Udayavni Special

ಹಣ್ಣು -ತರಕಾರಿ ತಿಪ್ಪೆ ಪಾಲು!

ಹಂದಿ-ಬಿಡಾಡಿ ದನಗಳಿಗೆ ಆಹಾರವಾದ ತರಕಾರಿ

Team Udayavani, Apr 9, 2020, 7:27 PM IST

09-April-40

ವಿಜಯಪುರ: ಎಪಿಎಂಸಿ ಹಣ್ಣು-ತರಕಾರಿ ಮಾರುಕಟ್ಟೆಯಲ್ಲಿ ಮಾರಾಟವಾಗದ ದಾಳಿಂಬೆ ತಿಪ್ಪೆಗೆ ಸುರಿದ ರೈತರು.

ವಿಜಯಪುರ: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ದೇಶವೇ ಸ್ತಬ್ಧಗೊಂಡಿದ್ದು, ಕಳೆದ ಎರಡು ವಾರಗಳಿಂದ ಅನ್ನದಾತ ಕಂಗಾಲಾಗಿದ್ದಾನೆ. ಅದರಲ್ಲೂ ಕೊಯ್ಲಿಗೆ ಬಂದ ಮೇಲೆ ಬೇಗ ಕೆಟ್ಟುಹೋಗುವ ಹಣ್ಣು-ತರಕಾರಿ ಬೆಳೆಗಾರರು ಮುಕ್ತ ಮಾರುಕಟ್ಟೆ ಇಲ್ಲದೆ, ಅರೆ ಮಾರುಕಟ್ಟೆಯಲ್ಲಿ ಬೆಲೆಯೂ ಸಿಗದೇ ತಮ್ಮ ಬೆಳೆ ತಿಪ್ಪೆಗೆ ಎಸೆಯುವ ದುಸ್ಥಿತಿ ಬಂದೊದಗಿದೆ.

ವಿಜಯಪುರ ಜಿಲ್ಲಾ ಕೇಂದ್ರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಪ್ರಾಂಗಣದಲ್ಲಿರುವ ಹಣ್ಣು-ತರಕಾರಿ ಪ್ರತ್ಯೇಕ ಮಾರುಕಟ್ಟೆಯಲ್ಲಿ 3-4 ದಿನಗಳಿಂದ ಹಣ್ಣು-ತರಕಾರಿ ಆವಕ ಆಗುತ್ತಿದೆ. ಆದರೆ, ತರಕಾರಿ, ಹಣ್ಣುಗಳ ಮೂಲ ಬಳಕೆ ಕೇಂದ್ರಗಳಾದ ಹೊಟೇಲ್‌, ಹಣ್ಣಿನ ಅಂಗಡಿ, ಜ್ಯೂಸ್‌ ಅಂಗಡಿಗಳು ಮದುವೆ, ಉತ್ಸವಗಳಂಥ ಎಲ್ಲ ವ್ಯವಸ್ಥೆಯೂ ಸ್ತಬ್ಧಗೊಂಡಿವೆ. ಹಣ್ಣು-ತರಕಾರಿ ಬೆಳೆ ಮಾರಾಟಕ್ಕೆ ಸಾಧ್ಯವಾಗದೆ ಅನ್ನದಾತ ಆರ್ಥಿಕ ನಷ್ಟಕ್ಕೆ ಸಿಲುಕಿದ್ದಾರೆ.

ವಿಜಯಪುರ ಜಿಲ್ಲಾಡಳಿತ ತರಕಾರಿ ಹಾಗೂ ಹಣ್ಣು ಮಾರುಕಟ್ಟೆಗೆ ಅವಕಾಶ ನೀಡಿದ್ದರೂ, ಮಾರುಕಟ್ಟೆಯಲ್ಲಿ ವಿಚಿತ್ರ ಸನ್ನಿವೇಶ ನಿರ್ಮಾಣವಾಗಿದೆ. ತೋಟಗಾರಿಕೆ ಕೆಲವು ಬೆಳೆಯನ್ನು ಕೊಳ್ಳುವವರಿಲ್ಲದೇ ಅನ್ನದಾತರು ತಮ್ಮ ಬೆಳೆಯನ್ನು ತಿಪ್ಪೆಗೆ ಚೆಲ್ಲಿ ಕಣ್ಣೀರು ಸುರಿಸುತ್ತ ಕುಳಿತಿದ್ದಾರೆ. ಮತ್ತೆ ಕೆಲ ನಿರ್ದಿಷ್ಟ ಹಣ್ಣು ಖರೀದಿಗೆ ಬೆಂಗಳೂರಿನಿಂದ ಬರಬೇಕಿದ್ದ ಖರೀದಿದಾರರಿಗೆ ಸಾರಿಗೆ ವ್ಯವಸ್ಥೆ ಇಲ್ಲವಾಗಿದೆ.

ಇನ್ನು ಸೇಬು, ಅಂಜೂರದಂಥ ಕೆಲವು ಹಣ್ಣು ಬರಬೇಕಿರುವ ಮುಂಬೈ ಮಾರುಕಟ್ಟೆ ಮುಚ್ಚಿರುವ ಕಾರಣ ಅಲ್ಲಿಂದಲೂ ಹಣ್ಣುಗಳು ಬರುತ್ತಿಲ್ಲ. ಹಣ್ಣು-ತರಕಾರಿಯಂಥ ಅಗತ್ಯ ವಸ್ತುಗಳ ಸಾಗಾಟದ ಸಾರಿಗೆ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರೂ ಸರಕು ಸಾಗಾಣಿಕೆ ವಾಹನ ಸಂಚಾರ ವಾಸ್ತವಾಗಿ ಬಂದ್‌ ಆಗಿರುವ ಪರಿಣಾಮ ಮಾರುಕಟ್ಟೆಗೆ ನಿರೀಕ್ಷಿತ ಬೆಳೆ ಬಾರದೆ, ಖರೀದಿದಾರರೂ ಸಿಗದೇ ಸಗಟು ವ್ಯಾಪಾರಿಗಳೂ ಕಂಗಲಾಗಿದ್ದಾರೆ.

ಬೇಸಿಗೆ ಸಂದರ್ಭದಲ್ಲಿ ಜ್ಯೂಸ್‌ ಅಂಗಡಿ ಹಾಗೂ ಹೋಟೆಲ್‌ಗ‌ಳಲ್ಲಿ ಹಣ್ಣು ಖರೀದಿಯಾದರು ಇತ್ತು. ಲಾಕ್‌ಡೌನ್‌ ಪರಿಣಾಮ ಅವೆಲ್ಲ ಮುಚ್ಚಿದ್ದು, ಹಣ್ಣು ಮಾರಲು ಕಿರು ಮಾರುಕಟ್ಟೆಯೂ ಇಲ್ಲದಂತಾಗಿದೆ. ಪರಿಣಾಮ ತಂದ ಬೆಳೆಯನ್ನು ಮರಳಿ ಒಯ್ಯುವ ಮಾತಿರಲಿ, ತಂದಿರುವ ವಾಹನದ ಬಾಡಿಗೆಯನ್ನೂ ಕೊಡಲೂ ಹಣವಿಲ್ಲದೇ ತಿಪ್ಪೆಗೆ ಚೆಲ್ಲಿ ರೈತರು ಕಣ್ಣೀರು ಹಾಕುತಿದ್ದಾರೆ.

ಇನ್ನು ತರಕಾರಿಗಳ ಮಾರುಕಟ್ಟೆ ಕಥೆಯೂ ಹೊರತಾಗಿಲ್ಲ. ಲಾಕ್‌ಡೌನ್‌ನಿಂದ ಮದುವೆ, ಜಾತ್ರೆ, ಉತ್ಸವ, ದಿಬ್ಬಣಗಳಂಥ ಎಲ್ಲ ಕಾರ್ಯಕ್ರಮಗಳಿಗೂ ಸರ್ಕಾರ ನಿರ್ಬಂಧ ಹೆರಿದ್ದು, ಹಸಿ ಮೆಣಸಿನಕಾಯಿ, ಕ್ಯಾಪ್ಸಿಕಮ್‌, ಟೋಮ್ಯಾಟೋ, ಬದನೆಕಾಯಿ, ಈರುಳ್ಳಿ ಬೆಳೆದ ರೈತರು ಸಂಕಷ್ಟಕ್ಕಿಡಾಗಿದ್ದಾರೆ. ಮಾರಾಟಕ್ಕೆ ಅವಕಾಶ ಇದೆ ಎಂದು ಮಾರುಕಟ್ಟೆಗೆ ತಂದರೂ ಕೊಳ್ಳುವವರಿಲ್ಲದೇ ತರಕಾರಿಯನ್ನು ತಿಪ್ಪೆಗೆ ಸುರಿದು ಹೋಗುತ್ತಿರುವ ದೃಶ್ಯ ಮನ ಕಲುಕುವಂತಿದೆ. ಊರಿಗೆ ಮರಳಲೂ ಹಣ ಇಲ್ಲದ ರೈತರಿಗೆ ಮಧ್ಯವರ್ತಿ ವ್ಯಾಪಾರಿಗಳೇ ಹಣ ನೀಡಿ ಮನೆಗೆ ಕಳಿಸುತ್ತಿದ್ದಾರೆ. ಮತ್ತೆ ಕೆಲವು ರೈತರು ತಮ್ಮ ಹಣ್ಣು-ತರಕಾರಿಗೆ ನಾಳೆ, ನಾಡಿದ್ದು ಬೆಲೆ ಸಿಗುವ ವಿಶ್ವಾಸದಲ್ಲಿ ಮಧ್ಯವರ್ತಿಗಳ ಬಳಿಯೇ ಇರಿಸಿದ್ದ ಹಣ್ಣು-ತರಕಾರಿ ಕೊಳೆಯಲು ಆರಂಭಿಸಿದೆ.

ದುರ್ವಾಸನೆ ಹರಡಿಕೊಂಡಿದ್ದರಿಂದ ರೈತರ ಒಪ್ಪಿಗೆ ಪಡೆದು ತಿಪ್ಪೆಗೆ ಸುರಿಯುತ್ತಿದ್ದು, ಹಂದಿ, ಬಿಡಾಡಿ ದನಗಳ ಪಾಲಾಗುತ್ತಿದೆ. ಜಾಗತಿಕ ಮಟ್ಟದಲ್ಲಿ ಪ್ರಕೃತಿ ನಿರ್ಮಿತ ಅನಿರೀಕ್ಷಿತ ಈ ವಿಚಿತ್ರ ಸಂದರ್ಭದಲ್ಲಿ ಸರ್ಕಾರವನ್ನೂ ಹಳಿಯುವಂತಿಲ್ಲ, ಆಡಳಿತಗಾರರನ್ನು ದೂರುವಂತಿಲ್ಲ ಎನ್ನುವಂಥ ಸಂದಿಗ್ಧ ಸ್ಥಿತಿ ನಿರ್ಮಾವಾಗಿದೆ.

ಜಿ.ಎಸ್‌.ಕಮತರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಕಿಕ್‌ಗೆ ನಲುಗಿದ ಬ್ರೆಜಿಲ್‌;ಸೋಂಕಿತರ ಲೆಕ್ಕದಲ್ಲಿ 2ನೇ ಸ್ಥಾನಕ್ಕೇರಿದ ಲ್ಯಾಟಿನ್‌ ಅಮೆರಿಕ ದೇಶ

ಕಿಕ್‌ಗೆ ನಲುಗಿದ ಬ್ರೆಜಿಲ್‌

ಲಾಕ್‌ಡೌನ್‌ ನಲ್ಲಿ ಕಳೆದ ಆಧಾರ್‌ ಪಡೆಯೋದು ಹೇಗೆ?

ಲಾಕ್‌ಡೌನ್‌ ನಲ್ಲಿ ಕಳೆದ ಆಧಾರ್‌ ಪಡೆಯೋದು ಹೇಗೆ?

ಬೆಂಗಳೂರಿಗಿಂತ ಧರ್ಮಶಾಲಾ ಸುರಕ್ಷಿತ ತಾಣ

ಬೆಂಗಳೂರಿಗಿಂತ ಧರ್ಮಶಾಲಾ ಸುರಕ್ಷಿತ ತಾಣ

ಕೋವಿಡ್- 19 ಸೇನಾನಿಗಳ ಸುರಕ್ಷೆಗೆ ಇನ್ನಷ್ಟು ಆದ್ಯತೆ ಬೇಕು

ಕೋವಿಡ್- 19 ಸೇನಾನಿಗಳ ಸುರಕ್ಷೆಗೆ ಇನ್ನಷ್ಟು ಆದ್ಯತೆ ಬೇಕು

ಜಾಗತಿಕ ಉತ್ಪಾದನಾ ಕೇಂದ್ರವಾಗಬಲ್ಲದೇ ಭಾರತ?

ಜಾಗತಿಕ ಉತ್ಪಾದನಾ ಕೇಂದ್ರವಾಗಬಲ್ಲದೇ ಭಾರತ?

ಮಹಾದಾಯಿ ಹುಲಿಗಳ ಸಾವಿಗೆ ವಿಷ ಕಾರಣ!

ಮಹಾದಾಯಿ ಹುಲಿಗಳ ಸಾವಿಗೆ ವಿಷ ಕಾರಣ!

ಇಂದಿನಿಂದ ದೇಶೀಯ ವಿಮಾನಯಾನ

ಇಂದಿನಿಂದ ದೇಶೀಯ ವಿಮಾನಯಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕ್ವಾರಂಟೈನ್‌ ಕೇಂದ್ರದಲ್ಲಿನ 11 ಜನರ ಗಂಟಲು ದ್ರವ ಸಂಗ್ರಹ

ಕ್ವಾರಂಟೈನ್‌ ಕೇಂದ್ರದಲ್ಲಿನ 11 ಜನರ ಗಂಟಲು ದ್ರವ ಸಂಗ್ರಹ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ

23-May-23

ನರೇಗಾದಡಿ ವಲಸೆ ಕಾರ್ಮಿಕರಿಗೆ ಕೆಲಸ

23-May-21

ರಸಗೊಬ್ಬರ ಕೃತಕ ಅಭಾವ ಸೃಷ್ಟಿಸಿದರೆ ಕ್ರಮ

23-May-22

ಗುಳೆ ತಡೆಗೆ ನರೇಗಾ ಯೋಜನೆ ಜಾರಿ: ಶಾಸಕ ಪಾಟೀಲ

MUST WATCH

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

udayavani youtube

ಪಶುಸಂಗೋಪನೆಯಲ್ಲಿ ಯಶಸ್ವಿಯಾದ Uttam Agro Industries Poultry Farming Success Story

udayavani youtube

ಈ ಮನೆಯಲ್ಲಿದೆ ಬೀದಿನಾಯಿಗಳಿಗೆ ಪ್ರೀತಿಯ ಆಸರೆ | Udayvani

udayavani youtube

Karnataka : A Farmer who quits Private Job & became Successful in Agriculture

udayavani youtube

MOTHERSDAY ಪ್ರಯುಕ್ತ ನಾಡಿನ ಎಲ್ಲಾ ಅಮ್ಮಂದಿರಿಗೆ ಶುಭಾಶಯವನ್ನು ಕೋರಿದ SHINE SHETTY

ಹೊಸ ಸೇರ್ಪಡೆ

“ಜಿಲ್ಲೆಯಲ್ಲಿ ಕೀಟಜನ್ಯ ರೋಗಗಳು ನಿಯಂತ್ರಣದಲ್ಲಿ’

“ಜಿಲ್ಲೆಯಲ್ಲಿ ಕೀಟಜನ್ಯ ರೋಗಗಳು ನಿಯಂತ್ರಣದಲ್ಲಿ’

ನರ್ಮ್ ಬಸ್‌ ನಿಲ್ದಾಣದಲ್ಲೊಂದು ಅಪಾಯಕಾರಿ ಬಾವಿ!

ನರ್ಮ್ ಬಸ್‌ ನಿಲ್ದಾಣದಲ್ಲೊಂದು ಅಪಾಯಕಾರಿ ಬಾವಿ!

ಲಾಕ್‌ಡೌನ್‌ ಬಳಿಕ ಚೇತರಿಕೆಯ ಹಾದಿಯಲ್ಲಿ ವಾಹನ ನೋಂದಣಿ

ಲಾಕ್‌ಡೌನ್‌ ಬಳಿಕ ಚೇತರಿಕೆಯ ಹಾದಿಯಲ್ಲಿ ವಾಹನ ನೋಂದಣಿ

jilladhalita

ಮುಂಬೈ ನಂಜು: ಜಿಲ್ಲಾಡಳಿತ ಲೆಕ್ಕಾಚಾರ ಉಲ್ಟಾ!

amanikere

ಅಮಾನಿಕೆರೆಗೆ ಎಚ್‌.ಎನ್‌.ವ್ಯಾಲಿ ನೀರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.