ಫಲಪುಷ್ಪ ಪ್ರದರ್ಶನ ವೀಕ್ಷಣೆಗೆ ಜನಸಾಗರ


Team Udayavani, Feb 12, 2019, 9:47 AM IST

cta-1.jpg

ಚಿತ್ರದುರ್ಗ: ನಗರದ ತೋಟಗಾರಿಕೆ ಇಲಾಖೆ ಕಚೇರಿ ಆವರಣದಲ್ಲಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ವೀಕ್ಷಣೆಗೆ ಜನಸಾಗರ ಹರಿದು ಬರುತ್ತಿದೆ. ಈ ಬಾರಿಯ ವಿಶೇಷ ಆಕರ್ಷಣೆಯೆಂದರೆ ‘ನಡೆದಾಡುವ ದೇವರು’ ಎಂದೇ ಖ್ಯಾತರಾಗಿದ್ದ ತುಮಕೂರು ಸಿದ್ಧಗಂಗಾ ಮಠದ ಲಿಂಗೈಕ್ಯ ಡಾ| ಶಿವಕುಮಾರ ಸ್ವಾಮೀಜಿಯವರ ಪ್ರತಿಕೃತಿ ಹಾಗೂ ಕಲ್ಲಂಗಡಿ ಹಣ್ಣಿನಲ್ಲಿ

ಕೆತ್ತಿರುವ ಅವರ ಜೀವನದ ವಿವಿಧ ಮಜಲುಗಳ ಕಲಾಕೃತಿಗಳು. ವಿವಿಧ ಬಣ್ಣ ಬಣ್ಣಗಳ ಪುಷ್ಪಗಳ ನಡುವೆ ಸುಂದರ ಪರಿಸರದಲ್ಲಿ ಇರಿಸಿರುವ ಲಿಂಗೈಕ್ಯ ಡಾ| ಶಿವಕುಮಾರ ಸ್ವಾಮೀಜಿಗಳ ಪ್ರತಿಕೃತಿ ನೋಡುಗರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಮಕ್ಕಳು, ಯುವಜನರು, ವೃದ್ಧರಾದಿಯಾಗಿ ಎಲ್ಲರೂ ಪ್ರತಿಕೃತಿಗೆ ಭಕ್ತಿ ಭಾವದಿಂದ ನಮಿಸಿ ಸೆಲ್ಫೀ ತೆಗೆದುಕೊಳ್ಳಲು ಮುಗಿಬಿದ್ದಿದ್ದು ಕಂಡು ಬಂತು.

ಬಗೆಬಗೆಯ ಪುಷ್ಪಗಳು, ಸಸ್ಯಗಳು, ಹಣ್ಣುಗಳ ಪ್ರದರ್ಶನ, ಸಿರಿಧಾನ್ಯಗಳ ಮಹತ್ವ ಅರಿಯುವ ವಸ್ತು ಪ್ರದರ್ಶನ, ತೋಟಗಾರಿಕೆ ಉಪಕರಣಗಳು, ಅಣಬೆ ಬೇಸಾಯ, ನೂತನ ತಂತ್ರಜ್ಞಾನದ ವರ್ಗಾವಣೆ ಮಾಡುವ ರೀತಿಯಲ್ಲಿ ಮೇಳವನ್ನು ಆಯೋಜಿಸಲಾಗಿದೆ. ರೈತರು ಆರ್ಥಿಕವಾಗಿ ಸಬಲರಾಗಲು ಬೇಸಾಯ ಕ್ರಮದಲ್ಲಿ ತಾಂತ್ರಿಕತೆ ಅಳವಡಿಕೆ ಮಾಡಿಕೊಳ್ಳುವ ಬಗ್ಗೆ ಉತ್ತೇಜನ ನೀಡಲಾಗಿದೆ. ಅತ್ಯಂತ ಕಡಿಮೆ ಸ್ಥಳಾವಕಾಶದಲ್ಲಿ ಅಲಂಕಾರಿಕ ಗಿಡಗಳನ್ನು ಬೆಳೆಸುವ ತೂಗು ಉದ್ಯಾನ, ವರ್ಟಿಕಲ್‌ ಗಾರ್ಡನ್‌ ಪದ್ಧತಿಯನ್ನು ಆಕರ್ಷಕ ರೀತಿಯಲ್ಲಿ ಪರಿಚಯಿಸಲಾಗಿದೆ.

ಸಕಲ ಜೀವ ರಾಶಿಗಳಿಗೂ ತಾಯಿಯಾಗಿರುವ ನಿಸರ್ಗ ಮಾತೆಗೆ ನಮನ ಸಲ್ಲಿಸುವ ಕಲಾಕೃತಿಯನ್ನು 50ಕ್ಕೂ ಹೆಚ್ಚು ಬಗೆಯ ಹೂವು ಬಳಸಿ ಸಿದ್ಧಪಡಿಸಿರುವುದು ಸಾರ್ವಜನಿಕರ ಕಣ್ಮನ ಸೆಳೆಯುತ್ತಿದೆ. ಪ್ರದರ್ಶನದಲ್ಲಿ ಆನೆ, ಜಿರಾಫೆಗಳ ಕಲಾಕೃತಿ, ಜಿಂಕೆ, ಚಿರತೆಗಳ ಮಾದರಿ, ಮರ-ಗಿಡ ಬೆಳೆಸಿ ಕಾಡು ಪ್ರಾಣಿ ರಕ್ಷಿಸಿ ಎಂಬ ಪರಿಕಲ್ಪನೆ, ಪಕ್ಷಿಗಳ ಕಲಾಕೃತಿಗಳು ಕೂಡ ಪಕ್ಷಿಗಳ ಸಂತತಿ ಉಳಿಸುವ ಸಂದೇಶ ಸಾರುತ್ತಿವೆ. ತೆಂಗಿನ ಚಿಪ್ಪಿನಲ್ಲಿ ಕೆತ್ತನೆ ಮಾಡಿರುವ ಕಲಾಕೃತಿಗಳು ಜನರ ಗಮನ ಸೆಳೆಯುತ್ತಿದೆ. 50ಕ್ಕೂ ಹೆಚ್ಚು ಬಗೆಯ ವಿವಿಧ ಜಾತಿಯ ಹೂವುಗಳನ್ನು ಪ್ರದರ್ಶಿಸಲಾಗಿದೆ. ಕುಬ್ಜ ಬೊನ್ಸಾಯ್‌ ಮರಗಳು ನೋಡುಗರನ್ನು ಕುತೂಹಲ ಲೋಕಕ್ಕೆ ಒಯ್ಯುವಂತಿವೆ.

ಕೃಷಿ-ತೋಟಗಾರಿಕೆಗೆ ಒತ್ತು
ಆಹಾರ ಭದ್ರತೆ ಬಹು ಮುಖ್ಯ ವಿಷಯವಾಗಿದೆ. ಅತಿ ಕಡಿಮೆ ಖರ್ಚಿನಲ್ಲಿ ಹೆಚ್ಚು ಲಾಭ ಗಳಿಸಬಹುದಾದ ಉತ್ತಮ ಪೌಷ್ಟಿಕ ಆಹಾರವೆಂದರೆ ಅಣಬೆ. ಇದು ಸಂಪೂರ್ಣ ಸಸ್ಯಾಹಾರವಾಗಿದ್ದು ಅಣಬೆ ಬೆಳೆಯ ಬೇಸಾಯ ಕ್ರಮಗಳನ್ನು ಸ್ತಬ್ಧಚಿತ್ರಗಳಲ್ಲಿ ಅಳವಡಿಸಲಾಗಿದೆ. ತೋಟಗಾರಿಕಾ ಕ್ಷೇತ್ರದ ಮಾದರಿ ನಿರ್ಮಿಸಲಾಗಿದೆ. ಇಸ್ರೇಲ್‌ ಮಾದರಿಯ ತಂತ್ರಜ್ಞಾನ ಅಂದರೆ ಕಡಿಮೆ ನೀರು ಬಳಸಿ ಉತ್ತಮ ಬೆಳೆ ಬೆಳೆಯುವ ವಿಧಾನ, ಮಲ್ಚಿಂಗ್‌ ಪದ್ಧತಿ, ಹೈಡ್ರೋಫೋನಿಕ್ಸ್‌ ಮಾದರಿ ಪ್ರದರ್ಶಿಸಲಾಗಿದೆ. ರೈತರು ಬೆಳೆದಿರುವ ಉತ್ತಮ ಗುಣಮಟ್ಟದ ಕುಂಬಳಕಾಯಿ, ಟೊಮ್ಯಾಟೋ, ಬಾಳೆಹಣ್ಣು ವಿವಿಧ ಹಣ್ಣು ಹಾಗೂ ತರಕಾರಿಗಳನ್ನು ಇರಿಸಲಾಗಿದೆ. ಒಟ್ಟಾರೆ ಈ ಬಾರಿ ತೋಟಗಾರಿಕೆ ಇಲಾಖೆ ಆಕರ್ಷಕ ಫಲಪುಷ್ಪ ಪ್ರದರ್ಶನ ಆಯೋಜಿಸಿ ತೋಟಗಾರಿಕೆ ಪ್ರದೇಶ ವಿಸ್ತರಣೆಯ ಕನಸನ್ನು ಸಾಕಾರಗೊಳಿಸಿದೆ. ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಸವಿತಾ ನೇತೃತ್ವದಲ್ಲಿ ನಡೆಯುತ್ತಿರುವ ಫಲಪುಷ್ಪ ಪ್ರದರ್ಶನ ನೋಡುಗರನ್ನು ಕೈಬೀಸಿ ಕರೆಯುತ್ತಿದೆ.

ಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆ ಆಯೋಜನೆ
ಚಿತ್ರದುರ್ಗ: ತೋಟಗಾರಿಕೆ ಇಲಾಖೆ ವತಿಯಿಂದ ಆಯೋಜಿಸಿರುವ 28ನೇ ಫಲಪುಷ್ಪ ಪ್ರದರ್ಶನದಲ್ಲಿ ವಯೋಮಾನಕ್ಕೆ ಅನುಗುಣವಾಗಿ ಶಾಲಾ ವಿದ್ಯಾರ್ಥಿಗಳಿಗೆ ಸೋಮವಾರ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಚಿತ್ರಕಲೆ, ಹಣ್ಣು ಮತ್ತು ತರಕಾರಿ ಗುರುತಿಸುವ ಸ್ಪರ್ಧೆ, ಪ್ರಬಂಧ ಸ್ಪರ್ಧೆ ಹಾಗೂ ಹಣ್ಣು ಮತ್ತು ತರಕಾರಿಗಳ ಫ್ಯಾನ್ಸಿ ಡ್ರೆಸ್‌ ಸೇರಿದಂತೆ ಹಲವು ಸ್ಪರ್ದೆಗಳು ನಡೆದವು. ಉದ್ಯಾನವನಕ್ಕೆ ಸಂಬಂಧಿಸಿದ ಚಿತ್ರಕಲೆ ಸ್ಪರ್ಧೆಯಲ್ಲಿ ಪ್ರಾಥಮಿಕ ಶಾಲಾ ಹಂತದ 5ರಿಂದ 7ನೇ ತರಗತಿ ಮತ್ತು ಪ್ರೌಢಶಾಲೆಯ 8 ರಿಂದ 10ನೇ ತರಗತಿಗಳಿಂದ 11 ಶಾಲೆಗಳ 65ಕ್ಕೂ ಹೆಚ್ಚಿನ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿ ನಾನಾ ರೀತಿಯ ಉದ್ಯಾನವನಗಳ ಚಿತ್ರಕಲೆಗಳನ್ನು ತಮ್ಮ ಕುಂಚದಲ್ಲಿ ಬಿಡಿಸಿದರು.

ಕಿರಿಯ ಪ್ರಾಥಮಿಕ ಶಾಲೆಯ 1 ರಿಂದ 2ನೇ ತರಗತಿಯ ಮಕ್ಕಳಿಗಾಗಿ ಹಣ್ಣು ಮತ್ತು ತರಕಾರಿಗಳನ್ನು ಗುರುತಿಸುವ ಸ್ಪರ್ಧೆಯಲ್ಲಿ 30 ಮಕ್ಕಳು ಪಾಲ್ಗೊಂಡಿದ್ದರು. ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸಾವಯವ ಕೃಷಿ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ 20ಕ್ಕೂ ಹೆಚ್ಚಿನ ಮಕ್ಕಳು ಪಾಲ್ಗೊಂಡಿದ್ದರು. ಜಾನಪದ ಮತ್ತು ಭಾವಗೀತೆ ಸ್ಪರ್ಧೆಗಳಲ್ಲಿ ತಲಾ 15 ರಂತೆ 30 ಮಕ್ಕಳು ಭಾಗವಹಿಸಿ ರಂಜಿಸಿದರು. ಫೆ. 12 ರಂದು ಸಂಜೆ 6 ಗಂಟೆಗೆ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಬಹುಮಾನ ವಿತರಣೆ ಮಾಡಲಾಗುತ್ತದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಟಾಪ್ ನ್ಯೂಸ್

Nomination: ಕೊನೆಯ ಕ್ಷಣದಲ್ಲಿ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ…

Nomination: ಕೊನೆಯ ಕ್ಷಣದಲ್ಲಿ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ…

arvind kejriwal

Delhi Excise Policy Case: ಕೇಜ್ರಿಗೆ ಅಲ್ಪ ರಿಲೀಫ್; ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

prashanth neel

KGF-3 ಸ್ಕ್ರಿಪ್ಟ್ ಸಿದ್ದವಿದೆ, ಆದರೆ….: ಬಿಗ್ ಅಪ್ಡೇಟ್ ನೀಡಿದ ಪ್ರಶಾಂತ್ ನೀಲ್

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, 3 ಮಂದಿ ಖುಲಾಸೆ

2013ರಲ್ಲಿ ನಡೆದ ನರೇಂದ್ರ ದಾಭೋಲ್ಕರ್ ಹತ್ಯೆ ಪ್ರಕರಣ: ಇಬ್ಬರಿಗೆ ಜೀವಾವಧಿ, ಮೂವರು ಖುಲಾಸೆ

Colin Munro Announced International Retirement

Retired; ಟಿ20 ವಿಶ್ವಕಪ್ ನಲ್ಲಿ ಸಿಗದ ಸ್ಥಾನ; ವೃತ್ತಿಜೀವನಕ್ಕೆ ತೆರೆಎಳೆದ ಕಿವೀಸ್ ಬ್ಯಾಟರ್

pralhad joshi

Hubli; ಕಾಂಗ್ರೆಸ್ ಅಧಿಕಾರಕ್ಕಾಗಿ ದೇಶವನ್ನು ಒಡೆಯಲೂ ಹೇಸುವುದಿಲ್ಲ: ಪ್ರಹ್ಲಾದ ಜೋಶಿ

Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ

Prajwal Case; ಸಿಬಿಐ ತನಿಖೆ ಯಾಕೆ? ನಮ್ಮ ಪೊಲೀಸರ ಮೇಲೆ ನಂಬಿಕೆ ಇರಲಿ: ಸಿಎಂ ಸಿದ್ದರಾಮಯ್ಯ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Chitradurga: ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ

Chitradurga: ಮಾದಾರ ಚನ್ನಯ್ಯ ಗುರುಪೀಠಕ್ಕೆ ವಟು ಸ್ವೀಕಾರ

ಚಿತ್ರದುರ್ಗ-ಬಸವ ತತ್ವ ಪ್ರತಿ ಮನೆಗೆ ತಲುಪಲಿ: ಡಾ| ಬಸವಕುಮಾರ ಶ್ರೀ

ಚಿತ್ರದುರ್ಗ-ಬಸವ ತತ್ವ ಪ್ರತಿ ಮನೆಗೆ ತಲುಪಲಿ: ಡಾ| ಬಸವಕುಮಾರ ಶ್ರೀ

Bharamasagara: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು; ಇಬ್ಬರು ಸ್ಥಳದಲ್ಲೇ ಸಾವು

Bharamasagara: ನಿಯಂತ್ರಣ ತಪ್ಪಿ ಚರಂಡಿಗೆ ಉರುಳಿದ ಕಾರು; ಇಬ್ಬರು ಸ್ಥಳದಲ್ಲೇ ಸಾವು

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾ ಶ್ರೀ

Chitradurga; ನ್ಯಾಯಾಲಯಕ್ಕೆ ಶರಣಾದ ಮುರುಘಾಶ್ರೀ: ಮೇ 27ರವರೆಗೆ ನ್ಯಾಯಾಂಗ ಬಂಧನ

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

Chitradurga ಯರೇಹಳ್ಳಿಯಲ್ಲಿ ಹಕ್ಕು ಚಲಾಯಿಸಿದ್ದು ಕೇವಲ 18 ಮಂದಿ!

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Nomination: ಕೊನೆಯ ಕ್ಷಣದಲ್ಲಿ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ…

Nomination: ಕೊನೆಯ ಕ್ಷಣದಲ್ಲಿ ಓಡೋಡಿ ಬಂದು ನಾಮಪತ್ರ ಸಲ್ಲಿಸಿದ ಬಿಜೆಪಿ ಅಭ್ಯರ್ಥಿ…

Vijayapura ಬಸವ ಜಯಂತಿ ದಿನ ಮಾದರಿ ಕಾರ್ಯ; ಹೆತ್ತವರಿಲ್ಲದ ವಿದ್ಯಾರ್ಥಿಗೆ ಶೈಕ್ಷಣಿಕ ದತ್ತು

Vijayapura ಬಸವ ಜಯಂತಿ ದಿನ ಮಾದರಿ ಕಾರ್ಯ; ಹೆತ್ತವರಿಲ್ಲದ ವಿದ್ಯಾರ್ಥಿಗೆ ಶೈಕ್ಷಣಿಕ ದತ್ತು

arvind kejriwal

Delhi Excise Policy Case: ಕೇಜ್ರಿಗೆ ಅಲ್ಪ ರಿಲೀಫ್; ಮಧ್ಯಂತರ ಜಾಮೀನು ನೀಡಿದ ಸುಪ್ರೀಂ

7-kundapura

Rank: ಕುಂದಾಪುರ ತಾಲೂಕಿಗೆ ಪ್ರಥಮ ಹಾಗೂ ರಾಜ್ಯಕ್ಕೆ 5ನೇ ರ್‍ಯಾಂಕ್ ಪಡೆದ ಶುಕ್ತಿಜಾ

prashanth neel

KGF-3 ಸ್ಕ್ರಿಪ್ಟ್ ಸಿದ್ದವಿದೆ, ಆದರೆ….: ಬಿಗ್ ಅಪ್ಡೇಟ್ ನೀಡಿದ ಪ್ರಶಾಂತ್ ನೀಲ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.