2,000 ರೂ. ಮುಖಬೆಲೆಯ ನಕಲಿ ನೋಟು ಹೆಚ್ಚಳ

ಮುದ್ರಣಗೊಂಡ 53 ದಿನಗಳಲ್ಲಿ ದೇಶಾದ್ಯಂತ ನಕಲಿ ನೋಟು

Team Udayavani, Jan 18, 2020, 5:44 AM IST

bel-16

ದೇಶದಲ್ಲಿ 1000 ಮತ್ತು 500 ರೂ. ಮುಖ ಬೆಲೆಯ ನೋಟುಗಳನ್ನು 2016ರ ನವೆಂಬರ್‌ 8ರಂದು ಅಮಾನ್ಯಿಕರಣ ಗೊಳಿಸಲಾಗಿತ್ತು. ಬದಲಿಗೆ 2000 ರೂ. ಮುಖಬೆಲೆಯ ನೋಟುಗಳನ್ನು ಪರಿಚಯಿ ಸಲಾಗಿತ್ತು. ಇದರಲ್ಲಿ ಭದ್ರತೆಗಾಗಿ ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಸುಲಭವಾಗಿ ನಕಲಿ ಮಾಡಲು ಸಾಧ್ಯವಿಲ್ಲ. ಮಾತ್ರವಲ್ಲದೇ ಇದರಿಂದ ಕಳ್ಳನೋಟುಗಳ ಹಾವಳಿ ಮತ್ತು ಕಪ್ಪುಹಣ ನಿಯಂತ್ರಣಕ್ಕೆ ಬರಲಿದೆ ಎಂದು ಕೇಂದ್ರ ಸರಕಾರ ಮಧ್ಯರಾತ್ರಿ ಮಾಡಿದ ಭಾಷಣದಲ್ಲಿ ಉಲ್ಲೇಖೀಸಿತ್ತು. ಆದರೆ ಕೇಂದ್ರ ಸರಕಾರದ ಎನ್‌ಸಿಆರ್‌ಬಿ ವರದಿ ಪ್ರಕಾರ 2017- 18ರಲ್ಲಿ ವಶಪಡಿಸಿಕೊಳ್ಳಲಾದ ಅತೀ ಹೆಚ್ಚು ನಕಲಿ ನಗದಿನಲ್ಲಿ 2 ಸಾವಿರದ ನೋಟುಗಳೇ ಹೆಚ್ಚು ಎಂದು ಹೇಳಿದೆ.

46.06 ಕೋಟಿ
2017-18ರ ಅವಧಿಯಲ್ಲಿ ವಶಪಡಿಸಿಕೊಳ್ಳಲಾದ ನಕಲಿ ನೋಟುಗಳ ಮೌಲ್ಯ ಒಟ್ಟು 46.06 ಕೋಟಿ.

ಶೇ. 56.31
ವಶಪಡಿಸಿಕೊಳ್ಳಲಾದ ಒಟ್ಟು ನೋಟು ಗಳಲ್ಲಿ 2 ಸಾವಿರ ರೂ. ಮುಖ ಬೆಲೆಯ ನೋಟು ಶೇ. 56.31.

ಯಾವ ರಾಜ್ಯಗಳಲ್ಲಿ ಶೂನ್ಯ
ಝಾರ್ಖಂಡ್‌, ಮೇಘಾಲಯ, ಸಿಕ್ಕಿಂ. ಆಗಿನ 6 ಕೇಂದ್ರಾಡಳಿತ ಪ್ರದೇಶಗಳು.

ಶೇ. 26.28
ದೇಶದಲ್ಲಿ ವಶಪಡಿಸಿಕೊಳ್ಳಲಾದ 2000 ರೂ. ಮುಖಬೆಲೆಯ ನಕಲಿ ನೋಟುಗಳಲ್ಲಿ ಶೇ. 26.28ರಷ್ಟು ಪಾಲು ಗುಜರಾತ್‌ನದ್ದು.

28.10 ಕೋಟಿ
2017ರಲ್ಲಿ ವಶಪಡಿಸಿಕೊಳ್ಳಲಾದ ನೋಟುಗಳಲ್ಲಿ 2 ಸಾವಿರ ರೂ. ಮುಖಬೆಲೆಯ ನೋಟುಗಳು ಶೇ. 53.30. ಇವುಗಳ ಒಟ್ಟು ಮೌಲ್ಯ 28.10 ಕೋಟಿ.

ಶೇ. 61.01
2018ರಲ್ಲಿ ಶೇ. 61.01ರಷ್ಟು ನಕಲಿ ನೋಟುಗಳು 2 ಸಾವಿರ ರೂ. ಮುಖಬೆಲೆಯದ್ದಾಗಿತ್ತು. ಇದು 2017ರ ಗಾತ್ರಕ್ಕಿಂತ ಹೆಚ್ಚು.

ಗುಜರಾತ್‌ನಲ್ಲಿ ಅತೀ ಹೆಚ್ಚು
ಗುಜರಾತ್‌ನಲ್ಲಿ ಅತೀ ಹೆಚ್ಚು ನಕಲಿ ನೋಟುಗಳು ಕಂಡುಬಂದಿದ್ದವು. 2000 ರೂ. ಮುಖಬೆಲೆಯ ಸುಮಾರು 34,680 ನಕಲಿ ನೋಟುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇವುಗಳ ಒಟ್ಟು ಮೌಲ್ಯ 6.93 ಕೋಟಿ.

ನೋಟ್‌ಬ್ಯಾನ್‌ನ “ಆ 53 ದಿನ’
ಪ್ರಮುಖವಾಗಿ 5 ರಾಜ್ಯಗಳಲ್ಲಿ ನೋಟ್‌ಬ್ಯಾನ್‌ ಆದ 53 ದಿನದಲ್ಲಿ ನಕಲಿ ನೋಟುಗಳು ಚಲಾವಣೆಯಲ್ಲಿದ್ದವು. ವಶಪಡಿಸಿಕೊಳ್ಳಲಾದ 2,272 ನಕಲಿ ನೋಟುಗಳ ಪೈಕಿ ಶೇ. 1,300 ನೋಟುಗಳು ಗುಜರಾತ್‌ನಲ್ಲಿದ್ದವು. ಪಂಜಾಬ್‌ನಲ್ಲಿ 548, ಕರ್ನಾಟಕ 254, ತೆಲಂಗಾಣ 114, ಮಹಾರಾಷ್ಟ್ರ 27 ಮತ್ತು ಇತರ ರಾಜ್ಯಗಳಲ್ಲಿ ಒಟ್ಟು 29 ನೋಟುಗಳು ನಕಲಿಯಾಗಿದ್ದವು. ನೋಟು ಬ್ಯಾನ್‌ ಆದ 10 ದಿನದಲ್ಲಿ ನಕಲಿ ನೋಟುಗಳು ಓಡಾಡುತ್ತಿದ್ದವು.

ಟಾಪ್‌ 4 ರಾಜ್ಯಗಳು
ಗುಜರಾತ್‌ ಬಳಿಕ ಪಶ್ಚಿಮ ಬಂಗಾಲ ದ್ವಿತೀಯ ಸ್ಥಾನದಲ್ಲಿದೆ. ಇದು ಸುಮಾರು 3.5 ಕೋಟಿ, ತಮಿಳುನಾಡು 2.8 ಕೋಟಿ, ಉತ್ತರ ಪ್ರದೇಶ 2.6 ಕೋಟಿ ಮೌಲ್ಯದ 2,000 ರೂ. ಮುಖಬೆಲೆಯ ನೋಟುಗಳನ್ನು ಹೊಂದಿದ್ದವು.

2000 ನೋಟು ಮುದ್ರಣ (ಆರ್‌ಬಿಐ ಅಂಕಿ-ಅಂಶ)
2016-173,542.991 ಮಿಲಿಯನ್‌
2017-18111.507 ಮಿಲಿಯನ್‌
2018-1946.690 ಮಿಲಿಯನ್‌

ಟಾಪ್ ನ್ಯೂಸ್

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

Lok Sabha Elections; ಊರಿನತ್ತ ಹೊರಟ ಉತ್ತರ ಕರ್ನಾಟಕ ಮಂದಿ

1-anna

BJP; ಅಸಮರ್ಥ ಅಣ್ಣಾಮಲೈ ರಾಜ್ಯ ಬಿಟ್ಟಿದ್ದು ಒಳ್ಳೆಯದಾಯಿತು: ಪ್ರಿಯಾಂಕ್‌ ಖರ್ಗೆ

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Panamburu ಮಂಗಳೂರಿಗೆ ಬಂತು 8ನೇ ಬೃಹತ್‌ ಪ್ರವಾಸಿ ಹಡಗು

Ramalinga reddy 2

BJP ಒಂದಂಕಿಗೆ ಕುಸಿತ: ಸಚಿವ ರಾಮಲಿಂಗಾ ರೆಡ್ಡಿ ಭವಿಷ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

ಮಣಿಪಾಲ ಸಂಸ್ಥೆಗಳಿಗೆ ಜಾಗತಿಕ ಸ್ಥಾನ ಕಲ್ಪಿಸಿದ ಡಾ|ರಾಮದಾಸ್‌ ಪೈ

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

MUST WATCH

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

ಹೊಸ ಸೇರ್ಪಡೆ

BJP Symbol

Madhya Pradesh: ಮತ್ತೊಬ್ಬ ಕಾಂಗ್ರೆಸ್‌ ಎಂಎಲ್‌ಎ ಬಿಜೆಪಿಗೆ

arrested

ನೂಪುರ್‌ ಶರ್ಮಾ, ಬಿಜೆಪಿ ಶಾಸಕನ ಹತ್ಯೆ ಸಂಚು: ಮೌಲ್ವಿ ಬಂಧನ

RBI

RBI; 2 ವರ್ಷದಲ್ಲಿ ಗೃಹ ಸಾಲ ಬಾಕಿ 10 ಲಕ್ಷ‌ ಕೋಟಿ ರೂ.ಗೆ ಏರಿಕೆ

1-wqeqwe

Congress; ಖರ್ಗೆ, ರಾಹುಲ್‌, ಸಿಎಂ ಸಿದ್ದು ಚಿಟ್‌ ಚಾಟ್‌ ವೀಡಿಯೋ ವೈರಲ್‌

kaadaane

Chikkamagaluru: ವನ್ಯಜೀವಿ ದಾಳಿಗೆ 5 ವರ್ಷದಲ್ಲಿ 16 ಜನರ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.