ನಿವೃತ್ತರಿಗೆ ಆಸರೆಯಾಗಬೇಕಲ್ಲವೇ ಸೈನಿಕ ಕಲ್ಯಾಣ ಇಲಾಖೆ?

Team Udayavani, Oct 4, 2019, 5:19 AM IST

ಮಾಜಿ ಸೈನಿಕರನ್ನು ಶಾಲಾ- ಕಾಲೇಜುಗಳು, ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸುತ್ತಿರುವುದನ್ನು ನಾವು ನಿತ್ಯ ಸುದ್ದಿ ಮಾಧ್ಯಮಗಳಲ್ಲಿ ಕಾಣಬಹುದು. ಆದರೆ ಇವೆಲ್ಲವುದರ ನಡುವೆಯೂ ಬೇಸರದ ವಿಷಯವೆಂದರೆ ರಾಜ್ಯ ಸರಕಾರದ ಅಧೀನದಲ್ಲಿರುವ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆಯ ಉದಾಸೀನ ಕಾರ್ಯವೈಖರಿ.

ಇತ್ತೀಚೆಗೆ ವಿಂಗ್‌ ಕಮಾಂಡರ್‌ ಮಿತ್ರಾ ಎನ್ನುವ 83 ವರ್ಷದ ನಿವೃತ್ತ ಯುದ್ಧ ವಿಮಾನ ಪೈಲಟ್‌ ಮೈಸೂರಿನಲ್ಲಿ ನಿಧನರಾದರು. ಯುದ್ಧ ವಿಮಾನದ ಹೆಸರಾಂತ ಪೈಲಟ್‌ ಓರ್ವರಿಗೆ ಅಂತಿಮ ನಮನ ಸಲ್ಲಿಸಲು ಜನರೇ ಇರಲಿಲ್ಲ ಎನ್ನುವ ಕುರಿತು ನಿವೃತ್ತ ವಿಂಗ್‌ ಕಮಾಂಡರ್‌ ಸುದರ್ಶನರವರು ಸಾಮಾಜಿಕ ಜಾಲತಾಣಗಳ ಮೂಲಕ ಆಕ್ರೋಶ ವ್ಯಕ್ತಪಡಿಸಿ¨ªಾರೆ.

ಏರ್‌ಫೋರ್ಸ್‌ ಸೆಲೆಕ್ಷನ್‌ ಬೋರ್ಡ್‌ನಂತಹ ಪ್ರತಿಷ್ಠಿತ ಸಂಸ್ಥೆ ಇರುವ ಮೈಸೂರಿನಲ್ಲಿ ಏರ್‌ಫೋರ್ಸ್‌ನ ಉನ್ನತ ಅಧಿಕಾರಿಗಳು ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಏರ್‌ಫೋರ್ಸ್‌ ಸಿಬ್ಬಂದಿ ಉಪಸ್ಥಿತರಿರುತ್ತಾರೆ. ಮೇಲಾಗಿ ಕರ್ನಾಟಕ ಸರಕಾರದ ಅಧೀನದ ಜಿಲ್ಲಾ ಸೈನಿಕ ಕಲ್ಯಾಣ ಇಲಾಖೆಯ ಉಪನಿರ್ದೇಶಕರ ಕಚೇರಿ ಸಹಾ ಮೈಸೂರಿನಲ್ಲಿ ಇದೆ. ಎಂದ ಮೇಲೆ ನಿವೃತ್ತ ಸೇನಾನಿಯ ಅಂತಿಮ ಯಾತ್ರೆಗೆ ಯಾರೊಬ್ಬರೂ ತಲುಪಲಿಲ್ಲ ಎನ್ನುವುದು ವಿಷಾದನೀಯ. ದೇಶಕ್ಕಾಗಿ ದುಡಿದ ಯೋಧರ ಬದುಕಿನ ಸಂಜೆ ದುರಂತವಾಗಬಾರದಲ್ಲವೇ?

ರಾಜಕಾರಣಿಗಳು, ಸಿನಿಮಾ ತಾರೆಯರು, ಮಠಾಧೀಶರು ನಿಧನರಾದಾಗ ಸಂಪೂರ್ಣ ಆಡಳಿತ ವ್ಯವಸ್ಥೆಯೇ ಅವರ ಅಂತಿಮ ಯಾತ್ರೆಯ ಏರ್ಪಾಡಿಗಾಗಿ ಟೊಂಕ ಕಟ್ಟಿ ನಿಲ್ಲುತ್ತದೆ. ದೇಶಕ್ಕಾಗಿ ತಮ್ಮ ಯೌವನವನ್ನೇ ತ್ಯಾಗ ಮಾಡಿದ ಸೇನಾನಿಗೆ ಗೌರವಪೂರ್ಣ ವಿದಾಯ ನೀಡಲು ನಮ್ಮ ಸಮಾಜಕ್ಕೆ ಏಕೆ ಸಾಧ್ಯವಾಗುತ್ತಿಲ್ಲ?

ಸೇವಾ ಕಾಲದಲ್ಲಿ ಸೇನೆ ತನ್ನ ಸೈನಿಕರ ಯೋಗಕ್ಷೇಮವನ್ನು ನೋಡಿಕೊಳ್ಳುತ್ತದೆ. ದೇಶದ ರಕ್ಷಣೆಗಾಗಿ ದುಡಿದ ಯೋಧರ ನಿವೃತ್ತಿಯ ನಂತರದ ಯೋಗಕ್ಷೇಮವನ್ನು ನೋಡಿಕೊಳ್ಳುವುದು ನಾಗರಿಕ ಸಮಾಜ ಹಾಗೂ ಸರಕಾರದ ಜವಾಬ್ದಾರಿ. ಇತ್ತೀಚಿನ ವರ್ಷಗಳಲ್ಲಿ ಸರಕಾರ ಮಾಜಿ ಸೈನಿಕರ ಗೌರವಾದರಗಳನ್ನು ಹೆಚ್ಚಿಸಲು ಸಾಕಷ್ಟು ಕ್ರಮಗಳನ್ನು ಕೈಗೊಂಡಿದೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಮಾಜಿ ಸೈನಿಕರನ್ನು ಶಾಲಾ- ಕಾಲೇಜುಗಳು, ಸಂಘ-ಸಂಸ್ಥೆಗಳು ಗುರುತಿಸಿ ಗೌರವಿಸುತ್ತಿ ರುವುದನ್ನು ಸುದ್ದಿ ಮಾಧ್ಯಮಗಳಲ್ಲಿ ಕಾಣಬಹುದು. ಇವೆಲ್ಲವುದರ ನಡುವೆಯೂ ಬೇಸರದ ವಿಷಯವೆಂದರೆ ರಾಜ್ಯ ಸರಕಾರದ ಅಧೀನದಲ್ಲಿರುವ ಸೈನಿಕ ಕಲ್ಯಾಣ ಹಾಗೂ ಪುನರ್ವಸತಿ ಇಲಾಖೆಯ ಉದಾಸೀನ ಕಾರ್ಯವೈಖರಿ.

ಸೇವಾ ನಿವೃತ್ತ ಸೈನಿಕರ ಯೋಗಕ್ಷೇಮ ನೋಡಿಕೊಳ್ಳಲೆಂದೇ ಸೈನಿಕ ಕಲ್ಯಾಣ ಇಲಾಖೆ ಇದೆ. ಬೆಂಗಳೂರಿನಲ್ಲಿ ಮುಖ್ಯಾಲಯ ವನ್ನು ಹೊಂದಿದ ಇಲಾಖೆ 13 ಜಿಲ್ಲಾ ಸೈನಿಕ ಕಚೇರಿಗಳನ್ನೂ ಹೊಂದಿದೆ. 35-40ರ ಕಡಿಮೆ ವಯಸ್ಸಿನಲ್ಲಿ ಸೇವೆಯಿಂದ ಮುಕ್ತರಾಗುವ ನಿವೃತ್ತ ಸೈನಿಕರಿಗೆ ಪುನರ್ವಸತಿ ಕಲ್ಪಿಸುವ, ಅವರಿಗೆ ಬೇಕಾದ ಮಾರ್ಗದರ್ಶನ ಹಾಗೂ ಸಹಾಯ ನೀಡುವುದು ಜಿಲ್ಲಾ ಸೈನಿಕ ಕಚೇರಿಯ ಸ್ಥಾಪನೆಯ ಮೂಲ ಉದ್ದೇಶ. ಆದರೆ ಈ ಕಚೇರಿಗಳ ಉನ್ನತ ಅಧಿಕಾರಿಯಿಂದ ಹಿಡಿದು ಸಾಮಾನ್ಯ ಸಿಬ್ಬಂದಿಯವರೆಗೆ ತಮ್ಮ ಕರ್ತವ್ಯದ ಕುರಿತಾದ ಸ್ಪಷ್ಟ ಕಲ್ಪನೆ ಯಾರಿಗೂ ಇದ್ದಂತಿಲ್ಲ ಎನ್ನುವುದು ವಿಷಾದನೀಯ.

ಮಾಜಿ ಸೈನಿಕರ ಮಕ್ಕಳಿಗೆ ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ದಾಖಲಾತಿ ಪಡೆಯಲು ಸಹಾಯ ಮಾಡುವ, ಸ್ಕಾಲರ್‌ಶಿಪ್‌ ಪಡೆಯಲು ಸಹಕರಿಸುವ, ಯುದ್ಧ ವಿಧವೆಯರ ಸಮಸ್ಯೆಗಳಿಗೆ ದನಿಯಾಗಬೇಕಾದ ಜಿಲ್ಲಾ ಸೈನಿಕ ಬೋರ್ಡ್‌ ಗಳಲ್ಲಿ ಕುಳಿತವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎನ್ನುವ ಕುರಿತು ದೂರು ಎÇÉೆಡೆಯಿಂದ ಕೇಳಿ ಬರುತ್ತಿದೆ. ಮಾಜಿ ಸೈನಿಕರ ಫೋನ್‌ ಕರೆಗಳಿಗೂ ಸೌಜನ್ಯದಿಂದ ಉತ್ತರಿಸುವುದಿಲ್ಲ. ಸಾಹೇಬರು ಈಗ ಬಿಜಿಯಾಗಿ¨ªಾರೆ ಆಮೇಲೆ ಕರೆ ಮಾಡಿ ಎಂದು ಉದ್ಧಟತನದಿಂದ ಉತ್ತರಿಸುತ್ತಾರೆ.

ಬೆಂಗಳೂರಿನಲ್ಲಿರುವ ಸೈನಿಕ ಕಲ್ಯಾಣ ಇಲಾಖೆಯ ನಿರ್ದೇಶಕರು ಕರ್ನಾಟಕದವರಾಗಿರಬೇಕೆಂಬ ನಿಯಮವಿದೆ. ಪ್ರಸ್ತುತ ನಿರ್ದೇಶಕರು ಪರಭಾಷೆಯವರಾಗಿದ್ದು, ಕನ್ನಡಿಗ ಮಾಜಿ ಸೈನಿಕರ ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ . ಇತರ ಜಿಲ್ಲಾ ಸೈನಿಕ ಬೋರ್ಡ್‌ಗಳಲ್ಲೂ ಹೆಚ್ಚು ಕಡಿಮೆ ಇದೇ ಸ್ಥಿತಿ ಇದೆ. ನಿವೃತ್ತ ಸೈನಿಕರ ಮಕ್ಕಳಿಗೆ ಕೊಡಮಾಡುವ ಅಲ್ಪ ಮೊತ್ತದ ಸ್ಕಾಲರ್‌ಶಿಪ್‌ ಹಣಕ್ಕಾಗಿ ದೂರದ ಊರುಗಳಿಂದ ಸ್ವತಃ ಹಾಜರಾಗಬೇಕೆಂದು ಒತ್ತಾಯಿಸಲಾಗುತ್ತದೆ. ಇನ್ನು ಕೆಲವೆಡೆ ನೌಕರಿ ಕೊಡಿಸುವುದಾಗಿ ಹೇಳಿ ನಿವೃತ್ತ ಸೈನಿಕರನ್ನು ಶೋಷಿಸಲಾಗುತ್ತದೆ. ಮಾಜಿ ಸೈನಿಕರು ಮೃತರಾದ ಸಂದರ್ಭದಲ್ಲಿ ಅವರ ಪತ್ನಿಗೆ ನ್ಯಾಯೋಚಿತವಾಗಿ ಪೆನ್ಶನ್‌ ಸಿಗಬೇಕು. ಆ ಕುರಿತು ಕುಟುಂಬಕ್ಕೆ ಸಹಾಯ ಮಾಡಬೇಕಾದದ್ದು ಜಿಲ್ಲಾ ಸೈನಿಕ ಬೋರ್ಡಿನ ಕರ್ತವ್ಯ. ಸಹಾಯ ಮಾಡುವ ಬದಲಾಗಿ ಉದ್ಯೋಗಸ್ಥ ಮಹಿಳೆಗೆ ಆಕೆಯ ಪತಿಯ ಪೆನ್ಶನ್‌ ನೀಡಲು ಬರುವುದಿಲ್ಲ ಎಂದು ವೃಥಾ ಕಿರುಕುಳ ನೀಡಿದ ಉದಾಹರಣೆ ಇದೆ.

ಜಿಲ್ಲಾ ಸೈನಿಕ ಕಚೇರಿಯ ಉಪ ನಿರ್ದೇಶಕರು ಸಾಮಾನ್ಯವಾಗಿ ಮಾಜಿ ಸೇನಾಧಿಕಾರಿಗಳೇ ಆಗಿರುತ್ತಾರೆ. ಆದರೆ ಅವರಲ್ಲಿ ಹೆಚ್ಚಿನವರು ಸಕ್ರಿಯ ಸೇನಾ ಸೇವೆಯ ಗುಂಗಿನÇÉೇ ಇದ್ದಂತೆ ಕಾಣುತ್ತಾರೆ. ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಕಚೇರಿಯಲ್ಲಿ ತಮ್ಮ ಅಧಿಕಾರದ ದರ್ಪ ತೋರಿಸುವುದನ್ನು ನಿಲ್ಲಿಸಬೇಕಾಗಿದೆ. ತಾವಿರುವುದು ಮಾಜಿ ಸೈನಿಕರಿಗೆ ಸಹಾಯ ಮಾಡಲು ಎನ್ನುವ ವಾಸ್ತವವನ್ನು ಅವರು ಅರಿಯಲಿ. ಸರಕಾರ ಕನ್ನಡಿಗ ಮಾಜಿ ಸೈನಿಕ ಅಧಿಕಾರಿಗಳನ್ನೇ ನಿರ್ದೇಶಕ ಮತ್ತು ಉಪ ನಿರ್ದೇಶಕ ಹು¨ªೆಗಳಿಗೆ ಪರಿಗಣಿಸಲಿ. ನೌಕರಿ, ಸಹಾಯ, ಮಾರ್ಗದರ್ಶನ ನಿರೀಕ್ಷಿಸಿ ಬರುವ ಮಾಜಿ ಸೈನಿಕ ಹಾಗೂ ಅವರ ಅವಲಂಬಿತರ ಸಮಸ್ಯೆಗಳನ್ನು ಸಹಾನುಭೂತಿಯಿಂದ ಸೈನಿಕ ಕಲ್ಯಾಣ ಇಲಾಖೆಯ ಅಧಿಕಾರಿ ಮತ್ತು ಸಿಬ್ಬಂದಿ ಕೇಳುವಂತಾಗಲಿ. ಉದ್ಧಟತನದಿಂದ ವರ್ತಿಸುವವರ ವಿರುದ್ಧ ಸರಕಾರ ಕ್ರಮ ಕೈಗೊಳ್ಳಲಿ.

– ಬೈಂದೂರು ಚಂದ್ರಶೇಖರ ನಾವಡ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಬೆಂಗಳೂರು: ಹಿಂಗಾರು ಮಾರುತಗಳ ಭರ್ಜರಿ ಪ್ರವೇಶ ದಿಂದ ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಮಳೆ ಅಬ್ಬರಿ ಸುತ್ತಿದೆ. ಇನ್ನೂ ಮೂರ್‍ನಾಲ್ಕು ದಿನಗಳು ಇದೇ ವಾತಾವರಣ...

  • ಏಷಿಯಾದ ಮೊದಲ "ಬಿಪಿಎಲ್‌'ಗೆ ಭಾನುವಾರ ಪ್ರಾಯೋಗಿಕ ಚಾಲನೆ ಸಿಕ್ಕಿದೆ. ಈ ಒಂದು ಪಥ ಯಶಸ್ವಿಯಾದರೆ, ನಗರ ಸಂಚಾರ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳಿಗೆ ಮುನ್ನುಡಿ...

  • ಬೆಂಗಳೂರು: ಅಲಯನ್ಸ್‌ ವಿವಿಯ ವಿಶ್ರಾಂತ ಕುಲಪತಿ ಹಾಗೂ ರಾಜಕಾರಣಿ ಡಾ.ಅಯ್ಯಪ್ಪ ದೊರೆ ಕೊಲೆ ಪ್ರಕರಣದ ಎರಡನೇ ಪ್ರಮುಖ ಆರೋಪಿ ಹಾಗೂ ಸುಪಾರಿ ಹಂತಕನಿಗೆ ಉತ್ತರ...

  • ವೀರ ಸಾವರ್ಕರ್‌ಗೆ "ಭಾರತ ರತ್ನ' ನೀಡುವ ಮಹಾರಾಷ್ಟ್ರ ಬಿಜೆಪಿ ಪ್ರಣಾಳಿಕೆಯ ಅಂಶದ ಬಗ್ಗೆ ರಾಜಕೀಯ ನಾಯಕರ ವಾಕ್ಸಮರ ಭಾನುವಾರವೂ ಮುಂದುವರಿದಿದೆ. ಇದೇ ವಿಚಾರವಾಗಿ...

  • ಬೆಂಗಳೂರು: ಅನಿಷ್ಠ ಹಾಗೂ ನಿಷೇಧಿತ ದೇವದಾಸಿ ಪದ್ಧತಿಯಿಂದ ಮುಕ್ತಿ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬಂದು ಗೌರವ ಹಾಗೂ ಘನತೆಯ ಬದುಕು ಕಟ್ಟಿಕೊಳ್ಳುತ್ತಿರುವ...