂದ್ರ ಮಂಟಪದ ಪ್ರಾರಂಭೋತ್ಸವ | Udayavani

udayavani youtube

MALASIYAN ಹಣ್ಣುಗಳನ್ನು ಬೆಳೆದು ಯಶಸ್ಸನ್ನು ಕಂಡ Khajane Agricultural farmಹೊಸ ಸೇರ್ಪಡೆ

ಮಗಳ ಹತ್ಯೆ ಆರೋಪಿ ಇಂದ್ರಾಣಿ ಮುಖರ್ಜಿಯ ಜಾಮೀನು ಅರ್ಜಿ ತಿರಸ್ಕೃತ

ಮಗಳ ಹತ್ಯೆ ಆರೋಪಿ ಇಂದ್ರಾಣಿ ಮುಖರ್ಜಿಯ ಜಾಮೀನು ಅರ್ಜಿ ತಿರಸ್ಕೃತ

ಬೆಳ್ತಂಗಡಿ: ಪ್ರವಾಹ ಭೀತಿ ಮುನ್ನೆಚ್ಚರಿಕೆ ಜನರ ಸ್ಥಳಾಂತರ

ಬೆಳ್ತಂಗಡಿ: ಪ್ರವಾಹ ಭೀತಿ ಮುನ್ನೆಚ್ಚರಿಕೆ ಜನರ ಸ್ಥಳಾಂತರ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಹಾಮಳೆಗೆ ಎರಡನೇ ಬಲಿ

ಚಿಕ್ಕಮಗಳೂರು ಜಿಲ್ಲೆಯಲ್ಲಿ ಮಹಾಮಳೆಗೆ ಎರಡನೇ ಬಲಿ

ಕೋವಿಡ್ ಕಳವಳ-ಆಗಸ್ಟ್ 06: 6805 ಹೊಸ ಪ್ರಕರಣಗಳು ; 5602 ಡಿಸ್ಚಾರ್ಜ್ ; 93 ಸಾವು

ಕೋವಿಡ್ ಕಳವಳ-ಆಗಸ್ಟ್ 06: 6805 ಹೊಸ ಪ್ರಕರಣಗಳು ; 5602 ಡಿಸ್ಚಾರ್ಜ್ ; 93 ಸಾವು

Chamarajanagar-Covid-Hospital

ಚಾಮರಾಜನಗರ: ನಿತ್ಯ ಸೋಂಕು ಪ್ರಕರಣಗಳು ಶತಕದ ಅಂಚಿಗೆ : ಒಟ್ಟು ಪ್ರಕರಣಗಳು ಸಾವಿರದಂಚಿನಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.