ಚುನಾವಣೆಗೆ ಸಜ್ಜಾದ ಮಹಾನಾಯಕರು ಬಿಜೆಪಿ-ಶಿವಸೇನೆಯದ್ದೇ ಜಯಭೇರಿ?

Team Udayavani, Oct 9, 2019, 5:33 AM IST

ಅಕ್ಟೋಬರ್‌ 21ಕ್ಕೆ ಮಹಾರಾಷ್ಟ್ರ, ವಿಧಾನ ಸಭಾ ಚುನಾವಣೆ ಎದುರಿಸಲಿದ್ದು, ಈಗಾಗಲೇ ಅಲ್ಲಿ ಚುನಾವಣಾ ಪ್ರಚಾರ ಭರ್ಜರಿಯಾಗಿ ಆರಂಭವಾಗಿದೆ. ಈ ಬಾರಿ ಕಣದಲ್ಲಿ ಪ್ರಮುಖ ಸ್ಪರ್ಧೆ ಇರುವುದು ಆಡಳಿತಾರೂಢ ಬಿಜೆಪಿ- ಶಿವಸೇನೆ ವರ್ಸಸ್‌ ಕಾಂಗ್ರೆಸ್‌-ಎನ್‌ಸಿಪಿಯ ನಡುವೆ.

2014ರ ವಿಧಾನ ಸಭಾ ಚುನಾವಣೆಯಲ್ಲಿ ಬಿಜೆಪಿಯೇ ಅಧಿಕ ಸ್ಥಾನಗಳನ್ನು ಗಳಿಸಿತ್ತು. ನಂತರ ಶಿವಸೇನೆಯೊಂದಿಗೆ ಮೈತ್ರಿ ಸರ್ಕಾರ ರಚಿಸಿತು. ಈ ಬಾರಿಯೂ ಇವುಗಳದ್ದೇ ಮೇಲುಗೈಯಾಗಲಿದೆಯೇ? ಅಥವಾ ಎನ್‌ಸಿಪಿ-ಕಾಂಗ್ರೆಸ್‌ ಜೋಡಿಯು ಅಚ್ಚರಿ ಮೂಡಿಸಲಿದೆಯೇ?

ಮಹಾರಾಷ್ಟ್ರದಲ್ಲಿ ಬಿಜೆಪಿಯ ಬಲ 
ಕಳೆದ 20 ವರ್ಷಗಳಲ್ಲಿ, ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗಳ ಫ‌ಲಿತಾಂಶವು, ಲೋಕಸಭಾ ಚುನಾವಣೆಯ ಮನಸ್ಥಿತಿಯನ್ನೇ ಪ್ರತಿಫ‌ಲಿಸುತ್ತಾ ಬಂದಿದೆ ( 1999ರ ವಿಧಾನಸಭಾ ಚುನಾವಣೆ ಹೊರತುಪಡಿಸಿ. ಅಂದು ರಾಷ್ಟ್ರ ಮಟ್ಟದಲ್ಲಿ ಬಿಜೆಪಿ ಗೆದ್ದು ಅಧಿಕಾರಕ್ಕೆ ಬಂದರೆ, ಮಹಾರಾಷ್ಟ್ರದಲ್ಲಿ ಕಾಂಗ್ರೆಸ್‌-ಎನ್‌ಸಿಪಿ ಮೈತ್ರಿ ಅಧಿಕಾರಕ್ಕೇರಿತ್ತು). ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಹಾರಾಷ್ಟ್ರದ 48 ಸ್ಥಾನಗಳಲ್ಲಿ 41ರಲ್ಲಿ ಗೆಲುವು ಸಾಧಿಸಿತ್ತು. 2014ರ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಮೇಲುಗೈ ಪಡೆ ದಿ ತ್ತು(48ರಲ್ಲಿ 42 ಸ್ಥಾನ ಗೆದ್ದಿ ತ್ತು.) 2014 ವಿಧಾ ನ ಸಭಾ ಚುನಾವಣೆಯು ಲೋಕಸಭಾ ಚುನಾವಣೆ ಫ‌ಲಿತಾಂಶದ ಮುಂದುವರಿಕೆಯಂತಿತ್ತು. ಹಾದ್ದರೆ 2019ರ ಲೋಕಸಭಾ ಚುನಾವಣೆಯ ಗೆಲುವಿನ ಅಲೆ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲೂ ಬೀಸಲಿದೆಯೇ?

ಬಿಜೆಪಿಯೇ ಟಾಪ್‌ 1
ಲೋಕಸಭೆ, ವಿಧಾನಸಭೆ ಚುನಾವಣೆ ಎಂದಲ್ಲ. ಈಗ ಮಹಾರಾಷ್ಟ್ರದಲ್ಲಿ ಬಿಜೆಪಿಯ ಜನಪ್ರಿಯತೆಯು ರಾಜಕಾರಣದ ಎಲ್ಲಾ ಹಂತಗಳಿಗೂ ವಿಸ್ತರಿಸಿದೆ. ಉದಾಹರಣೆಗೆ, 2017ರ ಜಿಲ್ಲಾ ಪರಿಷತ್‌ ಚುನಾವಣೆಗಳಲ್ಲಿ ಮತ್ತು ಮುನ್ಸಿಪಲ್‌ ಕಾರ್ಪೊರೇಷನ್‌ ಚುನಾವಣೆಗಳಲ್ಲೂ ಬಿಜೆಪಿಯು ಪ್ರಾದೇಶಿಕ ಪಕ್ಷಗಳಾದ ಶಿವಸೇನೆ ಮತ್ತು ಎನ್‌ಸಿಪಿಯನ್ನು ಬಹಳ ಅಂತರದಿಂದ ಹಿಮ್ಮೆಟ್ಟಿಸಿ, ಬಹುತೇಕ ಸ್ಥಾನಗಳನ್ನು ಗೆದ್ದು ಕೊಂಡಿತ್ತು. ಇನ್ನು ನಗರ ಪ್ರದೇಶಗಳಲ್ಲೀಗ ಕಾಂಗ್ರೆಸ್‌ ಮತ್ತು ಎನ್‌ಸಿಪಿ ನೆಲೆ ಕಳೆದುಕೊಂಡಿದ್ದು, 2009-2019ರವರೆಗಿನ ಲೋಕಸಭಾ ಚುನಾವಣೆಗಳ ನಡುವೆ ಶಿವಸೇನೆ ಮತ್ತು ಬಿಜೆಪಿಯ ಮತಪಾಲು 57 ಪ್ರತಿಶತಕ್ಕೇರಿದೆ(ದ್ವಿಗುಣಗೊಂಡಿದೆ). ನಗರೀಕರಣ ಹೆಚ್ಚಾಗುತ್ತಿರುವಂತೆಯೇ ಇವೆರಡೂ ಪಕ್ಷಗಳ(ಮುಖ್ಯವಾಗಿ ಬಿಜೆಪಿ) ಬಲವೂ ವೃದ್ಧಿಸುತ್ತಿದೆ.

ಜಾತಿ ಲೆಕ್ಕಾಚಾರ
ಮುಸಲ್ಮಾನ ಮತದಾರರನ್ನು ಹೊರತುಪಡಿಸಿದರೆ ಬಿಜೆಪಿ- ಶಿವಸೇನೆಯು ಬಹುತೇಕ ಎಲ್ಲಾ ಸಾಮಾಜಿಕ ಗುಂಪುಗಳಿಗೂ ತಮ್ಮ ನೆಲೆ ವಿಸ್ತರಿಸಲು ಸಫ‌ಲವಾಗಿವೆ. ಈಗ ಈ ಮೈತ್ರಿಯು ಕಾಂಗ್ರೆಸ್‌-ಎನ್‌ಸಿಪಿಯ ಸಾಂಪ್ರದಾಯಿಕ ಮತದಾರರನ್ನೂ ತನ್ನತ್ತ ಸೆಳೆದುಕೊಳ್ಳಲು ಆರಂಭಿಸಿದೆ. ಉದಾಹರಣೆಗೆ, ಮರಾಠ ಪ್ರಾಬಲ್ಯದ ಪಕ್ಷವಾಗಿರುವ ಎನ್‌ಸ ಪಿಯು 2019ರ ಲೋಕ ಸಭಾ ಚುನಾವಣೆಯಲ್ಲಿ ಕೇವಲ 28 ಪ್ರತಿಶತವಷ್ಟೇ ಮರಾಠ ಮತಗಳನ್ನು ಪಡೆದರೆ, ಅತ್ತ ಶಿವಸೇನೆ ಪಡೆದದ್ದು 39 ಪ್ರತಿ ಶತ ಮರಾಠ ಮತಗಳನ್ನು ಎನ್ನುತ್ತದೆ ಲೋಕ ನೀತಿ-ಸಿಎಸ್‌ಡಿಎಸ್‌ನ ವರದಿ.

ಇದೇ ವೇಳೆಯಲ್ಲೇ ಕಾಂಗ್ರೆಸ್‌ ಪಕ್ಷವು ತನ್ನ ಪ್ರಬಲ ಬೆಂಬಲಿಗ ವರ್ಗವಾಗಿದ್ದ ದಲಿತಮತಗಳನ್ನು ಬಿಜೆಪಿ ಮತ್ತು ವಂಚಿತ್‌ ಬಹುಜನ್‌ ಅಘಾಡಿ(ದಲಿತ ಕೇಂದ್ರಿತ ಪಕ್ಷ) ಎದುರು ಕಳೆದು ಕೊಳ್ಳಲಾರಂಭಿಸಿದೆ.

ಪ್ರತಿಪಕ್ಷಗಳ ಮೇಲೆ ಪಕ್ಷಾಂತರ ಪ್ರಹಾರ
ಕಾಂಗ್ರೆಸ್‌ -ಎನ್‌ಸಿಪಿಯ ಅನೇಕ ಘಟಾನುಘಟಿಗಳು ಶಿವ ಸೇನೆ-ಬಿಜೆಪಿ ಮೈತ್ರಿಯತ್ತ ಜಿಗಿದಿರುವುದೂ ಎದುರಾಳಿ ಪಕ್ಷಗಳಿಗೆ ತಲೆನೋವಾಗಿ ಪರಿಣಮಿಸಿದೆ. ಅದರಲ್ಲೂ ಒಂದು ಕಾಲದಲ್ಲಿ ಪ್ರತಿಪಕ್ಷ ನಾಯಕರಾಗಿದ್ದ, ಕಾಂಗ್ರೆಸ್‌ನ ವಿಖೆ ಪಾಟೀಲ್‌, ಕಾಂಗ್ರೆಸ್‌ ಮಾಜಿ ಎಂಎಲ್‌ಎ ನಿತೇಶ್‌ ರಾಣೆ, ನವಿ ಮುಂಬಯಿಯ ಎನ್‌ಸಿಪಿಯ ಪ್ರಭಾವಿ ನಾಯಕರಾಗಿದ್ದ ಗಣೇಶ್‌ ನಾೖಕ್‌, ಪುಣೆಯ ಬಲಾಡ್ಯ ಕಾಂಗ್ರೆಸ್‌ ನಾಯಕ ಹರ್ಷವರ್ಧನ ಪಾಟೀಲ್‌ ಕೇಸರಿ ಪಾಳಯಕ್ಕೆ ಜಿಗಿದಿರುವ ಪ್ರಮುಖ ನಾಯಕರು. ಇದಕ್ಕೂ ಮೊದಲು ವೈಭವ್‌ ಪಿಛಡ್‌, ಶಿವೇಂದ್ರ ಭೋಸಲೆ, ಕಾಳಿದಾಸ್‌ಕೊಳಂಬಕರ್‌, ಸಚಿನ್‌ ಅಹಿರ್‌…ಹೀಗೆ ಪಕ್ಷಾಂತರ ಮಾಡಿರುವ ಪಟ್ಟಿ ಮುಂದುವರಿಯುತ್ತದೆ. ಇವರ ಪಕ್ಷಾಂತರ ವಿಪಕ್ಷ ಕೂಟಕ್ಕೆ ಖಂಡಿತ ಹಾನಿ
ಮಾಡಲಿದೆ.

ಶಿವಸೇನೆ-ಬಿಜೆಪಿ ನಡುವಿನ ತಿಕ್ಕಾಟ: ಶಿವಸೇನೆ ಅನೇಕ ಸಂದರ್ಭಗಳಲ್ಲಿ ಬಿಜೆಪಿ ನ್ನು ಬಹಿರಂಗವಾಗಿ ಟೀಕ ಸುತ್ತಾ ಬಂದಿದೆಯಾದರೂ, ಈ ವಿಚಾರದಲ್ಲಿ ಲಾಭ ಮಾಡಿ ಕೊಳ್ಳಲು ಪ್ರತಿ ಪಕ್ಷಗಳು ವಿಫ‌ಲವಾಗಿವೆ. ಬಿಜೆ ಪಿಯು ಮಹಾರಾಷ್ಟ್ರದಲ್ಲಿ ಬಲಿಷ್ಠವಾಗಿ ಬೆಳೆದಿದ್ದರೂ, ಅದು ಶಿವಸೇನೆಯನ್ನು ಕಡೆಗಣಿಸದೇ, ಎಂದಿನಂತೆ ಅದರ
ಮನವೊಲಿಸುವಲ್ಲಿ ಸಫ‌ಲವಾಗಿದೆ(ಮುಖ್ಯವಾಗಿ ಸೀಟು ಹಂಚಿಕೆ ವಿಚಾರದಲ್ಲಿ).

ವಿದರ್ಭ-ಮರಾಠವಾಡ ಯಾರಿಗೆ ಮೇಲುಗೈ?
ಹೆಚ್ಚಾಗಿ ಕೃಷಿಯನ್ನೇ ಆಧರಿಸಿರುವ ಮಹಾರಾಷ್ಟ್ರದ ವಿದರ್ಭ ಮತ್ತು ಮರಾಠವಾಡದ ಜನರು ಪಶ್ಚಿಮ ಮಹರಾಷ್ಟ್ರದವರಿಗೆ ಹೋಲಿಸಿದರೆ ಎಲ್ಲಾ ರೀತಿಯಿಂದಲೂ ತುಂಬಾ ಹಿಂದುಳಿದಿದ್ದಾರೆ.

ರೈತರ ಆತ್ಮಹತ್ಯೆ ಪ್ರಕರಣಗಳಂತೂ ನಿತ್ಯ ಸುದ್ದಿಯಾಗುತ್ತಲೇ ಇರುತ್ತವೆ. ಈ ಪ್ರದೇಶಗಳಲ್ಲಿ ಎನ್‌ಸಿಪಿ ಬೆಳೆದು ನಿಲ್ಲಬಹುದಾಗಿತ್ತು. ಆದರೆ ಈ ಭಾಗಗಳಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಗೇ ಮೇಲುಗೈಯಾಗುತ್ತದೆ ಎನ್ನುತ್ತಾರೆ ರಾಜಕೀಯ ಪಂಡಿತರು.
“”ಬಹುತೇಕ ಕೃಷಿ ಸಂಬಂಧಿ ಸಂಕಷ್ಟಗಳು ಇಂದಿಗೂ ಇವೆಯಾದರೂ, ಈ ಪ್ರದೇಶದ ಜನರಿಗೆ ಬಿಜೆಪಿ ನೇತೃತ್ವದ ಸರ್ಕಾರ ಕೃಷಿ ಸಂಬಂಧಿ ನೀತಿಗಳ ಅನುಷ್ಠಾನದಲ್ಲಿ ತೋರಿಸುತ್ತಿರುವ ಸಕ್ರಿಯತೆ ಇಷ್ಟವಾಗಿದೆ. ಪ್ರಧಾನ ಮಂತ್ರಿ ಕಿಸಾನ್‌ ಯೋಜನೆಯ ಅನುಷ್ಠಾನ, ಕಬ್ಬು ಬೆಳೆಗಾರರಿಗೆ ಬಾಕಿ ಪಾವತಿ ವಿತರಣೆಯ ವಿಚಾರದಲ್ಲಿ ಫ‌ಡ್ನವಿಸ್‌ ಸರ್ಕಾರದ ಯಶಸ್ವಿ ಕಾರ್ಯ ವೈಖರಿಯು ರೈತರ ಮೆಚ್ಚುಗೆ ಗಳಿಸುತ್ತಿ ದೆ’ ಎನ್ನುತ್ತಾರೆ ರಾಜಕೀಯ ವಿಶ್ಲೇಷಕ ಸುದೇಶ್‌ ಕುಲಕರ್ಣಿ. ಅದರಲ್ಲೂ ಮುಖ್ಯವಾಗಿ ವಿದರ್ಭ ಕ್ಷೇತ್ರ ದಲ್ಲಿ ಕಬ್ಬು ಬೆಳೆಗಾರರು ತಮ್ಮ ಪ್ರದೇಶದವರೇ ಆದ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವಿಸ್‌ ಅವರನ್ನು ಬೆಂಬಲಿಸುತ್ತಿದ್ದಾರಂತೆ.

ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಉದ್ಯಮಿಗಳು ಈಗ ತಮ್ಮ ಬೆಂಬಲವನ್ನು ಬಿಜೆಪಿ- ಶಿವಸೇನೆಯತ್ತ ಹರಿಸಿರುವುದರಿಂದ, ಎನ್‌ಸಿಪಿಯ ಕೊನೆಯ ಭದ್ರ ಕೋಟೆಗೂ ದೊಡ್ಡ ಪೆಟ್ಟು ಬಿದ್ದಂತಾಗಿದೆ.

2018ರ ಚುನಾವಣೆಯಲ್ಲಿ ರಾಜಸ್ಥಾನ, ಮಧ್ಯ ಪ್ರದೇಶ, ಛತ್ತೀಸ್‌ಗಢದ ವಿಧಾನ ಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದ ಕಾಂಗ್ರೆಸ್‌ ಇದೇ ಸಾಧನೆಯನ್ನೇ ತಾನು ಮಹಾ ರಾಷ್ಟ್ರದಲ್ಲೂ ತೋರುವುದಾಗಿ ಹೇಳುತ್ತಿದೆ. ಫ‌ಡ್ನವಿಸ್‌ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆಯಿದ್ದು, ಈ ಬಾರಿ ತಮಗೇ ಗೆಲುವು ಎಂದು ಹೇಳುತ್ತಾರೆ ಮಹಾರಾಷ್ಟ್ರ ಕಾಂಗ್ರೆಸ್‌ ನಾಯಕರು. ಮಹಾರಾಷ್ಟ್ರದಲ್ಲಿ ಅಕ್ಟೋಬರ್‌ 21ಕ್ಕೆ ಮತದಾನ ಹಾಗೂ ಅಕ್ಟೋಬರ್‌ 24ರಂದು ಮತ ಎಣಿಕೆ ನಡೆಯಲಿದೆ.

(ಪೂರಕ ಮಾಹಿತಿ-ನ್ಯೂಸ್‌ ಮಿನಟ್‌)

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ