ಬಾಳಿನ ಹಲವು ಪ್ರಯೋಜನಗಳ, ಮನೋಸ್ವಾಸ್ಥ್ಯದ ಯೋಗಾಯೋಗ!

ಜೀವನ ಪಯಣವನ್ನು ಪ್ರಶಾಂತವಾಗಿಸುವ ಲಾಭಗಳ ಅವಲೋಕನ

Team Udayavani, Jun 17, 2019, 5:00 AM IST

ಯೋಗದಿಂದ ದೈಹಿಕ ಸ್ತರದಲ್ಲಿ ಮಾತ್ರ ಲಾಭ ಸಿಗುತ್ತದೆ ಎಂದು ಕೆಲವರು ಕೊಳ್ಳುತ್ತಾರೆ. ಆದರೆ ಯೋಗವು ದೇಹ, ಮನಸ್ಸು ಮತ್ತು ಉಸಿರನ್ನು ಐಕ್ಯವಾಗಿಸಿ ಅಪಾರ ಲಾಭವನ್ನು ಉಂಟು ಮಾಡುತ್ತದೆ.

ಯೋಗಾಭ್ಯಾಸದ ಪ್ರಯೋಜನಗಳೇನು ಎನ್ನುವ ಪ್ರಶ್ನೆ ಎಲ್ಲರ ತಲೆಯಲ್ಲೂ ಇರುತ್ತದೆ. ಯೋಗದಿಂದ ಅನೇಕಾನೇಕ ಪ್ರಯೋ ಜನಗಳು ಇವೆ. ತೂಕವನ್ನು ಕಳೆದುಕೊಳ್ಳಲು, ಬಲಿಷ್ಠವಾದ, ಬಾಗಿ-ಬಳಕುವ(ಫ್ಲೆಕ್ಸಿಬಲ್‌) ದೇಹವನ್ನು ಪಡೆಯಲು, ಸುಂದ ರ ವಾದ ಹೊಳೆಯುವ ಚರ್ಮವನ್ನು ಹೊಂದಲು, ಮನಸ್ಸನ್ನು ಪ್ರಶಾಂತವಾಗಿರಿಸಲು ಯೋಗವು ಸಹಾಯ ಮಾಡುತ್ತದೆ. ಬಹಳಷ್ಟು ಮಂದಿ ಯೋಗವನ್ನು ಅರೆಬರೆ ಅರ್ಥಮಾಡಿಕೊಂಡಿ ರುತ್ತಾರೆ. “ಯೋಗವೆಂದರೆ ಕೇವಲ ಆಸನಗಳು ಅಥವಾ ಭಂಗಿಗಳು, ಅದರಿಂದ ಕೇವಲ ದೈಹಿಕ ಸ್ತರದಲ್ಲಿ ಮಾತ್ರ ಲಾಭ ಸಿಗುತ್ತದೆ’ ಎಂದುಕೊಳ್ಳುತ್ತಾರೆ. ಆದರೆ ಯೋಗವು ದೇಹ, ಮನಸ್ಸು ಮತ್ತು ಉಸಿರನ್ನು ಐಕ್ಯವಾಗಿಸಿ ಅಪಾರ ಲಾಭವನ್ನು ಉಂಟು ಮಾಡುತ್ತದೆ. ಇವು ಮೂರೂ ಸಾಮರಸ್ಯದಲ್ಲಿದ್ದಾಗ ಜೀವನದ ಪಯಣ ಪ್ರಶಾಂತವಾಗಿರುತ್ತದೆ, ಸಂತಸದಿಂದ ತುಂಬಿರುತ್ತದೆೆ ಮತ್ತು ಹೆಚ್ಚು ತೃಪ್ತಿದಾಯಕವಾಗಿರುತ್ತದೆ.

ಯೋಗದ ಪ್ರಯೋಜನಗಳನ್ನು ಸಂಕ್ಷಿಪ್ತವಾಗಿ ಹೀಗೆ ಕಟ್ಟಿ ಕೊಡಬಹುದು: ಸರ್ವಾಂಗೀಣ ದೇಹದ ಸುಸ್ಥಿತಿ, ತೂಕ ತಗ್ಗುವಿಕೆ, ಒತ್ತಡ ನಿವಾರಣೆ, ಆಂತರಿಕ ಶಾಂತಿ, ರೋಗ ನಿರೋ ಧಕ ವ್ಯವಸ್ಥೆಯಲ್ಲಿ ಸುಧಾರಣೆ, ಹೆಚ್ಚಿನ ಅರಿವಿನಿಂದ ಜೀವಿಸು ವುದು, ಸಂಬಂಧಗಳಲ್ಲಿ ಸುಧಾರಣೆ, ಹೆಚ್ಚಿನ ಮನೋದೈಹಿಕ ಶಕ್ತಿ, ಉತ್ತಮ ದೇಹ ಸ್ಥಿತಿ ಮತ್ತು ಭಂಗಿ (ಪೋಸರ್‌) ಮತ್ತು ಉತ್ತಮ ಅಂತದೃಷ್ಟಿ.ಇವಷ್ಟೇ ಅಲ್ಲದೇ ಇನ್ನಷ್ಟು ಲಾಭಗಳನ್ನೂ ಯೋಗದಿಂದ ಪಡೆಯಬಹುದು.

ಯೋಗದ ಹತ್ತು ಪ್ರಮುಖ ಪ್ರಯೋಜನಗಳು
1 .ಸರ್ವಾಂಗೀಣ ದೇಹದ ಸುಸ್ಥಿತಿ: ಶ್ರೀ ಶ್ರೀ ರವಿಶಂಕರರು, “”ಆರೋಗ್ಯವೆಂದರೆ ಕೇವಲ ಅನಾರೋಗ್ಯವಿಲ್ಲದ ಸ್ಥಿತಿಯಲ್ಲ. ಅದು ಜೀವನದ ಕ್ರಿಯಾಶೀಲವಾದ ಅಭಿವ್ಯಕ್ತಿ, ನೀವೆಷ್ಟು ಸಂತೋಷವಾಗಿರುವಿರಿ, ಪ್ರೇಮಮಯಿಗಳಾಗಿರು ವಿರಿ, ಉತ್ಸಾಹಿಗಳಾಗಿರುವಿರಿ ಎಂಬುದರ ಸೂಚಕ” ಎನ್ನುತ್ತಾರೆ. ಯೋಗಾಸನ, ಪ್ರಾಣಾಯಾಮ ಮತ್ತು ಧ್ಯಾನವು ಸರ್ವಾಂಗೀಣ ಸುಸ್ಥಿತಿಯನ್ನು ಉಂಟು ಮಾಡುವ ಅಂಶಗಳು. ಯೋಗದ ನಿತ್ಯಾಭ್ಯಾಸದಿಂದ ಅನೇಕ ಲಾಭಗಳುಂಟಾಗುತ್ತವೆ. ಅವುಗಳಲ್ಲಿ ಪ್ರಮುಖವಾದವೆಂದರೆ: ಆರೋಗ್ಯದಲ್ಲಿ ಸುಧಾರಣೆ, ಮಾನಸಿಕ ಬಲ ಹೆಚ್ಚುತ್ತದೆ, ದೈಹಿಕ ಬಲ ವರ್ಧಿಸುತ್ತದೆ, ಗಾಯಗಳಾಗು ವುದರಿಂದ ತಪ್ಪಿಸುತ್ತದೆ, ದೇಹದಲ್ಲಿನ ವಿಷಕಾರಿ ಪದಾರ್ಥಗಳನ್ನು ಹೊರಕ್ಕೆಸೆಯುತ್ತದೆ
2. ತೂಕ ಕಳೆದುಕೊಳ್ಳಲು ಯೋಗ: ಸೂರ್ಯ ನಮಸ್ಕಾರ ಮತ್ತು ಕಪಾಲಭಾತಿ ಪ್ರಾಣಾಯಾಮ ತೂಕ ಕಳೆದುಕೊಳ್ಳಲು ಬಲು ಉಪಯುಕ್ತಕರ. ಅದಲ್ಲದೆ ನಿತ್ಯ ಯೋಗಾಭ್ಯಾಸದಿಂದ ನಾವು ನಮ್ಮ ದೇಹದ ಕುರಿತು ಹೆಚ್ಚು ಅರಿವನ್ನು ಪಡೆಯುತ್ತೇವೆ ಮತ್ತು ಅದರ ಅವಶ್ಯಕತೆಗಳ ಬಗ್ಗೆ ಹೆಚ್ಚು ಸೂಕ್ಷ್ಮರಾಗುತ್ತೇವೆ. ಇದರಿಂದ ನಾವು ತಿನ್ನುವ ಆಹಾರ ಮತ್ತು ದೇಹದ ತೂಕದ ಮೇಲೆ ಕಣ್ಣಿಡುವಂತಾಗುತ್ತದೆ.
3.ಒತ್ತಡ ನಿವಾರಣೆಗಾಗಿ ಯೋಗ: ಪ್ರತಿನಿತ್ಯ ಕೆಲವು ನಿಮಿಷಗಳ ಕಾಲ ಯೋಗ ಮಾಡಿದರೆ, ಅದರಿಂದ ನಮ್ಮ ದೇಹ ಮತ್ತು ಮನಸ್ಸಿನಲ್ಲಿ ನಿತ್ಯ ಶೇಖರಣೆಯಾಗುವ ಒತ್ತಡದ ಬಿಡುಗಡೆಯಾಗುತ್ತದೆ. ಯೋಗಾಸನಗಳು, ಪ್ರಾಣಾಯಾಮ ಮತ್ತು ಧ್ಯಾನದಿಂದ ಒತ್ತಡವು ಪರಿಣಾಮಕಾರಿಯಾ ಬಿಡುಗಡೆಯಾಗುತ್ತದೆ.
4.ಆಂತರಿಕ ಶಾಂತಿಗಾಗಿ ಯೋಗ: ನಾವೆಲ್ಲರೂ ಪ್ರಶಾಂತ ವಾದ, ಸುಂದರವಾದ ತಾಣಗಳಿಗೆ ಭೇಟಿ ನೀಡಲು ಇಷ್ಟಪಡುತ್ತೇವೆ. ಆದರೆ ಶಾಂತಿ ನಮ್ಮೊಳಗೇ ಇದೆಯೆಂದು ಅರಿತರೆಷ್ಟು ಚೆನ್ನ! ಈ ಅರಿವು ಬೆಳೆದರೆ, ಆಗ ಅಲ್ಪ ವಿರಾಮವನ್ನು ತೆಗೆದುಕೊಂಡು, ದಿನದ ಯಾವುದೇ ಸಮಯದಲ್ಲೂ ಇದನ್ನು ಅನುಭವಿಸಬಹುದು! ಪ್ರತಿನಿತ್ಯ ಸಣ್ಣ ಬಿಡುವು ಮಾಡಿಕೊಂಡು ಯೋಗ ಮತ್ತು ಧ್ಯಾನವನ್ನು ಮಾಡಬೇಕು. ಗೊಂದಲದಲ್ಲಿರುವ ಮನಸ್ಸನ್ನು ಪ್ರಶಾಂತಗೊಳಿಸಲು ಯೋಗವು ಅತ್ಯುತ್ತಮವಾದ ದಾರಿ.
5.ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಯೋಗ: ನಮ್ಮ ವ್ಯವಸ್ಥೆಯಲ್ಲಿ ದೇಹ, ಮನಸ್ಸು ಮತ್ತು ಆತ್ಮ ಒಂದಾಗಿ ಹೆಣೆಯಲ್ಪಟ್ಟಿದೆ. ದೇಹದಲ್ಲಿ ಅಸಮತೋಲನ, ತೊಂದರೆ ಉಂಟಾದರೆ ಅದು ಮನಸ್ಸನ್ನು ಬಾಧಿಸುತ್ತದೆ ಮತ್ತು ಮನಸ್ಸಿನಲ್ಲಿ ಅಹಿತ ಭಾವನೆ ಅಥವಾ ಚಡಪಡಿಕೆಯಿದ್ದರೆ, ಅದು ದೇಹದಲ್ಲಿ ರೋಗವಾಗಿ ಪ್ರಕಟವಾಗುತ್ತದೆ. ಯೋಗಾಸನಗಳು ಅವ ಯವಗಳನ್ನು ತೀಡುತ್ತವೆ ಮತ್ತು ಸ್ನಾಯುಗಳನ್ನು ಬಲಪಡಿಸುತ್ತವೆ. ಉಸಿರಾಟದ ಪ್ರಕ್ರಿಯೆಗಳು ಮತ್ತು ಧ್ಯಾನ ಒತ್ತಡವನ್ನು ನಿವಾರಣೆ ಮಾಡಿ ರೋಗನಿರೋಧಕ ವ್ಯವಸ್ಥೆಯನ್ನು ಸುಧಾರಿಸುತ್ತದೆ.
6.ಹೆಚ್ಚು ಜಾಗೃತವಾಗಿರಲು ಯೋಗ: ಮನಸ್ಸು ಸದಾ ಕಾರ್ಯದಲ್ಲಿ ನಿರತವಾಗಿರುತ್ತದೆ. ಗತದಿಂದ ಭವಿಷ್ಯಕ್ಕೆ ಓಡುತ್ತಲೇ ಇರುತ್ತದೆ. ಎಂದಿಗೂ ವರ್ತಮಾನದಲ್ಲಿ ಇರುವು ದಿಲ್ಲ. ಮನಸ್ಸಿನ ಈ ಪ್ರವೃತ್ತಿಯ ಬಗ್ಗೆ ಅರಿವನ್ನು ಹೊಂದು ವುದರಿಂದ ನಾವು ಒತ್ತಡಕ್ಕೆ, ಉದ್ರೇಕಕ್ಕೆ ಒಳಗಾಗುವುದನ್ನು ತಪ್ಪಿಸಬಹುದು. ಯೋಗ ಮತ್ತು ಪ್ರಾಣಾಯಾಮದಿಂದ ಆ ಅರಿವು ಉಂಟಾಗುತ್ತದೆ ಮತ್ತು ಮನಸ್ಸು ವರ್ತಮಾನದಲ್ಲಿ ನಿಲ್ಲುತ್ತದೆ. ವರ್ತಮಾನದಲ್ಲಿದ್ದಾಗ ಮನಸ್ಸು ಏಕಾಗ್ರವಾಗಿ, ಸಂತೋಷದಿಂದಿರುತ್ತದೆ.
7.ಉತ್ತಮ ಸಂಬಂಧಗಳಿಗಾಗಿ ಯೋಗ: ಯೋಗದಿಂದ ನಿಮ್ಮ ಪ್ರೀತಿಪಾತ್ರರೊಡನೆ ನೀವು ಹೊಂದಿರುವ ಸಂಬಂಧ ಸುಧಾರಿಸುತ್ತದೆ. ಸಂತೋಷದಿಂದಿರುವ ಮತ್ತು ತೃಪ್ತ ವಾಗಿರುವ ಮನಸ್ಸು ಸಂಬಂಧಗಳಲ್ಲಿನ ಸೂಕ್ಷ್ಮವಿಷಯಗಳನ್ನು ನಿಭಾಯಿಸಬಲ್ಲದು. ಯೋಗ ಮತ್ತು ಧ್ಯಾನದಿಂದ ಮನಸ್ಸನ್ನು ಸಂತೋಷವಾಗಿಡಿ, ಶಾಂತಿಯಿಂದ ಇರಿ. ಆಗ ನಿಮ್ಮ ಸುತ್ತಲೂ ಇರುವ ಸಂಬಂಧಗಳು ಹೇಗೆ ಅರಳುತ್ತವೆಂದು ನೋಡಿ.
8.ಶಕ್ತಿಯನ್ನು ವರ್ಧಿಸಲು ಯೋಗ: ದಿನದ ಕೊನೆಯಲ್ಲಿ ಎಲ್ಲಾ ಶಕ್ತಿಯೂ ಹೊರಟು ಹೋಗಿದೆಯೆಂದು ಅನಿಸುತ್ತದೆಯೆ? ಎಲ್ಲಾ ಕೆಲಸಗಳನ್ನೂ ಮಾಡಿ, ನಿರಂತರವಾಗಿ ಅನೇಕ ಕೆಲಸಗಳನ್ನು ಒಮ್ಮೆಲೇ ಮಾಡಿ ದಣಿಯುವುದು ಸಹಜ. ಪ್ರತಿದಿನ ಕೆಲವು ನಿಮಿಷಗಳ ಯೋಗಾಭ್ಯಾಸ ಮಾಡಿದರೆ ನಮ್ಮ ಶಕ್ತಿ ವರ್ಧಿಸುತ್ತದೆ, ನಮ್ಮನ್ನು ತಾಜಾ ಆಗಿ ಇಡುತ್ತದೆ.
9.ಫ್ಲೆಕ್ಸಿಬಲ್‌ ದೇಹಕ್ಕಾಗಿ ಮತ್ತು ಭಂಗಿಗಾಗಿ ಯೋಗ: ಬಲಿಷ್ಠವಾದ, ಮೃದುವಾದ ಮತ್ತು ನಮ್ಯವಾದ ದೇಹ ನಿಮಗೆ ಬೇಕೆಂದರೆ, ಯೋಗ ನಿಮ್ಮ ದಿನಚರಿಯ ಭಾಗವಾಗಬೇಕು. ನಿತ್ಯ ಯೋಗಾಭ್ಯಾಸ, ವ್ಯಾಯಾಮ ದೇಹದ ಸ್ನಾಯುಗಳನ್ನು ವಿಸ್ತಾರ ಮಾಡಿ, ದೇಹವನ್ನು ಸುಸ್ಥಿತಿಯಲ್ಲಿಡು ತ್ತದೆ ಮತ್ತು ದೇಹವನ್ನು ಬಲಿಷ್ಠವಾಗಿಡುತ್ತದೆ. ನೀವು ನಿಂತಾಗ, ಕುಳಿತಾಗ, ನಿದ್ದೆ ಮಾಡಿದಾಗ ಅಥವಾ ನಡೆಯುತ್ತಿರುವಾಗ ನಿಮ್ಮ ದೇಹದ ಭಂಗಿಯನ್ನು ಸುಧಾರಿಸುತ್ತದೆ. ಇದರಿಂದ ತಪ್ಪಾದ ಭಂಗಿಯಿಂದ ಉಂಟಾಗುವ ದೇಹದ ನೋವಿನ ನಿವಾರಣೆಯಾಗುತ್ತದೆ.
10.ಅಂತದೃಷ್ಟಿ ಸುಧಾರಿಸಲು ಯೋಗ: ಯೋಗ ಮತ್ತು ಧ್ಯಾನಕ್ಕೆ ನಿಮ್ಮ ಅಂತದೃಷ್ಟಿಯ ಸಾಮರ್ಥ್ಯವನ್ನು ಹೆಚ್ಚಿಸುವ ಶಕ್ತಿಯಿದೆ. ಇದರಿಂದಾಗಿ ಏನು ಮಾಡಬೇಕು, ಯಾವಾಗ ಮಾಡಬೇಕು, ಹೇಗೆ ಮಾಡಬೇಕು ಎಂದು ನಿಮಗೆ ಸ್ವಯಂಸು#ರಿತವಾಗಿ ತಿಳಿಯುತ್ತದೆ. ಇದರಿಂದ ಸಕಾರಾತ್ಮಕವಾದ ಫ‌ಲಿತಾಂಶಗಳು ಸಿಗುತ್ತವೆ. ಯೋಗ ಒಂದು ನಿರಂತರವಾದ ಪ್ರಕ್ರಿಯೆ ಎಂದು ನೆನಪಿಡಿ. ಆದ್ದರಿಂದ ಅಭ್ಯಾಸ ಮಾಡುತ್ತಲಿರಿ! ಯೋಗಾಭ್ಯಾಸದೊಳಗೆ ಆಳವಾಗಿ ಹೊಕ್ಕಷ್ಟೂ ಅದರ ಲಾಭಗಳೂ ಗಹನವಾಗಿರುತ್ತವೆ.
ಸೂಚನೆ: ಯೋಗಾಭ್ಯಾಸವನ್ನು ಮಾಡುವುದರಿಂದ ದೇಹ ಮತ್ತು ಮನಸ್ಸಿನ ಅಭಿವೃದ್ಧಿಯಾಗುತ್ತದೆಯಾದರೂ ಅದು ಔಷಧಿಗೆ ಪರ್ಯಾಯವಲ್ಲ. ಯೋಗವನ್ನು ತರಬೇತಿ ಪಡೆದ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲೇ ಕಲಿತು ಅಭ್ಯಾಸ ಮಾಡಬೇಕು. ನಿಮಗೇನಾದರೂ ಆರೋಗ್ಯದ ಸಮಸ್ಯೆಗಳಿದ್ದಲ್ಲಿ, ನಿಮ್ಮ ವೈದ್ಯರ ಹಾಗೂ ಯೋಗ ಶಿಕ್ಷಕರ ಸಲಹೆಯನ್ನು ಪಡೆದ ನಂತರವೇ ಯೋಗಾಭ್ಯಾಸವನ್ನು ಮಾಡಿ.

-ಕಮಲೇಶ್‌ ಬರ್ವಾಲ್‌
ಯೋಗ ತರಬೇತುದಾರರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಸೃಷ್ಟಿ, ಸ್ಥಿತಿ ಮತ್ತು ಲಯಗಳ ದೈವಸ್ವರೂಪವೇ ಬ್ರಹ್ಮ, ವಿಷ್ಣು ಮತ್ತು ಶಿವ. ಇವುಗಳಲ್ಲಿ ಲಯಕಾರಕನಾದ ಶಿವನ ಸ್ಮರಣೆಗೆ ವಿಶೇಷವಾದ ದಿನವಿದು. ಭಕ್ತರೆಲ್ಲ ಉಪವಾಸ,...

  • ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಫೆಬ್ರವರಿ 24ರಿಂದ ಎರಡು ದಿನ ಭಾರತ ಪ್ರವಾಸ ಕೈಗೊಳ್ಳಲಿದ್ದಾರೆ. ಮೊದಲ ದಿನ ಅವರು ಗುಜರಾತ್‌ನ ಅತಿದೊಡ್ಡ ನಗರವಾದ ಅಹಮದಾಬಾದ್‌ಗೆ...

  • ಲೇಖನ ಪ್ರಕಟವಾದ ಸಂಭ್ರಮ ಮಡಿಲ ಮಗು ಕಣ್ಣು ತೆರೆದಾಗ ಮೊದಲು ಅಮ್ಮನ ಮುಖ ನೋಡಿ ದಂತೆ ನಾನು ಓದಿದ ಮೊದಲ ಪತ್ರಿಕೆ ಉದಯವಾಣಿ. ಪತ್ರಿಕೆಯನ್ನು ಕೊಂಡು ಓದಲು ಶಕ್ತಿ...

  • ಪ್ರಯೋಗಾಲಯಗಳಲ್ಲಿ ವಿಜ್ಞಾನಿಗಳು ಕಂಡುಕೊಂಡಿರುವುದೇನೆಂದರೆ, ಹೆಚ್ಚು ಚಿಂತೆ ಮಾಡುವವರಲ್ಲಿ ಹೆಚ್ಚು ಖನ್ನತೆ ಸಂಬಂಧಿ ಸಮಸ್ಯೆಗಳು ಅಧಿಕವಾಗುತ್ತವೆ ಹಾಗು...

  • ತಂದೆ ತಾಯಂದಿರ ಯೋಚನಾ ಕ್ರಮವೇ ಮಕ್ಕಳ ಅಭಿರುಚಿ, ಆಸಕ್ತಿಯನ್ನು ರೂಪಿಸುತ್ತದೆ. ಮುಂದೆ ಅವರ ಭವಿಷ್ಯವನ್ನು ಕೂಡ. ಮಕ್ಕಳನ್ನು ಹೇಗೆ ಮತ್ತು ಯಾವುದಕ್ಕಾಗಿ ಬೆಳೆಸಬೇಕು...

ಹೊಸ ಸೇರ್ಪಡೆ