ಒಂದು ಮನ್ನಣೆ, ಹಲವು ಸಂದೇಶ!

ಮೋದಿಗೆ ಯುಎಇಯ ಅತ್ಯುನ್ನತ 'ಝಾಯೆದ್‌ ಗೌರವ'

Team Udayavani, Aug 24, 2019, 5:26 AM IST

33

ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತೆ ಯುಎಇನಲ್ಲಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಮೋದಿ ಕೈಗೊಂಡ ಮೂರನೆಯ ಪ್ರವಾಸವಿದು. ಕಾಶ್ಮೀರದ 370ನೇ ಅನುಚ್ಛೇದ ರದ್ದು ಮಾಡಿದ ನಂತರ ಮೊದಲ ಬಾರಿಗೆ ಭೇಟಿ ಕೊಡುತ್ತಿರುವ ಮೋದಿ, ಪಾಕಿಸ್ತಾನದ ಬಹು ಕಾಲದ ಮಿತ್ರ ರಾಷ್ಟ್ರ ಯುಎಇಯಿಂದ ತಮ್ಮ ರಾಜತಾಂತ್ರಿಕ ಸಾಧನೆಗಾಗಿ ಇಲ್ಲಿನ ಅತ್ಯುನ್ನತ ನಾಗರಿಕ ಗೌರವ ‘ಆರ್ಡರ್‌ ಆಫ್ ಝಾಯೆದ್‌’ನ್ನು ಪಡೆಯಲಿದ್ದಾರೆ.

ಈ ತನಕ ಭಾರತದ ಯಾವ ನೇತಾರನಿಗೂ ಸಲ್ಲದ ಗೌರವ ಮೋದಿಗೆ ಸಂದಿದೆ. ಕಾಶ್ಮೀರ ವಿಷಯದಲ್ಲಿ ಪಾಕ್‌ ಕತ್ತಿ ಮಸೆಯುತ್ತಿರುವ ಈ ಹೊತ್ತಲ್ಲಿ ಯುಎಇ ನೀಡುತ್ತಿರುವ ಈ ಗೌರವ, ಭಾರತಕ್ಕೆ ಸಿಕ್ಕ ಬಹುದೊಡ್ಡ ರಾಜತಾಂತ್ರಿಕ ಆಯುಧವೇ ಸರಿ.

ಹಾಗೆ ನೋಡಿದರೆ, 2014ರಲ್ಲಿ ಮೊದಲ ಬಾರಿಗೆ ಮೋದಿ ಯುಎಇಗೆ ಭೇಟಿ ಕೊಟ್ಟಾಗಲೇ, ಅದನ್ನು ಭಾರತ-ಯುಎಇ ಸರ್ಕಾರಗಳು ‘ಐತಿಹಾಸಿಕ’ ಎಂದು ಬಣ್ಣಿಸಿದ್ದವು. 1981ರಲ್ಲಿ ಇಂದಿರಾ ಗಾಂಧಿ ಇಲ್ಲಿಗೆ ಬಂದುದನ್ನು ಬಿಟ್ಟರೆ ಯಾವ ಪ್ರಧಾನಿಯೂ ಯುಎಇ ದೇಶವನ್ನು ಭಾರತದ ಮಹತ್ವದ ಸಹಭಾಗಿ ಎಂದು ಗುರುತಿಸಿಯೇ ಇರಲಿಲ್ಲ. ಮೂರು ದಶಕಗಳ ನಂತರ ಮೊದಲ ಬಾರಿ ಮೋದಿ ಯುಎಇ ಮಣ್ಣಿಗೆ ಕಾಲಿಟ್ಟಾಗ, ಕೆಲ ರಾಜಕೀಯ ವಿಶ್ಲೇಷಕರು -‘ಇದು ಮುಸ್ಲಿಮರನ್ನು ಓಲೈಸಲು ಮಾಡಿದ ಸಾಂಕೇತಿಕ ಹೆಜ್ಜೆಯಷ್ಟೇ . ಅದರಿಂದ ಹೆಚ್ಚಿನದೇನೂ ರಾಜತಾಂತ್ರಿಕ, ವ್ಯಾವಹಾರಿಕ ಲಾಭವಿಲ್ಲ’ ಎಂದು ವಿಶ್ಲೇಷಿಸಿದ್ದರು. ಆದರೆ ಐದು ವರ್ಷಗಳಲ್ಲಿ ಭಾರತ-ಯುಎಇ ಸಂಬಂಧ ಬೆಸೆದ ಬಗೆ, ಅದು ಭಾರತಕ್ಕೆ ತಂದ ಲಾಭದ ಪರಿಯೇ ಬೇರೆ.

ಗಟ್ಟಿಗೊಂಡ ಕೊಡು-ಕೊಳ್ಳುವಿಕೆ: ಯುಎಇ-ಭಾರತದ ಬಾಂಧವ್ಯ ಗಟ್ಟಿಗೊಳ್ಳಲು ಮೋದಿಯೊಬ್ಬರೇ ಕಾರಣ ಎನ್ನುವುದೂ ಸರಿಯಲ್ಲ. ಪರಿಸ್ಥಿತಿ ಹಾಗಿತ್ತು. ಇರಾನ್‌ ಜತೆ ಅಮೆರಿಕದ ಅಂದಿನ ಅಧ್ಯಕ್ಷ ಬರಾಕ್‌ ಒಬಾಮಾ ನ್ಯೂಕ್ಲಿಯರ್‌ ಒಪ್ಪಂದ ಮಾಡಿಕೊಂಡ ಪರಿಣಾಮ, ಅರಬ್‌ ರಾಷ್ಟ್ರಗಳು ಸ್ಥಿರ ರಾಷ್ಟ್ರಗಳನ್ನು ಬಾಂಧವ್ಯಕ್ಕಾಗಿ ಹುಡುಕುತ್ತಿದ್ದವು. ಆಗ ತಾನೇ ಪೂರ್ಣ ಬಹುಮತದಿಂದ ಗೆದ್ದು ಬಂದಿದ್ದ ಮೋದಿ ಪರಿಸ್ಥಿತಿಯ ಲಾಭ ಪಡೆದುಕೊಂಡು ಯುಎಇ ಜತೆಗಿನ ಬಾಂಧವ್ಯದ ಹೊಸ ಅಧ್ಯಾಯಕ್ಕೆ ಭಾಷ್ಯ ಬರೆದರು. ಪರಿಣಾಮ ಎರಡೂ ರಾಷ್ಟ್ರಗಳ ಪರಸ್ಪರ ಸಹಕಾರ ಈಗ ಇಂಧನ ಮತ್ತು ವ್ಯಾಪಾರದ ಹೊರತಾಗಿ ಬಾಹ್ಯಾಕಾಶ ತಂತ್ರಜ್ಞಾನ ಹಾಗೂ ಆಹಾರ ಸುರಕ್ಷಾ ಕ್ಷೇತ್ರಕ್ಕೂ ವಿಸ್ತರಿಸಿಕೊಂಡಿದೆ. ಭಾರತದ ಒಟ್ಟು ತೈಲ ಆಮದಿನ 8% ಭಾಗ ಯುಎಇಯದ್ದು. ಭಾರತಕ್ಕೆ ಐದನೇ ಅತಿ ದೊಡ್ಡ ತೈಲ ಸರಬರಾಜುದಾರ ರಾಷ್ಟ್ರ ಯುಎಇ. ಮೋದಿ ಸರ್ಕಾರ ಕೆಲ ವರ್ಷಗಳ ಹಿಂದೆ ಯುಎಇ ಸರಕಾರದ ಜತೆ ಭಾರತದಲ್ಲಿ ಕಚ್ಚಾ ತೈಲ ಸಂಗ್ರಹಿಸಿಡುವ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿತ್ತು. ಇದರ ಪ್ರಕಾರ ಮಂಗಳೂರಿನಲ್ಲಿ 20 ಲಕ್ಷ ಹಾಗೂ ಪಾದೂರಿನಲ್ಲಿ 80 ಲಕ್ಷ ಬ್ಯಾರಲ್ ತೈಲವನ್ನು ಸಂಗ್ರಹಿಸಿ ಇಡಲಾಗುತ್ತದೆ. ಇಷ್ಟು ಮಾತ್ರವಲ್ಲ, ಯುಎಇಯ ಅಡಿನೊಕ್‌ ಮತ್ತು ಸೌದಿಅರೇಬಿಯಾದ ಅರಮ್‌ಕೋ ಕಂಪನಿಗಳು ಜತೆಯಾಗಿ ಮಹಾರಾಷ್ಟ್ರದಲ್ಲಿ 44 ಶತಕೋಟಿ ಡಾಲರ್‌ ವೆಚ್ಚದಲ್ಲಿ RRPCL (Ratnagiri Refinery And Petrochemicals Limited)ನ್ನು ಅಭಿವೃದ್ಧಿ ಪಡಿಸಿಲಿದೆ. ತೈಲ ಬೆಲೆ ವಿಪರೀತ ಏರಿಳಿತವಾಗುತ್ತಿರುವ ದಿನಗಳಲ್ಲಿ ಈ ಒಪ್ಪಂದ ಎರಡೂ ದೇಶಗಳಿಗೆ ಲಾಭದಾಯಕ. ಭಾರತ -ಯುಎಇ ಮಧ್ಯೆ ಮೊದಲಿನಿಂದಲೇ ಉತ್ತಮ ವ್ಯಾಪಾರ ಸಂಬಂಧವಿತ್ತು . ಈಗ ಅದು ಮತ್ತಷ್ಟು ಗಟ್ಟಿಗೊಂಡಿದೆ. ಭಾರತ 28 ಶತಕೋಟಿ ಡಾಲರ್‌ ಮೌಲ್ಯದ ರಫ್ತು ಮಾಡಿದರೆ, ಯುಎಇಯಿಂದ 22 ಬಿಲಿಯನ್‌ ಮೌಲ್ಯದ ಆಮದು ಮಾಡಿಕೊಳ್ಳುತ್ತಿದೆ. ಈ ಕೊಡುಕೊಳ್ಳುವಿಕೆ ವ್ಯವಹಾರ 2020ರಲ್ಲಿ 100 ಬಿಲಿಯನ್‌ ಡಾಲರ್‌ ತಲುಪಲಿದೆ.

ಬಾಹ್ಯಾಕಾಶ ಕ್ಷೇತ್ರದ ಮುಖೇನ ಉಭಯ ರಾಷ್ಟ್ರಗಳ ಸಂಬಂಧದಲ್ಲಿ ಹೊಸ ಅವಕಾಶದ ಟಿಸಿಲೊಡೆದಿದೆ. ಫೆಬ್ರವರಿ 2017ರಲ್ಲಿ ಭಾರತ ಉಡ್ಡಯನ ಮಾಡಿದ 104 ಉಪಗ್ರಹಗಳ ಗೊಂಚಲಲ್ಲಿ ನೈಫ್-1 ಎಂಬ ಯುಎಇಯ ಉಪಗ್ರಹ ಕೂಡ ಸೇರಿತ್ತು. 2020ರಲ್ಲಿ ನಿಯೋಜಿತವಾಗಿರುವ ಯುಎಇಯ ಮಂಗಳಯಾನ, ಮಂಗಳ ಗ್ರಹದಲ್ಲಿ ಕಾಲೋನಿ ನಿರ್ಮಿಸಬೇಕೆಂದಿ ರುವ ಅತಿ ಮಹತ್ವಾಕಾಂಕ್ಷೆಯ ಯೋಜನೆಗಳಿಗೆ ಭಾರತದ ಹೆಮ್ಮೆಯ ಇಸ್ರೋ ಸಹಕರಿಸುತ್ತಿದೆ. ಭಾರತ-ಯುಎಇ ಮಧ್ಯೆ ಇನ್ನೊಂದು ಮಹತ್ವದ ಒಪ್ಪಂದವಾಗಿದೆ. ಅದು ಆಹಾರ ಸುರಕ್ಷತೆಗೆ ಸಂಬಂಧಿಸಿದುದು. ಯುಎಇ ಮೂಲತಃ ಮರುಭೂಮಿ. ತನಗೆ ಬೇಕಾದ ಆಹಾರ ಪದಾರ್ಥಕ್ಕೆ ಹೊರ ದೇಶಗಳ ಮೇಲೆಯೇ ಅವಲಂಬಿತವಾಗಿರುವ ದೇಶ. ಆದರೆ ಭಾರತ ಕೃಷಿ ಪ್ರಧಾನ ದೇಶ. ತಾನು ಬೆಳೆದ ಆಹಾರ ಪದಾರ್ಥಕ್ಕೆ ಮಾರುಕಟ್ಟೆ ಹುಡುಕುತ್ತಿರುವ ರಾಷ್ಟ್ರ. ಎರಡೂ ದೇಶಗಳು ತಮ್ಮ ತಮ್ಮ ಅಗತ್ಯಗಳನ್ನು ಪೂರೈಸುವ ನಿಟ್ಟಿನಲ್ಲಿ ‘ಫ‌ುಡ್‌ ಕಾರಿಡಾರ್‌’ ಎಂಬ ಯೋಜನೆಗೆ ಚಾಲನೆ ನೀಡಿವೆ. ಇದು ಯಶಸ್ವಿ ಆದದ್ದೇ ಆದರೆ, ಪಂಜಾಬ್‌, ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ಗುಜರಾತ್‌ನಲ್ಲಿ ರೈತರು ಬೆಳೆದ ಆಹಾರ ಪದಾರ್ಥವನ್ನು ಯುಎಇ ನೇರವಾಗಿ ಆಮದು ಮಾಡಿಕೊಳ್ಳಲಿದೆ. ಮಾತ್ರವಲ್ಲ, ಯುಎಇ- ಭಾರತ 2018ರಲ್ಲಿ ಮಾಡಿಕೊಂಡ ‘ಕೆರೆನ್ಸಿ ವಿನಿಮಯ’ ಒಪ್ಪಂದದ ಪ್ರಕಾರ ಯುಎಇ ಜತೆಗಿನ ವ್ಯಾಪಾರ ವಹಿವಾಟಿನಲ್ಲಿ ಭಾರತ ರೂಪಾಯಿಯನ್ನೇ ನೀಡಬಹುದಾಗಿದೆ. ಡಾಲರ್‌ ಬದಲು ರೂಪಾಯಿಯನ್ನು ಸ್ವೀಕರಿಸಲು ಯುಎಇ ಒಪ್ಪಿರುವುದು, ಭಾರತಕ್ಕೆ ನೀಡಿರುವ ವಿಶಿಷ್ಟ ಸ್ಥಾನಮಾನದ ಸಂಕೇತ.

ಬಾಂಧವ್ಯದ ಹೊಸ ಶಕೆ: ಸಾಮಾನ್ಯವಾಗಿ ರಾಷ್ಟ್ರಗಳ ಮಧ್ಯೆ ಬೆಸೆಯುವ ಸಂಬಂಧಗಳಲ್ಲಿ ಕೇವಲ ವ್ಯಾವಹಾರಿಕ, ರಾಜತಾಂತ್ರಿಕ ಲಾಭ – ನಷ್ಟಗಳ ಲೆಕ್ಕಾಚಾರ ಮಾತ್ರವಿರುತ್ತದೆ. ಆದರೆ ಯುಎಇ- ಭಾರತದ ಕಳೆದ ಐದು ವರ್ಷಗಳ ಗೆಳೆತನ ಹೊಸ ಮಜಲನ್ನು ಮುಟ್ಟಿದೆ. ಯುಎಇಯ ಸುಮಾರು 28% ಜನಸಂಖ್ಯೆ ಭಾರತೀಯರು. 33 ಲಕ್ಷ ಜನ ಭಾರತೀಯರು ಇಲ್ಲಿ ವಾಸವಿದ್ದಾರೆ. ಇಲ್ಲಿ ಸ್ಥಳೀಯರಿಗಿಂತ ದುಪ್ಪಟ್ಟು ಭಾರತೀಯರಿದ್ದಾರೆ. ಯುಎಇಗೆ ಬಂದರೆ ಭಾರತದ ಯಾವುದೋ ರಾಜ್ಯಕ್ಕೆ ಬಂದಂತೆ ಭಾಸವಾದರೆ ಅಚ್ಚರಿಯೇನಿಲ್ಲ. ಯುಎಇಯಲ್ಲಿ ರಿಯಲ್ ಎಸ್ಟೇಟ್, ಆಹಾರ ಉದ್ದಿಮೆಗಳಲ್ಲಿ ಭಾರತೀಯರದ್ದೇ ಕಾರುಬಾರು. ಯುಎಇಗೆ 2018ರಲ್ಲಿ ಭೇಟಿ ನೀಡಿದ ಪ್ರವಾಸಿಗರಲ್ಲಿ ಭಾರತೀಯರ ಸಂಖ್ಯೆಯೇ ಸಿಂಹ ಪಾಲು. ದುಬೈಗೆ 2018ರಲ್ಲಿ ಬಂದ ಜಗತ್ತಿನ 1.6 ಕೋಟಿ ಜನರಲ್ಲಿ 20 ಲಕ್ಷದ 70 ಸಾವಿರ ಪ್ರವಾಸಿಗರು ಭಾರತೀಯರೇ! ಯುಎಇ ಎಂಬ ದೇಶವನ್ನು ಕಟ್ಟುವಲ್ಲಿ, ಇಲ್ಲಿನ ಅರ್ಥವ್ಯವಸ್ಥೆಯನ್ನು ಗಟ್ಟಿಯಾಗಿ ಹಿಡಿದಿಡುವಲ್ಲಿ ಭಾರತೀಯರ ಕೊಡುಗೆ ಅಪಾರ. ಭಾರತಕ್ಕೂ ಅಷ್ಟೇ, 131 ರಾಷ್ಟ್ರಗಳ ಅನಿವಾಸಿ ಭಾರತೀಯರ ಪೈಕಿ ಯುಎಇಯ ಭಾರತೀಯರು 95 ಸಾವಿರ ಕೋಟಿ ರೂಪಾಯಿಯನ್ನು ತಮ್ಮ ತಾಯ್ನಾಡಿಗೆ ರವಾನಿಸುತ್ತಾರೆ. ಭಾರತಕ್ಕೆ ಅನಿವಾಸಿ ಭಾರತೀಯರ ಮೂಲದಿಂದ ಬರುವ ಒಟ್ಟು ಮೊತ್ತದ 20% ಬರುವುದು ಯುಎಇ ಎಂಬ ಒಂದೇ ದೇಶದಿಂದ! ಯುಎಇ/ಭಾರತ ಇಬ್ಬರಲ್ಲಿ ಒಬ್ಬರ ಅರ್ಥವ್ಯವಸ್ಥೆಯಲ್ಲಿ ತಲ್ಲಣವಾದರೂ ಎರಡೂ ರಾಷ್ಟ್ರಗಳು ಸಂಕಷ್ಟಕ್ಕೆ ಸಿಲುಕೀತು.

ಅದನ್ನು ಗಮನಿಸಿಯೇ ಮೋದಿ, ಯುಎಇ ಬಾಂಧವ್ಯಕ್ಕೆ ವಿಶೇಷ ಮಹತ್ವ ನೀಡಿದ್ದಾರೆ. 2017ರ ಗಣರಾಜ್ಯೋತ್ಸವ ಸಂದರ್ಭದಲ್ಲಿ ಯುಎಇ ದೊರೆ ಶೇಖ್‌ ಮಹಮ್ಮದ್‌ ಬಿನ್‌ ಝಾಯೆದ್‌ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿ ಉನ್ನತ ಗೌರವ ಸಲ್ಲಿಸಿದ್ದರು. ಅಲ್ಲಿಂದ ಯುಎಇ ಸಂಬಂಧ ಬಲವಾಗುತ್ತಾ ಬಂದಿದೆ. ಇದು ಭಾರತಕ್ಕೆ ಬೇಕಾದ ಕ್ರಿಮಿನಲ್ಗಳನ್ನು ಹಣೆಯುವಲ್ಲಿ, ಭಾರತದ ಸಾಂಸ್ಕೃತಿಕ ಬೇರುಗಳನ್ನು ವಿಸ್ತರಿಸುವುದಕ್ಕೂ ಸಹಕರಿಸಿದೆ. ಆಗಸ್ಟಾ ವೆಸ್ಟ್‌ಲ್ಯಾಂಡ್‌ ಪ್ರಕರಣದ ಆರೋಪಿ ಕ್ರಿಸ್ಟೆ ೖನ್‌ ಮಿಶಲ್, ರಾಜೀವ್‌ ಸಕ್ಸೆನಾ, ದೀಪಕ್‌ ತಲ್ವಾರ್‌ ಅವರುಗಳನ್ನು ಭಾರತಕ್ಕೆ ಕೆರೆತರುವಲ್ಲಿ ಯುಎಇ ಸಹಕರಿಸಿದ ರೀತಿಯನ್ನು ನೋಡಿದಾಗ; ಅಬುಧಾಬಿ ಯಲ್ಲಿ ಹಿಂದೂಗಳು ಮಾಡ ಹೊರಟಿರುವ ಭವ್ಯ ದೇವಾಲಯಕ್ಕೆ 55 ಸಾವಿರ ಚದರ ಮೀಟರ್‌ ಜಾಗವನ್ನು ನೀಡಿರುವ ಇಲ್ಲಿನ ರಾಜನ ನಡೆಯನ್ನು ಗಮನಿಸಿದಾಗ ಎರಡೂ ದೇಶಗಳ ಮಧ್ಯೆ ವ್ಯಾಪಾರದ ಹೊರತಾಗಿ ಹೊಸ ಬಾಂಧವ್ಯದ ಶಕೆ ಆರಂಭವಾಗಿದೆ ಎಂದರೆ ಅತಿಶಯೋಕ್ತಿಯಲ್ಲ.

ಪಾಕ್‌ ಬದಲು ಭಾರತಕ್ಕೆ ಬೆಂಬಲ: ದಶಕಗಳ ಕಾಲ ಯುಎಇ ಪಾಕಿಸ್ತಾನದ ಬಹುಮುಖ್ಯ ಸಖ್ಯ ರಾಷ್ಟ್ರವಾಗಿತ್ತು. ಆದರೆ ಕಳೆದ ಐದು ವರ್ಷಗಳಲ್ಲಿ ಭಾರತ- ಪಾಕಿಸ್ತಾನದ ಮಧ್ಯೆ ತಿಕ್ಕಾಟವಾದಾಗಲೆಲ್ಲ ಭಾರತದ ಪರ ನಿಂತಿದೆ ಯುಎಇ. ಈ ವರ್ಷದ ಆರಂಭದಲ್ಲಿ ಐಒಸಿ (ಇಸ್ಲಾಮಿಕ್‌ ರಾಷ್ಟ್ರಗಳ ಸಹಕಾರಿ ಒಕ್ಕೂಟ) ರಾಷ್ಟ್ರಗಳ ಸಮಾವೇಶ ಅಬುಧಾಬಿಯಲ್ಲಿ ನಡೆದಾಗ ಭಾರತವನ್ನು ‘ಗೌರವ ಅತಿಥಿ’ಯಾಗಿ ಆಹ್ವಾನಿಸಲಾಗಿತ್ತು. ಅಂದಿನ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಭಾರತವನ್ನು ಪ್ರತಿನಿಧಿಸುವವರಿದ್ದರು. ಆದರೆ ಆ ಸಮಯದಲ್ಲಿ ಬಾಲಕೋಟ್‌ನಲ್ಲಿ ಭಾರತ ಪುಲ್ವಾಮಾ ಪ್ರತಿಕಾರದ ದಾಳಿ ಮಾಡಿದ ಸುದ್ದಿ ಕೇಳಿದ ಪಾಕಿಸ್ತಾನ ಕೆರಳಿ ಕೆಂಡವಾಗಿತ್ತು. ‘ಭಾರತ ಐಒಸಿ ಸಮಾವೇಶಕ್ಕೆ ಗೌರವ ಅತಿಥಿಯಾಗಿ ಬಂದರೆ ತಾನು ಸಮಾವೇಶದಲ್ಲೇ ಭಾಗವಹಿಸೆನು’ ಎಂದೂ ಧಮಕಿ ಹಾಕಿತ್ತು. ಆದರೆ ಯುಎಇ ಕ್ಯಾರೇ ಅನ್ನಲಿಲ್ಲ. ಸರಿಯಾಗಿ 50ವರ್ಷಗಳ ಹಿಂದೆ 1969ರಲ್ಲಿ ಐಒಸಿ ಸಮಾವೇಶ ನಡೆದಿದ್ದಾಗ, ಭಾರತವನ್ನು ಉದ್ಘಾಟನಾ ಸಮಾರಂಭಕ್ಕೆ ಕರೆದುದಕ್ಕೆ ಪಾಕಿಸ್ತಾನ ವಿರೋಧ ವ್ಯಕ್ತಪಡಿಸಿದ್ದಾಗ, ಭಾರತವನ್ನು ಅವಮಾನಿಸಿ ಐಒಸಿ ಸಮಾವೇಶದಿಂದ ಕೈಬಿಡಲಾಗಿತ್ತು. ಐಒಸಿಯಲ್ಲಿ ಇತಿಹಾಸ ಮರುಕಳಿಸಲಿದೆ ಎಂದು ಪಾಕಿಸ್ತಾನ ನಂಬಿತ್ತು. ಆದರೆ ಆದುದೇ ಬೇರೆ. ಮುಸ್ಲಿಂ ರಾಷ್ಟ್ರಗಳಿಗಾಗಿಯೇ ಇರುವ ಐಒಸಿಯಲ್ಲಿ ಮುಸ್ಲಿಂ ದೇಶ ಪಾಕಿಸ್ತಾನವನ್ನು ಬಿಟ್ಟು ಭಾರತದ ಪರ ನಿಂತಿತು ಯುಎಇ. ಈ ಅವಮಾನದಿಂದ ಪಾಕ್‌ ಸಮಾವೇಶವನ್ನು ಬಹಿಷ್ಕರಿಸಿತು. ಭಾರತ ಗೌರವ ಅತಿಥಿಯಾಗಿ ಮೆರೆಯಿತು.

ಮೊನ್ನೆ ಭಾರತ ಕಾಶ್ಮೀರವನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಕಲಂ 370 ರದ್ದು ಪಡಿಸಿದಾಗಲೂ, ಪಾಕಿಸ್ತಾನ ಯುಎಇಯ ಬೆಂಬಲ ಬಯಸಿತ್ತು. ಆದರೆ ಕೆಲವೇ ಹೊತ್ತಲ್ಲಿ ‘ಇದು ಭಾರತದ ಆಂತರಿಕ ವಿಷಯ’ ಎಂದು ಸ್ಪಷ್ಟ ಪದಗಳಲ್ಲಿ ಹೇಳಿದ ಯುಎಇ, ಭಾರತದ ನಿಲುವಿಗೆ ಜಾಗತಿಕ ಮನ್ನಣೆ ದೊರೆಯುವಂತೆ ಮಾಡಿತು. ಕಾಶ್ಮೀರ ಅಂತಾರಾಷ್ಟ್ರೀಯ ಸಮಸ್ಯೆ, ಇದು ಮುಸ್ಲಿಮರ ಮೇಲಿನ ಆಕ್ರಮಣ ಎಂಬ ದನಿಯಲ್ಲಿ ಮಾತನಾಡತೊಡಗಿದ ಪಾಕಿಸ್ತಾನಕ್ಕೆ ಮುಸ್ಲಿಂ ರಾಷ್ಟ್ರಗಳಾದ ಯುಎಇ, ಸೌದಿ ಅರೇಬಿಯಾ ಸ್ವಲ್ಪವೂ ಬೆಂಬಲಿಸ ದಿದ್ದುದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಸಿಕ್ಕ ಬಹುದೊಡ್ಡ ಗೆಲುವು. ಮುಂದಿನ ದಿನಗಳಲ್ಲಿ 75 ಶತಕೋಟಿ ಡಾಲರನ್ನು ಯುಎಇ ಭಾರತದಲ್ಲಿ ಹೂಡಿಕೆ ಮಾಡಲಿದೆ. ಕಾಶ್ಮೀರದಲ್ಲಿ ಸದ್ಯದಲ್ಲೇ ನಡೆಯಲಿರುವ ಬಂಡವಾಳ ಸಮಾವೇಶದಲ್ಲಿ ಯುಎಇ ಮತ್ತು ಸೌದಿ ಹಣ ಹೂಡಿಕೆ ಮಾಡುವ ಸಾಧ್ಯತೆಯೂ ಇದೆ. ಹಾಗೇನಾದರೂ ಆದರೆ ಮುಂದೆ ಕಾಶ್ಮೀರದ ಭಯೋತ್ಪಾದನಾ ಚಟುವಟಿಕೆಗಳಲ್ಲಿ ಕೈ ಆಡಿಸುವ ಮೊದಲು, ಪಾಕ್‌ ನೂರು ಬಾರಿ ಯೋಚಿಸಬೇಕಾದೀತು!

ಮೋದಿಗೆ ಯುಎಇ ನೀಡಿರುವ ಈ ‘ಝಾಯೆದ್‌ ಗೌರವ’ ಭಾರತಕ್ಕೆ ದೊರೆತ ರಾಜತಾಂತ್ರಿಕ ಮನ್ನಣೆ ಮಾತ್ರವಲ್ಲ, ಪಾಕಿಸ್ತಾನಕ್ಕೆ ಅರಬ್‌ ರಾಷ್ಟ್ರ ನೀಡುತ್ತಿರುವ ಸೂಕ್ಷ್ಮ ಸಂದೇಶವೂ ಹೌದು!

ಡಾ| ಶ್ರೀಶ ಪುಣಚ, ದುಬಾೖ

ಟಾಪ್ ನ್ಯೂಸ್

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ

Mangaluru: ಸಂಪರ್ಕ ಸೇತುವೆ ಇಲ್ಲದೆ ಬೋಟ್ ಮೂಲಕ ಬಂದು ಮತ ಚಲಾಯಿಸಿದ ಜನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

Happiness: ಸಂತೋಷದ ಮಾರುಕಟ್ಟೆ ಮತ್ತು ಮನಶಾಂತಿಯ ಹುಡುಕಾಟ

5-

ಸಮುದಾಯ ಪ್ರಜ್ಞೆ ಬಿತ್ತಲು ಮನೆಯೇ ಪ್ರಶಸ್ತ

1-sadsdsa

Children ಹದಿಹರೆಯ -ತಾಯಿಯ ಕರ್ತವ್ಯ

1-sadsdsad

Emotion-language-life; ಭಾವ-ಭಾಷೆ-ಬದುಕು

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

Election ಅವಿರತವಾಗಿರಲಿ ರಾಷ್ಟ್ರ ರಾಜಕೀಯ ಧಾರೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wewqewqewq

Belthangady: ಬಾಂಜಾರು ಮಲೆಯಲ್ಲಿ ದಾಖಲೆ ಶೇ.100 ಮತದಾನ

1-aaaa

Vijaypura:ರಾಹುಲ್ ಗಾಂಧಿ ನಿರ್ಗಸುವಾಗ ವೇದಿಕೆಗೆ ಬಂದ ಸಿದ್ದರಾಮಯ್ಯ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್‌.ವರಲಕ್ಷ್ಮೀ

1-sadsadad

CBI ತನಿಖೆ; ಸಂದೇಶಖಾಲಿಯಲ್ಲಿ ಬೀಡುಬಿಟ್ಟ ಕಮಾಂಡೋಗಳು; ಸುಪ್ರೀಂ ಮೆಟ್ಟಿಲೇರಿದ ಸರಕಾರ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Bantwal ಕುಮ್ಡೇಲು: ಹಳೆದ್ವೇಷದ ಹಿನ್ನೆಲೆ ಯುವಕನಿಗೆ ಚೂರಿ ಇರಿತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.