ಲಂಬೋದರನ ಹಾಸ್ಯಪ್ರಸಂಗ

ಚಿತ್ರ ವಿಮರ್ಶೆ

Team Udayavani, Mar 31, 2019, 11:30 AM IST

Londannalli-Lambodara

ಬಾಲ್ಯದಿಂದಲೇ ಆತನಿಗೆ ಲಂಡನ್‌ ಕನಸು. ಅದಕ್ಕೆ ಕಾರಣ ಜ್ಯೋತಿಷ್ಯ. ಸಿಕ್ಕಾಪಟ್ಟೆ ಭವಿಷ್ಯ, ಜ್ಯೋತಿಷ್ಯ ನಂಬುವ ಲಂಬೋದರ ತುಂಬಾ ಸೊಂಬೇರಿ. ಈ ಸೊಂಬೇರಿ ಲಂಬೋದರನ ಬಾಲ್ಯದ ಕನಸು ಹೇಗೋ ನನಸಾಗಿ ಆತ ಲಂಡನ್‌ಗೆ ಹೋಗಿಯೇ ಬಿಡುತ್ತಾನೆ. ಅಲ್ಲಿಂದ ಆತನ ನಿಜವಾದ ಪೀಕಲಾಟ ಆರಂಭ. ಇದು “ಲಂಡನ್‌ನಲ್ಲಿ ಲಂಬೋದರ’ ಚಿತ್ರದ ಒನ್‌ಲೈನ್‌ ಸ್ಟೋರಿ.

ಇಷ್ಟು ಹೇಳಿದ ಮೇಲೆ ಈ ಸಿನಿಮಾ ಕಾಮಿಡಿ ಹಿನ್ನೆಲೆಯಲ್ಲಿ ಸಾಗುತ್ತದೆ ಎಂದು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ. ನಿರ್ದೇಶಕ ರಾಜ್‌ ಸೂರ್ಯ ಒಂದಷ್ಟು ಘಟನೆಗಳನ್ನಿಟ್ಟು, ಆ ಮೂಲಕ ಒಂದು ಕಾಮಿಡಿ ಎಂಟರ್‌ಟೈನರ್‌ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಮೊದಲೇ ಹೇಳಿದಂತೆ ಲಂಬೋದರ ಒಂದು ಕಾಮಿಡಿ ಸಬ್ಜೆಕ್ಟ್. ಇಡೀ ಸಿನಿಮಾದಲ್ಲಿ ನಿಮಗೆ ಸೀರಿಯಸ್‌ ಅಂಶಗಳು ಕಾಣಸಿಗೋದಿಲ್ಲ.

ಆ ಕಾರಣದಿಂದ ಆಗಾಗ ನಗುವ ಸರದಿ ನಿಮ್ಮದು. ನಿರ್ದೇಶಕರು ಮಾಡಿಕೊಂಡಿರುವ ಒನ್‌ಲೈನ್‌ ಚೆನ್ನಾಗಿದೆ. ಬದುಕು ಕಟ್ಟಿಕೊಳ್ಳಲು ಪರವೂರಿಗೆ ಹೋಗುವ ಮಂದಿಯ ಆಲೋಚನೆಯ ಜೊತೆಗೆ ಕೆಲವೊಮ್ಮೆ ಹೇಗೆ ಅವರು ಸಮಸ್ಯೆಗೆ ಸಿಲುಕುತ್ತಾರೆಂಬ ಅಂಶವನ್ನು ಇಲ್ಲಿ ನಿರ್ದೇಶಕರು ಹೇಳುವ ಪ್ರಯತ್ನ ಮಾಡಿದ್ದಾರೆ. “ಲಂಡನ್‌ನಲ್ಲಿ ಲಂಬೋದರ’ದಲ್ಲಿ ಒಬ್ಬ ಅಮಾಯಕ ಯುವಕನ ಬವಣೆಯನ್ನು ಮಜಾವಾಗಿ ತೋರಿಸಲಾಗಿದೆ.

ಜೊತೆಗೆ ಮೂಢನಂಬಿಕೆಯ ಹಿಂದೆ ಬೀಳಬಾರದು ಎಂಬ ಸಂದೇಶವನ್ನು ಹೇಳುವ ಪ್ರಯತ್ನ ಮಾಡಿದ್ದಾರೆ. ನಿರ್ದೇಶಕ ರಾಜ್‌, ಕಥೆಯನ್ನು ಬೆಳೆಸಿ, ನಿರೂಪಣೆಯಲ್ಲಿ ವೇಗ ಕಾಯ್ದುಕೊಂಡಿದ್ದರೆ ಸಿನಿಮಾ ಪ್ರೇಕ್ಷಕರಿಗೆ ಇನ್ನಷ್ಟು ಹತ್ತಿರವಾಗುತ್ತಿತ್ತು. ಆದರೆ, ಕೆಲವೊಮ್ಮೆ ಸಿನಿಮಾದ ಮೂಲ ಉದ್ದೇಶ ಮರೆತಂತೆ ಕೆಲವು ಪಾತ್ರಗಳು ವರ್ತಿಸುವುದು ಸಿನಿಮಾದ ಮೈನಸ್‌.

ಸಾಮಾನ್ಯವಾಗಿ ಒಬ್ಬ ಹೊಸ ನಾಯಕನ ಇಂಟ್ರೋಡಕ್ಷನ್‌ ಅಂದರೆ ಅಲ್ಲೊಂದಷ್ಟು ಬಿಲ್ಡಪ್‌ಗ್ಳಿರುತ್ತವೆ. ಆದರೆ, ಇಲ್ಲಿ ನಿರ್ದೇಶಕರು ಆ ಗೋಜಿಗೆ ಹೋಗಿಲ್ಲ. ಒಬ್ಬ ಸಾಮಾನ್ಯ ಹುಡುಗ ಹೇಗಿರಬೇಕೋ, ಹಾಗೆಯೇ ಇಲ್ಲಿ ತೋರಿಸಿದ್ದಾರೆ. ಹಾಗಾಗಿ, ನಾಯಕ ಸಂತೋಷ್‌ ಕೂಡಾ ಇಮೇಜ್‌ನ ಆಸೆಬಿಟ್ಟು ನಟಿಸಿದ್ದಾರೆ. ಇನ್ನು, ಚಿತ್ರದಲ್ಲಿ ಕಾಮಿಡಿಯೇನೋ ಇದೆ.

ಆದರೆ, ಮತ್ತಷ್ಟು ಮಜಾ ಕೊಡುವ ಸನ್ನಿವೇಶವನ್ನು ಸೇರಿಸುವ ಅವಕಾಶ ನಿರ್ದೇಶಕರಿಗಿತ್ತು. ಆದರೆ, ಅದರ ಬದಲು ಚಿತ್ರ ಕೆಲವು ಘಟನೆಗಳ ಸುತ್ತವೇ ಸುತ್ತುವುದರಿಂದ ನೋಡಿದ್ದನ್ನೇ ನೋಡುವ ಅನಿವಾರ್ಯತೆ ಪ್ರೇಕ್ಷಕನದು. ನಾಯಕ ಸಂತೋಷ್‌ ಪಾತ್ರಕ್ಕೆ ಒಗ್ಗಿಕೊಂಡರೂ, ನಟನೆಯಲ್ಲಿ ಇನ್ನಷ್ಟು ದೂರ ಸಾಗಬೇಕಿದೆ.

ಅದರಲ್ಲೂ ಅವರ ಹಾವಭಾವ, ಮ್ಯಾನರೀಸಂ ಎಲ್ಲಾ ಸನ್ನಿವೇಶಗಳಲ್ಲೂ ಒಂದೇ ರೀತಿ ಕಾಣುತ್ತದೆ. ನಾಯಕಿ ಶ್ರುತಿ ಪ್ರಕಾಶ್‌ಗೆ ಇಲ್ಲಿ ಹೆಚ್ಚೇನು ಅವಕಾಶವಿಲ್ಲ. ಉಳಿದಂತೆ ಅಚ್ಯುತ್‌ಕುಮಾರ್‌, ಸಂಪತ್‌, ಸುಧಾ ಬೆಳವಾಡಿ, ಸಾಧುಕೋಕಿಲ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಚಿತ್ರದ ಹಾಡು ಸನ್ನಿವೇಶಕ್ಕೆ ತಕ್ಕುದಾಗಿದೆ.

ಚಿತ್ರ: ಲಂಡನ್‌ನಲ್ಲಿ ಲಂಬೋದರ
ನಿರ್ಮಾಣ: ಲಂಡನ್‌ ಸ್ಕ್ರೀನ್ಸ್‌
ನಿರ್ದೇಶನ: ರಾಜ್‌ ಸೂರ್ಯ
ತಾರಾಗಣ: ಸಂತೋಷ್‌, ಶ್ರುತಿ ಪ್ರಕಾಶ್‌, ಸಂಪತ್‌, ಅಚ್ಯುತ್‌ ಕುಮಾರ್‌, ಸಾಧುಕೋಕಿಲ ಮತ್ತಿತರರು

* ರವಿ ರೈ

ಟಾಪ್ ನ್ಯೂಸ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

Kadaba: ಬಿಳಿನೆಲೆ ಮತದಾನ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂ…ಆದರೆ…

EVM, VVPAT ಮತಗಳ ಹೋಲಿಕೆ- ಎಲ್ಲಾ ಅರ್ಜಿ ವಜಾಗೊಳಿಸಿದ ಸುಪ್ರೀಂಕೋರ್ಟ್…ಆದರೆ…

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

Belthangady: ದಿಬ್ಬಣದಲ್ಲೇ ಮತಗಟ್ಟೆಗೆ ಬಂದು ಮತ ಚಲಾಯಿಸಿದ ವಧು

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

LS Polls: ಚಿಕ್ಕಮಗಳೂರು… ವಿದೇಶದಿಂದ ಬಂದು ಮತದಾನ ಮಾಡಿ ಮಾದರಿಯಾದ ದಂಪತಿ…

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

Eletion: ತೀರ್ಥಹಳ್ಳಿಯಲ್ಲಿ ಪ್ರಚಾರದ ವೇಳೆ ತಮಿಳಿನಲ್ಲೆ ಮಾತನಾಡಿದ ನಟ ಶಿವರಾಜ್ ಕುಮಾರ್

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

LS Polls: ರಾಜ್ಯದಲ್ಲಿ ಕಾಂಗ್ರೆಸ್‌ ವಿರೋಧಿ ಅಲೆ: ರಾಘವೇಂದ್ರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

Chitradurga: ಹೃದಯಾಘಾತದಿಂದ ಚುನಾವಣಾ ಕರ್ತವ್ಯದಲ್ಲಿದ್ದ ಶಿಕ್ಷಕಿ ಮೃತ್ಯು…

Chitradurga: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಹೃದಯಾಘಾತಗೊಂಡು ಶಿಕ್ಷಕಿ ಮೃತ್ಯು…

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.