ತಾರೆಯ ಸಾವಿನ ಗದ್ದಲದಲ್ಲಿ ಸುದ್ದಿಯಾಗದ ಮಾದರಿ ಅಧಿಕಾರಿ ನಿರ್ಗಮನ


Team Udayavani, Mar 7, 2018, 7:50 AM IST

tsr.jpg

ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿರುವ ದಿಲ್ಲಿಯ ಐಎಎಸ್‌ ಅಧಿಕಾರಿಗಳ ಸಂಘ, ಅವರನ್ನು ದೇಶದ ಅಧಿಕಾರಿಗಳಲ್ಲೇ ಮೇರು ವ್ಯಕ್ತಿತ್ವ ಹೊಂದಿದವರೆಂದು, ಅವರ ಸಾವು ಐಎಎಸ್‌ ಕ್ಷೇತ್ರಕ್ಕಷ್ಟೇ ಅಲ್ಲ, ಇಡಿಯ ದೇಶಕ್ಕೇ ಬಹುದೊಡ್ಡ ನಷ್ಟವೆಂದು ಬಣ್ಣಿಸಿದ್ದು ಸರಿಯಾಗಿಯೇ ಇದೆ.

ಜನಪ್ರಿಯ ಬಹುಭಾಷಾ ಚಿತ್ರತಾರೆ ಶ್ರೀದೇವಿ ಅವರ ಅನಿರೀಕ್ಷಿತ ಸಾವಿಗೆ ದೇಶದ ಎಲ್ಲೆಡೆಯಿಂದ ವ್ಯಕ್ತವಾದ ಸಂತಾಪ ವಚನಗಳ ಭರಾಟೆಯ ನಡುವೆ ಒಂದು ವಿದ್ಯಮಾನ ನಮ್ಮ ಕಣ್ತಪ್ಪಿಹೋಗಿದೆ. ಅತ್ಯಂತ ಆದರ್ಶಪ್ರಾಯ ಐಎಎಸ್‌ ಅಧಿಕಾರಿಯಾಗಿದ್ದ ಕೇಂದ್ರದ ನಿವೃತ್ತ ಸಂಪುಟ ಕಾರ್ಯದರ್ಶಿ ಟಿ. ಎಸ್‌. ಆರ್‌. ಸುಬ್ರಮಣಿಯನ್‌ ಅವರ ನಿಧನವನ್ನು ಬಹುಶಃ ಯಾರೂ ಗಮನಿಸಿದಂತಿಲ್ಲ, ನಾಗರಿಕ ಸೇವೆಯ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುತ್ತ ಅತ್ಯುನ್ನತ ಹುದ್ದೆಗೇರುವಷ್ಟು ಬೆಳೆದು ನಿಂತಿದ್ದ ಅಧಿಕಾರಿಯಾಗಿದ್ದವರು ಸುಬ್ರಮಣಿಯನ್‌.

ಸುಬ್ರಮಣಿಯನ್‌ ಅವರು ನಿಧನರಾದದ್ದು ಫೆಬ್ರವರಿ 25ರಂದು; ನಟಿ ಶ್ರೀದೇವಿಯವರ ಸಾವು ಸಂಭವಿಸಿದ ಮರುದಿನ. ಶ್ರೀದೇವಿ ದೇಶ ಕಂಡ ಏಕೈಕ ಅತ್ಯುತ್ತಮ ಅಭಿನೇತ್ರಿ ಎಂಬ ಸಾರ್ವತ್ರಿಕ ಬಣ್ಣನೆಗೆ ಸಂಬಂಧಿಸಿದಂತೆ ನನಗೆ ನನ್ನದೇ ಭಿನ್ನ ಅಭಿಪ್ರಾಯವಿದೆ. ಹಾಗೆ ನೋಡಿದರೆ 1930ರ ದಶಕದಿಂದ ಇಲ್ಲಿ ಯವರೆಗೆ ದೇಶ ಇನ್ನೂ ಹಲವಾರು ಪ್ರತಿಭಾನ್ವಿತ ಚಿತ್ರ ತಾರೆಯರನ್ನು ಕಂಡಿದೆ. ಆದರೆ ಟಿ. ಎಸ್‌. ಆರ್‌. ಸುಬ್ರಮಣಿಯನ್‌ ಅವರ ವ್ಯಕ್ತಿತ್ವದ ಕುರಿತು ಹೇಳುವುದಾದರೆ ಅವರು ಸೇವೆಯಲ್ಲಿದ್ದಾಗಲೂ, ನಿವೃತ್ತರಾದ ಬಳಿಕವೂ ಅತ್ಯಂತ ಎತ್ತರದ ವ್ಯಕ್ತಿಯಾಗಿ ದ್ದವರು. ನಿಧನರಾಗುವಾಗ ಅವರಿಗೆ 79ರ ಹರೆಯ; ಅವರು ಕ್ಯಾಬಿನೆಟ್‌ ಕಾರ್ಯದರ್ಶಿಯಾಗಿದ್ದುದು 1996ರ ಆಗಸ್ಟ್‌ನಿಂದ 1998ರ ಮಾರ್ಚ್‌ವರೆಗೆ. ತಮಿಳುನಾಡಿನ ತಂಜಾವೂರಿನವರಾಗಿದ್ದ ಅವರು ಐಎಎಸ್‌ನಲ್ಲಿ 1961ರ ಉತ್ತರ ಪ್ರದೇಶ ತರಬೇತಿ ತಂಡದಲ್ಲಿದ್ದವರು. ಅವರ ಸಾವಿಗೆ ಸಂತಾಪ ವ್ಯಕ್ತಪಡಿಸಿರುವ ದಿಲ್ಲಿಯ ಐಎಎಸ್‌ ಅಧಿಕಾರಿಗಳ ಸಂಘ, ಅವರನ್ನು ದೇಶದ ಅಧಿಕಾರಿಗಳಲ್ಲೇ ಮೇರು ವ್ಯಕ್ತಿತ್ವ ಹೊಂದಿದವರೆಂದು, ಅವರ ಸಾವು ಐಎಎಸ್‌ ಕ್ಷೇತ್ರಕ್ಕಷ್ಟೇ ಅಲ್ಲ, ಇಡಿಯ ದೇಶಕ್ಕೇ ಬಹುದೊಡ್ಡ ನಷ್ಟವೆಂದು ಬಣ್ಣಿಸಿದ್ದು ಸರಿಯಾಗಿಯೇ ಇದೆ.

ನಾಗರಿಕ ಸೇವಾ ಕ್ಷೇತ್ರದಲ್ಲಿ ರಾಜಕೀಯ ಮಧ್ಯಪ್ರವೇಶವನ್ನು ಸಹಿಸದೆ ಅದರ ವಿರುದ್ಧ ಸೆಟೆದು ನಿಂತವರೆಂಬುದಕ್ಕಾಗಿ ಸುಬ್ರ ಮಣಿಯನ್‌ ಅವರನ್ನು ಸದಾ ನೆನಪಿಸಿಕೊಳ್ಳಬೇಕಾಗುತ್ತದೆ. ಐಎಎಸ್‌ ಸೇವಾ ಕಾರ್ಯಗಳಲ್ಲಿ ರಾಜಕೀಯ ಮಧ್ಯಪ್ರವೇಶವನ್ನು ತಡೆಯುವ ಮೂಲಕ ಐಎಎಸ್‌ ಕ್ಷೇತ್ರಕ್ಕೆ ರಕ್ಷಣೆಯೊದಗಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ನಿರ್ದೇಶವೀಯುವಂತೆ ಕೋರಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ 83 ಮಂದಿ ನಿವೃತ್ತ ಐಎಎಸ್‌ ಅಧಿಕಾರಿ ಗಳಲ್ಲಿ ಸುಬ್ರಮಣಿಯನ್‌ ಅವರೂ ಇದ್ದರು. ನ್ಯಾಯಾಲಯದ ಮೊರೆ ಹೊಕ್ಕವರಲ್ಲಿ ನಿವೃತ್ತ ಮುಖ್ಯ ಚುನಾವಣಾ ಆಯುಕ್ತರು (ಎನ್‌. ಗೋಪಾಲಸ್ವಾಮಿ ಹಾಗೂ ಟಿ.ಎಸ್‌. ಕೃಷ್ಣಮೂರ್ತಿ), ಅಮಿದ್‌ ಹುಸೇನ್‌, ವೇದಪ್ರಕಾಶ್‌ ಮಾರ್ವಾ ಹಾಗೂ ಡಿ.ಆರ್‌. ಕಾರ್ತಿಕೇಯನ್‌ ಇವರುಗಳೂ ಇದ್ದರು. ಕಾರ್ತಿಕೇಯನ್‌ ಕರ್ನಾಟಕದಲ್ಲಿ ಸೇವೆ ಸಲ್ಲಿಸಿದ್ದವರು. ಈ ಅರ್ಜಿಯ ಫ‌ಲಶ್ರುತಿ ಯೆಂಬಂತೆ ಸರ್ವೋಚ್ಚ ನ್ಯಾಯಾಲಯ ಐಎಎಸ್‌ ಅಧಿಕಾರಿಗಳಿಗೆ ಸುರಕ್ಷಿತ ಕನಿಷ್ಠ ಸೇವಾವಧಿಯನ್ನು ಖಾತರಿಪಡಿಸುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ಸೂಚಿಸುವ ತೀರ್ಪೊಂದನ್ನು ಹೊರಡಿಸಿತು. ಉನ್ನತ ಐಎಎಸ್‌ ಅಧಿಕಾರಿಗಳ ಮೇಲೆ ಬೀಳುವ ರಾಜಕೀಯ ಒತ್ತಡಕ್ಕೆ ಈ ತೀರ್ಪು ಕ್ರಾಂತಿಕಾರಿ ರೀತಿಯಲ್ಲಿ ಕಡಿ ವಾಣ ಹಾಕಿದೆ ಎಂದು ಹೇಳಲಾಗುತ್ತಿದೆಯಾದರೂ ವಾಸ್ತವದಲ್ಲಿ ಹಾಗಿಲ್ಲ.

ಕರ್ನಾಟಕ ಸಹಿತ ಕೆಲವು ರಾಜ್ಯಗಳು ಈ ತೀರ್ಪನ್ನು ಭಂಗಿಸುತ್ತಲೇ ಬಂದಿವೆಯೆಂಬುದನ್ನು ಹೇಳಲೇಬೇಕು. ಪೊಲೀಸ್‌ ಮುಖ್ಯಾಧಿಕಾರಿಗಳಿಗೆ ಎರಡು ವರ್ಷಗಳ ಕನಿಷ್ಠ ಸೇವಾವಧಿಯನ್ನು ನಿಗದಿ ಪಡಿಸಬೇಕೆಂದು ಸೂಚಿಸಿ ನ್ಯಾಯಾಲಯ ಪ್ರಕಾಶ್‌ ಸಿಂಗ್‌ ಅವರ ಪ್ರಕರಣದಲ್ಲಿ ನೀಡಿದ್ದ ತೀರ್ಪನ್ನು ಕರ್ನಾಟಕ ಸರಕಾರ ಗಾಳಿಗೆ ತೂರಿದೆ. ಉದಾಹರಣೆಗೆ ಕರ್ನಾಟಕದ ಹಿಂದಿನ ಪೊಲೀಸ್‌ ಮುಖ್ಯಸ್ಥರಾಗಿದ್ದ ರೂಪಕ್‌ ಕುಮಾರ್‌ ಅವರಿಗೆ ಒಂದು ವರ್ಷಕ್ಕಿಂತಲೂ ಕಡಿಮೆ ಸೇವಾವಧಿಯನ್ನು ನೀಡಲಾಯಿತು. ರಾಜ್ಯದ ಪೊಲೀಸ್‌ ಕೇಂದ್ರ ಕಚೇರಿಯಲ್ಲಿ ಪೊಲೀಸ್‌ ಮಹಾ ನಿರ್ದೇಶಕರ ಹಾಗೂ ಪೊಲೀಸ್‌ ಮಹಾ ನಿರೀಕ್ಷಕರ “ಆಯಾರಾಂ ಗಯಾ ರಾಂ’ ಪ್ರಕ್ರಿಯೆ ನಿರಂತರವಾಗಿ ಸಾಗಿದೆ. ಅದೃಷ್ಟವಶಾತ್‌ ಪ್ರಸಕ್ತ ಪೊಲೀಸ್‌ ಮಹಾಮುಖ್ಯಸ್ಥೆ ನೀಲಮಣಿ ರಾಜು ಅವರಿಗೆ ಉಳಿದವರಿಗಿಂತ ದೀರ್ಘ‌ವಾದ ಸೇವಾವಧಿ ಲಭಿಸಲಿದೆ.

ಅಧಿಕಾರಿಗಳ ಪೈಕಿ ಕೇವಲ ವಶೀಲಿಬಾಜಿಯಲ್ಲಿ ಸಿದ್ಧಹಸ್ತರಾದವರು ಹಾಗೂ ರಾಜಕಾರಣಿಗಳ ಕೃಪೆಗೆ ಪಾತ್ರರಾದವರು ಮಾತ್ರ ಉನ್ನತ ಸ್ಥಾನ ಕ್ಕೇರಿಯಾರೆಂಬ ಭಾವನೆ ಸಾರ್ವಜನಿಕ ವಲಯದಲ್ಲಿ ದಟ್ಟವಾಗಿದೆ. ಈ ಹಿನ್ನೆಲೆಯಲ್ಲಿ ಐಎಎಸ್‌ ಅಧಿಕಾರಿಗಳ ಕರ್ತವ್ಯ ನಿರ್ವ ಹಣೆಯಲ್ಲಿ ರಾಜಕೀಯ ಮಧ್ಯಪ್ರವೇಶ ಕುರಿತ ಸುಬ್ರಮಣಿಯನ್‌ ಅವರ ನಿಲುವು ಶ್ಲಾಘನೀಯವೇ ಹೌದು. ಉನ್ನತ ದರ್ಜೆಯ ಹುದ್ದೆಗಳನ್ನು ಪಡೆಯಬೇಕಿದ್ದರೆ ನಿಮಗೆ “ವೈಯಕ್ತಿಕ ಸಂಪರ್ಕ’ ಇದ್ದರಾಯಿತು. ಅರ್ಹತೆ ಬೇಕಿಲ್ಲ ಎಂಬುದು ಬಹುತೇಕ ಎಲ್ಲ ಚಿಂತನಶೀಲರ ಅಭಿಪ್ರಾಯ. ಗಮನಿಸಲೇಬೇಕಾದ ಅಂಶ ವೊಂದಿದೆ. ನಮ್ಮ ಹೆಚ್ಚಿನ ನಾಗರಿಕ/ಪೌರ ಸೇವಾ ಅಧಿಕಾರಿಗಳು ರಾಜಕಾರಣಿಗಳಿಗೆ ಜನರಿಂದ ಲಂಚ ವಸೂಲಿ ಮಾಡಿಕೊಡುವ ಮಾಧ್ಯಮಗಳಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಮಾತು ಹೇಳುವಾಗ ನನ್ನ ಮನಸ್ಸಿನಲ್ಲಿ ಸಬ್‌ ರಿಜಿಸ್ಟ್ರಾರ್‌ಗಳು, ಸರ್ಕಲ್‌ ಇನ್‌ಸ್ಪೆಕ್ಟರ್‌ಗಳು, ಅಬಕಾರಿ ನಿರೀಕ್ಷಣಾಧಿಕಾರಿ (ಎಕ್ಸೆ„ಸ್‌ ಇನ್‌ಸ್ಪೆಕ್ಟರ್‌)ಗಳು, ರಸ್ತೆ ಸಾರಿಗೆ ಅಧಿಕಾರಿಗಳು ಹಾಗೂ ವಾಣಿಜ್ಯ ತೆರಿಗೆ ಅಧಿಕಾರಿಗಳು ಮುಂತಾದವರಿಲ್ಲ. ಈ ರೋಗ ವರಿಷ್ಠ ಅಧಿಕಾರಿಗಳ ವರ್ಗಕ್ಕೂ ಹಬ್ಬಿದೆ. ಇತ್ತೀಚೆಗೆ ನಡೆದ ಟಿವಿ ಚರ್ಚಾ ಕಾರ್ಯಕ್ರಮವೊಂದರಲ್ಲಿ ಐಪಿಎಸ್‌ ವ್ಯಾಪ್ತಿಯಿಂದ ಹೊರತಾದ ಯಾವ ಅಧಿಕಾರಿಯೂ ಲಂಚ ಕೊಡದೆ ಒಳ್ಳೆಯ ಹುದ್ದೆ ಪಡೆಯುವ ನಿರೀಕ್ಷೆಯನ್ನು ಇಟ್ಟುಕೊಳ್ಳುವಂತಿಲ್ಲವಲ್ಲ ಎಂಬ ಪ್ರಶ್ನೆಗೆ, ಈ ಚರ್ಚೆಯಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್‌ ಹಾಗೂ ಬಿಜೆಪಿ ವಕ್ತಾರರಿಬ್ಬರೂ ಉತ್ತರ ಹೇಳದೆ ನುಣುಚಿಕೊಂಡರು. ಪೊಲೀಸ್‌ ನೇಮಕಾತಿ ಮಂಡಳಿಯ ರಚನೆಯಾಗಿದ್ದರೂ ಅಭ್ಯರ್ಥಿಗಳು ಅನುಭವಿಸುತ್ತಿರುವ ದುಃಸ್ಥಿತಿ ಇದು. ರಾಜ್ಯದ ಕೆಲವು ಪೊಲೀಸ್‌ ಠಾಣೆಗಳನ್ನು ಗರಿಷ್ಠ ಹಣ ಸಂಗ್ರಹ ಮಾಡುವ ಠಾಣೆಗಳೆಂದು ಗುರುತಿಸಲಾಗಿರುವುದು; ಅಲ್ಲಿನ ಹುದ್ದೆ ನೇಮಕಾತಿಗಳನ್ನು ಗರಿಷ್ಠ ಬಿಡ್‌ ಮಾಡುವವರಿಗೆ “ಹರಾಜು’ ಹಾಕಲಾಗುತ್ತಿ ರುವುದು ಎಲ್ಲರಿಗೂ ಚೆನ್ನಾಗಿ ತಿಳಿದಿರುವ ಸಂಗತಿಯೇ ಆಗಿದೆ.

“ಸಿವಿಲ್‌ ಸರ್ವೆಂಟ್‌’ಗಳು ಸಾರ್ವಜನಿಕ ಸೇವಕರು (ಪಬ್ಲಿಕ್‌ ಸರ್ವೆಂಟ್ಸ್‌); ಅವರು ಅಧಿಕಾರಸ್ಥರ ಖಾಸಗಿ ಸೇವಕ (ಪ್ರೈವೇಟ್‌ ಸರ್ವೆಂಟ್ಸ್‌)ರಲ್ಲ’ ಎಂಬ ಸುಪ್ರಸಿದ್ಧ ಹೇಳಿಕೆ ನೀಡಿರುವುದಕ್ಕಾಗಿಯೂ ಸುಬ್ರಮಣಿಯನ್‌ ಜನರ ನೆನಪಿನಲ್ಲಿ ಉಳಿಯುತ್ತಾರೆ. ದೇಶದ ನಾಗರಿಕ ಸೇವೆ/ಪೌರ ಸೇವೆಯ ಸ್ಥಿತಿಗತಿ ಕುರಿತಂತೆ ಅವರು ಮೂರು ಪುಸ್ತಕಗಳನ್ನು ಬರೆದಿದ್ದಾರೆ; ಇವುಗಳ ಪೈಕಿ ಒಂದಂತೂ ಅತ್ಯಂತ ಪ್ರೇರಣಾತ್ಮಕ ಕೃತಿ. ಇದರ ಶೀರ್ಷಿಕೆಯೇ ಅತ್ಯಂತ ಆಕರ್ಷಕ “ಗವರ್ನ್ ಮಿಂಟ್‌ ಇನ್‌ ಇಂಡಿಯಾ: ಆ್ಯನ್‌ ಇನ್‌ಸೈಡರ್ ವ್ಯೂ’, ಅರ್ಥಾತ್‌ ಅಪ್ರಾಮಾಣಿಕ ಅಧಿಕಾರಿಗಳ ಪಾಲಿಗೆ ಸರಕಾರ ಒಂದು ಟಂಕಸಾಲೆ ಅಥವಾ ನಾಣ್ಯ ಛಾಪಿಸುವ ಕಾರ್ಖಾನೆಯಾಗಿದೆ. ಸೇವೆಯಲ್ಲಿದ್ದಾಗಲೂ, ನಿವೃತ್ತರಾಗಿದ್ದಾಗಲೂ ಸುದ್ದಿ ಮಾಧ್ಯಮದ ಮಂದಿಯೂ ಸೇರಿದಂತೆ ಸಾರ್ವಜನಿಕರ ಜೊತೆಗೆ ಸ್ನೇಹದಿಂದ ನಡೆದುಕೊಳ್ಳುವುದಕ್ಕೆ ಇಷ್ಟಪಡದ ಹಿರಿಯ ಅಧಿಕಾರಿಗಳು ನಮ್ಮಲ್ಲಿ ಆಗಿ ಹೋಗಿದ್ದಾರೆ. ಅದು ಅವರ ಪ್ರಾಮಾಣಿಕ ನಡೆಯ ದ್ಯೋತಕವೆನ್ನಬಹುದು. ಇದಕ್ಕೆ ವ್ಯತಿರಿಕ್ತವಾಗಿ ಭ್ರಷ್ಟರೆಂದು ಪರಿಗಣಿಸಲ್ಪಟ್ಟಿರುವ ಕೆಲ ಅಧಿಕಾರಿಗಳು ಎಲ್ಲರೊಂದಿಗೂ ಸ್ನೇಹದಿಂದಲೇ ವರ್ತಿಸುವುದುಂಟು. ಪ್ರಾಮಾ ಣಿಕರೆಂದು ಹೆಸರು ಪಡೆಯದ ಓರ್ವ (ಈಗ ನಿವೃತ್ತ) ಐಎಎಸ್‌ ಅಧಿಕಾರಿಯ ಕೊಠಡಿಗೆ ಮಂತ್ರಿ ಮಹೋದಯರುಗಳು ಪ್ರವೇಶಿ ಸುವುದನ್ನು ನೋಡಿದ್ದೇನೆ. ನಿಜವಾದ ಕ್ರಮವೆಂದರೆ, ಯಾವುದೇ ದರ್ಜೆಯ ಅಧಿಕಾರಿಗಳಿರಲಿ ಅವರೇ ಮಂತ್ರಿಗಳಿದ್ದಲ್ಲಿಗೆ ಹೋಗ ಬೇಕೇ ಹೊರತು ಮಂತ್ರಿಗಳೇ ಇವರಿದ್ದಲ್ಲಿಗೆ ಬರುವುದಲ್ಲ. ಮಾಜಿ ಮುಖ್ಯಮಂತ್ರಿ ಕಡಿದಾಳ್‌ ಮಂಜಪ್ಪ ಅವರು ರಾಜ್ಯಗಳ ಏಕೀಕರಣದ ಬಳಿಕದ ಪ್ರಪ್ರಥಮ ಐಸಿಎಸ್‌ ಮುಖ್ಯ ಕಾರ್ಯದರ್ಶಿ ಪಿ.ವಿ.ಆರ್‌.ರಾವ್‌ ಅವರಿಗೆ ತಾಕೀತು ಮಾಡಿದ್ದನ್ನು ನೆನಪಿಸಿಕೊಳ್ಳಿ – ಮಂತ್ರಿಗಳಿದ್ದಲ್ಲಿಗೆ ನೀವೇ ಹೋಗಬೇಕು; ಅವರೇ ನಿಮ್ಮಲ್ಲಿ ಬರುತ್ತಾರೆಂದು ನಿರೀಕ್ಷಿಸಬೇಡಿ ಎಂದವರು ರಾವ್‌ ಅವರಿಗೆ ಕಟ್ಟುನಿಟ್ಟಾಗಿ ಹೇಳಿದ್ದರು. ಆಮೇಲೆ ಉತ್ತರಾಧಿಕಾರಿಗಳಾಗಿ ಬಂದ ಐಎಎಸ್‌ ಅಧಿಕಾರಿಗಳಿಗಿಂತಲೂ, ಆ ಕಾಲದಲ್ಲಿದ್ದ ಐಸಿಎಸ್‌ ಅಧಿಕಾರಿಗಳು ದುರಂಹಕಾರದ ನಡವಳಿಕೆಯಿಂದಲೇ ಕುಖ್ಯಾತರಾಗಿದ್ದರು.

ಟಿ.ಎಸ್‌.ಆರ್‌. ಸುಬ್ರಮಣಿಯನ್‌ ಪತ್ರಿಕಾ ಅಂಕಣಕಾರರೂ ಹೌದು. ಈ ಅಂಕಣದಲ್ಲಿ ಆಡಳಿತ ವ್ಯವಸ್ಥೆ ಹಾಗೂ ಸಾರ್ವಜನಿಕ ವ್ಯವಹಾರ ವಿಷಯದ‌ ಲೇಖನಗಳನ್ನು ಬರೆಯುತ್ತಿದ್ದರು. ಟಿ.ವಿ. ಗಳಲ್ಲಿನ ಚರ್ಚಾ ಕಾರ್ಯಕ್ರಮಗಳಲ್ಲಿ, ದೇಶದ ವಿವಿಧೆಡೆ ನಡೆಯುತ್ತಿದ್ದ ವಿಚಾರಗೋಷ್ಠಿಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ಜನರಿಗೆ ಹೇಳಬೇಕಾದ ಅನೇಕ ವಿಚಾರಗಳು ಅವರಲ್ಲಿದ್ದವು. ಪ್ರಧಾನಿ ನರೇಂದ್ರ ಮೋದಿ ಅವರು, ಸುಬ್ರಮಣಿಯನ್‌ ನಿಧನಕ್ಕೆ ಸಂತಾಪ ಸೂಚಿಸುತ್ತ ಅವರ ಈ ಗುಣವನ್ನು ಉಲ್ಲೇಖೀಸಿದ್ದಾರೆ. ಸುಬ್ರಮಣಿ ಯನ್‌ ತಮ್ಮ ಅಂಕಣ ಬರಹಗಳಲ್ಲಿ ಆಗಾಗ “ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳಾಗಿದ್ದರೂ ನಾವಿನ್ನೂ ಕಡುಬಡವರನ್ನು ತಲುಪಲು ಸಾಧ್ಯವಾಗಿಲ್ಲ; ಅವರಿಗೆ ಶಿಕ್ಷಣದ ಹಾಗೂ ಉದ್ಯೋಗದ ಅವಕಾಶ ಕಲ್ಪಿಸಲು ಸಾಧ್ಯವಾಗಿಲ್ಲ’ ಎಂಬ ಮಾತನ್ನು ಉಲ್ಲೇಖೀಸುತ್ತಿದ್ದರು.

1996ರಲ್ಲಿ, ಈ ಮಾದರಿ ಐಎಎಸ್‌ ಅಧಿಕಾರಿಗಳು ಬದಲಿಗೆ ಕಿರಿಯ ಅಧಿಕಾರಿಯೊಬ್ಬರನ್ನು ನೂತನ ಸಂಪುಟ ಕಾರ್ಯದರ್ಶಿ ಯನ್ನಾಗಿ ನೇಮಿಸುವ ಪ್ರಯತ್ನವೊಂದು ನಡೆದಿತ್ತು. ಆಗ ಪ್ರಧಾನಿ ಯಾಗಿದ್ದವರು ನಮ್ಮವರೇ ಆದ ಎಚ್‌.ಡಿ. ದೇವೇಗೌಡರು. ಸುಬ್ರಮಣಿಯನ್‌ ಅವರ ಸೇವಾ ಜ್ಯೇಷ್ಠತೆಯನ್ನು ಅವಗಣಿಸಿ ಅವರಿಗಿಂತ ಕಿರಿಯ ಅಧಿಕಾರಿಯಾಗಿದ್ದ ಜೇಮ್ಸ್‌ ಲಿಂಗೊxà ಅವರನ್ನು ನೇಮಿಸುವ ನಿಟ್ಟಿನಲ್ಲಿ ನಡೆದ ಪ್ರಯತ್ನ ಇದು. ತನ್ನ ಹಿರಿಯ ಅಧಿಕಾರಿಯ ಬದಲಿಗೆ ತನ್ನನ್ನು ನೇಮಿಸುವುದಕ್ಕೆ ಲಿಂಗೊxà ಅವರು ಒಪ್ಪಲಿಲ್ಲವಂತೆ. ಲಿಂಗೊxà ಅವರು ಮುಂದೆ ಮುಕ್ತ ಚುನಾವಣಾ ಆಯುಕ್ತರಾದರು. ಇನ್ನೊಬ್ಬ ಆದರ್ಶ ಅಧಿಕಾರಿಯೆಂಬ ಖ್ಯಾತಿಗೆ ಪಾತ್ರರಾದರು. ದೇವೇಗೌಡರ
ಪ್ರಧಾನ ಮಂತ್ರಿತ್ವದ ಹೃಸ್ವ ಅವಧಿಯನ್ನು ತಮ್ಮ ಕೃತಿಯೊಂದರಲ್ಲಿ ಶ್ಲಾ ಸಲು ಸುಬ್ರಮಣಿಯನ್‌ ಅವರಿಗೆ ಮೇಲಿನ ಘಟನೆ ಒಂದು ಅಡ್ಡಿಯಾಗಲಿಲ್ಲ. ಗೌಡರು ತಮಗೆ ದಕ್ಕಿದ ಉನ್ನತ ಪದವಿಯನ್ನು ಯಾವುದೇ ಹಗರಣಕ್ಕೆ ಅವಕಾಶ ಮಾಡಿಕೊಡದ ರೀತಿಯಲ್ಲಿ ನಿರ್ವಹಿಸಿದರು ಎಂದು ಸುಬ್ರಮಣಿಯನ್‌ ತನ್ನೀ ಕೃತಿಯಲ್ಲಿ ಬರೆದಿದ್ದರು.

ಎಂ. ಶಂಕರನಾರಾಯಣನ್‌
ಕಳೆದ ತಿಂಗಳು ನಿಧನ ಹೊಂದಿದ ಇನ್ನೋರ್ವ ಪ್ರಾಮಾಣಿಕ ಅಧಿಕಾರಿಯೆಂದರೆ, ಕರ್ನಾಟಕದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಂ. ಶಂಕರನಾರಾಯಣನ್‌. ಎಷ್ಟೋ ವಿಚಾರಗಳಲ್ಲಿ ಟಿ.ಎಸ್‌. ಆರ್‌. ಸುಬ್ರಹ್ಮಣಿಯನ್‌ರಿಗಿಂತ ಭಿನ್ನರಾಗಿದ್ದವರು ಶಂಕರ ನಾರಾಯ ಣನ್‌. ಅವರೆಂದೂ ಸಾರ್ವಜನಿಕರೊಂದಿಗೆ ತಮ್ಮ ವಿಚಾರಗಳನ್ನು ಹಂಚಿಕೊಂಡವರಲ್ಲ. 1990ರಲ್ಲಿ ಮುಖ್ಯಮಂತ್ರಿ ಯಾಗಿದ್ದ ಎಸ್‌. ಬಂಗಾರಪ್ಪ ಅವರು ಲೋಕಾಯುಕ್ತದ ತನಿಖೆ ಯನ್ನು ಎದುರಿಸುತ್ತಿದ್ದ ಕೆಲ ಐಎಎಸ್‌ ಅಧಿಕಾರಿಗಳಿಗೆ ಭಡ್ತಿ ನೀಡುವ ಪ್ರಸ್ತಾವವನ್ನು ಮುಂದಿರಿಸಿದಾಗ ಶಂಕರನಾರಾಯಣನ್‌ ಇದನ್ನು ವಿರೋಧಿಸಿದರು. ಈ ಅಧಿಕಾರಿಗಳಲ್ಲೊಬ್ಬರು ಎಸ್‌.ಎಂ. ಕೃಷ್ಣ ಅವರು ಮುಖ್ಯಮಂತ್ರಿಯಾಗಿದ್ದಾಗ ರಾಜ್ಯದ ಮುಖ್ಯ ಕಾರ್ಯದರ್ಶಿಯಾದರು. ಬಂಗಾರಪ್ಪ , ಶಂಕರ ನಾರಾಯಣನ್‌ ಅವರನ್ನು ಕಡೆಗಣಿಸಿದರು. ಸರ್ವೋಚ್ಚ ನ್ಯಾಯಾಲಯದ ಭೂತಪೂರ್ವ ನ್ಯಾಯಾಧೀಶರಾಗಿದ್ದ ಗೋವಿಂದ ಮೆನೋನ್‌ ಅವರ ಪುತ್ರರಾಗಿದ್ದ ಶಂಕರನಾರಾಯಣನ್‌ ಸರಕಾರದ ಪ್ರಮುಖ ಕಾರ್ಯನಿರ್ವಹಣೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕೆಂದು ಆಗ್ರಹಿಸುವ ಮನವಿಯೊಂದಿಗೆ ಸರ್ವೋಚ್ಚ ನ್ಯಾಯಾಲಯದ ಮೆಟ್ಟಲೇರಿದ್ದುಂಟು. ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬರುವ ಮುನ್ನಿನ ದಿನಗಳ ಸಂಗತಿ ಇದು.

ದೇಶಕ್ಕೆ ಇಂದು ಬೇಕಾಗಿರುವುದು ಮಂತ್ರಿಗಳೆದುರು “ಜೀ ಹುಜೂರ್‌’ ಎನ್ನುವ ಅಧಿಕಾರಿಗಳಲ್ಲ; ಟಿ.ಎಸ್‌.ಆರ್‌. ಸುಬ್ರಮಣಿ ಯನ್‌ ಹಾಗೂ ಎಂ. ಶಂಕರನಾರಾಯಣನ್‌ರಂಥ ಉನ್ನತ ಅಧಿಕಾರಿಗಳು ಎಂಬುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

– ಅರಕೆರೆ ಜಯರಾಮ್‌

ಟಾಪ್ ನ್ಯೂಸ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

Hassan ಆಕ್ಷೇಪಾರ್ಹ ವಿಡಿಯೋ ಪ್ರಕರಣ: ಜೆಡಿಎಸ್ ಪಕ್ಷದಿಂದ ಪ್ರಜ್ವಲ್ ರೇವಣ್ಣ ಉಚ್ಛಾಟನೆ

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

ಸುಳ್ಳಿನ ಭರವಸೆ ಮೂಲಕ ಬಿಜೆಪಿ ಖಾಲಿ ಚೊಂಬಿನ ಆಶ್ವಾಸನೆಯನ್ನು ನೀಡಿದೆ: ಜೈ ಕುಮಾರ್

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು

Shocking: ಮಸೀದಿಗೆ ನುಗ್ಗಿ ಧರ್ಮಗುರುವನ್ನೇ ದೊಣ್ಣೆಯಿಂದ ಹೊಡೆದು ಕೊಂದ ಮುಸುಕುಧಾರಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಅತೃಪ್ತಿ ಹಣಿಯಲು ಚಾಣಕ್ಯ ಸಂದೇಶದ ತಂತ್ರ 

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಮೇಲ್ಮನೆಗೆ ಗೊಗೋಯ್‌, ವಿಪಕ್ಷ ಸಭಾತ್ಯಾಗ

ಸಂವಿಧಾನ: ಅಂಬೇಡ್ಕರ್‌ ಜತೆಗೆ ನಪಿಸಿಕೊಳ್ಳಬೇಕಾದವರು

ಸಂವಿಧಾನ: ಅಂಬೇಡ್ಕರ್‌ ಜತೆಗೆ ನೆನಪಿಸಿಕೊಳ್ಳಬೇಕಾದವರು

kala-43

ಬ್ರಿಟನ್‌ ವಿತ್ತದ ಕೀಲಿ ಕೈ ಭಾರತೀಯ ಮೂಲದವರ ಕೈಯಲ್ಲಿ

jai-43

ನೂತನ ಸಚಿವ ಪರಿವಾರ -ಬಿಜೆಪಿಗೆ ಹೊರೆಯೇ, ವರವೇ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Father; ಚಂದ್ರು ನಿರ್ಮಾಣದ ‘ಫಾದರ್‌’ ಚಿತ್ರಕ್ಕೆ ಮುಹೂರ್ತ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.