“ದಬಾಂಗ್‌’ನಲ್ಲಿ ಸುದೀಪ್‌ ಬಲ್ಲಿ ಸಿಂಗ್‌

ಪೋಸ್ಟರ್‌ ಹಂಚಿಕೊಂಡ ಸಲ್ಮಾನ್‌ ಖಾನ್‌

Team Udayavani, Oct 9, 2019, 3:05 AM IST

ಸಲ್ಮಾನ್‌ ಖಾನ್‌ ಅಭಿನಯದ “ದಬಾಂಗ್‌-3′ ಚಿತ್ರದಲ್ಲಿ ನಟ ಸುದೀಪ್‌ ವಿಲನ್‌ ಪಾತ್ರ ಮಾಡುತ್ತಿರುವ ವಿಚಾರ ನಿಮಗೆ ಗೊತ್ತೆ ಇದೆ. ಆದರೆ, ಸುದೀಪ್‌ ಅವರ ಗೆಟಪ್‌, ಲುಕ್‌ ಹೇಗಿರುತ್ತದೆ ಎಂಬ ಬಗ್ಗೆ ಅವರ ಅಭಿಮಾನಿಗಳಿಗೆ ಕುತೂಹಲವಿತ್ತು. ಈಗ ಆ ಕುತೂಹಲಕ್ಕೆ ಉತ್ತರ ಸಿಕ್ಕಿದೆ. ಕುತೂಹಲಕ್ಕೆ ಉತ್ತರ ನೀಡಿರೋದು ಬೇರಾರು ಅಲ್ಲ, “ದಬಾಂಗ್‌-3′ ಚಿತ್ರದ ಹೀರೋ ಸಲ್ಮಾನ್‌ ಖಾನ್‌! ಹೌದು, ಹೀಗೆಂದರೆ ನಿಮಗೆ ಆಶ್ವರ್ಯವಾಗಬಹುದು.

ಆದರೂ ಸತ್ಯ. ಚಿತ್ರದ ಸುದೀಪ್‌ ಪಾತ್ರದ ಪರಿಚಯವನ್ನು ಸ್ವತಃ ಸಲ್ಮಾನ್‌ ಖಾನ್‌ ಮಾಡಿದ್ದು, ಪೋಸ್ಟರ್‌ ಹಂಚಿಕೊಂಡು, ಚಿತ್ರದಲ್ಲಿ ಸುದೀಪ್‌ ಬಲ್ಲಿ ಸಿಂಗ್‌ ಎಂಬ ಪಾತ್ರ ಮಾಡುತ್ತಿರುವುದಾಗಿ ಹೇಳಿದ್ದಾರೆ. ಜೊತೆಗೆ ವಿಲನ್‌ ಎಷ್ಟೇ ಬಲಶಾಲಿಯಾಗಿದ್ದರೂ ಆತನನ್ನು ಆಟವಾಡಿಸೋದರಲ್ಲಿ ಇರೋ ಮಜಾನೇ ಬೇರೆ’ ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಸುದೀಪ್‌ ಕೂಡಾ ಟ್ವೀಟರ್‌ ಮೂಲಕ ಪ್ರತಿಕ್ರಿಯೆ ನೀಡಿ, “ದಬಾಂಗ್‌-3′ ಸಿನಿಮಾದಲ್ಲಿ ನಟಿಸಿದ ಖುಷಿ ಹಂಚಿಕೊಂಡಿದ್ದಾರೆ. ಜೊತೆಗೆ “ವಿಲನ್‌ಗೆ ಹೀರೋ ಮೇಲೆ ಪ್ರೀತಿಯಾಗಿದೆ’ ಎನ್ನುತ್ತಾ ಸಲ್ಮಾನ್‌ ಖಾನ್‌ ಜೊತೆ ನಟಿಸಿದ ಅನುಭವವನ್ನು ಬರೆದುಕೊಂಡಿದ್ದಾರೆ.

ಅಂದಹಾಗೆ, “ದಬಾಂಗ್‌-3′ ಚಿತ್ರವನ್ನು ಪ್ರಭುದೇವ ನಿರ್ದೇಶಿಸುತ್ತಿದ್ದು, ಚಿತ್ರ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ. ಈ ಹಿಂದೆ ಸುದೀಪ್‌, ಸಲ್ಮಾನ್‌ ಚಿತ್ರದಲ್ಲಿ ನಟಿಸುತ್ತಾರೆಂದು ಸುದ್ದಿಯಾಗಿತ್ತಾದರೂ ಅದು ಆಗಿರಲಿಲ್ಲ. ಈಗ “ದಬಾಂಗ್‌-3′ ಚಿತ್ರದ ಮೂಲಕ ಅದು ಸಾಧ್ಯವಾಗಿದೆ. ಚಿತ್ರ ಡಿಸೆಂಬರ್‌ 20ರಂದು ತೆರೆಕಾಣುತ್ತಿದೆ. ಸದ್ಯ ಸುದೀಪ್‌ ನಟನೆಯ “ಪೈಲ್ವಾನ್‌’ ಚಿತ್ರ ಪ್ರದರ್ಶನ ಕಾಣುತ್ತಿದ್ದು, “ಕೋಟಿಗೊಬ್ಬ-3′ ಚಿತ್ರೀಕರಣದಲ್ಲಿ ಬಿಝಿಯಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ