• ಆಯುಧ ಪೂಜೆ ಹಿನ್ನೆಲೆ: ವ್ಯಾಪಾರ ಬಿರುಸು

  ಮಹಾನಗರ: ಆಯುಧ ಪೂಜೆಯ ಹಿನ್ನೆಲೆಯಲ್ಲಿ ನಗರದಲ್ಲಿ ಹೂ, ಹಣ್ಣು ವ್ಯಾಪಾರ ಬಿರುಸುಗೊಂಡಿದೆ. ಸೋಮವಾರ ನಡೆಯುವ ಆಯುಧ ಪೂಜೆಗಾಗಿ ರವಿವಾರ ಬೆಳಗ್ಗೆಯಿಂದಲೇ ವ್ಯಾಪಾರಿಗಳು ಮಾರಾಟ ಚಟುವ ಟಿಕೆಗಳಲ್ಲಿ ನಿರತರಾಗಿದ್ದು, ಗ್ರಾಹಕರು ಖರೀದಿಗೆ ಮುಗಿಬೀಳುತ್ತಿದ್ದಾರೆ. ನಗರದ ರಸ್ತೆ ಬದಿಗಳಲ್ಲಿ ಹೂಗಳ ಹೊಸ…

 • ಕಡಲ್ಕೊರೆತ ತಡೆಗೆ “ಟ್ರಾಂಚ್‌-2′ ಅನುಷ್ಠಾನ

  ಮಂಗಳೂರು: ಕರಾವಳಿಯ 300 ಕಿ.ಮೀ. ವ್ಯಾಪ್ತಿಯಲ್ಲಿ ಕಡಲ್ಕೊರೆತ ತಡೆಗೆ ಎಡಿಬಿ ನೆರವಿನಲ್ಲಿ “ಸುಸ್ಥಿರ ಕರಾವಳಿ ಸಂರಕ್ಷಣೆ ಮತ್ತು ನಿರ್ವಹಣ ಹೂಡಿಕೆ’ (ಟ್ರಾಂಚ್‌-1) ಯೋಜನೆ ಪೂರ್ಣಗೊಂಡಿದ್ದು, 620.20 ಕೋ.ರೂ. ವೆಚ್ಚದಲ್ಲಿ ಟ್ರಾಂಚ್‌-2 ಯೋಜನೆ ಪ್ರಗತಿಯಲ್ಲಿದೆ. ರೀಫ್‌ ನಿರ್ಮಿಸಿದ ಕಾರಣ ಉಳ್ಳಾಲದ…

 • ಅಭಿವೃದ್ಧಿ ಕಾರ್ಯಗಳು ನಡೆದರೂ ಒಂದಷ್ಟು ಸಮಸ್ಯೆಗಳು ಹಾಗೇ ಇವೆ !

  ಮಹಾನಗರ: ನಗರದ ಪ್ರಮುಖ ವಾಣಿಜ್ಯ ಕೇಂದ್ರವಾದ ಬಂದರು ಪ್ರದೇಶದ ಅರ್ಧದಷ್ಟು ಭಾಗವನ್ನು ಪೋರ್ಟ್‌ ವಾರ್ಡ್‌ (ನಂ.45 ವಾರ್ಡ್‌) ಒಳಗೊಂಡಿದೆ. ವಾಣಿಜ್ಯ ಬಂದರು, ಮೀನುಗಾರಿಕಾ ಧಕ್ಕೆ, ರೈಲ್ವೇ ಗೂಡ್ಸ್‌ ಶೆಡ್‌, ಜಿಲ್ಲಾಧಿಕಾರಿ ಕಚೇರಿ, ನಗರ ಪೊಲೀಸ್‌ ಆಯುಕ್ತರ ಕಚೇರಿ, ಜಿಲ್ಲಾ…

 • ತೇಲಾಡುವ ಕಾಂಕ್ರೀಟ್‌ ಜೆಟ್ಟಿ ನಿರ್ಮಾಣದ ಯೋಜನೆಯಿದೆ: ವೇದವ್ಯಾಸ ಕಾಮತ್‌

  ಮಹಾನಗರ: ಕರ್ನಾಟಕದಲ್ಲಿ ಪ್ರಥಮ ಬಾರಿಗೆ ಮಂಗಳೂರು ಬಂದರಿನಲ್ಲಿ ಆಧುನಿಕ ತಾಂತ್ರಿಕತೆಯಲ್ಲಿ ತೇಲಾಡುವ ಕಾಂಕ್ರೀಟ್‌ ಜೆಟ್ಟಿ ನಿರ್ಮಿಸುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಶಾಸಕ ಡಿ. ವೇದವ್ಯಾಸ್‌ ಕಾಮತ್‌ ತಿಳಿಸಿದ್ದಾರೆ. ಮಂಗಳೂರು ಮೀನುಗಾರಿಕಾ ಬಂದರು ಪ್ರದೇಶಕ್ಕೆ ಭೇಟಿ ನೀಡಿ ಬಳಿಕ ಮಾತನಾಡಿದ…

 • ಬುಲ್‌ಟ್ರಾಲ್‌ ಮತ್ತು ಲೈಟ್‌ ಫಿಶಿಂಗ್‌ ನಿಷಿದ್ಧ ನಿಯಮ ಉಲ್ಲಂಘಿಸಿದರೆ ಕ್ರಮ

  ಮಂಗಳೂರು: ಕಾನೂನು ಪ್ರಕಾರ ಬುಲ್‌ ಟ್ರಾಲ್‌ ಮತ್ತು ಲೈಟ್‌ ಫಿಶಿಂಗ್‌ ನಡೆಸುವಂತಿಲ್ಲ. ಈ ವಿಚಾರದಲ್ಲಿ ಒಮ್ಮತದಿಂದ ಮುಂದುವರಿಯುವಂತೆ ಮೀನುಗಾರ ಮುಖಂಡರಿಗೆ ಸೂಚನೆ ನೀಡಲಾಗಿದೆ. ಇದರ ಹೊರತಾಗಿಯೂ ಮನಸ್ತಾಪ ಮಾಡಿಕೊಂಡು ಪ್ರತಿಭಟನೆ ನಡೆಸಿದರೆ ಮೀನುಗಾರಿಕಾ ಇಲಾಖೆ ಕಾನೂನು ಪ್ರಕಾರ ಮುಂದಿನ…

 • ಕುದ್ರೋಳಿ ಕ್ಷೇತ್ರ: ಮಂಗಳೂರು ದಸರಾ ಉದ್ಘಾಟನೆ

  ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುತ್ತಿರುವ “ಮಂಗಳೂರು ದಸರಾ’ ರವಿವಾರ ಉದ್ಘಾಟನೆಗೊಂಡಿತು. ವೈಭವದ ದಸರಾ ಶೋಭಾಯಾತ್ರೆ ಅ. 8ರಂದು ಸಂಜೆ 4ರಿಂದ ಆರಂಭವಾಗಲಿದೆ. ದಸರಾ ಮಹೋತ್ಸವವನ್ನು ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ….

 • ಪ್ರಾಮಾಣಿಕತೆ ಮೆರೆದ ಹಿರಿಯ ನಾಗರಿಕ

  ಮಂಗಳೂರು: ನಗರದ ಸೆಂಟ್ರಲ್‌ ರೈಲು ನಿಲ್ದಾಣ ಸಂಪರ್ಕ ರಸ್ತೆಯಲ್ಲಿ ಬಿದ್ದು ಸಿಕ್ಕಿದ್ದ ನಗದು ಹಣ ಮತ್ತು ಇತರ ಹಲವು ದಾಖಲೆಗಳನ್ನು ಒಳಗೊಂಡ ಪರ್ಸ್‌ನ್ನು ರೈಲ್ವೇ ಪೊಲೀಸರಿಗೆ ಒಪ್ಪಿಸಿ ಅದು ವಾರಸು ದಾರರಿಗೆ ತಲುಪುವಂತೆ ವ್ಯವಸ್ಥೆ ಮಾಡುವ ಮೂಲಕ ಹಿರಿಯ…

 • ಪಿಂಚಣಿ, ಭವಿಷ್ಯನಿಧಿ ಪಡೆಯಲು ಸಾವಿರಾರು ಕಾರ್ಮಿಕರ ಪರದಾಟ

  ಮಂಗಳೂರು: ದಾಖಲೆಗಳಲ್ಲಿ ಜನ್ಮ ದಿನಾಂಕದ ವ್ಯತ್ಯಾಸದಿಂದಾಗಿ ಭವಿಷ್ಯನಿಧಿ ಮತ್ತು ಪಿಂಚಣಿ ಪಡೆಯುವುದಕ್ಕೆ ಕಾರ್ಮಿಕರು ಎರಡು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗೆ ಇನ್ನೂ ಪರಿಹಾರ ದೊರಕಿಲ್ಲ. ಸಾವಿರಾರು ಕಾರ್ಮಿಕರು ಭವಿಷ್ಯನಿಧಿ ಮತ್ತು ಪಿಂಚಣಿಗಾಗಿ ಕಚೇರಿಗಳಿಗೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದೆ. ಕಾರ್ಮಿಕರು ತಮ್ಮ…

 • ಮಂಗಳೂರು ದಸರಾ ಮಹೋತ್ಸವ ಉದ್ಘಾಟನೆ

  ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ವತಿಯಿಂದ ನಡೆಯುತ್ತಿರುವ ಮಂಗಳೂರು ದಸರಾ ಮಹೋತ್ಸವಕ್ಕೆ ರವಿವಾರದಂದು ಚಾಲನೆ ದೊರೆತಿದ್ದು, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ದಸರಾ ಮಹೋತ್ಸವವನ್ನು ಉದ್ಘಾಟಿಸಿದರು. ದ.ಕ.ಜಿಲ್ಲಾ ಉಸ್ತುವಾರಿ…

 • ‘ಅಲೆ ಬುಡಿಯೆರ್’ : 2019-20ನೇ ಸಾಲಿನ ಕಂಬಳ ವೇಳಾಪಟ್ಟಿ ಪ್ರಕಟ ; ನ.23ಕ್ಕೆ ಕೋಣಗಳ ಓಟ ಶುರು

  ಮಂಗಳೂರು: ಕರಾವಳಿಯ ಜಾನಪದ ಕ್ರೀಡೆಯಾಗಿರುವ ಕಂಬಳದಲ್ಲಿ ಈ ಬಾರಿಯ ಕೋಣಗಳ ಓಟಕ್ಕೆ ವೇಳಾಪಟ್ಟಿ ಸಿದ್ಧಗೊಂಡಿದೆ. ನವಂಬರ್ ತಿಂಗಳ 23ನೇ ತಾರೀಖಿನಂದು ಪೈವಳಿಕೆ ಕಂಬಳದ ಮೂಲಕ ಪ್ರಾರಂಭಗೊಳ್ಳುವ ಕಂಬಳ ಋತು 2020ರ ಮಾರ್ಚ್ 29ನೇ ತಾರೀಖಿನಂದು ನಡೆಯುವ ಕಟಪಾಡಿ ಕಂಬಳದೊಂದಿಗೆ…

 • ಸಿಟಿ ಬಸ್ಸನ್ನೇ ಎಗರಿಸಿದ ಭೂಪ ; ಒಬ್ಬನೇ ಬಸ್ಸು ಚಲಾಯಿಸಿಕೊಂಡು ಹೋಗಿದ್ದೆಲ್ಲಿಗೆ?

  ಉಡುಪಿ: ಬೈಕ್, ಕಾರು, ಆಟೋ ರಿಕ್ಷಾಗಳನ್ನು ಎಗರಿಸುವ ಭೂಪರಿದ್ದಾರೆ. ಇನ್ನು ಸಿಟಿ ಬಸ್ಸುಗಳು ಪ್ರಯಾಣಿಕರಿಂದ ತುಂಬಿದ್ದಾಗ ಬಸ್ಸಿನಲ್ಲಿ ಪರ್ಸ್, ಆಭರಣ ಸೇರಿದಂತೆ ಪ್ರಯಾಣಿಕರ ವಸ್ತುಗಳನ್ನು ಎಗರಿಸುವ ಕಳ್ಳರೂ ಇದ್ದಾರೆ, ಆದರೆ ಇಲ್ಲೊಬ್ಬ ಭೂಪ ಬಸ್ಸನ್ನೇ ಎಗರಿಸಿ ಕೊಂಡೊಯ್ಯುವ ಮೂಲಕ…

 • ಮಂಗಳೂರು: ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ಕಚೇರಿ ಉದ್ಘಾಟನೆ

  ಮಂಗಳೂರು: ಮೀನುಗಾರಿಕೆ, ಬಂದರು ಹಾಗೂ ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರ ನೂತನ ಕಚೇರಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯಲ್ಲಿ ರವಿವಾರದಂದು ಉದ್ಘಾಟನೆಗೊಂಡಿತು. ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ದ.ಕ ಲೋಕಸಭಾ ಸದಸ್ಯ ನಳೀನ್ ಕುಮಾರ್ ಕಟೀಲು…

 • ಮಂಗಳೂರು: ಮಾಜಿ ಕಾರ್ಪೊರೇಟರ್ ಮಧುಕಿರಣ್ ನಿಧನ

  ಮಂಗಳೂರು: ಮಂಗಳೂರು ಪಾಲಿಕೆಯ ಮಾಜಿ ಕಾರ್ಪೊರೇಟರ್ ಮಧುಕಿರಣ್ ಅಲ್ಪ ಕಾಲದ ಅಸೌಖ್ಯದಿಂದಾಗಿ ರವಿವಾರ ಮುಂಜಾನೆ ನಿಧನ ಹೊಂದಿದ್ದಾರೆ. ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿದ್ದ ಇವರು, ಕೆಲವು ದಿನಗಳ ಅಸೌಖ್ಯದ ಕಾರಣದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ…

 • ಮೋದಿಯದು ಫ್ಯಾಸಿಸ್ಟ್‌ ಸರಕಾರ

  ಮಂಗಳೂರು: ಪ್ರಧಾನಿ ಮೋದಿ ಅವರದು ಫ್ಯಾಸಿಸಂ ನೀತಿಯ ಸರಕಾರ. ಹಾಗಾಗಿಯೇ ತನ್ನ ವಿರುದ್ಧ ಯಾರೂ ಮಾತನಾಡುವುದನ್ನು ಅವರು ಸಹಿಸುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ. ಅವರು ಶನಿವಾರ ಚಿಕ್ಕ ಮಗಳೂರಿನ ನೆರೆಪೀಡಿತ ಪ್ರದೇಶಗಳಿಗೆ ಭೇಟಿ ನೀಡುವ ಸಲುವಾಗಿ…

 • ಆರೋಗ್ಯ ಕ್ಷೇತ್ರದಲ್ಲಿ ಎಂಐಒ ಸಾಧನೆ: ಶಾಸಕ ಕಾಮತ್‌ ಶ್ಲಾಘನೆ

  ಮಂಗಳೂರು: ಮಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಆಂಕಾಲಜಿ (ಎಂಐಒ) ಯ ಎಂಟು ವರ್ಷಗಳ ಸೇವೆಯನ್ನು ಸ್ಮರಣೀಯಗೊಳಿಸುವ ನಿಟ್ಟಿನಲ್ಲಿ ಎಂಐಒ ಡೇಯನ್ನು ನಗರದ ಪಂಪ್‌ವೆಲ್‌ನಲ್ಲಿರುವ ಎಂಐಒ ಆವರಣದಲ್ಲಿ ಶನಿವಾರ ಆಯೋಜಿಸಲಾಗಿತ್ತು. ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಶಾಸಕ ಡಿ. ವೇದವ್ಯಾಸ ಕಾಮತ್‌…

 • 25 ಕೋ.ರೂ. ವೆಚ್ಚದಲ್ಲಿ ಹೈಟೆಕ್‌ ಕ್ರೀಡಾ ಸಂಕೀರ್ಣ

  ಮಹಾನಗರ: ಕರಾವಳಿಯ ಅನೇಕ ಕ್ರೀಡಾಪಟುಗಳು ಈಗಾಗಲೇ ದೇಶ-ವಿದೇಶಗಳ‌ಲ್ಲಿ ಮಿಂಚುತ್ತಿದ್ದು, ಕ್ರೀಡಾ ಕ್ಷೇತ್ರದಲ್ಲಿ ಮತ್ತಷ್ಟು ಪ್ರತಿಭೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ನಗರದಲ್ಲಿ ಅತ್ಯಾ ಧುನಿಕ ಸೌಲಭ್ಯಗಳನ್ನು ಹೊಂದಿರುವ ಹೊಸ ಕ್ರೀಡಾ ಸಂಕೀರ್ಣ ತಲೆಯೆತ್ತಲಿದೆ. ಸುಮಾರು 25 ಕೋಟಿ ರೂ. ವೆಚ್ಚದಲ್ಲಿ ನಗರದ…

 • ರಸ್ತೆಗಳೆಲ್ಲ ಅಭಿವೃದ್ಧಿ ಹೊಂದಿದರೂ ಸಂಚಾರ ಸಂಕಟ ಹಾಗೇ ಇದೆ !

  ಮಹಾನಗರ: ನಗರದಿಂದ ಕೇವಲ 7 ಕಿ.ಮೀ. ದೂರದಲ್ಲಿರುವ ಬಜಾಲ್‌ ವಾರ್ಡ್‌ ಗ್ರಾಮಾಂತರ ಭಾಗದ ಸ್ವರೂಪದೊಂದಿಗೆ ಹಚ್ಚ ಹಸುರಿನಲ್ಲಿ ಕಂಗೊಳಿ ಸುತ್ತಿದೆ. ಒಂದೆಡೆ ನೇತ್ರಾವತಿಯ ಮಡಿಲು; ಇನ್ನೊಂದೆಡೆ ಭತ್ತ, ಕಂಗು, ತೆಂಗಿನ ಪ್ರಶಾಂತ ಪರಿಸರ; ಜತೆಗೆ ಗುಡ್ಡದ ಮೇಲೆ ಕಾಣುವ…

 • ಕಂದಾಯ ಇಲಾಖೆಗೆ ಸಿಗದ ಸ್ವಂತ ಕಟ್ಟಡ ಭಾಗ್ಯ!

  ಕೈಕಂಬ: ವಿವಿಧ ಇಲಾಖೆ ಸಹಿತ ಇತರರಿಗೂ ಜಾಗ, ಖಾತೆ ಬದಲಾವಣೆ, ರೆಕಾರ್ಡ್‌, ನಕ್ಷೆ ನೀಡುವ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಕಾರ್ಯನಿರ್ವಹಿಸಲು ಸ್ವಂತ ಕಟ್ಟಡವಿಲ್ಲ ! ಮಂಗಳೂರು ತಾಲೂಕಿನ ಶೇ. 90ರಷ್ಟು ಗ್ರಾಮಕರಣಿಕರ ಕಚೇರಿ ಗ್ರಾ.ಪಂ.ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಮಂಗಳೂರು ತಾಲೂಕಿಗೆ…

 • ಕೊಳ್ನಾಡ್‌: ಲಾರಿಗಳು ಢಿಕ್ಕಿ; ಓರ್ವ ಚಾಲಕನಿಗೆ ಗಂಭೀರ ಗಾಯ

  ಮೂಲ್ಕಿ: ಇಲ್ಲಿಗೆ ಸಮೀಪದ ಕೊಳ್ನಾಡಿನಲ್ಲಿ ಶನಿವಾರ ರಾತ್ರಿ ಲಾರಿಗಳೆರಡು ಢಿಕ್ಕಿ ಹೊಡೆದು ಓರ್ವ ಚಾಲಕ ಗಂಭೀರ ವಾಗಿ ಗಾಯಗೊಂಡಿದ್ದಾರೆ. ಕೊಳ್ನಾಡಿನ ಪೆಟ್ರೋಲ್‌ ಪಂಪ್‌ನಲ್ಲಿ ಇಂಧನ ತುಂಬಿಸಿ ಉಡುಪಿ ಕಡೆಗೆ ಬರಲೆಂದು ಹೆದ್ದಾರಿ ದಾಟುತ್ತಿದ್ದ ಲಾರಿಗೆ ಮಂಗಳೂರು ಕಡೆಯಿಂದ ಬಂದ ಲಾರಿಯು…

 • 2020ರಲ್ಲಿ ಮತ್ತೆ ಚುನಾವಣೆ: ಮಾಜಿ ಸಿಎಂ ಸಿದ್ಧರಾಮಯ್ಯ ಭವಿಷ್ಯ

  ಮೂಡುಬಿದಿರೆ: ಹೇಳಿಕೊಳ್ಳುವ ಯಾವುದೇ ಸಾಧನೆಯಿಲ್ಲದ, ಜನಪರ ಕಾರ್ಯಕ್ರಮಗಳಿಲ್ಲದ ಯಡಿಯೂರಪ್ಪ ನೇತೃತ್ವದ ಸರಕಾರ ಪತನಗೊಳ್ಳುವ ಎಲ್ಲ ಸಾಧ್ಯತೆಗಳಿವೆ. ಸರಕಾರ ಪತನಗೊಂಡು 2020ರಲ್ಲಿ ಮತ್ತೆ ಚುನಾವಣೆ ನಡೆಯಲಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭವಿಷ್ಯ ನುಡಿದರು. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ನೆರೆಪೀಡಿತ…

ಹೊಸ ಸೇರ್ಪಡೆ