ಪಿಯು ಫಲಿತಾಂಶದಲ್ಲಿ ಜಿಲ್ಲೆ ನಂ.19

Team Udayavani, May 12, 2017, 12:53 PM IST

dvg2.jpg

ದಾವಣಗೆರೆ: ಕಳೆದ ಮಾರ್ಚ್‌ನಲ್ಲಿ ನಡೆದ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ದಾವಣಗೆರೆ ಜಿಲ್ಲೆಗೆ ಶೇ. 55.17ರಷ್ಟು ಫಲಿತಾಂಶ ಲಭಿಸಿದೆ. ಗುರುವಾರ ಲಭ್ಯವಾದ ಪ್ರಾಥಮಿಕ ಮಾಹಿತಿ ಪ್ರಕಾರ ದಾವಣಗೆರೆ ಜಿಲ್ಲೆ ಶೇ.55.17ರಷ್ಟು ಫಲಿತಾಂಶದೊಂದಿಗೆ 19ನೇ ಸ್ಥಾನ ಗಳಿಸಿದೆ. ಕಳೆದ ವರ್ಷ ಶೇ. 58.01ರಷ್ಟು ಫಲಿತಾಂಶದೊಂದಿಗೆ 21ನೇ ಸ್ಥಾನದಲ್ಲಿತ್ತು.

ಈ ಬಾರಿ 18,810 ಹೊಸದಾಗಿ, 3,943  ಪುನರಾವರ್ತಿತ ಹಾಗೂ 448 ಖಾಸಗಿ ಅಭ್ಯರ್ಥಿಗಳು ಒಳಗೊಂಡಂತೆ 23,201 ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಂಡಿದ್ದರು. 11,313 ಬಾಲಕರು, 11,818 ಬಾಲಕಿಯರು 35 ಪರೀಕ್ಷಾ ಕೇಂದ್ರದಲ್ಲಿ ನೋಂದಣಿ ಮಾಡಿಸಿದ್ದರು. ಕಳೆದ ಸಾಲಿನ(2015-16)ನಲ್ಲಿ ಪರೀಕ್ಷೆಗೆ ಹಾಜರಾಗಿದ್ದ ಒಟ್ಟಾರೆ 17,892 ವಿದ್ಯಾರ್ಥಿಗಳಲ್ಲಿ 10,380 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 

ಖಾಸಗಿಯಾಗಿ ಪರೀಕ್ಷೆ ತೆಗೆದುಕೊಂಡಿದ್ದ 440 ವಿದ್ಯಾರ್ಥಿಗಳಲ್ಲಿ ಶೇ. 22.5 ರಷ್ಟು ಪ್ರಮಾಣದಲ್ಲಿ ಅಂದರೆ 99 ವಿದ್ಯಾರ್ಥಿಗಳು, ಮರು ಪರೀಕ್ಷೆ ತೆಗೆದುಕೊಂಡ 3,524 ವಿದ್ಯಾರ್ಥಿಗಳಲ್ಲಿ 948 ವಿದ್ಯಾರ್ಥಿಗಳು (ಶೇ. 26.9) ಉತ್ತೀರ್ಣರಾಗಿದ್ದರು. 

ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ  6,401 ವಿದ್ಯಾರ್ಥಿಗಳಲ್ಲಿ 2,665(ಶೇ. 41.63), ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 4,496 ವಿದ್ಯಾರ್ಥಿಗಳಲ್ಲಿ 2,713(ಶೇ. 60.34), ವಿಜ್ಞಾನ  ವಿಭಾಗದಲ್ಲಿ 6,995 ವಿದ್ಯಾರ್ಥಿಗಳಲ್ಲಿ 5,002(ಶೇ.71.51) ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. 

ಪರೀಕ್ಷೆಗೆ ಹಾಜರಾಗಿದ್ದ 10,993 ಬಾಲಕರಲ್ಲಿ ಶೇ.47.21ರ ಪ್ರಮಾಣದಲ್ಲಿ 5,177 ಹಾಗೂ 10,883 ಬಾಲಕಿಯರಲ್ಲಿ ಶೇ.57.53ರ ಪ್ರಮಾಣದಲ್ಲಿ 6,250 ಬಾಲಕಿಯರು ಉತ್ತೀರ್ಣರಾಗಿದ್ದರು. ನಗರ ಪ್ರದೇಶ ಕಾಲೇಜುಗಳಿಗೆ ಶೇ.59.36, ಗ್ರಾಮೀಣ ಕಾಲೇಜುಗಳಲ್ಲಿ ಶೇ.52.97ರಷ್ಟು ಫಲಿತಾಂಶ ಬಂದಿತ್ತು.

ಈ ಬಾರಿ ಒಟ್ಟಾರೆ ಪರೀಕ್ಷೆಗೆ ಹಾಜರಾಗಿದ್ದ 18,535 ವಿದ್ಯಾರ್ಥಿಗಳಲ್ಲಿ 10,225 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 5,981 ವಿದ್ಯಾರ್ಥಿಗಳಲ್ಲಿ 2,401 (ಶೇ.40.14) ತೇರ್ಗಡೆಯಾಗಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆ ಬರೆದ 4,784 ವಿದ್ಯಾರ್ಥಿಗಳಲ್ಲಿ ಶೇ.55.31ರಷ್ಟು ಫಲಿತಾಂಶದೊಂದಿಗೆ 2,646 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.

ವಿಜ್ಞಾನ  ವಿಭಾಗದಲ್ಲಿ ಪರೀಕ್ಷೆಗೆ ಹಾಜರಾಗಿದ್ದ 7,770 ವಿದ್ಯಾರ್ಥಿಗಳಲ್ಲಿ ಶೇ. 66.64 ರಷ್ಟು ಫಲಿತಾಂಶದೊಂದಿಗೆ 5,178 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಒಟ್ಟಾರೆ 12,143 ಬಾಲಕರಲ್ಲಿ 4,745 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. 11,783 ಬಾಲಕಿಯರಲ್ಲಿ 6,467 ಬಾಲಕಿಯರು ಉತ್ತೀರ್ಣರಾಗುವ ಮೂಲಕ ಈ ಬಾರಿಯೂ ಮೇಲುಗೈ ಸಾಧಿಸಿದ್ದಾರೆ.

ನಗರ ಪ್ರದೇಶದಲ್ಲಿ ಶೇ. 56.46 ಹಾಗೂ ಗ್ರಾಮೀಣ ಭಾಗದಲ್ಲಿ ಶೇ. 50.09 ಫಲಿತಾಂಶ ಬಂದಿದೆ. ಕಲಾ ವಿಭಾಗದಲ್ಲಿ ಹರಪನಹಳ್ಳಿಯ ಎಸ್‌. ಯು.ಜೆ.ಎಂ ಕಾಲೇಜಿನ ಶೃತಿ ವಾಲೇಕಾರ್‌ 579 ಅಂಕಗಳೊಂದಿಗೆ ಜಿಲ್ಲೆಗೆ ಪ್ರಥಮ ಸ್ಥಾನದಲ್ಲಿದ್ದಾರೆ. ಅದೇ ಕಾಲೇಜಿನ ಮಂಗಳ 576 ಅಂಕ ಪಡೆದಿದ್ದಾರೆ. 

ಇಬ್ಬರು ವಿದ್ಯಾರ್ಥಿನಿಯರು ಮೂಲತಃ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ತಾಲೂಕಿನ ಕನ್ನಿಹಳ್ಳಿ ಗ್ರಾಮದವರು. ಕಳೆದ ಬಾರಿಯಂತೆಯೇ ಈ ಬಾರಿಯೂ ಕಲಾ ವಿಭಾಗದಲ್ಲಿ ಹರಪನಹಳ್ಳಿ ತಾಲೂಕು ವಿದ್ಯಾರ್ಥಿನಿ ಜಿಲ್ಲೆಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ವಾಣಿಜ್ಯ ವಿಭಾಗದಲ್ಲಿ ಅಥಣಿ ಪಪೂ ಕಾಲೇಜಿನ ಐಶ್ವರ್ಯ ಶಾನಭೋಗ 584 (ಶೇ.97.33) ಅಂಕ ಪಡೆದಿದ್ದಾಳೆ.

ವಾಣಿಜ್ಯ ಹಾಗೂ ಸಂಖ್ಯಾಶಾಸ್ತ್ರದಲ್ಲಿ ತಲಾ ನೂರು, ಲೆಕ್ಕಶಾಸ್ತ್ರದಲ್ಲಿ 99, ಅರ್ಥಶಾಸ್ತ್ರದಲ್ಲಿ 98, ಹಿಂದಿಯಲ್ಲಿ 97 ಹಾಗೂ ಇಂಗ್ಲಿಷ್‌ ವಿಷಯದಲ್ಲಿ 90 ಅಂಕ ಪಡೆದಿದ್ದಾಳೆ. ವಿಜ್ಞಾನ ವಿಭಾಗದಲ್ಲಿ ಶ್ರೀ ಸಿದ್ದಗಂಗಾ ವಿಜ್ಞಾನ ಪಿಯು ಕಾಲೇಜಿನ ಪಿ.ಎಚ್‌. ಬಸವರಾಜ್‌ 589 ಅಂಕ (ಶೇ. 98.16) ಗಳಿಸಿದ್ದಾರೆ.

ಕನ್ನಡ, ಜೀವಶಾಸ್ತ್ರದಲ್ಲಿ ತಲಾ 99, ಆಂಗ್ಲ ಭಾಷೆಯಲ್ಲಿ 91, ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತದಲ್ಲಿ ತಲಾ 100 ಅಂಕ ಪಡೆದಿದ್ದಾರೆ. ಮೂಲತಃ ದಾವಣಗೆರೆ ತಾಲೂಕಿನ ಐಗೂರು ಗ್ರಾಮದವರು. ಡಾ| ತಿಮ್ಮಾರೆಡ್ಡಿ ಫೌಂಡೇಶನ್‌ ಬಾಲಕರ ಪಿಯು ಕಾಲೇಜಿನ ಎಚ್‌. ಆರ್‌. ಸಂಜಯ್‌ 581 (ಶೇ.96.83) ಅಂಕ ಪಡೆದಿದ್ದಾನೆ ಎಂದು ತಿಳಿದು ಬಂದಿದೆ.  

ಟಾಪ್ ನ್ಯೂಸ್

1-adasdsd

Papua New Guinea; ಭಾರೀ ಭೂಕುಸಿತದಿಂದ 100 ಕ್ಕೂ ಹೆಚ್ಚು ಜನರು ಸಾವು: ವರದಿ

Watch Video:‌ ಕೇದಾರದಲ್ಲಿ ಲ್ಯಾಂಡ್‌ ಆಗುತ್ತಿದ್ದ ವೇಳೆ ನೆಲಕ್ಕಪ್ಪಳಿಸಿದ ಹೆಲಿಕ್ಯಾಪ್ಟರ್…

Watch Video:‌ ಕೇದಾರದಲ್ಲಿ ಲ್ಯಾಂಡ್‌ ಆಗುತ್ತಿದ್ದ ವೇಳೆ ನೆಲಕ್ಕಪ್ಪಳಿಸಿದ ಹೆಲಿಕ್ಯಾಪ್ಟರ್…

ಸ್ಟಾರ್ ವಾರ್, ಫ್ಯಾನ್ಸ್ ವಾರ್ ಮಾಮೂಲಿ… ಆದ್ರೆ ಕನ್ನಡ ಚಿತ್ರರಂಗ ಎಡವುತ್ತಿರುವುದೆಲ್ಲಿ?

ಸ್ಟಾರ್ ವಾರ್, ಫ್ಯಾನ್ಸ್ ವಾರ್ ಮಾಮೂಲಿ… ಆದ್ರೆ ಕನ್ನಡ ಚಿತ್ರರಂಗ ಎಡವುತ್ತಿರುವುದೆಲ್ಲಿ?

1-aaaaa

Mudigere; ಭೀಕರ ಅಪಘಾತದಲ್ಲಿ ಓಮ್ನಿ ನಜ್ಜುಗುಜ್ಜು: ನಾಲ್ವರು ಮೃತ್ಯು

Dinesh Karthik joins T20 World Cup commentary panel

T20 World Cup ಕಾಮೆಂಟರಿ ಪ್ಯಾನೆಲ್ ಸೇರಿದ ಡಿ.ಕೆ; ಇಲ್ಲಿದೆ ವೀಕ್ಷಕ ವಿವರಣೆಗಾರರ ಪಟ್ಟಿ

ಮೇ 25ಕ್ಕೆ ಮಂಗಳೂರಿಗೆ ಸಿಎಂ, ಸೇರಿದಂತೆ ಗಣ್ಯರ ಆಗಮನ… ವಾಹನ ಸಂಚಾರದಲ್ಲಿ ಬದಲಾವಣೆ

ಮೇ 25ಕ್ಕೆ ಮಂಗಳೂರಿಗೆ ಸಿಎಂ, ಸೇರಿದಂತೆ ಗಣ್ಯರ ಆಗಮನ… ವಾಹನ ಸಂಚಾರದಲ್ಲಿ ಬದಲಾವಣೆ

Hubli; ಅಂಜಲಿ ನಿವಾಸದಲ್ಲಿ ಸಿಐಡಿ ತಂಡದಿಂದ ಸ್ಥಳ ಮಹಜರು

Hubli; ಅಂಜಲಿ ನಿವಾಸದಲ್ಲಿ ಸಿಐಡಿ ತಂಡದಿಂದ ಸ್ಥಳ ಮಹಜರು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕಾಂಗ್ರೆಸ್ ಸದಸ್ಯತ್ವವೇ ಇಲ್ಲದಿದ್ದರೂ ಉಚ್ಛಾಟನೆ ಮಾಡಿದ್ದಾರೆ: ಲೋಕೇಶ್ ತಾಳಿಕಟ್ಟೆ

Congress ಸದಸ್ಯತ್ವವೇ ಇಲ್ಲದಿದ್ದರೂ ಉಚ್ಛಾಟನೆ ಮಾಡಿದ್ದಾರೆ: ಲೋಕೇಶ್ ತಾಳಿಕಟ್ಟೆ

Elephants ಬಿಸಿಲಿನ ತಾಪ: 4 ತಿಂಗಳಲ್ಲಿ 22 ಆನೆಗಳ ಸಾವು

Elephants ಬಿಸಿಲಿನ ತಾಪ: 4 ತಿಂಗಳಲ್ಲಿ 22 ಆನೆಗಳ ಸಾವು

women trafficking

Honnali; ಕೆಲಸಕ್ಕೆಂದು ಕರೆದುಕೊಂಡು ಒಂದು ಲಕ್ಷ ರೂ ಗೆ ಮಹಿಳೆಯ ಮಾರಾಟ!

9-davangere

Davangere: ಮರ ಬಿದ್ದು ಕಾರು ಜಖಂ; ಚಾಲಕ ಪ್ರಾಣಾಪಾಯದಿಂದ ಪಾರು

Davanagere ನೇಹಾ-ಅಂಜಲಿ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿ; ಮಡಿವಾಳ ಸಮಾಜದ ಪ್ರತಿಭಟನೆ

Davanagere ನೇಹಾ-ಅಂಜಲಿ ಹಂತಕರಿಗೆ ಗಲ್ಲು ಶಿಕ್ಷೆ ವಿಧಿಸಿ; ಮಡಿವಾಳ ಸಮಾಜದ ಪ್ರತಿಭಟನೆ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-adasdsd

Papua New Guinea; ಭಾರೀ ಭೂಕುಸಿತದಿಂದ 100 ಕ್ಕೂ ಹೆಚ್ಚು ಜನರು ಸಾವು: ವರದಿ

Watch Video:‌ ಕೇದಾರದಲ್ಲಿ ಲ್ಯಾಂಡ್‌ ಆಗುತ್ತಿದ್ದ ವೇಳೆ ನೆಲಕ್ಕಪ್ಪಳಿಸಿದ ಹೆಲಿಕ್ಯಾಪ್ಟರ್…

Watch Video:‌ ಕೇದಾರದಲ್ಲಿ ಲ್ಯಾಂಡ್‌ ಆಗುತ್ತಿದ್ದ ವೇಳೆ ನೆಲಕ್ಕಪ್ಪಳಿಸಿದ ಹೆಲಿಕ್ಯಾಪ್ಟರ್…

accident

Vijayapura:ಆಯುತಪ್ಪಿ ಬಿದ್ದ ಮಹಿಳೆಯ ಕಾಲಿನ ಮೇಲೆ ಹರಿದ ಬಸ್

ಸ್ಟಾರ್ ವಾರ್, ಫ್ಯಾನ್ಸ್ ವಾರ್ ಮಾಮೂಲಿ… ಆದ್ರೆ ಕನ್ನಡ ಚಿತ್ರರಂಗ ಎಡವುತ್ತಿರುವುದೆಲ್ಲಿ?

ಸ್ಟಾರ್ ವಾರ್, ಫ್ಯಾನ್ಸ್ ವಾರ್ ಮಾಮೂಲಿ… ಆದ್ರೆ ಕನ್ನಡ ಚಿತ್ರರಂಗ ಎಡವುತ್ತಿರುವುದೆಲ್ಲಿ?

1-aaaaa

Mudigere; ಭೀಕರ ಅಪಘಾತದಲ್ಲಿ ಓಮ್ನಿ ನಜ್ಜುಗುಜ್ಜು: ನಾಲ್ವರು ಮೃತ್ಯು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.