ಎರಡನೇ ವರ್ಷಕ್ಕೆ ಕಾಲಿಟ್ಟ ನವರಸ ನಟನ ಅಕಾಡೆಮಿ


Team Udayavani, Jan 31, 2019, 7:42 AM IST

navarasa.jpg

ನಿರ್ದೇಶಕ ಎಸ್‌.ನಾರಾಯಣ್‌ ಪ್ರಾಂಶುಪಾಲರಾಗಿರುವ ‘ನವರಸ ನಟನ ಅಕಾಡೆಮಿ’ ಇದೀಗ ಎರಡನೇ ವರ್ಷಕ್ಕೆ ಕಾಲಿಟ್ಟಿದೆ. ಕಳೆದ ವರ್ಷ ಶುರುವಾದ ಈ ಸಂಸ್ಥೆ ಯಶಸ್ವಿಯಾಗಿ ನಡೆದಿದ್ದು, ಎರಡನೇ ವರ್ಷದ ಮೊದಲ ತರಗತಿ ಫೆ.10 ರಿಂದ ಪ್ರಾರಂಭವಾಗಲಿದೆ. ಕಳೆದ ವರ್ಷ ವಿದ್ಯಾರ್ಥಿಗಳ ಮೂರು ತಂಡ ರಚಿಸಿದ್ದು, ನಟನೆ, ನಿರ್ದೇಶನ, ಈಜು, ನೃತ್ಯ, ಸಾಹಸ ಮತ್ತು ಚಿತ್ರೀಕರಣದ ಅನುಭವ, ಪೋಸ್ಟ್‌ ಪ್ರೊಡಕ್ಷನ್‌ ಸೇರಿದಂತೆ ಇತರೆ ವಿಷಯಗಳ ಬಗ್ಗೆ ತರಬೇತಿ ನೀಡಲಾಗಿದೆ.

ಈ ಕುರಿತು ಮಾಹಿತಿ ನೀಡುವ ಎಸ್‌.ನಾರಾಯಣ್‌, ‘ಸಾಮಾನ್ಯವಾಗಿ ತರಬೇತಿ ಕೇಂದ್ರ ಅಂದಾಕ್ಷಣ ಪುಸ್ತಕದ ಬೋಧನೆ ಮಾತ್ರ ಇರುತ್ತದೆ ಎಂಬ ಭಾವನೆ ಎಲ್ಲರಲ್ಲೂ ಇರುತ್ತದೆ. ಆದರೆ, ನವರಸ ನಟನ ಅಕಾಡೆಮಿಯಲ್ಲಿ ಕಳೆದ ಒಂದು ವರ್ಷದಲ್ಲಿ ಮೂರು ತಂಡದ ವಿದ್ಯಾರ್ಥಿಗಳು ಸಿನಿಮಾಗೆ ಬೇಕಾದ ಎಲ್ಲಾ ಚಟುವಟಿಕೆಗಳಲ್ಲೂ ತೊಡಗಿಕೊಂಡು ಸಾಕಷ್ಟು ಕಲಿತಿದ್ದಾರೆ.

ಈ ಅಕಾಡೆಮಿಯಲ್ಲಿ ಬೋಧನೆಗಿಂತ ಪ್ರಾಯೋಗಿಕವಾಗಿ ಕಲಿಸಿಕೊಡಲಾಗುತ್ತದೆ. ಇಲ್ಲಿ ತರಬೇತಿ ಪಡೆದ ಬಹುತೇಕರು ಕಿರುಚಿತ್ರ ತಯಾರಿಸಿದ್ದಾರೆ. ಕಿರುತೆರೆ, ಹಿರಿತೆರೆಯಲ್ಲೂ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಕಳೆದ ವರ್ಷಕ್ಕಿಂತ ಈ ವರ್ಷ ಮತ್ತಷ್ಟು ಹೆಚ್ಚಿನ ಕಲಿಕೆ ಕೊಡುವ ಸವಾಲು ನಮ್ಮ ಮುಂದಿದೆ.

ಈ ಸಾಲಿನಲ್ಲಿ ಮೇಕಪ್‌, ಸಂಕಲನ ಮತ್ತು ಕಲಾ ವಿಭಾಗವನ್ನೂ ಸೇರ್ಪಡೆ ಮಾಡಿಕೊಳ್ಳಲಾಗಿದೆ. ದೂರದ ಊರುಗಳಿಂದ ಬರುವ ಆಸಕ್ತರು ಇಲ್ಲಿ ಎಲ್ಲಾ ಕಲೆಯ ತರಬೇತಿ ಪಡೆದುಕೊಳ್ಳಬಹುದಾಗಿದೆ. ಈ ಅಕಾಡೆಮಿಯ ವಿಶೇಷವೆಂದರೆ, ಮಹಿಳಾ ವಿದ್ಯಾರ್ಥಿಗಳಿಗೆ ಶುಲ್ಕದಲ್ಲಿ ಶೇ.40 ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, ಆ ಮೂಲಕ ಪ್ರೋತ್ಸಾಹಿಸಲು ಅಕಾಡೆಮಿ ಮುಂದಾಗಿದೆ’ ಎನ್ನುತ್ತಾರೆ ನಾರಾಯಣ್‌.

ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮಾಲೂರು ಶ್ರೀನಿವಾಸ್‌ ಅವರು, ನಟ ಜಗ್ಗೇಶ್‌ ಸಹಕಾರದೊಂದಿಗೆ ಒಂದು ವರ್ಷ ಯಶಸ್ವಿಯಾಗಿ ಪೂರ್ಣಗೊಳಿಸಿ, ಎರಡನೇ ವರ್ಷಕ್ಕೆ ಕಾಲಿಟ್ಟ ಖುಷಿಯಲ್ಲಿದ್ದಾರೆ. ಇನ್ನು, ಈ ಅಕಾಡೆಮಿಯಲ್ಲಿ

ನಿರ್ದೇಶಕರಾದ ಎಸ್‌. ಮಹೇಂದರ್‌, ಲಕ್ಕಿ ಶಂಕರ್‌ ಮತ್ತು ನೀನಾಸಂ ಬಳಗದ ಹಿರಿಯರು ವಿದ್ಯಾರ್ಥಿಗಳಿಗೆ ನಟನೆ, ನಿರ್ದೇಶನ, ಡೈಲಾಗ್‌ ಡೆಲಿವರಿ ಹಾಗೂ ಕ್ಯಾಮೆರಾ ಮುಂದೆ ನಿಲ್ಲುವ ಕುರಿತಂತೆ ವಿದ್ಯಾರ್ಥಿಗಳಿಗೆ ತರಬೇತಿ ಕೊಡಲಿದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳಿಂದಲೇ ಕಿರುಚಿತ್ರ ಸಿದ್ದಪಡಿಸುವಂತೆ ಪ್ರೋತ್ಸಾಹಿಸಿ, ನಂತರ ಅವರಿಗೆ ಅರ್ಹತಾ ಪತ್ರ ವಿತರಿಸಲಾಗುತ್ತದೆ.

ಸದಾಶಿವನಗರ ದಲ್ಲಿರುವ ಈ ನವರಸ ನಟನ ಅಕಾಡೆಮಿ ಯಲ್ಲಿ ನಾಲ್ಕು ಮತ್ತು ಆರು ತಿಂಗಳ ನಟನೆ ಹಾಗು ನಿರ್ದೇಶನದ ಕೋರ್ಸ್‌ ನಡೆಯಲಿದೆ. ವಾರಾಂತ್ಯದಲ್ಲಿ ತರಗತಿಗಳು ನಡೆಯಲಿದ್ದು, ಎಲ್ಲಾ ತರಗತಿಗಳು ಫೆ.10 ರಿಂದ ಆರಂಭವಾಗಲಿವೆ.

ಟಾಪ್ ನ್ಯೂಸ್

11

Siruguppa: ಸಾರ್ವಜನಿಕ ಗ್ರಂಥಾಲಯದಲ್ಲಿ ಶೌಚಕ್ಕಾಗಿ ಸಾಲುಗಟ್ಟಿ ನಿಂತಿರುವ ವಿದ್ಯಾರ್ಥಿನಿಯರು

Veerashaiva-Lingayat separate religion recognition protest back to fore: Eshwar Khandre

ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಹೋರಾಟ ಮತ್ತೆ ಮುನ್ನೆಲೆಗೆ: ಖಂಡ್ರೆ

13

Tollywood: ಚಿರಂಜೀವಿ ನಾಲ್ಕು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ – ರಾಮ್‌ ಚರಣ್

Rahul Gandhi (3)

EVM ವಿಚಾರ; ಮಸ್ಕ್ ಹೇಳಿಕೆಗೆ ರಾಹುಲ್ ಗಾಂಧಿ ಪ್ರತಿಕ್ರಿಯೆ : ಬಿಜೆಪಿ ಆಕ್ರೋಶ

9

ನಿಮಿರು ದೌರ್ಬಲ್ಯ ಚಿಕಿತ್ಸೆಯಲ್ಲಿ ಜೀವನ ವಿಧಾನ ಮತ್ತು ಆಹಾರ ಶೈಲಿ ಬದಲಾವಣೆಗಳು

12

ಕಾಯಲು ಇರುವವಳು: ಮೂಕ ಭಾಷೆ… ಮೌನ ಸಂದೇಶ

Kalaburagi; ತೈಲ ಬೆಲೆ‌ ಏರಿಕೆಗೆ ಸಮರ್ಥನೆ; ಅಕ್ಷರ ಆವಿಷ್ಕಾರಕ್ಕೆ ಬಿ.ಆರ್ ಪಾಟೀಲ ಅಪಸ್ವರ

Kalaburagi; ತೈಲ ಬೆಲೆ‌ ಏರಿಕೆಗೆ ಸಮರ್ಥನೆ; ಅಕ್ಷರ ಆವಿಷ್ಕಾರಕ್ಕೆ ಬಿ.ಆರ್ ಪಾಟೀಲ ಅಪಸ್ವರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Raakha Directed by Malavalli Saikrishna

ಸಂಬಂಧದ ಸುತ್ತ ರಾಖಾ; ಮಳವಳ್ಳಿ ಸಾಯಿಕೃಷ್ಣ ನಿರ್ದೇಶನ

Gowri Movie Dhool Yebsava Video Song

Samarjith lankesh; ಧೂಳ್‌ ಎಬ್ಬಿಸುತ್ತ ಬಂದ ಗೌರಿ ಹಾಡು

Krishna-Milana photoshoot to celebrate the arrival of a new guest

Krishna – Milana; ಹೊಸ ಅತಿಥಿಯ ಆಗಮನದ ಖುಷಿಯಲ್ಲಿ ಕೃಷ್ಣ-ಮಿಲನಾ ಫೋಟೋಶೂಟ್

1

ಐ ಮಿಸ್‌ ಯೂ ಅಪ್ಪಾ.. ನೀವು ಯಾವಾಗಲೂ ನನ್ನ ಹೀರೋ.. ದರ್ಶನ್‌ ಪುತ್ರನಿಂದ ಮತ್ತೊಂದು ಪೋಸ್ಟ್

200 days of shooting for yash toxic movie

Yash ಟಾಕ್ಸಿಕ್‌ ಸಿನಿಮಾ 200 ದಿನಗಳ ಶೂಟಿಂಗ್‌; ಬಹುತೇಕ ಲಂಡನ್ ನಲ್ಲಿ ಚಿತ್ರೀಕರಣ

MUST WATCH

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

udayavani youtube

ಕಾಂಗ್ರೆಸ್ ಹಿರಿಯ ಶಾಸಕ ಸಿ.ಎಸ್.ನಾಡಗೌಡರಿಂದ ರಾಜಕೀಯ ತ್ಯಾಗದ ಮಾತು

udayavani youtube

ಇಳಿಕೆಯಾದ ಘಟಪ್ರಭಾ ನದಿ

ಹೊಸ ಸೇರ್ಪಡೆ

Raakha Directed by Malavalli Saikrishna

ಸಂಬಂಧದ ಸುತ್ತ ರಾಖಾ; ಮಳವಳ್ಳಿ ಸಾಯಿಕೃಷ್ಣ ನಿರ್ದೇಶನ

11

Siruguppa: ಸಾರ್ವಜನಿಕ ಗ್ರಂಥಾಲಯದಲ್ಲಿ ಶೌಚಕ್ಕಾಗಿ ಸಾಲುಗಟ್ಟಿ ನಿಂತಿರುವ ವಿದ್ಯಾರ್ಥಿನಿಯರು

Veerashaiva-Lingayat separate religion recognition protest back to fore: Eshwar Khandre

ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮದ ಮಾನ್ಯತೆ ಹೋರಾಟ ಮತ್ತೆ ಮುನ್ನೆಲೆಗೆ: ಖಂಡ್ರೆ

10-

Kandagal: ಗಬ್ಬೆದು ನಾರುತ್ತಿರುವ ಮಲೀನ ನೀರು; ನರಕಯಾತನೆ ಅನುಭವಿಸುತ್ತಿರುವ ನಿವಾಸಿಗಳು

13

Tollywood: ಚಿರಂಜೀವಿ ನಾಲ್ಕು ಹೊಸ ಸಿನಿಮಾಗಳನ್ನು ಒಪ್ಪಿಕೊಂಡಿದ್ದಾರೆ – ರಾಮ್‌ ಚರಣ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.