ಪರಿಸರಕ್ಕೆ ಕೋವಿಡ್ 19 ಉಪಕಾರ ; ಜಗತ್ತಿನಾದ್ಯಂತ ವಾಯುಮಾಲಿನ್ಯ ತೀವ್ರ ಇಳಿಕೆ

Team Udayavani, Apr 1, 2020, 4:35 PM IST

ಪರಿಸರಕ್ಕೆ ಕೋವಿಡ್ 19 ಉಪಕಾರ ; ಜಗತ್ತಿನಾದ್ಯಂತ ವಾಯುಮಾಲಿನ್ಯ ತೀವ್ರ ಇಳಿಕೆ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used

ಕೋವಿಡ್ 19 ಮಾನವಕುಲಕ್ಕೆ ಅಪಾಯಕಾರಿಯಾಗಿ ಪರಿಣಮಿಸುತ್ತಿರುವ ಹೊತ್ತಲ್ಲೇ ವಾತಾವರಣಕ್ಕೆ ಉಪಕಾರ ಮಾಡಲಾರಂಭಿಸಿದೆ. ಕೋವಿಡ್ 19 ನಿಂದಾಗಿ ಇಡೀ ಜಗತ್ತು ಲಾಕ್‌ಡೌನ್‌ ಆಗಿದೆ. ಇದರಿಂದಾಗಿ ವಿಷಕಾರಿ ಅನಿಲ ಉಗುಳುತ್ತಿದ್ದ ಅಸಂಖ್ಯ ಕಾರ್ಖಾನೆಗಳು, ಕೈಗಾರಿಕೆಗಳು ಬಂದ್‌ ಆಗಿವೆ, ಹೋಟೆಲ್‌ಗಳು ಬಾಗಿಲು ಹಾಕಿವೆ, ಆರ್ಥಿಕ ಚಟುವಟಿಕೆಗಳು ಸ್ತಬ್ಧವಾಗಿವೆ, ಎಲ್ಲೆಡೆಯೂ ವಾಹನ ಸಂಚಾರಗಳೂ ನಿಂತಿರುವುದರಿಂದ ತೈಲದ ಬಳಕೆಯೂ ತಗ್ಗಿದೆ. ಇದೆಲ್ಲದರಿಂದಾಗಿ ಪ್ರಪಂಚದ ಮಹಾನಗರಗಳೆಲ್ಲ ದಶಕಗಳಲ್ಲಿ ಮೊದಲ ಬಾರಿ ಸ್ವಚ್ಛಗಾಳಿಯನ್ನು ಉಸಿರಾಡುವಂತಾಗಿದೆ.

ಅದರಲ್ಲೂ ಕೋವಿಡ್ 19 ಉಗಮಿಸಿದ ಚೀನದ ವುಹಾನ್‌ ನಗರಿಯ ವಾಯುಗುಣಮಟ್ಟವು 2 ದಶಕದಲ್ಲೇ ಅತ್ಯಂತ ಸುಧಾರಣೆ ಕಂಡಿದೆ. ನಮ್ಮ ದೇಶದ ಸ್ಥಿತಿಯೂ ಭಿನ್ನವಾಗಿಲ್ಲ. ರಾಷ್ಟ್ರ ರಾಜಧಾನಿ ದಿಲ್ಲಿ, ರಾಜ್ಯ ರಾಜಧಾನಿ ಬೆಂಗಳೂರಿನ ವಾಯುಮಾಲಿನ್ಯದಲ್ಲೂ ಗಮನಾರ್ಹ ಕುಸಿತ ಕಾಣಿಸಿಕೊಂಡಿದೆ. ಪರಿಸರದ ಮೇಲೆ ಕೋವಿಡ್ 19 ವೈರಸ್‌ ‘ಪಾಸಿಟಿವ್‌’ ಎಫೆಕ್ಟ್ ತೋರಿಸಲಾರಂಭಿಸಿದೆ!

ದಶಕಗಳಲ್ಲೇ ಚೀನದ ಗಾಳಿ ಸ್ವಚ್ಛ
ಕೋವಿಡ್ 19 ಉಗಮ ಸ್ಥಾನವಾದ ಚೀನದಲ್ಲಿ ಡಿಸೆಂಬರ್‌ ತಿಂಗಳಿಂದ ಅನೇಕ ಕಡೆ ಕಾರ್ಖಾನೆಗಳು ಮುಚ್ಚಿವೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಕಲ್ಲಿದ್ದಲು ಬಳಕೆ ಪ್ರಮಾಣ ಅಜಮಾಸು ನಿಂತೇ ಹೋಗಿದೆ. ಚೀನದ 6 ಅತಿ ದೊಡ್ಡ  ಶಾಖೋತ್ಪನ್ನ ವಿದ್ಯುತ್‌ ಕೇಂದ್ರಗಳಲ್ಲಿ ಕಲ್ಲಿದ್ದಲು ಬಳಕೆ ಪ್ರಮಾಣ 40 ಪ್ರತಿಶತದಷ್ಟು ಕುಸಿದಿದೆ.

ಚೀನ, ಜಗತ್ತಿನ ಅತಿ ದೊಡ್ಡ ಕಲ್ಲಿದ್ದಲು ಬಳಕೆ ದೇಶವಾಗಿದ್ದು, ಜಾಗತಿಕ ವಾಯುಮಾಲಿನ್ಯ ಹೆಚ್ಚಳದಲ್ಲಿ ಅದರ ಪಾಲು ಅತ್ಯಧಿಕವಿದೆ. ಅಲ್ಲಿನ ವಿದ್ಯುತ್‌ ಸ್ಥಾವರಗಳು, ಕಾರ್ಖಾನೆಗಳಷ್ಟೇ ಅಲ್ಲದೆ, ಗ್ರಾಮೀಣರೆಲ್ಲ ಈಗಲೂ ಕಲ್ಲಿದ್ದಲನ್ನೇ ಅವಲಂಬಿಸಿದ್ದಾರೆ. ಕೋವಿಡ್ 19 ಹಾವಳಿಯ ನಂತರದಿಂದ ಚೀನದ 337 ನಗರಗಳಲ್ಲಿ ವಾಯುಮಾಲಿನ್ಯದ ಗುಣಮಟ್ಟವು ‘ಉತ್ತಮ’ ಶ್ರೇಣಿಗೆ ಬಂದಿದೆ (ಉತ್ತಮ ಶ್ರೇಣಿ: 1-50).

ನಾಸಾ, ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ ಬಿಡುಗಡೆಗೊಳಿಸಿರುವ ಸ್ಯಾಟಲೈಟ್‌ ಚಿತ್ರಗಳು ಚೀನದ ವಾಯುಮಾಲಿನ್ಯದ ಗುಣಮಟ್ಟ ಗಮನಾರ್ಹವಾಗಿ ಸುಧಾರಿಸಿರುವುದನ್ನು ಸಾರುತ್ತಿವೆ. ಕೈಗಾರಿಕಾ ಪ್ರದೇಶಗಳಲ್ಲಿ ಸ್ಪಷ್ಟವಾಗಿ ಗೋಚರಿಸುತ್ತಿದ್ದ ವಿಷಕಾರಿ ಅನಿಲ ಈಗ ಅಜಮಾಸು ಇಲ್ಲವೇ ಇಲ್ಲ.

ಯುರೋಪ್‌ ವಾತಾವರಣ ಸುಧಾರಣೆ
ಐರೋಪ್ಯ ಒಕ್ಕೂಟದ ಎಕಾಲಜಿ ಮತ್ತು ಎನ್‌ವೈರ್ನಮೆಂಟ್‌ ವಿಭಾಗದ ಪ್ರಕಾರ ಯುರೋಪ್‌ ರಾಷ್ಟ್ರಗಳಲ್ಲಿ, ಮುಖ್ಯವಾಗಿ ಕೋವಿಡ್ 19 ದಿಂದ ಹೆಚ್ಚು ಬಾಧಿತವಾಗಿರುವ ಇಟಲಿ, ಸ್ಪೇನ್‌, ಬ್ರಿಟನ್‌ನಲ್ಲಿ ವಾಯುಮಾಲಿನ್ಯ ಪ್ರಮಾಣವು ಗಣನೀಯವಾಗಿ ಕಡಿಮೆಯಾಗಿದೆ.

ಇನ್ನು ವಾಹನಗಳಿಂದ ಹೊರಸೂಸುವ ನೈಟ್ರೋಜನ್‌ ಡೈಆಕ್ಸೈಡ್‌ ಪ್ರಮಾಣವೂ ಅಜಮಾಸು ನಿಂತೇ ಹೋಗಿದ್ದು, ಎನ್‌ ಓ2 ಅನ್ನು ಅತಿಯಾಗಿ ಹೊರಸೂಸುತ್ತಿದ್ದ ಉತ್ತರ ಇಟಲಿಯಲ್ಲಿ ಮಾಲಿನ್ಯ ಪ್ರಮಾಣವೀಗ ತಗ್ಗುತ್ತಿರುವುದನ್ನು ಉಪಗ್ರಹ ಚಿತ್ರಗಳು ಸಾರುತ್ತಿವೆ. ಸ್ಪೇನ್‌ ಮತ್ತು ಬ್ರಿಟನ್‌ನಲ್ಲೂ ನೈಟ್ರೋಜನ್‌ ಡೈಆಕ್ಸೈಡ್‌ ಮಾಲಿನ್ಯಕಾರಕದ ಮಟ್ಟ ಅಪಾರವಾಗಿ ತಗ್ಗಿದೆ.

ದೇಶದಲ್ಲೂ ಸುಧಾರಿಸಿದ ಗಾಳಿಯ ಗುಣಮಟ್ಟ
ಭಾರತದ 90ಕ್ಕೂ ಅಧಿಕ ನಗರಗಳಲ್ಲಿ ಕಳೆದ ಕೆಲವು ದಿನಗಳಿಂದ ಕನಿಷ್ಠ ಪ್ರಮಾಣದ ವಾಯುಮಾಲಿನ್ಯ ದಾಖಲಾಗಿದೆ. ಅದರಲ್ಲೂ ವಾಯುಮಾಲಿನ್ಯಕ್ಕೆ ಕುಖ್ಯಾತಿ ಪಡೆದಿರುವ ರಾಷ್ಟ್ರ ರಾಜಧಾನಿ ದೆಹಲಿಯ ಗಾಳಿಯ ಗುಣಮಟ್ಟವು ಗಣನೀಯವಾಗಿ ಸುಧಾರಿಸಿದೆ. ಸಾಮಾನ್ಯವಾಗಿ ದೇಶದ ಮಹಾನಗರಗಳಲ್ಲಿ ಮಾಲಿನ್ಯವು ಮಧ್ಯಮ ಶ್ರೇಣಿಯಲ್ಲಿ (ವಾಯು ಗುಣಮಟ್ಟದ ಸೂಚ್ಯಂಕ ಶ್ರೇಣಿ: 100-200) ಕಂಡುಬರುತ್ತದೆ. ಅದರಲ್ಲೂ ದೆಹಲಿಯಲ್ಲಿ 160ರ ಮೇಲೆಯೇ ಇರುತ್ತಿತ್ತು. ಈಗದು 45ಕ್ಕೆ ಇಳಿದಿದೆ.

ಬೆಂಗಳೂರಿನ ಗಾಳಿಯೂ ಸ್ವಚ್ಛ: ರಾಜಧಾನಿ ಬೆಂಗಳೂರಿನ ವಾಯುಗುಣಮಟ್ಟದಲ್ಲಿ ಅಮೋಘ ಸುಧಾರಣೆ ಕಂಡು ಬಂದಿದೆ. ಅದರಲ್ಲೂ ಸದಾ ಟ್ರಾಫಿಕ್‌ನಿಂದ ಗಿಜುಗುಡುತ್ತಿದ್ದ ಸಿಲ್ಕ್ ಬೋರ್ಡ್‌ ಸಿಗ್ನಲ್‌ನಲ್ಲಿ ಮಾರ್ಚ್‌ 11ಕ್ಕೆ 98ರಷ್ಟಿದ್ದ ವಾಯುಗುಣಮಟ್ಟ, ಮಾರ್ಚ್‌ 25ರ ವೇಳೆಗೆ 44ಕ್ಕೆ ಇಳಿದಿದೆ.

ಮನುಷ್ಯನಿಗೆ ಸಿಕ್ಕು, ವಾತಾವರಣಕ್ಕೆ ಲಕ್ಕು!
ಜಾಗತಿಕ ವಾಯು ಗುಣಮಟ್ಟವು ಸುಧಾರಿಸಿರುವುದಕ್ಕೆ ಔದ್ಯಮಿಕ ಚಟುವಟಿಕೆಗಳು ಸ್ಥಗಿತವಾಗಿರುವುದು ಮುಖ್ಯ ಕಾರಣ.  ಕೈಗಾರಿಕೆಗಳು, ಉತ್ಪಾದನೆ, ನಿರ್ಮಾಣ ವಲಯಗಳಿಂದಾಗಿ ಸೃಷ್ಟಿಯಾಗುವ ಇಂಗಾಲದ ಡೈಆಕ್ಸೈಡ್‌ ಪ್ರಮಾಣವೇ ಜಾಗತಿಕ ಮಟ್ಟದಲ್ಲಿ 28.4 ರಷ್ಟಿದೆ.

ಈ ಹಿಂದೆ 2008-2009ರಲ್ಲಿ ವಿಶ್ವ ಆರ್ಥಿಕ ಬಿಕ್ಕಟ್ಟು ಎದುರಾದಾಗಲೂ ಕೂಡ ವಾಯುಮಾಲಿನ್ಯ ಕುಸಿದಿತ್ತು ಎನ್ನುವುದು ಗಮನಾರ್ಹ ಸಂಗತಿ. 2008ರ ಆರ್ಥಿಕ ಬಿಕ್ಕಟ್ಟು ಔದ್ಯಮಿಕ ವಲಯಕ್ಕೆ ಭಾರೀ ಪೆಟ್ಟು ಕೊಟ್ಟಿದ್ದರಿಂದ, ಉತ್ಪಾದನಾ ವಲಯ ಆಗ ಮೆತ್ತಗಾಗಿತ್ತು. ಆ ಅವಧಿಯಲ್ಲಿ ಒಟ್ಟಾರೆ ಜಾಗತಿಕ ವಾಯು ಪ್ರದೂಷಣೆಯ ಪ್ರಮಾಣದಲ್ಲಿ 8.5 ರಷ್ಟು ಕುಸಿತ ಕಂಡು ಬಂದಿತ್ತು.

ಅಧಿಕವಾಗುವುದೇ ವಾಯುಮಾಲಿನ್ಯ?
2008ರ ಆರ್ಥಿಕ ಕುಸಿತದ ಅನಂತರ, ವಾಯುಗುಣಮಟ್ಟವೇನೋ ಸುಧಾರಿಸಿತ್ತು. ಆದರೆ, ಇದಾದ 2 ವರ್ಷಗಳಲ್ಲಿ, ಅಂದರೆ 2010ರಲ್ಲಿ ಚೇತರಿಸಿಕೊಂಡ ಔದ್ಯಮಿಕ ವಲಯ, ಉತ್ಪಾದನೆಯನ್ನು ದಿಢೀರ್‌ ಹೆಚ್ಚಿಸಿಬಿಟ್ಟಿತು. ಇದರಿಂದಾಗಿ, ವಾಯುಮಾಲಿನ್ಯ ಪ್ರಮಾಣ ಏಕಾಏಕಿ ಹಿಂದೆಂದೂ ಇರದಷ್ಟು ಅಧಿಕವಾಗಿಬಿಟ್ಟಿತು.

ಕೋವಿಡ್ 19 ಪ್ರಮಾದ ಹಿಂದೆ ಸರಿದ ಮೇಲೆಯೂ ನಷ್ಟವನ್ನು ಸರಿದೂಗಿಸಿಕೊಳ್ಳಲು ಕೈಗಾರಿಕೆಗಳು, ಕಾರ್ಖಾನೆಗಳು ಅಧಿಕ ಪ್ರಮಾಣದಲ್ಲಿ ಸಕ್ರಿಯವಾಗಿ, ವಾಯು ಮಾಲಿನ್ಯ ಮತ್ತೆ ಹದಗೆಡುವ ಸಾಧ್ಯತೆ ಇದೆ ಎಂದು ವಾತಾವರಣ ತಜ್ಞರು ಎಚ್ಚರಿಸುತ್ತಿದ್ದಾರೆ.

ಕೋವಿಡ್ 19ಗಿಂತ ಡೆಡ್ಲಿ ವಾಯು ಮಾಲಿನ್ಯ!
ವಾಯು ಮಾಲಿನ್ಯ ಸಂಬಂಧಿ ರೋಗಗಳಿಂದಾಗಿ ಜಗತ್ತಿನಾದ್ಯಂತ ಪ್ರತಿ ವರ್ಷ 42 ಲಕ್ಷ ಜನರು ಸಾವನ್ನಪ್ಪುತ್ತಿದ್ದಾರೆ. ವಾಯು ಮಾಲಿನ್ಯದಿಂದಾಗಿ ಸಾವನ್ನಪ್ಪುವವರ ಸಂಖ್ಯೆ ಭಾರತದಲ್ಲೇ ಅಧಿಕವಿದ್ದು, ವಾರ್ಷಿಕ 20 ಲಕ್ಷಕ್ಕೂ ಅಧಿಕ ಭಾರತೀಯರು ಪ್ರದೂಷಿತ ಗಾಳಿಯಿಂದಾಗಿ ಸಾಯುತ್ತಿದ್ದಾರೆ.

ಇನ್ನು 2015ರಿಂದ ಚೀನವೊಂದರಲ್ಲೇ ಪ್ರತಿ ವರ್ಷ 18 ಲಕ್ಷ ಜನರು ವಾಯು ಮಾಲಿನ್ಯ ಸಂಬಂಧಿ ಸಮಸ್ಯೆಗಳಿಂದಾಗಿ ಸಾವನ್ನಪ್ಪುತ್ತಿದ್ದರು. ಕಳೆದ ಕೆಲವು ತಿಂಗಳಲ್ಲಿನ ಸ್ವಚ್ಛ ಗಾಳಿಯು 50000ಕ್ಕೂ ಅಧಿಕ ಚೀನಿಯರ ಜೀವ ಉಳಿಸಿದೆ ಎನ್ನುತ್ತದೆ ಒಂದು ವರದಿ. ಇನ್ನು ದೊಡ್ಡಣ್ಣ ಅಮೆರಿಕದಲ್ಲೂ ವಾರ್ಷಿಕ 2 ಲಕ್ಷ ಜನ ವಾಯು ಮಾಲಿನ್ಯದಿಂದಾಗಿ ಜೀವ ಕಳೆದುಕೊಳ್ಳುತ್ತಿದ್ದಾರೆ.

ಟಾಪ್ ನ್ಯೂಸ್

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Kalaburagi: ಸೋಲುವ ಭೀತಿಯಿಂದ ಪ್ರಧಾನಿಯಿಂದ ಕೀಳು ಮಟ್ಟದ ಹೇಳಿಕೆ: ಡಾ. ಅಜಯಸಿಂಗ್

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

Dakshina kannada: ದ.ಕ.: 18,18,127 ಮತದಾರರ ಕೈಯಲ್ಲಿ 9 ಅಭ್ಯರ್ಥಿಗಳ ಭವಿಷ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqwqewqwq

Bha ಸ್ವದೇಶಿ ವ್ಯವಸ್ಥೆ ; ನಮ್ಮ ಪಾದರಕ್ಷೆಗಳಿಗೆ ನಮ್ಮ ಅಳತೆ: ‘ಭ’ ಗಾತ್ರ ವ್ಯವಸ್ಥೆ!

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

17-voting

Vote: ಮತದಾನದ ಮಹತ್ವ

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

Ram Navami Astrology 2024:ಶ್ರೀರಾಮ ನವಮಿ ಯೋಗ ಫಲಾಫಲ-12 ರಾಶಿಗಳ ಮೇಲಿನ ಪರಿಣಾಮ ಹೇಗಿದೆ?

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Lok Sabha Election: ಉಡುಪಿ ಚಿಕ್ಕಮಗಳೂರಿನಲ್ಲಿ 29.03 % ಮತದಾನ…

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

Anti Israel ಪ್ರತಿಭಟನೆ-ಭಾರತೀಯ ಮೂಲದ ಪ್ರಿನ್ಸ್‌ ಟನ್‌ ವಿವಿ ವಿದ್ಯಾರ್ಥಿನಿ ಬಂಧನ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸಿಮರು: ಸಚಿವ ಪ್ರಹ್ಲಾದ್ ಜೋಶಿ

ಸುಳ್ಳು ಹೇಳುವುದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಿಸ್ಸೀಮರು: ಸಚಿವ ಪ್ರಹ್ಲಾದ್ ಜೋಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.