ಲೋ ವೋಲ್ಟೇಜ್ ಎ. 5ರಂದು ಪ್ರತಿಭಟನೆಗೆ ನಿರ್ಧಾರ


Team Udayavani, Mar 31, 2017, 10:07 AM IST

303AKA3.jpg

ಆಲಂಕಾರು: ಆಲಂಕಾರು ವ್ಯಾಪ್ತಿಯಲ್ಲಿ ಹಲವಾರು ಪ್ರಗತಿಪರ ಕಾಮಗಾರಿಗಳು ನಡೆಯ ಬೇಕಾಗಿದ್ದು, ಈ ವ್ಯಾಪ್ತಿಯಲ್ಲಿ ಉದ್ಭವಿಸಿರುವ ವಿದ್ಯುತ್‌ ಲೋ-ವೋಲ್ಟೇಜ್ನ ಸಮಸ್ಯೆ  ಮತ್ತು ಈ ಬಗ್ಗೆ ಇಲಾಖೆ  ನಿರ್ಲಕ್ಷ ವಹಿಸಿರುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಎ. 5ರಂದು ಬೆಳಗ್ಗೆ 10ರಿಂದ ಆಲಂಕಾರು ಶಾಖಾ ಮೆಸ್ಕಾಂ ಕಛೇರಿಯ ಎದುರು ಖಂಡಿಸಿ ಪ್ರತಿಭಟನೆ ನಿರ್ಧರಿಸಲಾಗಿದೆ. ಆಲಂಕಾರು ಬಿಜೆಪಿ ಶಕ್ತಿಕೇಂದ್ರ ಮುಂದಾಳತ್ವದಲ್ಲಿ ಈ ಪ್ರತಿಭಟನೆ ನಡೆಯಲಿದೆ.

ಆಲಂಕಾರು ಬಿಜೆಪಿ ಶಕ್ತಿ ಕೇಂದ್ರದ ಕಾರ್ಯದರ್ಶಿ ದಯಾನಂದ ಗೌಡ ಆಲಡ್ಕ ಮಾತನಾಡಿ,  ಆಲಂಕಾರು ಶಾಖಾ ವ್ಯಾಪ್ತಿಯಲ್ಲಿ ಲೋ ವೋಲ್ಟೇಜ್  ಸಮಸ್ಯೆಯಿಂದ ರೈತಾಪಿ ಜನತೆ ಬಹಳಷ್ಟು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಇದೇ ರೀತಿ ಮುಂದವರಿದರೆ ತಾವು ಮಾಡಿದಂತಹ ಕೃಷಿಯನ್ನು ಸಂಪೂರ್ಣ ಕಳೆದುಕೊಳ್ಳುವ ಭೀತಿ ಎದುರಾಗಿದೆ.  ಜೊತೆಗೆ ಅಧಿಕ ಹೊರೆ ಇರುವ ಪರಿವರ್ತಕಗಳಿಗೆ ಹೆಚ್ಚುವರಿ ಪರಿವರ್ತಕಗಳನ್ನು ಅಳವಡಿಸದೆ ಈ ಸಮಸ್ಯೆ ಮತ್ತಷ್ಟು ಉಲ್ಬಣವಾಗಿದೆ. ಇದಕ್ಕೆ ಪೂರಕವೆಂಬಂತೆ ಗ್ರಾಹಕರ ಸಮಸ್ಯೆಗಳನ್ನು ಹೇಳಿಕೊಳ್ಳಲು ಆಲಂಕಾರು ಮೆಸ್ಕಾಂ ಶಾಖೆಯಲ್ಲಿ ಪೂರ್ಣಕಾಲಿಕಾ ಶಾಖಾಧಿಕಾರಿ ಇಲ್ಲವಾಗಿದೆ. ಈ ವಿಚಾರವಾಗಿ ಆಲಂಕಾರಿಗೆ ಪೂರ್ಣಕಾಲಿಕ ಶಾಖಾಧಿಕಾರಿಯನ್ನು ನೆಮಿಸಬೇಕಾಗಿದೆ.  

ಬೇಸಿಗೆಯಲ್ಲಿ ಲೋ-ವೋಲ್ಟೇಜ್ ಸಮಸ್ಯೆ ಇದ್ದರೂ ಆಲಂಕಾರಿನಲ್ಲಿ ಸ್ಥಾಪಿಸಲು ಉದ್ದೇಶಿಸಿದ 110 ಕೆವಿಎ ಸಬ್‌ಸ್ಟ್ರೇಶನ್‌ ಕಾರ್ಯಗಾರಿಯನ್ನು ಕಾರ್ಯಗತಗೊಳಿಸಬೇಕಾಗಿದೆ. ಆದರೆ ಇಲಾಖೆಯ ಅಧಿಕಾರಿಗಳು  ವಿಳಂಬ ನೀತಿ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಈ ಎಲ್ಲಾ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಪಕ್ಷದ  ನೇತಾರರು, ಕಾರ್ಯಕರ್ತರು, ಗ್ರಾಹಕ ಮಿತ್ರರನ್ನು ಸೇರಿಸಿಕೊಂಡು ಇದೀಗ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು. 

ಹಿಂದೂ ಜಾಗರಣ ವೇದಿಕೆಯ ಅಧ್ಯಕ್ಷ ಜನಾರ್ದನ ಗೌಡ ಕಯ್ಯಪ್ಪೆ, ಆಲಂಕಾರು  ಸಿ.ಎ. ಬ್ಯಾಂಕ್‌ನ ಅಧ್ಯಕ್ಷ ರಮೇಶ್‌ ಭಟ್‌ ಉಪ್ಪಂಗಳ, ಬಿಜೆಪಿಯ ಪ್ರಮುಖರಾದ ಜಯಂತ ಪೂಜಾರಿ ನೆಕ್ಕಿಲಾಡಿ, ದಯಾನಂದ ನೆಕ್ಕಿಲಾಡಿ, ಶ್ರೀಧರ ಪೂಜಾರಿ ನೆಕ್ಕಿಲಾಡಿ, ಪ್ರದೀಪ್‌ರೈ ಮನವಳಿಕೆ, ಆಲಂಕಾರು ಗ್ರಾಮ ಪಂಚಾಯತ್‌ ಉಪಾಧ್ಯಕ್ಷ ಸುಧಾಕರ ಪೂಜಾರಿ ಕಲ್ಲೇರಿ, ಪ್ರಶಾಂತ್‌ ರೈ ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

1-www

Minister Nagendra ರಾಜೀನಾಮೆ ಪಡೆಯಬೇಕು,ಈಶ್ವರಪ್ಪ ಕೇಸ್‌ನಲ್ಲಿ ಹೀಗಿರಲಿಲ್ಲ: ಬೊಮ್ಮಾಯಿ

1-qwqwwq

Shivamogga: ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ವಿಎ

Udupi: ಬಿಜೆಪಿಯಿಂದ ನಾಲ್ವರು ಪದಾಧಿಕಾರಿಗಳ ಉಚ್ಛಾಟನೆ 

Udupi: ಬಿಜೆಪಿಯಿಂದ ನಾಲ್ವರು ಪದಾಧಿಕಾರಿಗಳ ಉಚ್ಛಾಟನೆ 

ಭಗವಾನ್‌ ಶಿವನಿಗೆ ನಮ್ಮ ರಕ್ಷಣೆ ಬೇಕಿಲ್ಲ…ದೇವಾಲಯ ಒಡೆಯಲು ಹೈಕೋರ್ಟ್‌ ಅನುಮತಿ

ಭಗವಾನ್‌ ಶಿವನಿಗೆ ನಮ್ಮ ರಕ್ಷಣೆ ಬೇಕಿಲ್ಲ…ದೇವಾಲಯ ಒಡೆಯಲು ಹೈಕೋರ್ಟ್‌ ಅನುಮತಿ

4

ಹೊರಬಿತ್ತು ಅಂಬಾನಿ ಪುತ್ರನ ವೆಡ್ಡಿಂಗ್ ಕಾರ್ಡ್‌: ಎಲ್ಲಿ,ಯಾವಾಗ,ವಿಶೇಷಗಳೇನು? ಇಲ್ಲಿದೆ ವಿವರ

1-weqwwewq

Jammu ಭೀಕರ ಬಸ್ ಅವಘಡ : 21 ಮಂದಿ ಮೃತ್ಯು, ಹಲವರಿಗೆ ಗಾಯ

Actor Yash: “ಯಶ್‌ಗಾಗಿ ನನ್ನ ಬಳಿ ಸೂಕ್ತ ಕಥೆಯಿದೆ..” ಖ್ಯಾತ ಕಾಲಿವುಡ್ ನಿರ್ದೇಶಕ

Actor Yash: “ಯಶ್‌ಗಾಗಿ ನನ್ನ ಬಳಿ ಸೂಕ್ತ ಕಥೆಯಿದೆ..” ಖ್ಯಾತ ಕಾಲಿವುಡ್ ನಿರ್ದೇಶಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Puttur: ಜಮೀನು ವಿವಾದದಲ್ಲಿ ಹಲ್ಲೆ; ಇತ್ತಂಡಗಳ ವಿರುದ್ಧ ದೂರು 

Puttur: ಜಮೀನು ವಿವಾದದಲ್ಲಿ ಹಲ್ಲೆ; ಇತ್ತಂಡಗಳ ವಿರುದ್ಧ ದೂರು 

6

Puttur: ಕತ್ತಿಯಿಂದ ಹಲ್ಲೆ; ದೂರು ದಾಖಲು

Mani: ರಾಷ್ಟ್ರೀಯ ಹೆದ್ದಾರಿಯ ತಡೆಬೇಲಿಗೆ ಢಿಕ್ಕಿ ಹೊಡೆದು ನಜ್ಜು ಗುಜ್ಜಾದ ಕಾರು

Mani: ರಾಷ್ಟ್ರೀಯ ಹೆದ್ದಾರಿಯ ತಡೆಬೇಲಿಗೆ ಢಿಕ್ಕಿ ಹೊಡೆದು ನಜ್ಜು ಗುಜ್ಜಾದ ಕಾರು

ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್‌ ಅನುದಾನ ನೀಡಿಲ್ಲ; ಪ್ರತಾಪಸಿಂಹ ನಾಯಕ್‌

ಅಭಿವೃದ್ಧಿ ಕಾರ್ಯಗಳಿಗೆ ಕಾಂಗ್ರೆಸ್‌ ಅನುದಾನ ನೀಡಿಲ್ಲ; ಪ್ರತಾಪಸಿಂಹ ನಾಯಕ್‌

Road Mishap ಸುಳ್ಯ: ಬೊಲೆರೊ -ಕಾರು ಅಪಘಾತ; ಗಾಯ

Road Mishap ಸುಳ್ಯ: ಬೊಲೆರೊ -ಕಾರು ಅಪಘಾತ; ಗಾಯ

MUST WATCH

udayavani youtube

ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕನ ಆತ್ಮಹ*ತ್ಯೆ ಪ್ರಕರಣ,ಅಧಿಕಾರಿಗಳ ಭೇಟಿ

udayavani youtube

ಹೆದ್ದಾರಿಯಲ್ಲೇ ಲಾಂಗ್‌ ಹಿಡಿದು ಓಡಾಡಿದ ಯುವಕ!

udayavani youtube

ಆರೋಗ್ಯಕರ ಬೇಕರಿ ಫುಡ್ ತಿನ್ನಬೇಕಾ ? ಇಲ್ಲಿಗೆ ಬನ್ನಿ

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

ಹೊಸ ಸೇರ್ಪಡೆ

Bike accident: ಅಲ್ಬಾಡಿಯಲ್ಲಿ ಬೈಕ್‌ ಅಪಘಾತ; ಯುವಕ ಸಾವು

Bike accident: ಅಲ್ಬಾಡಿಯಲ್ಲಿ ಬೈಕ್‌ ಅಪಘಾತ; ಯುವಕ ಸಾವು

10

Siddapur ಸಾರ್ವಜನಿಕ ಬಸ್‌ ನಿಲ್ದಾಣದ ಬಳಿ ಗಾಂಜಾ ಸೇವನೆ; ಆರೋಪಿ ವಶಕ್ಕೆ

1-qwewqew

BJP ಉಚ್ಚಾಟನೆ ಮಾಡಿರುವುದು ಸ್ವಾಗತಾರ್ಹ: ಮಹೇಶ್ ಠಾಕೂರ್

Puttur: ಜಮೀನು ವಿವಾದದಲ್ಲಿ ಹಲ್ಲೆ; ಇತ್ತಂಡಗಳ ವಿರುದ್ಧ ದೂರು 

Puttur: ಜಮೀನು ವಿವಾದದಲ್ಲಿ ಹಲ್ಲೆ; ಇತ್ತಂಡಗಳ ವಿರುದ್ಧ ದೂರು 

8

Kasaragod: ಆ್ಯಸಿಡ್‌ ಎರಚಿದ ಪ್ರಕರಣ; 10 ವರ್ಷ ಜೈಲು ಶಿಕ್ಷೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.