‘ಮೋಹನದಾಸ’ ಚಿತ್ರ ವಿಮರ್ಶೆ: ಪಾಪು ಬಾಪುವಿನ ಸುತ್ತ ಒಂದು ನೋಟ… 

Team Udayavani, Oct 2, 2021, 11:37 AM IST

ಮೋಹನದಾಸ

ಮಹಾತ್ಮ ಗಾಂಧಿ ಕುರಿತು ನೂರಾರು ಕೃತಿಗಳು ಬೇರೆ ಬೇರೆ ಭಾಷೆಯಲ್ಲಿ ಪ್ರಕಟಗೊಂಡಿವೆ. ಸ್ವತಃ ಮಹಾತ್ಮಗಾಂಧಿ ಅವರ ಆತ್ಮ ಚರಿತ್ರೆ ಕೂಡ ನೂರಕ್ಕೂ ಹೆಚ್ಚು ಭಾಷೆಗಳಿಗೆ ಅನುವಾದವಾಗಿದೆ.

ಆದರೆ ಪುಸ್ತಕ ರೂಪದಲ್ಲಿ, ಅಕ್ಷರದೊಳಗಿದ್ದ ಗಾಂಧಿ ವ್ಯಕ್ತಿತ್ವ, ಅವರ ಜೀವನಗಾಥೆ ಸಿನಿಮಾವಾಗಿ ದೃಶ್ಯರೂಪದಲ್ಲಿ ತೆರೆಮೇಲೆ ಬಂದಿದ್ದು ಇಲ್ಲಿಯವರೆಗೆ ಬೆರಳೆಣಿಕೆಯಷ್ಟು ಮಾತ್ರ. ಈಗ ಸಾಲಿಗೆ ಸೇರ್ಪಡೆಯಾಗಿರುವ ಮತ್ತೂಂದು ಸಿನಿಮಾ “ಮೋಹನದಾಸ’ ಹೆಸರೇ ಹೇಳುವಂತೆ, “ಮೋಹನದಾಸ’ ಗಾಂಧಿಯ ಬಾಲ್ಯವನ್ನು ತೆರೆಮೇಲೆ ತೆರೆದಿಡುವ ಚಿತ್ರ.

6 ವರ್ಷದಿಂದ 14 ವರ್ಷದ ವರೆಗೆ ಮೋಹನದಾಸನ ಜೀವನದಲ್ಲಿ ನಡೆದ ಪ್ರಮುಖ ಘಟನೆಗಳ ಸುತ್ತ ಇಡೀ ಚಿತ್ರ ಸಾಗುತ್ತದೆ. ಬಾಲ್ಯದಲ್ಲಿ ಮೋಹನದಾಸನ ಮೇಲೆ ಪರಿಣಾಮ ಬೀರಿದ ಶ್ರವಣ ಕುಮಾರ ಮತ್ತು ಸತ್ಯಹರಿಶ್ಚಂದ್ರನ ಕಥೆಗಳು, ಸ್ನೇಹಿತರ ಸಂಗದಿಂದ ಧೂಮಪಾನ, ಮಾಂಸಹಾರ ಸೇವನೆ ಮಾಡಿದ್ದು, ವೇಶ್ಯೆಯ ಸಂಗ ಬಯಸಿದ್ದು ಹೀಗೆ ಗಾಂಧಿ ಜೀವನದಲ್ಲಿ ನಡೆದ ಹತ್ತಾರು ನೈಜ ಮತ್ತು ಸೂಕ್ಷ್ಮ ಘಟನೆಗಳನ್ನು “ಮೋಹನದಾಸ’ನ ಮೂಲಕ ತೆರೆಮೇಲೆ ಹೇಳಲಾಗಿದೆ.

ಇದನ್ನೂ ಓದಿ:ಬಡತನದ ದಿರಿಸು ಧರಿಸಿದ ಸಿರಿವಂತ

“ಮೋಹನದಾಸ’ ಚಿತ್ರದಲ್ಲಿ 6 ವರ್ಷದ ಗಾಂಧಿಯ ಪಾತ್ರದಲ್ಲಿ ಪರಂ ಸ್ವಾಮಿ ಮತ್ತು 14 ವರ್ಷದ ಗಾಂಧಿಯ ಪಾತ್ರದಲ್ಲಿ ಸಮರ್ಥ್ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಮೋಹನದಾಸನ ತಾಯಿಯಾಗಿ ಹಿರಿಯ ನಟಿ ಶ್ರುತಿ, ತಂದೆಯ ಪಾತ್ರದಲ್ಲಿ ಅನಂತ್‌ ಮಹಾದೇವನ್‌, ಕಥೆಗಾರನಾಗಿ ದತ್ತಣ್ಣ ಪ್ರಮುಖ ಪಾತ್ರಗಳಿಗೆ ಜೀವ ತುಂಬಿದ್ದಾರೆ.

ಗಾಂಧಿ ಬಾಲ್ಯದ ಜೀವನದ ಪ್ರಮುಖ ಘಟ್ಟಗಳು ಮತ್ತು ಘಟನೆಗಳಿಗೆ ಸಾಕ್ಷಿಯಾಗಿದ್ದ ಪೋರಬಂದರ್‌ ಮತ್ತು ರಾಜ್‌ಕೋಟ್‌ನಲ್ಲಿಯೇ ಚಿತ್ರದ ಅನೇಕ ದೃಶ್ಯಗಳನ್ನು ಚಿತ್ರೀಕರಿಸಲಾಗಿದೆ. ಜಿ.ಎಸ್‌ ಭಾಸ್ಕರ್‌ ಛಾಯಾಗ್ರಹಣ ಮತ್ತು ಬಿ.ಎಸ್‌ ಕೆಂಪರಾಜು ಸಂಕಲನ “ಮೋಹನದಾಸ’ನ ದೃಶ್ಯಗಳನ್ನು ಅಚ್ಚುಕಟ್ಟಾಗಿ ತೆರೆಮೇಲೆ ಕಾಣುವಂತೆ ಮಾಡಿದೆ. ಗಾಂಧಿ ಜಯಂತಿ ಮಾಸದಲ್ಲೇ ತೆರೆಗೆ ಬಂದಿರುವ ಬಾಪು ಬಾಲ್ಯದ ಕಥೆ “ಮೋಹನದಾಸ’ನನ್ನು ಮಕ್ಕಳ ಜೊತೆ ಪೋಷಕರು ಒಮ್ಮೆ ನೋಡಿಬರಲು ಅಡ್ಡಿಯಿಲ್ಲ.

ಟಾಪ್ ನ್ಯೂಸ್

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

Basavaraj Bommai; ನನ್ನ ಅವಧಿಯಲ್ಲಿ ಮುಸ್ಲಿಂ ಮೀಸಲು ಅಫಿದವಿತ್‌ ಸಲ್ಲಿಸಿಲ್ಲ

1-ewewqe

IPL; ಕೆಕೆಆರ್‌ ನೀಡಿದ 262 ರನ್ ಗುರಿ ತಲುಪಿ ದಾಖಲೆ ಬರೆದ ಪಂಜಾಬ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kohli IPL 2024

IPL; 10 ಸೀಸನ್‌, 400 ರನ್‌: ಕೊಹ್ಲಿ ಸಾಧನೆ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Lok Sabha Election ಮುಗಿದ ಮತದಾನ, ಈಗ ಸೋಲು-ಗೆಲುವಿನ ಲೆಕ್ಕಾಚಾರ

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

Siddaramaiah ಮುಸ್ಲಿಂ ಮೀಸಲಾತಿ ಬಗ್ಗೆ ಬಿಜೆಪಿಯಿಂದ ಸುಳ್ಳು

1-wewqewq

T20 World Cup; ಯುವರಾಜ್‌ ಸಿಂಗ್‌ ರಾಯಭಾರಿ: ಐಸಿಸಿ ಘೋಷಣೆ 

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Neha Hiremath Case ಮೊದಲ ದಿನವೇ ತನಿಖೆ ದಾರಿ ತಪ್ಪಿದೆ: ಬೊಮ್ಮಾಯಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.