ಪರಿಣಾಮಕಾರಿ ಯೋಜನೆಗೆ ಅಂಕಿ-ಅಂಶ ಅತ್ಯಗತ್ಯ


Team Udayavani, Jan 24, 2017, 12:06 PM IST

seetharam-sadananadagoeda.jpg

ಬೆಂಗಳೂರು: ಯಾವುದೇ ಸರ್ಕಾರ ದಕ್ಷ, ಪಾರದರ್ಶಕ ಆಡಳಿತ ನಡೆಸಲು ಅಗತ್ಯ ಸುಧಾರಣೆ ಯೋಜನೆಗಳನ್ನು ರೂಪಿಸಬೇಕಿದ್ದರೆ ಅಂಕಿ-ಅಂಶ ಅತಗತ್ಯ ಎಂದು ಕೇಂದ್ರ ಕಾರ್ಯಕ್ರಮ ಅನುಷ್ಠಾನ ಹಾಗೂ ಸಾಂಖ್ಯೀಕ ಖಾತೆ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದರು. ಸೋಮವಾರ ನಗರದ ಖಾಸಗಿ ಹೋಟೆಲ್‌ನಲ್ಲಿ ಕೇಂದ್ರ ಸಾಂಖ್ಯೀಕ ಇಲಾಖೆ ಆಯೋಜಿಸಿದ್ದ “ಮೈಕ್ರೋ ಡಾಟಾ ಪ್ರಸರಣ ಕಾರ್ಯಗಾರ’ ಉದ್ಘಾಟಿಸಿ ಅವರು ಮಾತನಾಡಿದರು. 

ರಾಜ್ಯ ಅಥವಾ ಕೇಂದ್ರ ಸರ್ಕಾರವು ಯಾವುದೇ ಯೋಜನೆ ಜಾರಿಗೆ ತರಬೇಕಾದರೆ ವಾಸ್ತವಕ್ಕೆ ಹತ್ತಿರವಾದ ಹಾಗೂ ವಿಶ್ವಾಸಾರ್ಹ ಅಂಕಿ-ಅಂಶ ಅಗತ್ಯ. ಹೀಗಾಗಿ ವಿಶ್ವ ಗುಣಮಟ್ಟದ ಅಂಕಿ ಅಂಶಗಳ ನಿರ್ವಹಣೆಗೆ ಅನುಕೂಲವಾಗುವಂತೆ ಆನ್‌ಲೈನ್‌ ಮೂಲಕ ಅವುಗಳನ್ನು ಸಂಗ್ರಹಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದರು.

ಈ ಹಿಂದೆ ಪಾಲಿಕೆ, ರಾಜ್ಯ, ಕೇಂದ್ರದ ಬಳಿ ಇರುವ ಅಂಕಿ-ಅಂಶಗಳಲ್ಲಿ ಸಾಕಷ್ಟು ವ್ಯತ್ಯಾಸ ಕಂಡುಬರುತ್ತಿತ್ತು. ಹೀಗಾಗಿ ವೆಬ್‌ಫೋರ್ಟಲ್‌ ಮೂಲಕ ಅಂಕಿ-ಅಂಶ ಸಂಗ್ರಹ ನಡೆಸುತ್ತಿದ್ದು, ಕರಾರುವಕ್ಕಾದ ಹಾಗೂ ಒಂದೇ ಅಂಕಿ ಅಂಶಗಳನ್ನು ಎಲ್ಲಾ ಹಂತದಲ್ಲೂ ಅಳವಡಿಸಿಕೊಳ್ಳುವಂತೆ ಸೂಚಿಸಲಾಗಿದೆ ಎಂದು ಸದಾನಂದಗೌಡ ಹೇಳಿದರು.

ದೇಶದ ಎಲ್ಲಾ ಮಾರುಕಟ್ಟೆಗಳಲ್ಲೂ ಕನ್ಸೂéಮರ್‌ ಪ್ರೈಸ್‌ ಇಂಡೆಕ್ಸ್‌ ಅಂಕಿ-ಅಂಶ, ಕೈಗಾರಿಕೆಗಳ ಸಮೀಕ್ಷೆ, ಉತ್ಪಾದನಾ ಪ್ರಮಾಣದ ಅಂಕಿ-ಅಂಶ, ಪ್ರತಿ ಮೂರು ತಿಂಗಳಿಗೊಮ್ಮೆ ಕಾರ್ಮಿಕರ ಸರ್ವೇ ಕಾರ್ಯ, ಜತೆಗೆ ಸೇವಾ ವಲಯದ ಅಂಕಿ ಅಂಶ ಸಂಗ್ರಹಣೆಗೂ ಮುಂದಾಗಿದ್ದೇವೆ ಎಂದು ಹೇಳಿದರು.

ರಾಜ್ಯದಿಂದ ಸಂಪೂರ್ಣ ನೆರವು: ರಾಜ್ಯ ಯೋಜನೆ, ಸಾಂಖ್ಯೀಕ ಹಾಗೂ ವಿಜ್ಞಾನ, ತಂತ್ರಜ್ಞಾನ ಖಾತೆ ಸಚಿವ ಎಂ.ಆರ್‌.ಸೀತಾರಾಂ ಅವರು ಮಾತನಾಡಿ, ಕೇಂದ್ರದ ಅಂಕಿ-
ಅಂಶಗಳ ಇಲಾಖೆ ರಾಜ್ಯದಲ್ಲಿ ದತ್ತಾಂಶ ದಾಖಲೀಕರಣ ಕಂಪ್ಯೂಟರ್‌ ಕೇಂದ್ರ ಆರಂಭಿಸುತ್ತಿರುವುದು ಸಂತಸವನ್ನು ತಂದಿದೆ ಎಂದು ಹೇಳಿದರು. ಈ ಹಿಂದೆ ರಾಜ್ಯ ಅಂಕಿ-ಅಂಶಗಳ ಇಲಾಖೆ ವತಿಯಿಂದ ರಾಜ್ಯಾದ್ಯಂತ 7,600 ವಿದ್ಯಾರ್ಥಿವಸತಿ ನಿಲಯ ಪರಿಶೀಲಿಸಿ ನಾಲ್ಕು ತಿಂಗಳಲ್ಲಿ ಸಮರ್ಪಕ ವರದಿ ನೀಡಲಾಗಿದೆ.

ಇಂತಹ ಕ್ರಮಗಳಿಂದಾಗಿ ಸಮಸ್ಯೆ ಬಗೆಹರಿಸಲು, ಹೊಸ ಯೋಜನೆ ಶುರು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು. ಈ ವೇಳೆ ಕೇಂದ್ರದ ಸಾಂಖ್ಯೀಕ ಇಲಾಖೆ ನಿರ್ದೇಶಕ ಡಾ.ಮನ್ನಾ, ಕಂಪ್ಯೂಟರ್‌ ಸೆಂಟರ್‌ ನಿರ್ದೇಶಕ ಪಂಚಣದಾಸ್‌, ರಾಜ್ಯ ಸಾಂಖ್ಯೀಕ ಇಲಾಖೆ ಕಾರ್ಯದರ್ಶಿ ಚಕ್ರವರ್ತಿ ಮೋಹನ್‌, ನಿರ್ದೇಶಕ ಸುಬ್ರಹ್ಮಣ್ಯ ಹಾಜರಿದ್ದರು.

ಟಾಪ್ ನ್ಯೂಸ್

ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ಕೊಟ್ಟಿದ್ದ ಮೆಗ್ಗರ್‌ಗೆ ತಲಾಶ್‌!

ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ಕೊಟ್ಟಿದ್ದ ಮೆಗ್ಗರ್‌ಗೆ ತಲಾಶ್‌!

Kamalashile ದೇಗುಲದಿಂದ ಗೋ ಕಳವು ಯತ್ನ ವಿಫಲ

Kamalashile ದೇಗುಲದಿಂದ ಗೋ ಕಳವು ಯತ್ನ ವಿಫಲ

Modi Interview

Modi 3ನೇ ಸಲ ಪ್ರಧಾನಿಯಾದ ಬಳಿಕ ನಾಳೆ ಮೊದಲ ಬಾರಿ ಸ್ವಕ್ಷೇತ್ರಕ್ಕೆ

Mumbai ವಾಯವ್ಯ ಕ್ಷೇತ್ರದಲ್ಲಿ ಇವಿಎಂ ಹಗರಣ?

Mumbai ವಾಯವ್ಯ ಕ್ಷೇತ್ರದಲ್ಲಿ ಇವಿಎಂ ಹಗರಣ?

Charmadi Ghat ಪ್ರವಾಸಿಗರ ಮೋಜುಮಸ್ತಿ: ರಜಾ ದಿನದ ಸಂಭ್ರಮ: ಅಪಾಯಕ್ಕೆ ಆಹ್ವಾನ

Charmadi Ghat ಪ್ರವಾಸಿಗರ ಮೋಜುಮಸ್ತಿ: ರಜಾ ದಿನದ ಸಂಭ್ರಮ: ಅಪಾಯಕ್ಕೆ ಆಹ್ವಾನ

ಕರಾವಳಿಯಲ್ಲಿ ಇಲ್ಲ ವಾಡಿಕೆ ಮಳೆ!

Rain ಕರಾವಳಿಯಲ್ಲಿ ಇಲ್ಲ ವಾಡಿಕೆ ಮಳೆ!

1-sadsad

NCRT ಪಠ್ಯದಿಂದ ಬಾಬರಿ ಮಸೀದಿ ಹೆಸರು ಕೈಬಿಟ್ಟ ಸರಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Reporters: ಪತ್ರಿಕಾ ವರದಿಗಾರನ ಮೇಲೆ ನಾಲ್ವರಿಂದ ಹಲ್ಲೆ; ಆರೋಪ

Reporters: ಪತ್ರಿಕಾ ವರದಿಗಾರನ ಮೇಲೆ ನಾಲ್ವರಿಂದ ಹಲ್ಲೆ; ಆರೋಪ

6

Bengaluru: ಬಕ್ರೀದ್‌ ನಿಮಿತ್ತ ನಾಳೆ ಹಲವೆಡೆ ಸಂಚಾರ ನಿರ್ಬಂಧ

5

Bengaluru City: ಬೆಂಗಳೂರು ವಿಭಜನೆ ಅಲ್ಲ, ವಿಸ್ತಾರಕ್ಕೆ ಶಿಫಾರಸು

Bengaluru Parks: ಪಾರ್ಕ್‌ಗಳಿಗೆ ಕ್ಯಾಮೆರಾ ಭದ್ರತೆ ಒದಗಿಸಲು ಆಗ್ರಹ

Bengaluru Parks: ಪಾರ್ಕ್‌ಗಳಿಗೆ ಕ್ಯಾಮೆರಾ ಭದ್ರತೆ ಒದಗಿಸಲು ಆಗ್ರಹ

3

Annapurneshwari Police station: ಠಾಣೆಗೆ ಶಾಮಿಯಾನ ಹಾಕಿರುವ ಕುರಿತು ಸಾರ್ವಜನಿಕರ ಆಕ್ರೋಶ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ಕೊಟ್ಟಿದ್ದ ಮೆಗ್ಗರ್‌ಗೆ ತಲಾಶ್‌!

ರೇಣುಕಾಸ್ವಾಮಿಗೆ ಕರೆಂಟ್‌ ಶಾಕ್‌ ಕೊಟ್ಟಿದ್ದ ಮೆಗ್ಗರ್‌ಗೆ ತಲಾಶ್‌!

Kamalashile ದೇಗುಲದಿಂದ ಗೋ ಕಳವು ಯತ್ನ ವಿಫಲ

Kamalashile ದೇಗುಲದಿಂದ ಗೋ ಕಳವು ಯತ್ನ ವಿಫಲ

Modi Interview

Modi 3ನೇ ಸಲ ಪ್ರಧಾನಿಯಾದ ಬಳಿಕ ನಾಳೆ ಮೊದಲ ಬಾರಿ ಸ್ವಕ್ಷೇತ್ರಕ್ಕೆ

Mumbai ವಾಯವ್ಯ ಕ್ಷೇತ್ರದಲ್ಲಿ ಇವಿಎಂ ಹಗರಣ?

Mumbai ವಾಯವ್ಯ ಕ್ಷೇತ್ರದಲ್ಲಿ ಇವಿಎಂ ಹಗರಣ?

canada

G7 ಶೃಂಗಕ್ಕೆ ಮೋದಿಗೆ ಆಹ್ವಾನ: ಸ್ಪಷ್ಟ ಉತ್ತರ ನೀಡದ ಕೆನಡಾ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.