ಪಾಲಿಕೆ ಚುನಾವಣೆ: ರಾಜಕೀಯ ಪಕ್ಷಗಳ‌ ನಾಯಕರೊಂದಿಗೆ “ಸುದಿನ’ ಸಂವಾದ


Team Udayavani, Nov 6, 2019, 4:21 AM IST

DD-22

ಉದಯವಾಣಿ-ಸುದಿನ ತಂಡ ನಡೆಸಿದ ಸಂವಾದದಲ್ಲಿ ಪಾಲ್ಗೊಂಡ ವಿವಿಧ ಪಕ್ಷಗಳ ಜಿಲ್ಲಾಧ್ಯಕ್ಷರು.

ಭವಿಷ್ಯದ ಮಂಗಳೂರಿಗೆ ಪಂಚ ಪಕ್ಷಗಳ ವಿಷನ್‌; ಜನರ ಪ್ರಣಾಳಿಕೆಗೆ ಆದ್ಯತೆಮನಪಾ ಚುನಾವಣೆ ಮತದಾನಕ್ಕೆ ಇನ್ನು 6 ದಿನಗಳಷ್ಟೇ ಬಾಕಿ ಉಳಿದಿದ್ದು, ಎಲ್ಲ ಪಕ್ಷಗಳ ಅಭ್ಯರ್ಥಿಗಳು ಈಗ ಸ್ಪರ್ಧಾ ಕಣದಲ್ಲಿದ್ದಾರೆ. 60 ವಾರ್ಡ್‌ಗಳ ಎಲ್ಲ ಅಭ್ಯರ್ಥಿಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಉದಯವಾಣಿ-ಸುದಿನವು ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಸಿಪಿಎಂ ಹಾಗೂ ಎಸ್‌ಡಿಪಿಐ ಪಕ್ಷದ ಜಿಲ್ಲಾಧ್ಯಕ್ಷರೊಂದಿಗೆ ಮಂಗಳವಾರ “ಭವಿಷ್ಯದ ಮಂಗಳೂರಿಗೆ-ಪಕ್ಷಗಳ ವಿಷನ್‌’ ಎಂಬ ಅಭಿವೃದ್ಧಿ ಪರ ಸಂವಾದ ಆಯೋಜಿಸಿತ್ತು. “ಭವಿಷ್ಯದ ಮಂಗಳೂರಿಗೆ ಜನರ ಪ್ರಣಾಳಿಕೆ’ಗೆ ನಮ್ಮ ಓದುಗರು ಕಳುಹಿಸಿದ್ದ ಸಲಹೆ-ಬೇಡಿಕೆಗಳನ್ನು ಎಲ್ಲ ಪಕ್ಷಗಳ ಮುಖಂಡರ ಮುಂದಿಡುವ ಮೂಲಕ ಅವುಗಳಿಗೆ ತಮ್ಮ ಪ್ರಣಾಳಿಕೆಯಲ್ಲಿ ಆದ್ಯತೆ ನೀಡಬೇಕೆನ್ನುವುದು ಕೂಡ ಈ ಸಂವಾದದ ಆಶಯವಾಗಿತ್ತು. ಅದರಂತೆ ಕಾಂಗ್ರೆಸ್‌ನಿಂದ ಜಿಲ್ಲಾಧ್ಯಕ್ಷ ಹರೀಶ್‌ ಕುಮಾರ್‌, ಬಿಜೆಪಿಯಿಂದ ಜಿಲ್ಲಾ ಉಪಾಧ್ಯಕ್ಷ ರವಿಶಂಕರ್‌ ಮಿಜಾರು, ಜೆಡಿಎಸ್‌ನಿಂದ ಜಿಲ್ಲಾ ವಕ್ತಾರ ಮಧುಸೂದನ್‌ ಗೌಡ, ಸಿಪಿಎಂನಿಂದ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಹಾಗೂ ಎಸ್‌ಡಿಪಿಐನಿಂದ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಅವರು ಭಾಗವಹಿಸಿದ್ದರು.

“ಸ್ವಚ್ಛ, ಮಂಗಳೂರು ಬಿಜೆಪಿ ಸಂಕಲ್ಪ’
ಭವಿಷ್ಯದ ಮಂಗಳೂರನ್ನು ಸ್ವಚ್ಛ , ಸುಂದರ ರೀತಿಯಲ್ಲಿ ಅಭಿವೃದ್ಧಿಗೊಳಿಸುವ ಸಂಕಲ್ಪದೊಂದಿಗೆ ಪಾಲಿಕೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ತತ್‌ಕ್ಷಣದಿಂದ ವಿಶೇಷ ಯೋಜನೆಗಳನ್ನು ಅನುಷ್ಠಾನಿಸಲಾಗುವುದು ಎಂದು ಬಿಜೆಪಿ ದ.ಕ. ಜಿಲ್ಲಾ ಉಪಾಧ್ಯಕ್ಷ ರವಿಶಂಕರ ಮಿಜಾರ್‌ ತಿಳಿಸಿದ್ದಾರೆ.

ಯಡಿಯೂರಪ್ಪ ಅವರು ಈ ಹಿಂದೆ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಮಂಗಳೂರಿನಲ್ಲಿ ಕಾಂಕ್ರೀಟ್‌ ರಸ್ತೆ ಸಹಿತ ವಿವಿಧ ರೀತಿಯಲ್ಲಿ ಅನುದಾನ-ಅಭಿವೃದ್ಧಿ ನಡೆಸಲಾಗಿದೆ. ಕುಡಿಯುವ ನೀರು, ರಸ್ತೆ, ವಿದ್ಯುತ್‌ ಕ್ಷೇತ್ರದ ಅಭಿವೃದ್ಧಿಗೆ ಆದ್ಯತೆ ನೀಡಲಾಗಿತ್ತು. ಆದರೆ, ಇತ್ತೀಚಿನ ಪಾಲಿಕೆ ಆಡಳಿತದಲ್ಲಿ ಕುಡಿಯುವ ನೀರಿನ ಸಮಸ್ಯೆ, ಫುಟ್‌ಪಾತ್‌ ಅಸಮರ್ಪಕ ಸ್ಥಿತಿ, ಒಳರಸ್ತೆಗಳ ಅಭಿವೃದ್ಧಿ ಆಗದಿರುವುದು, ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ನಡೆಯುತ್ತಿಲ್ಲ. ಇದಕ್ಕೆ ಸೂಕ್ತ ಪರಿಹಾರ ನೀಡಲು ಮುಂದೆ ಪಾಲಿಕೆಯಲ್ಲಿ ಬಿಜೆಪಿ ಆದ್ಯತೆ ನೀಡಲಿದೆ.

ಸಾಂಕ್ರಾಮಿಕ ರೋಗಗಳ ನಿವಾರಣೆ ಅಗತ್ಯ
ಟೆಂಪಲ್‌, ಎಜುಕೇಶನ್‌, ಬೀಚ್‌ ಟೂರಿಸಂ ಬೆಳೆಸಬೇಕಿದೆ. ಡೆಂಗ್ಯು, ಮಲೇರಿಯಾ ಪಿಡುಗು ಸಂಪೂರ್ಣ ನಿವಾರಿಸಬೇಕಿದೆ. ಒಳಚರಂಡಿ ವ್ಯವಸ್ಥೆಯನ್ನು ಅತ್ಯಂತ ಯೋಜನಾಬದ್ಧವಾಗಿ ನಡೆಸಬೇಕಾಗಿದೆ. ಮೂಡಾ, ಸ್ಮಾರ್ಟ್‌ ಸಿಟಿ, ಪಾಲಿಕೆ ಮಧ್ಯೆ ಸಮನ್ವಯಕ್ಕೆ ಒತ್ತು ನೀಡಲಾಗುವುದು.

ವಾಹನ ದಟ್ಟಣೆ ನಿವಾರಿಸಲು ಹಳೆ ಬಸ್‌ನಿಲ್ದಾಣದಲ್ಲಿ ಮಲ್ಟಿಲೆವೆಲ್‌ ಕಾರ್‌ ಪಾರ್ಕಿಂಗ್‌ಗೆ ವೇಗ, ಕೇಂದ್ರ ಮಾರುಕಟ್ಟೆ ಸಹಿತ ವಿವಿಧೆಡೆ ಭಾರೀ ಗಾತ್ರದ ವಾಹನಗಳ ಸಂಖ್ಯೆ ಅಧಿಕವಿರುವುದರಿಂದ ಆಯ್ದ ಮೂರು ಕಡೆಗಳಲ್ಲಿ ಟ್ರಕ್‌ ಟರ್ಮಿನಲ್‌ನ್ನು ನಿರ್ಮಿಸುವುದು.

ಹೊಸ ಕಟ್ಟಡ ನಿರ್ಮಿಸುವಾಗ ಕೆಳಮಹಡಿ ಕಡ್ಡಾಯವಾಗಿ ಪಾರ್ಕಿಂಗ್‌ಗೆ, ನಿಯಮ ಉಲ್ಲಂಘಿಸಿದವರ ಲೈಸೆನ್ಸ್‌ ರದ್ದು, ಪಾಲಿಕೆ ಕಂಪ್ಯೂಟರೀಕರಣ, ವಸತಿಹೀನರಿಗೆ ವಸತಿ ಯೋಜನೆ, ನ್ಪೋರ್ಟ್ಸ್ ಕಾಂಪ್ಲೆಕ್ಸ್‌, ಅಂತಾರಾಷ್ಟ್ರೀಯ ಕ್ರೀಡಾಂಗಣ, ಎಸ್‌ಟಿಎಸ್‌ಸಿ ಕಾಲನಿ ಅಭಿವೃದ್ಧಿ ನಮ್ಮ ಸಂಕಲ್ಪ ಎಂದರು.

“ವಾರ್ಡ್‌ ಕಮಿಟಿ-ಮಳೆಕೊಯ್ಲು ಅನುಷ್ಠಾನ’
ಉದಯವಾಣಿ ಸುದಿನಕ್ಕೆ ಜನರು ಈಗಾಗಲೇ ಕಳುಹಿಸಿರುವ ನಗರದ ಆದ್ಯತೆಯ ಪ್ರಣಾಳಿಕೆಯ ಎಲ್ಲ ಅಂಶಗಳನ್ನು ಬಿಜೆಪಿಯ ಪ್ರಣಾಳಿಕೆಯಲ್ಲಿ ಸೇರಿಸಲು ಒತ್ತು ನೀಡಲಾಗುವುದು. ವಾರ್ಡ್‌ ಕಮಿಟಿ ರಚನೆ ಹಾಗೂ ನಗರದ ಎಲ್ಲ ಮನೆಗಳಲ್ಲಿ ಮಳೆಕೊಯ್ಲು ಅನುಷ್ಟಾನ, ಸಮರ್ಪಕ ನೀರು, ರಸ್ತೆ, ಆರೋಗ್ಯ ಕ್ಷೇತ್ರಗಳ ಬಗ್ಗೆ ಜನರ ಕಳಕಳಿಯನ್ನು ಪ್ರಣಾಳಿಕೆಯಲ್ಲಿ ಪರಿಗಣಿಸಲಾಗುವುದು.
 - ರವಿಶಂಕರ ಮಿಜಾರ್‌, ಬಿಜೆಪಿ ದ.ಕ. ಜಿಲ್ಲಾ ಉಪಾಧ್ಯಕ್ಷ

“ಭವಿಷ್ಯದ ಮಂಗಳೂರು ದೂರದೃಷ್ಟಿ ಯೋಜನೆಗಳಿಗೆ ಆದ್ಯತೆ’
ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾ ರವಾಗಿ ಸಮುದ್ರದ ಉಪ್ಪುನೀರನ್ನು ಸಿಹಿನೀರನ್ನಾಗಿ ಪರಿವರ್ತಿಸುವುದು, ಪಾರ್ಕಿಂಗ್‌, ಸಂಚಾರ ಸಮಸ್ಯೆಗೆ ಪರಿಹಾರವಾಗಿ ನಗರದ ಹೊರಭಾಗದಲ್ಲಿ ವರ್ತುಲ ರಸ್ತೆ(ರಿಂಗ್‌ರೋಡ್‌) ನಿರ್ಮಾಣ ಮತ್ತು ಎಲ್ಲ ವಾರ್ಡ್‌ಗಳಿಗೂ ಸ್ಮಾರ್ಟ್‌ಸಿಟಿ ಯೋಜನೆ ಅನ್ವಯಗೊಳಿಸುವುದು
ಸಹಿತ ಮನಪಾದ ಮುಂದಿನ 25-50 ವರ್ಷಗಳ ಬೆಳವಣಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಯೋಜಿತ ಅಭಿವೃದ್ಧಿಗೆ ಜೆಡಿಎಸ್‌ ಆದ್ಯತೆ ನೀಡಲಿದೆ ಎಂದು ಪಕ್ಷದ ಜಿಲ್ಲಾ ವಕ್ತಾರ ಮಧುಸೂದನ ಗೌಡ ತಿಳಿಸಿದ್ದಾರೆ.ಸಮುದ್ರ ನೀರನ್ನು ಸಿಹಿನೀರಾಗಿ ಪರಿವರ್ತಿಸಿದರೆ ವರ್ಷವಿಡೀ ನಿರಂತರ ನೀರು ನೀಡಬಹುದು. ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಮಂಗಳೂರಿನಲ್ಲಿಯೂ ಆರಂಭಿಸಬೇಕು.

“ಮಂಗಳೂರು-1′ ಸೇವೆ ವಿಸ್ತರಣೆ
ನಗರದ 3 ಕಡೆಗಳಲ್ಲಿ ಮಾತ್ರ ಇರುವ “ಮಂಗಳೂರು-1′ ಮಾದ ರಿ ಸೇವಾ ಕೇಂದ್ರಗಳನ್ನು ಪ್ರತಿ 3-4 ವಾರ್ಡ್‌ಗಳಿಗೆ ಒಂದರಂತೆ ತೆರೆಯಬೇಕು.

ಇದರಿಂದಾಗಿ ಜನರು ನೀರಿನ ಬಿಲ್‌, ತೆರಿಗೆ ಮೊದ ಲಾದವುಗಳ ಪಾವತಿಗೆ ಪಾಲಿಕೆ ಕಚೇರಿಗೆ ಬರುವ ಕಷ್ಟ ತಪ್ಪುತ್ತದೆ. ವಾರ್ಡ್‌ ಸಭೆಗಳನ್ನು ನಡೆಸಬೇಕು. ನಗರದ ಸಂಚಾರಿ ವೃತ್ತಗಳನ್ನು ವೈಜ್ಞಾನಿಕ ವಾಗಿ ನಿರ್ಮಿಸಬೇಕು. ಸರಕಾರದ ಸವಲತ್‌ಗಳು ಜನರ ಬಳಿಗೆ ತಲುಪುವಂತೆ ಮಾಡಬೇಕು. ಕಾರ್ಪೊರೇಟರ್‌ಗಳನ್ನು ಹುಡುಕಿಕೊಂಡು ಪಾಲಿಕೆಗೆ ಬರುವಂತಾಗಬಾರದು. ಇವುಗಳಿಗೆ ಜೆಡಿಎಸ್‌ ಬದ್ಧವಿದೆ ಎಂದರು.

ಪಾಲಿಕೆ ಆ್ಯಪ್‌
ಮಹಾನಗರ ಪಾಲಿಕೆಯ ಸೇವೆ, ಜನರು ಯಾವ ಸಮಸ್ಯೆಗೆ ಯಾರನ್ನು ಸಂಪರ್ಕಿಸಿ ಪರಿಹಾರ ಪಡೆದುಕೊಳ್ಳಬಹುದು ಎಂಬ ಬಗ್ಗೆ ಸಾರ್ವಜನಿಕರು ನೇರವಾಗಿ ಸಂವಹನ ನಡೆಸಲು ಅನುಕೂಲವಾಗುವಂತೆ ಆ್ಯಪ್‌ನ್ನು ಪಾಲಿಕೆಯಿಂದಲೇ ಆರಂಭಿಸಲು ನಾವು ಬದ್ಧರಿದ್ದೇವೆ.

ವರ್ತುಲ ರಸ್ತೆ ನಿರ್ಮಾಣ
ಮೂಲಸೌಕರ್ಯಗಳ ಅಭಿವೃದ್ಧಿ ಸೇರಿದಂತೆ ಉದಯವಾಣಿ “ಸುದಿನ’ ಮೂಲಕ ಜನರು ರೂಪಿಸಿರುವ ಪ್ರಣಾಳಿಕೆಯ ಅಂಶಗಳನ್ನು ಅನುಷ್ಟಾನಗೊಳಿಸಲು ಬದ್ಧರಿದ್ದೇವೆ. ಹೊರಭಾಗದ ವಾಹನಗಳು ಕೂಡ ನಗರದ ಮೂಲಕ ಹಾದು ಹೋಗುತ್ತಿವೆ. ಸಂಚಾರ ಅವ್ಯವಸ್ಥೆಗೆ ಕಾರಣವಾಗಿದೆ. ವರ್ತುಲ ರಸ್ತೆ ನಿರ್ಮಿಸಿದರೆ ಘನವಾಹನಗಳು, ಇತರೆ ಸರಕು ವಾಹನಗಳು ನಗರದ ಹೊರಭಾಗದಿಂದಲೇ ಸಂಚರಿಸಲು ಸಾಧ್ಯವಾಗುತ್ತದೆ.
 - ಮಧುಸೂದನ ಗೌಡ, ಜೆಡಿಎಸ್‌ ಜಿಲ್ಲಾ ವಕ್ತಾರ

“ಸ್ಲಂವಾಸಿಗಳು-ನಿವೇಶನರಹಿತರ ಕಲ್ಯಾಣ ನಮ್ಮ ಆದ್ಯತೆ’

ನೀರಿನ ಸಮಸ್ಯೆ ನಿವಾರಣೆಗೆ ಒತ್ತು ನೀಡುವುದರೊಂದಿಗೆ ಸ್ಲಂ ನಿವಾಸಿಗಳು, ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಕಾಲನಿ ಅಭಿವೃದ್ಧಿ ಮತ್ತು ನಿವೇಶನರಹಿತರಿಗೆ ನಿವೇಶನ ಕೊಡಿಸುವುದು ನಮ್ಮ ಆದ್ಯತೆ ಎಂದು ಸಿಪಿಎಂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಸಂತ ಆಚಾರಿ ಹೇಳಿದರು.

ನಗರದಲ್ಲಿ ನೀರಿನ ಸಮಸ್ಯೆ ಬೃಹದಾ ಕಾರವಾಗಿ ಬೆಳೆದಿದೆ. ಅವೈಜ್ಞಾನಿಕವಾಗಿ ರೂಪಿಸುವ ಯೋಜನೆಗಳು, ತುರ್ತು ಕೈಗೊಳ್ಳುವ ಕೆಲಸಗಳಲ್ಲಿ ಆಗುವ ಲೋಪಗಳೇ ಇದಕ್ಕೆ ಬಹುಮುಖ್ಯ ಕಾರಣ. ನೀರಿನ ಸಮರ್ಪಕ ಪೂರೈಕೆ, ಉಚಿತ ನೀರು ಪೂರೈಕೆ ಒತ್ತಾಯವೇ ನಮ್ಮ ಒತ್ತಾಸೆ. ಸೂಕ್ತ ಒಳಚರಂಡಿ ವ್ಯವಸ್ಥೆ, ಫುಟ್‌ಪಾತ್‌ ವ್ಯವಸ್ಥೆಗೆ ಆದ್ಯತೆ, ಸ್ವತ್ಛ, ಸುಂದರ ನಗರವಾಗಿ ಮಂಗಳೂರನ್ನು ಪರಿವರ್ತಿಸುವ ವಿಷನ್‌ ನಮ್ಮ ಮುಂದಿದೆ. ವಾರ್ಡ್‌ಗೊಂದು ಕ್ರೀಡಾಂಗಣ, ವಾರ್ಡ್‌ ಕಮಿಟಿ ರಚಿಸಿ ಕಾಲಕಾಲಕ್ಕೆ ವಾರ್ಡ್‌ ಕಮಿಟಿ ಸಭೆ ಏರ್ಪಡಿಸುವುದು ನಮ್ಮ ಧ್ಯೇಯ.

ನಗರದ ಕೆರೆಗಳನ್ನು ಅಭಿವೃದ್ಧಿಪಡಿಸಿ ಜನರ ಮನೆಬಳಕೆಗೆ ನೀರು ಸಿಗುವಂತೆ ನೋಡಿಕೊಳ್ಳಬೇಕು. ನಗರದಲ್ಲಿ ಸರಿಯಾದ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ. ಆದರೂ ಟೋಯಿಂಗ್‌ ಮೂಲಕ ವಾಹನ ಕೊಂಡೊಯ್ದು ದಂಡ ವಿಧಿಸುವುದು ನಿಲ್ಲಬೇಕು. ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿಕೊಡದ ಕಟ್ಟಡ ಮಾಲಕರೊಂದಿಗೆ ಯಾವುದೇ ರಾಜಿ ಮಾಡದೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು. ನಗರಕ್ಕೆ ಆಗಮಿಸುವ ಘನ ವಾಹನಗಳಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು.

ಆರೋಗ್ಯ ಜಾಗೃತಿ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ನಗರದ ವಿವಿಧೆಡೆ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಕಲ್ಪಿಸುವುದಕ್ಕೆ ಆದ್ಯತೆ ನೀಡಬೇಕು. ಒಟ್ಟಿನಲ್ಲಿ ಜನರ ತೆರಿಗೆ ಹಣಕ್ಕೆ ಸರಿಯಾದ ನ್ಯಾಯ ಒದಗಿಸಿಕೊಡುವ ವ್ಯವಸ್ಥೆ ಬರಬೇಕು. ಅಭಿವೃದ್ಧಿಯಾಗಿರುವ ನಗರಗಳ ಪಟ್ಟಿ ಮಾಡಿ ಆ ನಗರಗಳಿಗೆ ಪಾಲಿಕೆ ತಂಡ ತೆರಳಿ ಅಧ್ಯಯನ ನಡೆಸಬೇಕು.

ಜನರ ಪ್ರಣಾಳಿಕೆ ಪರಿಗಣನೆ
ನಗರದ ಒಟ್ಟು ಅಭಿವೃದ್ಧಿ ಸಂಬಂಧಿಸಿದಂತೆ ಐದೂ ಪಕ್ಷಗಳ ಮುಖಂಡರನ್ನು ಕರೆಸಿ ಸಂವಾದ ಏರ್ಪಡಿಸಿರುವ “ಉದಯವಾಣಿ’ಯ ಕೆಲಸ ಅಭಿನಂದನೀಯ. ಪಾಲಿಕೆ ಆಡಳಿತ ಜಾರಿ ಗೊಂಡ ಅನಂತರ ಮತ್ತೂಮ್ಮೆ ಸಂವಾದ ಹಮ್ಮಿಕೊಳ್ಳುವ ಮೂಲಕ ನಾಗರಿಕರ ಸಮಸ್ಯೆಗಳಿಗೆ ನಿರಂತರ ಧ್ವನಿಯಾಗಬೇಕು. “ಮಂಗಳೂರಿನ ಅಭಿವೃದ್ಧಿಗೆ ಜನರ ಪ್ರಣಾಳಿಕೆ’ ಎಂಬ ಉದಯವಾಣಿಯ ಪರಿಕಲ್ಪನೆಯಡಿ ಜನರು ಕಳುಹಿಸಿದ ಆದ್ಯತಾ ಪಟ್ಟಿಯನ್ನು ಪಕ್ಷದ ಪ್ರಣಾಳಿಕೆಯಲ್ಲಿ ಅಳವಡಿಸಿಕೊಂಡು ಕಾರ್ಯೋನ್ಮುಖರಾಗುತ್ತೇವೆ.
– ವಸಂತ ಆಚಾರಿ, ಜಿಲ್ಲಾ ಪ್ರ.ಕಾರ್ಯದರ್ಶಿ, ಸಿಪಿಎಂ

“ಮೂಲ ಸೌಕರ್ಯದೊಂದಿಗೆ ನಗರ ಬೆಳವಣಿಗೆಗೆ ಒತ್ತು’
ಮೂಲ ಸೌಲಭ್ಯಗಳಿಗೆ ಆದ್ಯತೆ ನೀಡಿ ನಗರ ಬೆಳೆಯಬೇಕು. ಈ ದಿಸೆೆಯಲ್ಲಿ ಕುಡಿಯುವ ನೀರು, ರಸ್ತೆ ಅಭಿವೃದ್ಧಿ, ಭ್ರಷ್ಟಾಚಾರ ರಹಿತ ಪಾರದರ್ಶಕ ಆಡಳಿತ, ಅನುದಾನದ ಸದ್ಬಳಕೆ, ವಾರ್ಡ್‌ ಸಮಿತಿ ರಚನೆ, ಮಹಿಳಾ ಸಬಲೀಕರಣ, 3 ತಿಂಗಳಿಗೊಮ್ಮೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳನ್ನು ಸೇರಿಸಿ ಸಭೆ ನಡೆಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಪ್ರಕ್ರಿಯೆಗೆ ಪ್ರಾಮುಖ್ಯತೆ ನೀಡಲಾಗುವುದು ಎಂದು ಎಸ್‌ಡಿಪಿಐ ದ.ಕ. ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಹೇಳಿದರು.

2013ರ ಪಾಲಿಕೆ ಚುನಾವಣೆಯಲ್ಲಿ ಎಸ್‌ಡಿಪಿಐ 1 ವಾರ್ಡ್‌ ನಲ್ಲಿ ಗೆಲುವು ಸಾಧಿಸಿದ್ದು, ಆ ವಾರ್ಡ್‌ನಲ್ಲಿ ಕಚೇರಿಯನ್ನು ತೆರೆದು ಜನರಿಗೆ ವಿವಿಧ ಸರಕಾರಿ ಯೋಜನೆಗಳ ಬಗ್ಗೆ ಮಾಹಿತಿ ನೀಡುವ ವ್ಯವಸ್ಥೆ ಮಾಡಲಾಗಿದೆ ಹಾಗೂ ಅನುದಾನದ ಸದ್ಬಳಕೆ ಮಾಡುವ ಮೂಲಕ ಬಹಳಷ್ಟು ಅಭಿವೃದ್ಧಿ ಕೆಲಸಗಳನ್ನು ನಡೆಸಲಾಗಿದೆ. ಈ ಬಾರಿ 6 ಸ್ಥಾನಗಳಲ್ಲಿ ಎಸ್‌ಡಿಪಿಐ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಎಲ್ಲ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆ.

ಸ್ಮಾರ್ಟ್‌ ಸಿಟಿ ಯೋಜನೆಯ ವಿಸ್ತರಣೆ ಅಗತ್ಯ
ಮನಪಾದಲ್ಲಿ ಆಡಳಿತ ಪಕ್ಷ ಮತ್ತು ಪ್ರತಿ ಪಕ್ಷಗಳು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸುವ ಸಂಪ್ರದಾಯವಿದೆ. ಪಾಲಿಕೆಯು ಅನುದಾನವನ್ನು ಹಂಚುವ ಕಚೇರಿಯಾಗಿ ಮಾರ್ಪಟ್ಟಿದೆ. ಬಹಳಷ್ಟು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯುತ್ತಿಲ್ಲ. ಅಧಿಕಾರಿಗಳು ಮತ್ತು ಜನ ಪ್ರತಿನಿಧಿಗಳನ್ನು ಸೇರಿಸಿ ಸಭೆಗಳು ನಡೆಯುತ್ತಿಲ್ಲ ಎಂದು ಆರೋಪಿಸಿದ ಅವರು ಇಂತಹ ವ್ಯವಸ್ಥೆ ಬಗ್ಗೆ ತನಗೆ ಖೇದವಿದೆ ಎಂದರು.

ನಗರದ ಸೌಂದರ್ಯ ವರ್ಧಿಸಿ ಪ್ರವಾಸಿಗರನ್ನು ಆಕರ್ಷಿಸುವ ವ್ಯವಸ್ಥೆ, ಸ್ಮಾರ್ಟ್‌ ಸಿಟಿ ಯೋಜನೆ ನಗರಕ್ಕೆ ಸೀಮಿತವಾಗದೆ ಪಾಲಿಕೆಯ ಎಲ್ಲ 60 ವಾರ್ಡ್‌ಗಳಿಗೆ ವಿಸ್ತರಣೆ ಮಾಡಬೇಕು. ಮರಳುಗಾರಿಕೆಯ ಬಗ್ಗೆ ಪಾಲಿಕೆ ಕೂಡ ಗಮನ ಹರಿಸುವುದು, ಪಾಲಿಕೆಗೆ ಬರುವ ಅನುದಾನ ಎಲ್ಲ 60 ವಾರ್ಡ್‌ಗಳಿಗೂ ಸಮಾನವಾಗಿ ಹಂಚುವುದು, ಸರಕಾರಿ ಯೋಜನೆಗಳನ್ನು ಜನರಿಗೆ ತಲುಪಿಸಲು ವ್ಯವಸ್ಥೆ ಆಗಬೇಕು ಎಂದು ಅವರು ತಿಳಿಸಿದರು.

ವಾರ್ಡ್‌ ಸಮಿತಿ ರಚನೆ
ಒಬ್ಬ ವ್ಯಕ್ತಿಗೆ ತಿಂಗಳಿಗೆ 24,000 ಲೀಟರ್‌ ನೀರು ಆವಶ್ಯಕತೆ ಇದ್ದು, ಅಷ್ಟು ನೀರನ್ನು ಒದಗಿಸಬೇಕೆಂಬ ನಿಯಮವಿದೆ. ಆದರೆ ಪಾಲಿಕೆಯಲ್ಲಿ ಕೇವಲ 8000 ಲೀ. ನೀರನ್ನು ಮಾತ್ರ ಪೂರೈಕೆ ಮಾಡಲಾಗುತ್ತಿದೆ. ಇದು ಸರಿಯಲ್ಲ. ವಾರ್ಡ್‌ ಸಮಿತಿ ರಚನೆ ಮತ್ತು ಮಳೆಕೊಯ್ಲು ವ್ಯವಸ್ಥೆ ಅನುಷ್ಟಾನಕ್ಕೂ ವಿಶೇಷ ಆದ್ಯತೆ ನೀಡಲಾಗುವುದು.
 -ಅಥಾವುಲ್ಲಾ ಜೋಕಟ್ಟೆ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ

“ಪಾಲಿಕೆಯಲ್ಲಿ ಆನ್‌ಲೈನ್‌ ವ್ಯವಸ್ಥೆ-ನಗರಕ್ಕೆ ಮಳೆಕೊಯ್ಲು’
ಮನಪಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ, ಮೂಲ ಸೌಕರ್ಯ, ನಗರ ಸುಂದರೀಕರಣಕ್ಕೆ ಇನ್ನಷ್ಟು ನೂತನ ಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಬದ್ಧವಾಗಿದೆ ಎಂದು ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌ ಭರವಸೆ ನೀಡಿದ್ದಾರೆ.

ಬೆಂಗಳೂರು ಬಿಟ್ಟರೆ ಮಂಗಳೂರು ಅತೀ ವೇಗವಾಗಿ ಬೆಳೆಯುತ್ತಿರುವ ನಗರ. ಇದಕ್ಕೆ ಪೂರಕವಾಗಿ ಯೋಜನೆಗಳ ವಿಸ್ತಾರ ಮತ್ತು ಉನ್ನತೀಕರಣವಾಗಬೇಕು. ಈ ನಿಟ್ಟಿನಲ್ಲಿ ಹಿಂದಿನ ಅವಧಿಯಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಪಕ್ಷ ಯೋಜನೆ ಹಾಕಿಕೊಂಡು ಕಾರ್ಯೋನ್ಮುಖವಾಗಿತ್ತು. ಪಾರ್ಕಿಂಗ್‌ ವ್ಯವಸ್ಥೆಗೆ ಹಳೆಯ ಬಸ್‌ ನಿಲ್ದಾಣದಲ್ಲಿ ಮಲ್ಟಿ ಲೆವೆಲ್‌ ಕಾರು ಪಾರ್ಕಿಂಗ್‌ ಯೋಜನೆ ಸಿದ್ಧವಾಗಿದೆ. ಜತೆಗೆ ಕದ್ರಿ ಸಹಿತ ನಗರದ ಕೆಲವು ಆಯ್ದ ಪ್ರದೇಶಗಳಲ್ಲಿ ಬಹು ಅಂತಸ್ತು ಕಾರು ಪಾರ್ಕಿಂಗ್‌ ವ್ಯವಸ್ಥೆ ನಿರ್ಮಾಣವಾಗಬೇಕು. ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರದ ಅವಧಿಯಲ್ಲಿ 90 ಕೋ.ರೂ. ಯೋಜನೆಯಡಿ ತುಂಬೆಯಲ್ಲಿ ನೂತನ ವೆಂಟೆಡ್‌ ಡ್ಯಾಂ ನಿರ್ಮಾಣವಾಗಿದೆ. ಇದರ ಜತೆಗೆ ಮಳೆ ಕೊಯ್ಲು ಕಡ್ಡಾಯ, ಅಂರ್ತಜಲ ವೃದ್ಧಿ ಸೇರಿದಂತೆ ಜಲಮೂಲಗಳ ಅಭಿವೃದ್ಧಿ ಹಾಗೂ ಜಲ ಸಂರಕ್ಷಣೆ ನಿಟ್ಟಿನಲ್ಲೂ ಕಾರ್ಯಕ್ರಮ ಅಗತ್ಯವಿದೆ. ಈ ಬಗ್ಗೆ ಮುಂದಿನ ಅವಧಿಯಲ್ಲೂ ಪಾಲಿಕೆಯಲ್ಲಿ ಇನ್ನಷ್ಟು ಯೋಜನೆಗಳನ್ನು ಹಾಕಿಕೊಳ್ಳಲು ನಮ್ಮ ಪಕ್ಷ ಬದ್ಧ.

ಮೂಲ ಸೌಕರ್ಯಗಳಿಗೆ ಹೆಚ್ಚಿನ ಒತ್ತು
ಹಿಂದಿನ 5 ವರ್ಷಗಳ ಕಾಂಗ್ರೆಸ್‌ ಆಡಳಿತದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿ ಒಳ್ಳೆಯ ಅಭಿವೃದ್ಧಿ ಕಾರ್ಯಗಳು ಆಗಿವೆ. ಸಾವಿರಾರು ಕೋ.ರೂ. ಅನುದಾನಗಳು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ವಿನಿಯೋಗವಾಗಿದೆ. ಫುಟ್‌ಪಾತ್‌, ಒಳಚರಂಡಿ ವ್ಯವಸ್ಥೆ ಉನ್ನತೀಕರಣ ಸೇರಿದಂತೆ ಮೂಲ ಸೌಲಭ್ಯಗಳನ್ನು ಅಭಿವೃದ್ಧಿ ಆಗಿವೆ.

ಈ ಬಾರಿಯೂ ಪಾರ್ಕಿಂಗ್‌, ಕುಡಿಯುವ ನೀರು, ಫುಟ್‌ಪಾತ್‌, ತ್ಯಾಜ್ಯ ನಿರ್ವಹಣೆ ಹಾಗೂ ಒಳಚರಂಡಿ ಸೇರಿದಂತೆ ಮೂಲಸೌಕರ್ಯಗಳ ಅಭಿವೃದ್ದಿಗೆ ಇನ್ನಷ್ಟು ಹೆಚ್ಚು ಒತ್ತು ನೀಡಲಾಗುವುದು. ಬಾಕಿ ಇರುವ ಕಡೆಗಳಲ್ಲಿ ಮುಂದಿನ ಅವಧಿಯಲ್ಲಿ ಇದನ್ನು ಪೂರ್ತಿಗೊಳಿಸಲಾಗುವುದು.

ವಾರ್ಡ್‌ ಸಮಿತಿ ರಚನೆ
ಒಬ್ಬ ವ್ಯಕ್ತಿಗೆ ತಿಂಗಳಿಗೆ 24,000 ಲೀಟರ್‌ ನೀರು ಆವಶ್ಯಕತೆ ಇದ್ದು, ಅಷ್ಟು ನೀರನ್ನು ಒದಗಿಸಬೇಕೆಂಬ ನಿಯಮವಿದೆ. ಆದರೆ ಪಾಲಿಕೆಯಲ್ಲಿ ಕೇವಲ 8000 ಲೀ. ನೀರನ್ನು ಮಾತ್ರ ಪೂರೈಕೆ ಮಾಡಲಾಗುತ್ತಿದೆ. ಇದು ಸರಿಯಲ್ಲ. ವಾರ್ಡ್‌ ಸಮಿತಿ ರಚನೆ ಮತ್ತು ಮಳೆಕೊಯ್ಲು ವ್ಯವಸ್ಥೆ ಅನುಷ್ಟಾನಕ್ಕೂ ವಿಶೇಷ ಆದ್ಯತೆ ನೀಡಲಾಗುವುದು.
 -ಅಥಾವುಲ್ಲಾ ಜೋಕಟ್ಟೆ, ಎಸ್‌ಡಿಪಿಐ ಜಿಲ್ಲಾಧ್ಯಕ್ಷ

ಜನರ ನಿರೀಕ್ಷೆಗೆ ಸ್ಪಂದನೆ ಬದ್ಧತೆ
ನಗ ರದ ಸುಸ್ಥಿರ ಅಭಿವೃದ್ಧಿ ನಮ್ಮ ಗುರಿಯಾಗಿದೆ. ಉದಯವಾಣಿ “ಸುದಿನ’ದಲ್ಲಿ ಜನರ ಪ್ರಣಾಳಿಕೆಯಲ್ಲಿ ವ್ಯಕ್ತವಾಗಿರುವ ಜನರ ನಿರೀಕ್ಷೆ ಮತ್ತು ನಗರದ ಆವಶ್ಯಕತೆಗಳಿಗೆ ಸ್ಪಂದಿಸುವ ಬದ್ಧತೆಯೊಂದಿಗೆ 2025 ವಿಷನ್‌ ರೂಪಿಸಿಕೊಂಡು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲಾಗುವುದು. ಭ್ರಷ್ಟಾಚಾರ ನಿಯಂತ್ರಣ, ವಾರ್ಡ್‌ ಕಮಿಟಿ ರಚನೆ, ಮನೆ ನಿರ್ಮಾಣ ಹಂತದಲ್ಲೇ ಮಳೆಕೊಯ್ಲು ಅಳವಡಿಕೆ ಕಡ್ಡಾಯ, ಮಳೆನೀರು ಚರಂಡಿ, ರಾಜಕಾಲುವೆ ಅತಿಕ್ರಮಣಕ್ಕೆ ಕಟ್ಟುನಿಟ್ಟಿನ ಕ್ರಮ, ಮಾದಕ ದ್ರವ್ಯ ಮಾಫಿಯಾ ನಿರ್ಮೂಲನೆಗೆ ಆದ್ಯತೆ ನೀಡಲಾಗುವುದು.
– ಹರೀಶ್‌ ಕುಮಾರ್‌, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ

ಟಾಪ್ ನ್ಯೂಸ್

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

congress

BJP ಅಭ್ಯರ್ಥಿ ಅವಿರೋಧ ಆಯ್ಕೆ: ಸೂರತ್‌ನ ಕಾಂಗ್ರೆಸ್‌ ಅಭ್ಯರ್ಥಿ ಉಚ್ಚಾಟನೆ

1-visa

India VISA ನೀತಿ ಬಗ್ಗೆ ಅಲ್ಲಿನ ಸರಕಾರ ಮಾತನಾಡಲಿ: ಅಮೆರಿಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-wqeqewqe

Muslim ಆದ್ಯತೆ ಹೇಳಿಕೆ ನೀಡಿಲ್ಲವೆಂದು ಸಾಬೀತುಪಡಿಸಿ: ‘ಕೈ’ಗೆ ಮೋದಿ ಸವಾಲು

1-qweqewqe

IPL;ಮುಂಬೈ ಇಂಡಿಯನ್ಸ್‌ ಎದುರಾಳಿ: ಸೇಡಿನ ತವಕದಲ್ಲಿ ಡೆಲ್ಲಿ

Akki

Report; 2023ರಲ್ಲಿ 28.2 ಕೋಟಿ ಜನರಿಗೆ ತೀವ್ರ ಆಹಾರ ಬಿಕ್ಕಟ್ಟು

SHriramulu (2)

BJP ಶ್ರೀರಾಮುಲುಗೆ ಗೆಲುವು ಅನಿವಾರ್ಯ; ಕ್ಷೇತ್ರ ವಶಕ್ಕೆ ಕೈ ತವಕ

1—ewqewqe

IPL; ಅಗ್ರಸ್ಥಾನಿ ರಾಜಸ್ಥಾನ್‌-ಲಕ್ನೋ: ಬಲಿಷ್ಠರ ಸೆಣಸಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.