ರಿಲೀಸ್ ಆಯ್ತು ರಾನು ಮಂಡಲ್ ಹಾಡಿದ ‘ತೇರಿ ಮೇರಿ ಕಹಾನಿ’ ಟೀಸರ್ ; ಫುಲ್ ಸಾಂಗ್ ಇಂದೇ!

Team Udayavani, Sep 11, 2019, 1:11 AM IST

ಮುಂಬೈ: ತನ್ನ ಆಕರ್ಷಕ ಕಂಠಸಿರಿಯ ಮೂಲಕ ರೈಲ್ವೇ ಫ್ಲಾಟ್ ಫಾರಂನಿಂದ ಬಾಲಿವುಡ್ ಗೆ ಎಂಟ್ರಿಕೊಟ್ಟ ರಾನು ಮಂಡಲ್ ಎಂಬ ಹೊಸ ಶೋಧ ಹಾಡಿರುವ ಸೆನ್ಷೇಷನಲ್ ಹಿಂದಿ ಹಾಡು ‘ತೇರಿ ಮೇರಿ ಕಹಾನಿ’ಯ ಟೀಸರ್ ಇದೀಗ ಬಿಡುಗಡೆಗೊಂಡಿದ್ದು ಎಲ್ಲೆಡೆ ಭಾರೀ ಸದ್ದು ಮಾಡುತ್ತಿದೆ.

ಕೊಲ್ಕೊತ್ತಾದ ರೈಲ್ವೇ ಫ್ಲಾಟ್ ಫಾರಂನಲ್ಲಿ ರಾನು ಹಾಡಿದ ‘ಏಕ್ ಪ್ಯಾರ್ ಕಾ ನಗ್ಮಾ ಹೈ’ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ಹಿಟ್ ಆದ ಬಳಿಕ ಅಕೆ ಬಾಲಿವುಡ್ ನಲ್ಲಿ ಅಧಿಕೃತವಾಗಿ ಹಾಡಿದ ಪ್ರಥಮ ಹಾಡು ಇದಾಗಿದೆ. ಗಾಯಕ ಮತ್ತು ಸಂಗೀತ ನಿರ್ದೇಶಕ ಹಿಮೇಶ್ ರೇಷಿಮಿಯಾ ಅವರು ರಾನು ಮಂಡಲ್ ಗೆ ಬಾಲಿವುಡ್ ನಲ್ಲಿ ಹಾಡುವ ಮೊದಲ ಚಾನ್ಸ್ ನೀಡಿದ್ದರು.

ಈ ಟೀಸರ್ ನಲ್ಲಿ ಹಾಡು ಪ್ರಾರಂಭವಾಗುವ ಮೊದಲು ‘ಕನಸು ಕಾಣುವುದನ್ನು ಎಂದೂ ನಿಲ್ಲಿಸಬೇಡಿ’ ಎಂದು ಹೆಳುವ ಹಿಮೇಶ್ ಅವರ ಧ್ವನಿ ಹಿನ್ನಲೆಯಲ್ಲಿ ಕೇಳಿಸುತ್ತದೆ.  ‘ತೇರಿ ಮೇರಿ ಕಹಾನಿ’ಯ ಪೂರ್ತಿ ಹಾಡು ಇಂದೇ ರಿಲೀಸ್ ಆಗಲಿದೆ.

ರಾನು ಅವರ ಹಾಡಿನ ಈ ಟೀಸರ್ ಗೆ ಯೂ ಟ್ಯೂಬ್ ನಲ್ಲಿ ಈಗಾಗಲೇ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದ್ದು ಈಗಾಗಲೇ ಏಳೂವರೆ ಲಕ್ಷ ವೀಕ್ಷಣೆಗೆ ಒಳಗಾಗಿದ್ದಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ