Chikkaballapur: ಇಳುವರಿ ಕುಸಿತ; ಮಾವಿಗೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ


Team Udayavani, May 26, 2024, 3:14 PM IST

Chikkaballapur: ಇಳುವರಿ ಕುಸಿತ; ಮಾವಿಗೆ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ

ಚಿಕ್ಕಬಳ್ಳಾಪುರ: ಮಾವಿನ ಫ‌ಸಲಿನಲ್ಲಿ ಈ ಬಾರಿ ಹವಾಮಾನ ವೈಪರೀತ್ಯದ ಪರಿಣಾಮ ಭಾರೀ ಕುಸಿತ ಕಂಡಿರುವ ಹಿನ್ನೆಲೆಯಲ್ಲಿ ಅಳಿದುಳಿದ ಮಾವುಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗುತ್ತಿದ್ದು ಕ್ವಿಂಟಲ್‌ ಮಾವು ದಾಖಲೆಯ ದರದಲ್ಲಿ ಮಾರಾಟ ಆಗುತ್ತಿದೆ. ಮಾವಿನ ವ್ಯಾಪಾರಿಗಳೇ ತೋಟಗಳಿಗೆ ತೆರಳಿ ಮಾವು ಖರೀದಿಗೆ ಮುಗಿ ಬಿದ್ದಿದ್ದಾರೆ.

ಜಿಲ್ಲೆಯ ಮಾವು ಮಾರುಕಟ್ಟೆಯಲ್ಲಿ ಸದ್ಯ ತೋತಾಪುರಿ ಕ್ವಿಂಟಲ್‌ಗೆ ಬರೋಬ್ಬರಿ 20 ರಿಂದ 22 ಸಾವಿರಕ್ಕೆ ಮಾರಾಟಗೊಳ್ಳುತ್ತಿದ್ದರೆ. ಬಾದಾಮಿ ಕ್ವಿಂಟಾಲ್‌ ದಾಖಲೆಯ ಪ್ರಮಾಣದಲ್ಲಿ 50 ಸಾವಿರ ರೂ. ಗಡಿ ದಾಟಿದೆ. ಇನ್ನೂ ಮಲ್ಲಿಕಾ 40 ರಿಂದ 42 ಸಾವಿರದವರೆಗೂ ಮಾರಾಟಗೊಳ್ಳುತ್ತಿದ್ದರೆ, ಸೆಂದೂರ 28 ರಿಂದ 30 ಸಾವಿರ ರೂ.ವರೆಗೂ ಮಾರಾಟಗೊಳ್ಳುತ್ತಿದೆ.

ಇಳುವರಿ ಕಡಿಮೆ: ಏಷ್ಯಾ ಖಂಡದಲ್ಲಿಯೆ ಮಾವು ಬೆಳೆಯುವುದರಲ್ಲಿ ಅವಿಭಜಿತ ಕೋಲಾರ ಜಿಲ್ಲೆಯ ಮುಂಚೂಣಿಯಲ್ಲಿದೆ. ಜಿಲ್ಲೆಯ ಚಿಂತಾಮಣಿ ತಾಲೂಕಿನ ಒಂದರಲ್ಲಿಯೆ 11 ಸಾವಿರ ಹೆಕ್ಟೇರ್‌ ಅಧಿಕ ಪ್ರಮಾಣದಲ್ಲಿ ಮಾವು ಬೆಳೆಯಲಾಗುತ್ತಿದೆ. ಆದರೆ ಈ ವರ್ಷ ಮಾವುಗೆ ಕಾಡಿದ ಹವಮಾನ ವೈಪರೀತ್ಯದ ಪರಿಣಾಮ ಇಳುವರಿ ಕುಸಿತ ಕಂಡಿದ್ದು, ಮಾವು ಪ್ರಿಯರಿಗೆ ಮಾರುಕಟ್ಟೆಗೆ ಬೆಲೆ ಹೆಚ್ಚಾಗಿ ಕೈ ಕಚ್ಚುವಂತಾಗಿದೆ.

ಹವಾಮಾನ ವೈಪರೀತ್ಯದ ನಡುವೆಯು ಮಾವು ಉಳಿಸಿಕೊಂಡ ರೈತರಿಗೆ ಚಿನ್ನದ ಬೆಲೆ ಸಿಗುತ್ತಿದೆ. ದಾಖಲೆಯ ಪ್ರಮಾಣದಲ್ಲಿ ಈ ಬಾರಿ ಮಾವುಗೆ ಹೆಚ್ಚಿನ ದರ ಸಿಗುತ್ತಿದ್ದು, ಮಾವು ಬೆಳೆಗಾರರಲ್ಲಿ ಸಂತಸ ಮೂಡಿದೆ. ಈಗಾಗಲೇ ಜಿಲ್ಲಾದ್ಯಂತ ಮಾವು ಸುಗ್ಗಿ ಆರಂಭಗೊಂಡಿದೆ. ಈ ಬಾರಿ ಶೇ.20 ರಿಂದ 30 ರಷ್ಟು ಮಾತ್ರ ಮಾವು ಇಳುವರಿ ಸಿಕ್ಕಿದ್ದು, ಮಾರುಕಟ್ಟೆಯಲ್ಲಿ ಹಣ್ಣುಗಳ ರಾಜ ಮಾವುಗೆ ಉತ್ತಮ ಬೆಲೆ ಇದ್ದರೂ ಮಾವು ಬೆಳೆ ಇಳುವರಿ ಇಲ್ಲದ ಕಾರಣಕ್ಕೆ ಮಾವು ಬೆಳೆಗಾರರಲ್ಲಿ ತೀವ್ರ ನಿರಾಸೆ ಮೂಡಿಸಿದೆ.

ಇನ್ನೂ ಈ ಬಾರಿ ಮಾವು ಇಳುವರಿ ಕುಸಿತದಿಂದ ವಾಣಿಜ್ಯ ವಹಿವಾಟುನಲ್ಲಿ ಭಾರೀ ಕುಸಿತ ಕಂಡಿದೆ. ಮಾವು ಬರುವುದನ್ನು ನಂಬಿ ಮಂಡಿಗಳನ್ನು ತೆರೆದಿರುವ ವ್ಯಾಪಾರಸ್ಥರು ಕಂಗಾಲಾಗಿದ್ದಾರೆ. ಮಂಡಿಗಳಲ್ಲಿ ಕೆಲಸ ಸಿಗುವ ಆಸೆ ಹೊತ್ತಿದ್ದ ಕೂಲಿ ಕೂಲಿ ಕಾರ್ಮಿಕರಲ್ಲಿ ತೀವ್ರ ನಿರಾಸೆ ಮೂಡಿಸಿದೆ.

ಈ ಬಾರಿ ಅಧಿಕ ಉಷ್ಣಾಂಶ, ಮಳೆ ಕೊರತೆ, ಹವಮಾನ ವೈಪರೀತ್ಯದ ಪರಿಣಾಮ ಮಾವಿನ ಇಳುವರಿಯಲ್ಲಿ ಭಾರೀ ಕುಸಿತ ಕಂಡಿದೆ. ಶೇ.20 ರಿಂದ 30 ರಷ್ಟು ಮಾತ್ರ ಫ‌ಸಲು ಸಿಗುತ್ತಿದೆ. ಹೀಗಾಗಿ ಮಾವು ಮಂಡಿಗಳಲ್ಲಿ ಮಾವುಗೆ ಉತ್ತಮ ದರ ಸಿಗುತ್ತಿದೆ. ವ್ಯಾಪಾರಿಗಳು ಮಂಡಿ ಬಿಟ್ಟು ರೈತರ ತೋಟಗಳಿಗೆ ಬಂದು ಮಾವು ಖರೀದಿಸುತ್ತಿದ್ದಾರೆ. ಮಲ್ಲಿಕಾ, ಬಾದಾಮಿಗೆ ಉತ್ತಮ ದರ ಸಿಗುತ್ತಿದೆ. -ಕೆ.ಶ್ರೀನಿವಾಸಗೌಡ, ಜಿಲ್ಲಾದ್ಯಕ್ಷರು. ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘ

-ಕಾಗತಿ ನಾಗರಾಜಪ್ಪ

ಟಾಪ್ ನ್ಯೂಸ್

PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್-‌ ಏನಿದು ವಿವಾದ?

PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್-‌ ಏನಿದು ವಿವಾದ?

12-uppinangady

Uppinangady: ಮಹಿಳೆ ಸಾವು; ಕೊಲೆ ಶಂಕೆ

Bihar: ವಿದ್ಯಾರ್ಥಿಗಳು ಸೇವಿಸಿದ್ದ ಆಹಾರದಲ್ಲಿ ಸತ್ತ ಹಾವು! 11 ಮಂದಿ ಆಸ್ಪತ್ರೆಗೆ ದಾಖಲು

Bihar: ವಿದ್ಯಾರ್ಥಿಗಳು ಸೇವಿಸಿದ್ದ ಆಹಾರದಲ್ಲಿ ಸತ್ತ ಹಾವು! 11 ಮಂದಿ ಆಸ್ಪತ್ರೆಗೆ ದಾಖಲು

UK: ಡಿಲೀಟ್‌ ಆದ ಮೇಸೆಜ್‌ ಪತ್ತೆ ಹಚ್ಚಿದ ಪತ್ನಿ; Apple ಕಂಪನಿ ವಿರುದ್ಧ ದಾವೆ ಹೂಡಿದ ಪತಿ!

UK: ಡಿಲೀಟ್‌ ಆದ ಮೇಸೆಜ್‌ ಪತ್ತೆ ಹಚ್ಚಿದ ಪತ್ನಿ; Apple ಕಂಪನಿ ವಿರುದ್ಧ ದಾವೆ ಹೂಡಿದ ಪತಿ!

Cyber Frauds:  ಸೈಬರ್‌ ವಂಚನೆ- 3 ವರ್ಷಗಳಲ್ಲಿ ಭಾರತೀಯರು ಕಳೆದುಕೊಂಡ ಹಣ 25,000 ಕೋಟಿ!

Cyber Frauds:  ಸೈಬರ್‌ ವಂಚನೆ- 3 ವರ್ಷಗಳಲ್ಲಿ ಭಾರತೀಯರು ಕಳೆದುಕೊಂಡ ಹಣ 25,000 ಕೋಟಿ!

11-chikkodi

Chikkodi: ವ್ಯಕ್ತಿಯ ಭೀಕರ ಕೊಲೆ; ಬೆಚ್ಚಿ ಬಿದ್ದ ಜನತೆ

Innanje Railway Station; A gold chain was stolen from a woman who was traveling from Madurai to Mumbai

Innanje Railway Station; ಮಧುರೈನಿಂದ ಮುಂಬಯಿಗೆ ತೆರಳುತ್ತಿದ್ದ ಮಹಿಳೆಯ ಚಿನ್ನದ ಸರ ಕಳವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

9

Monsoon: ಕುರಿ, ಕೋಳಿ ಸಾಕಾಣಿಕೆ ಜೋರು!

chiಅಖಾಡದಲ್ಲಿ ನಾನೇ ಇದ್ದಿದ್ದರೆ ಫ‌ಲಿತಾಂಶ ಬೇರೆಯೇ ರೀತಿಯಲ್ಲಿ ಇರುತ್ತಿತ್ತು: ಪ್ರದೀಪ್‌

ಅಖಾಡದಲ್ಲಿ ನಾನೇ ಇದ್ದಿದ್ದರೆ ಫ‌ಲಿತಾಂಶ ಬೇರೆಯೇ ರೀತಿಯಲ್ಲಿ ಇರುತ್ತಿತ್ತು: ಪ್ರದೀಪ್‌

Chikkaballapura; ಸುಧಾಕರ್ ಗೆ ಜನಾಭಿಪ್ರಾಯ ಸಿಕ್ಕಿದೆ, ಆದರೆ ರಾಜೀನಾಮೆ….:ಪ್ರದೀಪ್ ಈಶ್ವರ್

Chikkaballapura; ಸುಧಾಕರ್ ಗೆ ಜನಾಭಿಪ್ರಾಯ ಸಿಕ್ಕಿದೆ, ಆದರೆ ರಾಜೀನಾಮೆ….:ಪ್ರದೀಪ್ ಈಶ್ವರ್

manchenahalli

Manchenahalli; ವಿದ್ಯುತ್ ಸ್ಪರ್ಶವಾಗಿ ಕಂಬದಲ್ಲಿಯೇ ಮೃತಪಟ್ಟ ಬೆಸ್ಕಾಂ ಸಿಬ್ಬಂದಿ

3-gudibande

Gudibanda: ಕಾರು ಅಪಘಾತ: ಮೂವರು ಬೆಸ್ಕಾಂ ಸಿಬ್ಬಂದಿಗಳು ಸಾವು

MUST WATCH

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

udayavani youtube

ಗಂಗೊಳ್ಳಿಯಲ್ಲಿ ಈದ್ ಅಲ್ ಅಝ್ಹಾ ಆಚರಣೆ

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

ಹೊಸ ಸೇರ್ಪಡೆ

First single of Ibbani Tabbida Ileyali Movie releasing on June 21

Vihan- Amar; ಜೂ.21ಕ್ಕೆ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಮೊದಲ ಹಾಡು

Dhruva sarja’s bahaddur movie re releasing after 10 years

Dhruva Sarja; 10 ವರ್ಷಗಳ ನಂತರ ‘ಬಹದ್ದೂರ್‌’ ಮತ್ತೆ ರಿಲೀಸ್‌

PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್-‌ ಏನಿದು ವಿವಾದ?

PM Modi- Pope ಭೇಟಿ ಫೋಟೋ: ಕ್ಷಮೆಯಾಚಿಸಿದ ಕೇರಳ ಕಾಂಗ್ರೆಸ್-‌ ಏನಿದು ವಿವಾದ?

Zap-X for painless treatment of brain tumors

ZAP-X Radiosurgery; ಬ್ರೈನ್‌ ಟ್ಯೂಮರ್‌ ನೋವುರಹಿತ ಚಿಕಿತ್ಸೆಗೆ ಝ್ಯಾಪ್‌- ಎಕ್ಸ್‌

12-uppinangady

Uppinangady: ಮಹಿಳೆ ಸಾವು; ಕೊಲೆ ಶಂಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.