ತೊರೆದು ಜೀವಿಸಬಹುದೇ, ನಮ್ಮ ಮೂಲ ಸಂಸ್ಕೃತಿಯ..?!

Team Udayavani, Aug 1, 2021, 2:09 PM IST

Sanathan Dharma Bhojan Vidhi Also has scientific reason

ಪ್ರಾತಿನಿಧಿಕ ಚಿತ್ರ

ಊಟ ಮಾಡುವುದು ಕೇವಲ ಒಂದು ಚಟುವಟಿಕೆ ಎಂದಾಗಿರುವ ಈ ಕಾಲದಲ್ಲಿ , ನೆಲದ ಮೇಲೆ ಕುಳಿತು ಊಟ ಮಾಡುವುದು ಎಂದರೆ ಕಷ್ಟದ ಕೆಲಸದಂತಾಗಿದೆ. ಅದರಲ್ಲೂ ಯುವಕರಲ್ಲಿ ಅಸಡ್ಡೆಯ ಜೊತೆಗೆ ಅಸಾಧ್ಯದ ಭಾವನೆಯೇ ಎದ್ದು ಕಾಣುತ್ತದೆ.

ಈಗಿನ ಜೀವನ ಶೈಲಿಯಲ್ಲಿ ಮನೆಮಂದಿಯೆಲ್ಲಾ ಒಟ್ಟಿಗೆ ಊಟಕ್ಕೆ ಕೂರುವುದು ಒಂದು ಆಶ್ಚರ್ಯವೇ ಸರಿ. ಕೊವಿಡ್ ಲಾಕ್ ಡೌನ್ ಈ  ಕೆಲಸವನ್ನು ಸಾಧ್ಯ ಮಾಡಿದೆ.

ಸನಾತನ ಧರ್ಮದಲ್ಲಿ ಊಟ ಎಂದರೇ, ಅದೊಂದು ಗೌರವ ಪೂರ್ವಕವಾಗಿ ನಡೆಸುವ ದೈನಂದಿನ ಯಜ್ಞವಿದ್ದಂತೆ. ಕೇವಲ ಹೊಟ್ಟೆ ತುಂಬಿಸಿಕೊಳ್ಳುವ ಕ್ರಿಯೆ ಅಲ್ಲ. ನೆಲದ ಮೇಲೆ ಪದ್ಮಾಸನದಲ್ಲಿ (ಸುಖಾಸನ)ಕುಳಿತು ಕೈ ಮುಗಿದು ಪ್ರಾರ್ಥಿಸಿ , ನಿಶ್ಚಿಂತೆಯಿಂದ ಬರಿಗೈಯಲ್ಲಿ ಸೇವಿಸುವ ಆಹಾರ ನಮ್ಮ ಜಠರಕ್ಕೆ  ಅಷ್ಟೇ ಅಲ್ಲದೆ ಆತ್ಮಕ್ಕೂ ತೃಪ್ತಿ ನೀಡುವುದು. ಊಟದ ನಂತರ “ಅನ್ನ ದಾತೋ ಸುಖೀ ಭವ” ಎಂಬ ಒಂದು ವ್ಯಾಖ್ಯಾನ ಅಡಿಗೆ ತಯಾರಿಸಿದವರ ಪಾಲಿಗೆ ಸಾರ್ಥಕತೆಯ ಅನುಭವ ನೀಡುತ್ತದೆ.

ಇದನ್ನೂ ಓದಿ : ‘ಫ್ರೆಂಡ್​ಶಿಪ್​ ಡೇ’ಯಂದು ಪತಿ ನೆನೆದು ಭಾವುಕರಾದ ನಟಿ ಮೇಘನಾ ರಾಜ್

ನೆಲದ ಮೇಲೆ ಕುಳಿತು ಊಟ ಮಾಡುವುದರ ಹಿಂದಿನ ವೈಜ್ಞಾನಿಕ ವಿಚಾರ ನೋಡಿದರೆ, ಹಲವು ವಿಶೇಷಗಳು ನಮ್ಮ ಮುಂದೆ ತೆರೆದುಕೊಳ್ಳುತ್ತದೆ. ಯೋಗಾಸನದಲ್ಲಿ ಪ್ರಮುಖ ಆಸನವಾದ ಪದ್ಮಾಸನದಲ್ಲಿ ಕುಳಿತಾಗ ನಮ್ಮ ಕಿಬ್ಬೊಟ್ಟೆಯ ಮೇಲಿನ ಭಾಗಗಳೆಲ್ಲವೂ ಬೆನ್ನು ಹುರಿಯ ಸಹಾಯದಿಂದ ನೇರವಾಗುತ್ತದೆ ಹಾಗು ಪೆಲ್ವಿಕ್ ಸ್ನಾಯುಗಳು ಹಿಗ್ಗುತ್ತದೆ. ಇದರಿಂದ ನಮ್ಮ ಜೀರ್ಣಾಂಗವ್ಯೂಹವು ಉತ್ತಮ ಸ್ಥಿತಿಯನ್ನು ತಲುಪಿ ಜೀರ್ಣಕ್ಕೆ ಸಹಕರಿಸುತ್ತದೆ. ನೆಲದ ಮೇಲೆ ಕುಳಿತಾಗ  ಮನಸ್ಸು ಪ್ರಶಾಂತಗೊಳ್ಳುತ್ತದೆ ಹಾಗು ಸ್ಥಿರತೆಯನ್ನು ವೃದ್ಧಿಗೊಳಿಸಿ ಆಹಾರದತ್ತ ಗಮನ ಹರಿಸಲು ಸಾಧ್ಯವಾಗುತ್ತದೆ. ನಮ್ಮ ಕುಟುಂಬದ ಸದಸ್ಯರೊಡನೆ ಸಮಯ ಕಳೆಯಲು ಇದೊಂದು ಸುಯೋಗವಿದ್ದಂತ್ತೆ. ಎಲ್ಲರ ಅಭಿರುಚಿ ತಿಳಿಯುವ ವೇದಿಕೆಯೂ ಹೌದು.

ಕೆಲವು ಅಧ್ಯಯನಗಳ ಪ್ರಕಾರ ಕೆಳಗೆ ಕೂತು ಊಟಮಾಡುವವರು ಯಾವುದೇ ಸಹಾಯವಿಲ್ಲದೆ ಏಳಲು ಶಕ್ತರಾಗಿದಲ್ಲಿ ಅವರ ಆಯಸ್ಸು ವೃದ್ಧಿಸುತ್ತದೆ. ಮೊಣಕೈ ಹಾಗು ಕಾಲುಗಳಿಗೆ ವ್ಯಾಯಾಮ ದೊರೆಯುತ್ತದೆ, ಇದರಿಂದ ಸಂಧಿವಾತ ಹಾಗು ಓಸ್ಟಿಯೋ ಪೋರೆಸಿಸ್ ಕಾಯಿಲೆಗಳನ್ನು ತಡೆಯಬಹುದು. ಬರಿಗೈಯಲ್ಲಿ ಊಟ ಮಾಡುವಾಗ ನಮ್ಮ ಐದು ಬೆರಳುಗಳು ಸೇರಿ ಒಂದು ಮುದ್ರೆ ರಚನೆಗೊಳ್ಳು ತ್ತದೆ ಇದು ಪಂಚೇಂದ್ರಿಯಗಳನ್ನು ಪ್ರೇರೇಪಿಸಿ ಮೆದುಳಿಗೆ ಸಂದೇಶ ರವಾನಿಸುತ್ತದೆ, ಆಗ ಜೀರ್ಣ ಕ್ರಿಯೆಗೆ ಬೇಕಾದ ಜೀರ್ಣರಸಗಳು ಸಹಜವಾಗಿ ಬಿಡುಗಡೆಗೊಳ್ಳುತ್ತದೆ. ಕೈಯಲ್ಲಿ ತಿನ್ನುವಾಗ ಆಹಾರದ ಬಿಸಿ ಹಾಗೂ ಮೃದುತ್ವ ನಮ್ಮ ಗಮನಕ್ಕೆ ಬರುತ್ತದೆ.

ವೈದಿಕ ಶಾಸ್ತ್ರದ ಪ್ರಕಾರ ನಮ್ಮ ಕೈ ಬೆರಳುಗಳು ಪಂಚ ತತ್ವಗಳಿಂದ ಕೂಡಿದೆ. ಹೆಬ್ಬೆರಳು – ಅಗ್ನಿ,ತೋರುಬೆರಳು – ವಾಯು, ಮಧ್ಯ ಬೆರಳು – ಆಕಾಶ, ಉಂಗುರ ಬೆರಳು – ಭೂಮಿ,ಕಿರು ಬೆರಳು – ನೀರು. ಊಟ ಮಾಡುವಾಗ ಬಾಗಿ  ಏಳುವ ಪರಿ ಆಹಾರವನ್ನು ಸುಲಭವಾಗಿ ಜಠರಕ್ಕೆ ಜಾರಲು ಸಹಕರಿಸುತ್ತದೆ

ವೃದ್ಧರು, ಅಶಕ್ತರಿಗೆ ಡೈನಿಂಗ್ ಟೇಬಲ್ ಅತ್ಯವಶ್ಯಕ. ಯಾವ ಪದ್ದತಿಯನ್ನು ನಾವು ಅನುಸರಿಸುವುದಿಲ್ಲವೋ ಅದು ಕಾಲಕ್ರಮೇಣ ಕ್ಷೀಣಿಸುವುದರಲ್ಲಿ ಅನುಮಾನವಿಲ್ಲ .  ಮಕ್ಕಳಲ್ಲಿ ಇದು ಅಸಾಧ್ಯವಾದಲ್ಲಿ ಮುಂದಿನ ಪೀಳಿಗೆಗೆ ಕಾಲು

ಮಡಿಸಲೂ ಅಶಕ್ತರಾಗುವ ಸ್ಥಿತಿ ಬರುವಲ್ಲಿ ಸಂದೇಹವಿಲ್ಲ.ಇಷ್ಟೆಲ್ಲಾ ತಿಳಿದ ಮೇಲೆ ಇನ್ನು ಮುಂದೆ ಸಾಧ್ಯವಾದಾಗಲೆಲ್ಲಾ ನೆಲದ ಮೇಲೆ ಕುಳಿತು ಆಹಾರ ಸೇವಿಸೊಣ.

-ಶ್ರೀರಕ್ಷಾ ಶಂಕರ್

ಎಸ್.ಡಿ.ಎಂ ಕಾಲೇಜು, ಉಜಿರೆ.

ಇದನ್ನೂ ಓದಿ : ಎಲ್ ಐ ಸಿಯ ಈ ಪಾಲಿಸಿಯ ಬಗ್ಗೆ ನಿಮಗೆಷ್ಟು ಗೊತ್ತು..? ಇಲ್ಲಿದೆ ಮಾಹಿತಿ

ಟಾಪ್ ನ್ಯೂಸ್

ಮಕ್ಕಳ ಕಳ್ಳರ ವದಂತಿಗಳಿಗೆ ಕಿವಿಗೊಡಬೇಡಿ

ಮಕ್ಕಳ ಕಳ್ಳರ ವದಂತಿಗಳಿಗೆ ಕಿವಿಗೊಡಬೇಡಿ

ದ್ವಾರಕಾ – ಬದರಿ ಶ್ರೀಗಳಿಗೆ ಅನುಗ್ರಹ: ಶ್ರೀಗಳಿಗೆ ದಂಡ – ಕಮಂಡಲ ನೀಡಿದ ಶೃಂಗೇರಿ ಶ್ರೀಗಳು

ದ್ವಾರಕಾ – ಬದರಿ ಶ್ರೀಗಳಿಗೆ ಅನುಗ್ರಹ: ಶ್ರೀಗಳಿಗೆ ದಂಡ – ಕಮಂಡಲ ನೀಡಿದ ಶೃಂಗೇರಿ ಶ್ರೀಗಳು

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಗಾಂಜಾ ಗ್ಯಾಂಗ್‌ನಿಂದ ಮೊಬೈಲ್‌, ಹಣ ದರೋಡೆ: ಕೇಸು ದಾಖಲು

ಗಾಂಜಾ ಗ್ಯಾಂಗ್‌ನಿಂದ ಮೊಬೈಲ್‌, ಹಣ ದರೋಡೆ: ಕೇಸು ದಾಖಲು

“ದೇವಸ್ಥಾನಗಳ ಅಭಿವೃದ್ಧಿಯಿಂದ ಗ್ರಾಮಾಭಿವೃದ್ಧಿ’

“ದೇವಸ್ಥಾನಗಳ ಅಭಿವೃದ್ಧಿಯಿಂದ ಗ್ರಾಮಾಭಿವೃದ್ಧಿ’

ಮೋದಿ ಅವಧಿಯಲ್ಲಿ ದೇಶಕ್ಕೆ ಎಲ್ಲ ಕ್ಷೇತ್ರದಲ್ಲೂ ಹಿನ್ನಡೆ: ಎಂ.ಬಿ. ಪಾಟೀಲ್‌

ಮೋದಿ ಅವಧಿಯಲ್ಲಿ ದೇಶಕ್ಕೆ ಎಲ್ಲ ಕ್ಷೇತ್ರದಲ್ಲೂ ಹಿನ್ನಡೆ: ಎಂ.ಬಿ. ಪಾಟೀಲ್‌

ಹೂಡೆ ಬೀಚ್‌: ನೀರುಪಾಲಾದ ವಿದ್ಯಾರ್ಥಿಯ ಮೃತದೇಹ ಪತ್ತೆ

ಹೂಡೆ ಬೀಚ್‌: ನೀರುಪಾಲಾದ ವಿದ್ಯಾರ್ಥಿಯ ಮೃತದೇಹ ಪತ್ತೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udayavani College Campus Article On Independence day

ಸ್ವಾತಂತ್ರ್ಯದಿನದ ಸವಿನೆನಪಿನೊಂದಿಗೆ ಜಾಗೃತಿಯ ಮನಸ್ಸಿರಲಿ..!

Oline Classes

ಸ್ನೇಹ ಸೇತು ಮುರಿದ ಆನ್ ಲೈನ್..! ನಾವೆಂದು ಸೇರೋದು ಮತ್ತೆ?  

Ready to ride space pod

ಅಂತರಿಕ್ಷಕ್ಕೆ ನೆಗೆಯುವುದಕ್ಕೆ ತೆರೆದಿದೆ ಬಾಗಿಲು..!

18-11

ಮನಸ್ಸಿನ ಮಾತು… ವಿಷಾದದ ಪಕ್ಕದಲ್ಲೇ ಆನಂದ ಇದೆ..!

College Campus

ಕರಾವಳಿಯ ಪ್ರಮುಖ ವಾಣಿಜ್ಯ ಕೃಷಿ – ಮಲ್ಲಿಗೆ ಕೃಷಿ

MUST WATCH

udayavani youtube

ಓದಿನ ಜೊತೆ ಕೃಷಿ : ಮಕ್ಕಳೇ ನಿರ್ಮಿಸಿದ ‘ಆರೋಗ್ಯವನ’ !

udayavani youtube

ಕ್ರಿಯೇಟಿವ್ ಪಿಯು ಕಾಲೇಜು ಮೂಡಬಿದ್ರಿ

udayavani youtube

ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಕಾಂಗ್ರೆಸ್ ನ ಟಾಪ್ ಲೀಡರ್ ಗಳೇ ಬೇಲ್ ನಲ್ಲಿ‌ ಇದ್ದಾರೆ

udayavani youtube

ದೇವ್ರೇ ನನಗೆ 25 ಕೋಟಿ ಬಹುಮಾನ ಬರಬಾರದಿತ್ತು…

udayavani youtube

ಪತ್ರಿ ವರ್ಷ ಈ ಬೆಣ್ಣೆಹಣ್ಣು ಮರದಲ್ಲಿ 300 ರಿಂದ 400 ಹಣ್ಣುಗಳು ಸಿಗುತ್ತದೆ

ಹೊಸ ಸೇರ್ಪಡೆ

ಮಕ್ಕಳ ಕಳ್ಳರ ವದಂತಿಗಳಿಗೆ ಕಿವಿಗೊಡಬೇಡಿ

ಮಕ್ಕಳ ಕಳ್ಳರ ವದಂತಿಗಳಿಗೆ ಕಿವಿಗೊಡಬೇಡಿ

ದ್ವಾರಕಾ – ಬದರಿ ಶ್ರೀಗಳಿಗೆ ಅನುಗ್ರಹ: ಶ್ರೀಗಳಿಗೆ ದಂಡ – ಕಮಂಡಲ ನೀಡಿದ ಶೃಂಗೇರಿ ಶ್ರೀಗಳು

ದ್ವಾರಕಾ – ಬದರಿ ಶ್ರೀಗಳಿಗೆ ಅನುಗ್ರಹ: ಶ್ರೀಗಳಿಗೆ ದಂಡ – ಕಮಂಡಲ ನೀಡಿದ ಶೃಂಗೇರಿ ಶ್ರೀಗಳು

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಖಾಸಗಿ ದರ್ಬಾರ್‌ ಆರಂಭ; 8ನೇ ಬಾರಿಗೆ ಖಾಸಗಿ ಯದುವೀರ್‌ ದರ್ಬಾರ್‌

ಗಾಂಜಾ ಗ್ಯಾಂಗ್‌ನಿಂದ ಮೊಬೈಲ್‌, ಹಣ ದರೋಡೆ: ಕೇಸು ದಾಖಲು

ಗಾಂಜಾ ಗ್ಯಾಂಗ್‌ನಿಂದ ಮೊಬೈಲ್‌, ಹಣ ದರೋಡೆ: ಕೇಸು ದಾಖಲು

“ದೇವಸ್ಥಾನಗಳ ಅಭಿವೃದ್ಧಿಯಿಂದ ಗ್ರಾಮಾಭಿವೃದ್ಧಿ’

“ದೇವಸ್ಥಾನಗಳ ಅಭಿವೃದ್ಧಿಯಿಂದ ಗ್ರಾಮಾಭಿವೃದ್ಧಿ’

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.