ಅಭಿವೃದ್ಧಿ ಪಥದಲ್ಲಿ ಸಾಗಿದರೂ ಹಳೆಯ ಒಳಚರಂಡಿ ವ್ಯವಸ್ಥೆ ಸಮಸ್ಯೆ ನಿರ್ಮಿಸಿದೆ

Team Udayavani, Oct 9, 2019, 4:51 AM IST

ವಾರ್ಡ್‌ನಲ್ಲಿ ಸುತ್ತಾಡಿದಾಗ ಇಲ್ಲಿನ ಹೆಚ್ಚಿನ ಎಲ್ಲ ರಸ್ತೆಗಳು ಅಭಿವೃದ್ಧಿಯಾಗಿ ಕಂಡುಬರುತ್ತದೆ. ಆದರೆ ಹಳೆಯ ಒಳಚರಂಡಿ ವ್ಯವಸ್ಥೆ ಒಂದಷ್ಟು ಸಮಸ್ಯೆ ಸೃಷ್ಟಿಸಿದೆ. ಪ್ರಮುಖ ರಸ್ತೆಗಳು ಸದಾ ವಾಹನ ದಟ್ಟನೆಯಿಂದ ಕೂಡಿರುತ್ತವೆ. ಅಲ್ಲದೆ ಪಾರ್ಕಿಂಗ್‌ ಸಮಸ್ಯೆ, ಫುಟ್‌ಪಾತ್‌ ನಿರ್ಮಾಣ ಬಾಕಿಯಿರುವುದರಿಂದ ಸಂಚಾರ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಗಮನ ಹರಿಸಬೇಕಿದೆ.

ಮಹಾನಗರ: ನಗರದ ಹೃದಯಭಾಗದ ಪ್ರದೇಶಗಳನ್ನು ಒಳಗೊಂಡಿರುವ ಮಹಾನಗರ ಪಾಲಿಕೆಯ ಬೆಂದೂರು ವಾರ್ಡ್‌ ವಾಣಿಜ್ಯ ಕೇಂದ್ರಗಳ ಜತೆಗೆ ಪ್ರತಿಷ್ಠಿತ ವಸತಿ ಪ್ರದೇಶವಾಗಿಯೂ ಗುರುತಿಸಿಕೊಂಡಿದೆ.

ಶತಮಾನಗಳ ಇತಿಹಾಸವನ್ನು ಹೊಂದಿರುವ ಬಾಶಲ್‌ ಮಿಷನ್‌ ಆವರಣ, ಪ್ರಸಿದ್ಧ ಸಿಎಸ್‌ಐ ಶಾಂತಿ ಕೆಥಡ್ರಲ್‌, ಸದಾ ಬ್ಯುಸಿ ರೋಡ್‌ನ‌ಲ್ಲೊಂದಾಗಿರುವ ಕಂಕನಾಡಿ ಬಲ್ಮಠ, ಬೆಂದೂರ್‌ವೆಲ್‌, ನಗರದ ಪ್ರಮುಖ ಮಾರುಕಟ್ಟೆಗಳಲ್ಲೊಂದಾಗಿರುವ ಕಂಕನಾಡಿ ಮಾರುಕಟ್ಟೆ ಈ ವಾರ್ಡ್‌ನಲ್ಲಿದೆ. ಬೃಹತ್‌ ವಸತಿ ಸಮುಚ್ಚಯಗಳು, ಪ್ರಮುಖ ವಾಣಿಜ್ಯ ಮಳಿಗೆಗಳನ್ನು ಒಳಗೊಂಡಿರುವ ಈ ವಾರ್ಡ್‌ನ ಪ್ರಮುಖ ರಸ್ತೆಗಳು ಸದಾ ವಾಹನ ದಟ್ಟನೆಯಿಂದಲೂ ತುಂಬಿದೆ.

ವಾರ್ಡ್‌ ಬಹುತೇಕ ನಗರ ಪ್ರದೇಶವನ್ನು ಒಳಗೊಂಡಿರುವುದರಿಂದ ಇಲ್ಲಿನ ಹೆಚ್ಚಿನ ರಸ್ತೆಗಳು ಅಭಿವೃದ್ಧಿಯಾಗಿವೆ. ಹಳೆಯ ಒಳಚರಂಡಿ ವ್ಯವಸ್ಥೆ ಈ ವಾರ್ಡ್‌ನಲ್ಲಿ ಒಂದಷ್ಟು ಸಮಸ್ಯೆ ನಿರ್ಮಿಸಿದೆ. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಆರ್ಯಸಮಾಜ ರಸ್ತೆ ಹಾಗೂ ಬಲ್ಮಠ- ನ್ಯೂರೋಡ್‌ ರಸ್ತೆಯನ್ನು ಕೈಗೆತ್ತಿಗೊಂಡಿರುವುದು ವಾರ್ಡ್‌ನ ಮೂಲಸೌಕರ್ಯ ಅಭಿವೃದ್ಧಿಗೆ ಇನ್ನಷ್ಟು ಬಲ ನೀಡಿದೆ. ನಗರದ ಪ್ರಮುಖ ಮಾರುಕಟ್ಟೆಗಳಲ್ಲೊಂದಾಗಿರುವ ಕಂಕನಾಡಿ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದ್ದು ವ್ಯಾಪಾರಸ್ಥರಿಗೆ ತಾತ್ಕಾಲಿಕ ಅಂಗಡಿ ನಿರ್ಮಾಣ ಕಾರ್ಯ ನಡೆಯುತ್ತಿದೆ.

5 ವರ್ಷಗಳಲ್ಲಿ ಮಹಾನಗರ ಪಾಲಿಕೆಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 5.33 ಕೋಟಿ ರೂ. ಬಿಡುಗಡೆಯಾಗಿದೆ. ಇದಲ್ಲದೆ ರಾಜ್ಯ ಸರಕಾರದ ಅನುದಾನದಿಂದ ಕಂಕನಾಡಿ ಮಾರುಕಟ್ಟೆ ಅಭಿವೃದ್ಧಿಗೆ 41 ಕೋ.ರೂ. ಅನುದಾನ ಮಂಜೂರಾಗಿದೆ. ಕೆಲವು ರಸ್ತೆಗಳಲ್ಲಿ ಭೂಸ್ವಾಧೀನ ಸಮಸ್ಯೆಯಿಂದ ವಿಸ್ತರಣೆ, ಫುಟ್‌ಪಾತ್‌ ನಿರ್ಮಾಣ ಬಾಕಿಯುಳಿದಿದೆ.

ವಾರ್ಡ್‌ನಲ್ಲಿ ಹೆಚ್ಚಿನ ರಸ್ತೆಗಳು, ಫುಟ್‌ಪಾತ್‌ಗಳು ಉನ್ನತೀಕರಣವಾಗಿದೆ. ಆದರೆ ಮಳೆಗಾಲದಲ್ಲಿ ಒಳಚರಂಡಿಗಳು ತುಂಬಿ ನೀರು ರಸ್ತೆಯಲ್ಲೇ ಹರಿಯುವುದರಿಂದ ಸಮಸ್ಯೆ ಆಗುತ್ತಿದೆ. ಪಾರ್ಕಿಂಗ್‌ ಸಮಸ್ಯೆಯಿಂದ ಕೆಲವು ಬಾರಿ ಇಲ್ಲಿನ ಪ್ರಮುಖ ರಸ್ತೆಗಳಲ್ಲಿ ಸಂಚಾರ ಸಮಸ್ಯೆ ಉಂಟಾಗುತ್ತದೆ. ಕೆಲವೆಡೆ ಅಗಾಗೆÂ ನೀರಿನ ಸಮಸ್ಯೆಯು ಕಾಡುತ್ತಿದೆ. ಬೆಂದೂರುವೆಲ್‌ನಲ್ಲಿ ವೃತ್ತದ ಬಳಿ ಮುಖ್ಯ ರಸ್ತೆಯಲ್ಲಿ ಅಳವಡಿಸಿರುವ ದೊಡ್ಡ ನೀರಿನ ಕೊಳವೆ ಅಗಾಗ್ಗೆ ಒಡೆದು ಬಹಳಷ್ಟು ಸಮಸ್ಯೆಗೆ ಕಾರಣವಾಗುತ್ತಿದೆ ಎನ್ನುತ್ತಾರೆ ಸ್ಥಳೀಯ ನಿವಾಸಿಯೋರ್ವರು.

ಪ್ರಮುಖ ಸಮಸ್ಯೆಗಳು
ಬಂಗಲೆಗಳು, ವಸತಿ ಸಮುಚ್ಚಯಗಳು, ಮನೆಗಳು, ವಾಣಿಜ್ಯ ಮಳಿಗೆಗಳನ್ನು ಹೊಂದಿರುವ ಬೆಂದೂರ್‌ ವಾರ್ಡ್‌ನಲ್ಲಿ ಸುವ್ಯವಸ್ಥಿ ಒಳಚರಂಡಿ ವ್ಯವಸ್ಥೆ ರೂಪುಗೊಳ್ಳದಿರುವುದು ಬಹಳಷ್ಟು ವರ್ಷಗಳ ಸಮಸ್ಯೆಯಾಗಿವೆ. ಪ್ರಸ್ತುತ ಇರುವ ಒಳಚರಂಡಿ ವ್ಯವಸ್ಥೆ ಸುಮಾರು 40 ವರ್ಷಗಳಷ್ಟು ಹಳೆಯದ್ದು. ಇದೀಗ ಪ್ರದೇಶ ಅಭಿವೃದ್ಧಿ ಹೊಂದಿದೆ. ವಸತಿ ದಟ್ಟನೆ ಹೆಚ್ಚಾಗಿದೆ. ಅದಕ್ಕೆ ಅನುಗುಣವಾಗಿ ಒಳಚರಂಡಿ ವ್ಯವಸ್ಥೆಯನ್ನು ಸುಧಾರಿಸಬೇಕು ಎಂಬುದು ಇಲ್ಲಿನ ಬೇಡಿಕೆಯಾಗಿದೆ. ಹಲವೆಡೆ ಒಳಚರಂಡಿ ವ್ಯವಸ್ಥೆ ಉನ್ನತೀಕರಣ ಆಗಿಲ್ಲ. ವಾಲ್‌ಮನ್‌ಗಳಕೊರತೆಯಿಂದ ನೀರು ಸರಬರಾಜು ವ್ಯವಸ್ಥೆಯಲ್ಲಿ ವ್ಯತ್ಯಯಗಳಾಗುತ್ತಿವೆ. ವಾರ್ಡ್‌ ಸಂಚಾರದಟ್ಟನೆ ರಸ್ತೆಗಳು, ವಾಣಿಜ್ಯ ಕೇಂದ್ರವಾಗಿರುವುದರಿಂದ ಪಾರ್ಕಿಂಗ್‌ ಸಮಸ್ಯೆಗಳಿವೆ. ಕೆಲವು ಕಡೆ ರಸ್ತೆ ಅಭಿವೃದ್ಧಿ ಆಗಿದೆ. ಆದರೆ ಫುಟ್‌ಪಾತ್‌ ಕಾಮಗಾರಿ ಬಾಕಿಯುಳಿದಿದೆ.

ಪ್ರಮುಖ ಕಾಮಗಾರಿ
*41 ಕೋ.ರೂ.ವೆಚ್ಚದಲ್ಲಿ ಕಂಕನಾಡಿ ಮಾರುಕಟ್ಟೆ ಅಭಿವೃದ್ಧಿ ಕಾಮಗಾರಿ
* ಬೆಂದೂರ್‌ನಿಂದ ಬಲ್ಮಠ ರಸ್ತೆ ಕಾಂಕ್ರೀಟ್‌ ಕಾಮಗಾರಿ
*ಸೈಂಟ್‌ ಆ್ಯಗ್ನೆಸ್‌ ಸ್ಪೆಷಲ್‌ಸ್ಕೂಲ್‌ನ ರಸ್ತೆ ಫುಟ್‌ಪಾತ್‌, ಬಸ್‌ಬೇ ನಿರ್ಮಾಣ,
* ಎಲ್‌ಇಡಿ ದಾರಿದೀಪಗಳ ಅಳವಡಿಕೆ
*ವಾಸ್‌ಲೇನ್‌ ರಸ್ತೆ ವಿಸ್ತರಣೆ
* ಅಥೆನಾ ಆಸ್ಪತ್ರೆಗೆ ಸಾಗುವ ರಸ್ತೆಯ ವಿಸ್ತರಣೆ
*ಮಿಷನ್‌ ಕಾಂಪೌಂಡ್‌ನ‌ ಒಳರಸ್ತೆಗಳ ಅಭಿವೃದ್ಧಿ

ಬೆಂದೂರು ವಾರ್ಡ್‌
ವಾರ್ಡ್‌ನ ಭೌಗೋಳಿಕ ವ್ಯಾಪ್ತಿ: ಲೋಬೋಲೈನ್‌, ವಾಸ್‌ಲೇನ್‌ ಆರ್ಯಸಮಾಜ ರಸ್ತೆಯ ಒಂದು ಪಾರ್ಶ್ವ,ಬಲ್ಮಠ ನ್ಯೂರೋಡ್‌ನ‌ ಒಂದು ಪಾರ್ಶ್ವ, ಮಿಶನ್‌ ಕಂಪೌಂಡ್‌, ಕಂಕನಾಡಿ ಜಂಕ್ಷನ್‌-ಎವ್ರಿಜಂಕ್ಷನ್‌ ಭಾಗ, ಕಂಕನಾಡಿ ಮಾರುಕಟ್ಟೆ , ಅಪ್ಪರ್‌ ಬೆಂದೂರು, ಲೋವರ್‌ ಬೆಂದೂರು,ಎಸ್‌ಸಿಎಸ್‌ ಆಸ್ಪತ್ರೆ ರಸ್ತೆಯ ಒಂದು ಭಾಗ , ಬಾಲಿಕಾಶ್ರಮದ ಒಂದು ಪಾರ್ಶ್ವ ಬೆಂದೂರು ವಾರ್ಡ್‌ನ ವ್ಯಾಪ್ತಿಗೆ ಒಳಪಡುತ್ತದೆ.

ಒಟ್ಟು ಮತದಾರರು
*ಮತದಾರರು: 7,200
ನಿಕಟಪೂರ್ವ ಕಾರ್ಪೊರೇಟರ್‌ – ನವೀನ್‌ ಡಿ’ಸೋಜಾ

5 ವರ್ಷಗಳಲ್ಲಿ ಬಂದ ಅನುದಾನ
2014-15: 85.96 ಲಕ್ಷ ರೂ.
2015-16 : 63.33 ಲಕ್ಷ ರೂ.
2016-17 : 1.61.ಕೋ.ರೂ.
2017-18:26ಲಕ್ಷ ರೂ.
2018-19:1.24 ಕೋ.ರೂ.

ಸರ್ವಾಂಗೀಣ ಅಭಿವೃದ್ಧಿಗೆ ಒತ್ತು
ಬೆಂದೂರ್‌ವಾರ್ಡ್‌ನಲ್ಲಿ ಮೂಲಸೌಕರ್ಯಗಳು ಸಹಿತ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಿ ಶ್ರಮಿಸಿದ್ದೇನೆ. ವಾರ್ಡ್‌ನ್ನು ಒಂದು ಮಾದರಿ ವಾರ್ಡ್‌ ಆಗಿ ರೂಪಿಸಬೇಕು ಎಂಬ ಆಶಯವನ್ನು ಇಟ್ಟುಕೊಂಡು ಈ ನಿಟ್ಟಿನಲ್ಲಿ ಬಹಳಷ್ಟು ಕೆಲಸಗಳನ್ನು ಮಾಡಿದ್ದೇನೆ.ವಾರ್ಡ್‌ನಲ್ಲಿರುವ ಕಂಕನಾಡಿ ಮಾರುಕಟ್ಟೆಯನ್ನು ಸುಸಜಿcತವಾಗಿ ಅಭಿವೃದ್ಧಿಗೊಳಿಸಬೇಕು ಎಂಬ ಬಹಳಷ್ಟು ಸಮಯದ ಬೇಡಿಕೆಯಂತೆ ಈಗಾಗಲೇ ನಿರ್ಮಾಣ ಕಾಮಗಾರಿಗಳು ಪ್ರಾರಂಭಗೊಂಡಿದೆ. ನಗರದ ಪ್ರಮುಖ ರಸ್ತೆಗಳನ್ನು ವಿಸ್ತರಿಸಿ ಫುಟ್‌ಪಾತ್‌ ನಿರ್ಮಾಣವಾಗಿದ್ದು, ಕೆಲವು ರಸ್ತೆಗಳ ಕಾಮಗಾರಿಗಳು ಪ್ರಗತಿಯಲ್ಲಿದೆ.
-ನವೀನ್‌ ಡಿ’ಸೋಜಾ

ಕೇಶವ ಕುಂದರ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ