ಅಜಯ್ ಪೃಥ್ವಿ ನಟನೆಯ ‘ನಾಟ್ಔಟ್’ ಸಿನಿಮಾದ ಮೋಶನ್ ಪೋಸ್ಟರ್ ರಿಲೀಸ್
Team Udayavani, Nov 25, 2022, 5:40 PM IST
ಕನ್ನಡ ಚಿತ್ರರಂಗಕ್ಕೆ ಈಗ ಹೊಸದಾಗಿ ಬರುವ ಪ್ರತಿಭೆಗಳು ಒಂದಷ್ಟು ಪೂರ್ವ ತಯಾರಿಯೊಂದಿಗೆ ಬರುತ್ತಾರೆ. ಈ ಸಾಲಿಗೆ ಹೊಸ ಸೇರ್ಪಡೆ ಅಜಯ್ ಪೃಥ್ವಿ. ಯಾರು ಈ ಅಜಯ್ ಪೃಥ್ವಿ ಎಂದರೆ “ನಾಟ್ ಔಟ್’ ಸಿನಿಮಾದ ಹೀರೋ.
ಹೌದು, “ನಾಟ್‌ಔಟ್’ ಎಂಬ ಸಿನಿಮಾವೊಂದು ಸದ್ದಿಲ್ಲದೇ ತಯಾರಾಗಿ ಬಿಡುಗಡೆ ಹಂತಕ್ಕೆ ಬಂದಿದೆ. ನಾಯಕ ಅಜಯ್ ಪೃಥ್ವಿ ಹೀರೋ ಆಗುವ ಮುನ್ನ ವಿದೇಶದಲ್ಲಿ ನಟನಾ ತರಬೇತಿ ಪಡೆದಿದ್ದಾರೆ. ಇತ್ತೀಚೆಗೆ ಅವರ ನಟನೆಯ “ನಾಟ್ ಔಟ್’ ಚಿತ್ರದ ಮೋಶನ್ ಪೋಸ್ಟರ್ ಬಿಡುಗಡೆಯಾಗಿದೆ.
ರಾಷ್ಟ್ರಕೂಟ ಪಿಕ್ಚರ್ಸ್’ ಲಾಂಛನ ದಲ್ಲಿ ವಿ.ರವಿಕುಮಾರ್ ಹಾಗೂ ಶಮುದ್ದೀನ್ ಎ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಅಂಬರೀಶ್ ಈ ಸಿನಿಮಾ ನಿರ್ದೇಶಕರು. ಎಂ.ಎಲ್.ಸಿ ಪುಟ್ಟಣ್ಣ, ನಿರ್ದೇಶಕ ಎ.ಪಿ.ಅರ್ಜುನ್ ಸೇರಿದಂತೆ ಅನೇಕ ಗಣ್ಯರು ಈ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದರು.
“ಕಣ್ಣಿಗೆ ಕಾಣದೆ ಇರುವ ವ್ಯಕ್ತಿ ಕೊಡುವ ತೀರ್ಪು ನಾಟ್‌ಔಟ್ ಪ್ರತಿ ಆಟದಲ್ಲಿ ಒಬ್ಬ ಅಂಪೈರ್ ಇರ್ತಾನೆ. ಜೀವನದ ಆಟಕ್ಕೂ ಒಬ್ಬ ಅಂಪೈರ್ ಇರ್ತಾನೆ.. ಈ ಚಿತ್ರದಲ್ಲಿ ಹುಲಿ – ಕುರಿ ಎಂಬ ಹಳ್ಳಿ ಸೊಗಡಿನ ಆಟವನ್ನ ಹೇಗೆ ಆಡುತ್ತಾರೋ, ಅದೇ ರೀತಿ ಚಿತ್ರದ ಕಥೆ ಸಾಗುತ್ತೆ’ ಎನ್ನುವುದು ನಿರ್ದೇಶಕ ಅಂಬರೀಶ್ ನೀಡುವ ವಿವರ.
ನಾಯಕ ಅಜಯ್ ಪೃಥ್ವಿ ಮಾತನಾಡಿ, “ನಾನು ಏಕಾಏಕಿ ಚಿತ್ರರಂಗಕ್ಕೆ ಬಂದಿಲ್ಲ. ಐದನೇ ತರಗತಿಯಿಂದಲೇ ಬಿಂಬ ಮೂಲಕ ಸಾಕಷ್ಟು ಕಲಿತೆ. ನಂತರ ಪ್ರಸಿದ್ಧ ತರಬೇತಿ ಶಾಲೆಯಲ್ಲಿ ನಟನೆ ಕೂಡ ಕಲಿತೆ. ಮೆಹಬೂಬ ಚಿತ್ರದಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಇನ್ನೂ ಮೂರು, ನಾಲ್ಕು ಚಿತ್ರಗಳಲ್ಲೂ ಅಭಿನಯಿಸಿದ್ದೇನೆ. ಈಗ ನಾಟ್ ಔಟ್ ಚಿತ್ರದಲ್ಲಿ ನಟಿಸಿದ್ದೇನೆ. ಚಿತ್ರ ಹಾಗೂ ನನ್ನ ಪಾತ್ರ ಚೆನ್ನಾಗಿದೆ’ ಎಂದರು.
ಚಿತ್ರದಲ್ಲಿ ರಚನಾ ಇಂದರ್ ನಾಯಕಿ. ಉಳಿದಂತೆ ರವಿಶಂಕರ್, ಕಾಕ್ರೋಜ್ ಸುಧಿ, ಗೋಪಾಲಕೃಷ್ಣ ದೇಶಪಾಂಡೆ, ಗೋವಿಂದೇಗೌಡ, ಪ್ರಶಾಂತ್ ಸಿದ್ದಿ ಮುಂತಾದವರು ತಾರಾಬಳಗದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನೀವು ಈಗ ನೋಡಿರುವುದು ʼಕಾಂತಾರ-2” ಮುಂದೆ ಬರುವುದು ʼಕಾಂತಾರ -1” : ರಿಷಬ್ ಶೆಟ್ಟಿ
ಖಾಕಿ ತೊಟ್ಟು ಖಡಕ್ ಆಫೀಸರ್ ಆದ ಡಾಲಿ: ‘ಹೊಯ್ಸಳ’ ಚಿತ್ರದ ಟೀಸರ್ ಔಟ್
‘ಡಾಲರ್ಸ್ ಪೇಟೆ’ಯಲ್ಲಿ ಕೆಜಿಎಫ್ ಗರುಡ ರಾಮ್ ಸಹೋದರ ವೆಂಕಟ್ ರಾಜ್ ಡಾನ್
ಪ್ರಭುದೇವ ಅಭಿನಯದ “wolf” ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿದ ಶಿವರಾಜಕುಮಾರ್
ನಾದಿನಿಗೆ ದೈಹಿಕ, ವರದಕ್ಷಿಣೆ ಕಿರುಕುಳ: ಡ್ಯಾನ್ಸರ್ ಸ್ವಪ್ನ ಚೌಧರಿ, ಕುಟುಂಬದ ವಿರುದ್ಧ FIR