ಸ್ಮಾರ್ಟ್‌ಸಿಟಿ ಬಡವರಿಗೆ ಗೋಳು

Team Udayavani, Oct 11, 2017, 12:11 PM IST

5hu.jpg

ಧಾರವಾಡ: ರೈತರ ಸಾಲಮನ್ನಾದ ಬದಲು ಉದ್ಯಮಿಗಳ ಸಾಲ ಮನ್ನಾ ಮಾಡಿರುವ ಕೇಂದ್ರ ಸರ್ಕಾರ ಇದೀಗ ಸ್ಮಾರ್ಟ್‌ಸಿಟಿ ಮಾಡುವ ಮೂಲಕ ಬಡ ರೈತರ ಭೂಮಿಗೆ ಕನ್ನಾ ಹಾಕುತ್ತಿದೆ ಎಂದು ಸ್ಲಂ ಜನಾಂದೋಲನಾ ಕರ್ನಾಟಕದ ರಾಜ್ಯ ಸಂಘಟನಾ ಸಂಚಾಲಕ ಇಮ್ತಿಯಾಜ ಮಾನ್ವಿ ಹೇಳಿದರು. 

ನಗರದಲ್ಲಿ ಸ್ಲಂ ಜನಾಂದೋಲನಾ ಕರ್ನಾಟಕ ಸಹಕಾರ ಮತ್ತು ಹು-ಧಾ ಸ್ಲಂ ಸಮಿತಿಯ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಅವಳಿನಗರದ ನಾಗರಿಕರ ಮೇಲೆ ಸ್ಮಾರ್ಟ್‌ಸಿಟಿ ಯೋಜನೆ ಬೀರುವ ಪರಿಣಾಮ ಕುರಿತ ಸಮಾಲೋಚನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. 

ನಗರದ ಕೊಳಗೇರಿ ಕುಟುಂಬಗಳ ಎತ್ತಂಗಡಿ ಮಾಡುವ ಇಂತಹ ಜನರ ವಿರೋಧಿ ಯೋಜನೆಯಿಂದ ಕೊಳಗೇರಿ ನಿವಾಸಿಗಳ ಬದುಕು ಅತಂತ್ರವಾಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು. ಅವಳಿನಗರದ ಸುಮಾರು 992 ಎಕರೆ ಭೂಮಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಮಾರ್ಟ್‌ಸಿಟಿ 1.17 ಲಕ್ಷ ಜನ ಸಂಖ್ಯೆ ವಾಸಿಸುವುದನ್ನು ಒಳಗೊಂಡಿದೆ.

ಸುಮಾರು 32405 ಕುಟುಂಬಗಳು ಸ್ಮಾರ್ಟ್‌ಸಿಟಿಯಲ್ಲಿ ವಾಸಿಸುತ್ತವೆ ಎಂದು ಅಂಕಿಸಂಖ್ಯೆ ನೀಡಿದ್ದು, ಇದರಲ್ಲಿ ಕೊಳಗೇರಿ ನಿವಾಸಿಗಳ ಪಾಲೇನೆಂಬುವುದನ್ನು ತಿಳಿಸದೆ ಕೊಳಗೇರಿ ಜನರ ಭೂಮಿಯಲ್ಲಿ ಬಂಡವಾಳ ಶಾಹಿಗಳಿಂದ ದೊಡ್ಡ ದೊಡ್ಡ ಕೈಗಾರಿಕ ಕೇಂದ್ರಗಳ ಸ್ಥಾಪನೆ ಮಾಡಲು ಹೊರಟಿದ್ದಾರೆ ಎಂದು ದೂರಿದರು. 

ಮಹಿಳಾ ಸಮಿತಿ ಸಂಚಾಲಕಿ ಶೋಭಾ ಕಮತರ ಮಾತನಾಡಿ, ಬಂಡವಾಳ ಶಾಹಿಗಳ ಪರವಾಗಿರುವ ಸರ್ಕಾರಗಳ ವಿರುದ್ಧ ಕೊಳಗೇರಿ ನಿವಾಸಿಗಳು ಜಾಗೃತರಾಗಿ ಹೋರಾಟ ಮಾಡಬೇಕು ಎಂದರು. ಸ್ಲಂ ಜನಾಂದೋಲನಾ ಕರ್ನಾಟಕ ಧಾರವಾಡ ಜಿಲ್ಲಾ ಸಂಚಾಲಕ ರಸೂಲ್‌ ಎಮ್‌. ನದಾಫ್‌ ಮಾತನಾಡಿದರು. 

ಸ್ಲಂ ಜನಾಂದೋಲನಾ ಕರ್ನಾಟಕ ಹುಬ್ಬಳ್ಳಿ ತಾಲೂಕಾಧ್ಯಕ್ಷ ಗ್ರೇಸ್ಸಾ ಸಿಂಪಿಗೇರ, ಧಾರವಾಡ ಸ್ಲಂ ಸಮಿತಿ ಸಲಹೆಗಾರ ಷಣ್ಮುಖಪ್ಪ ಬಡಿಗೇರ ಇದ್ದರು. ಮಾರುತಿ ಶಿರೋಳ ನಿರೂಪಿಸಿದರು. ವಿನೋದ ಪೈಲವಾನವಾಲೆ ಸ್ವಾಗತಿಸಿದರು. ಮುಸ್ತಾಕ ರಿತ್ತಿ, ಬಸವರಾಜ ಬೆಳ್ಳಿಗಟ್ಟಿಮಠ, ದುರ್ಗವ್ವ ದುರ್ಗಮುರ್ಗಿ, ಸೈನಾಜ ದಫೆದಾರ, ವಿಲಾಸ ಗೋಸಾವಿ ಇದ್ದರು. 

ಟಾಪ್ ನ್ಯೂಸ್

Tata Nexon: ಟಾಟಾ ನೆಕ್ಸಾನ್‌ SUV ಏಳು ವರ್ಷಗಳಲ್ಲಿ ಭರ್ಜರಿ 7 ಲಕ್ಷ ಮಾರಾಟ!

Tata Nexon: ಟಾಟಾ ನೆಕ್ಸಾನ್‌ SUV ಏಳು ವರ್ಷಗಳಲ್ಲಿ ಭರ್ಜರಿ 7 ಲಕ್ಷ ಮಾರಾಟ!

9-bantwala

Bantwala: ಚರಂಡಿಯಲ್ಲಿ ಪ್ರಾಣಿಯ ಅವಶೇಷಗಳು ಪತ್ತೆ

Udupi: ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಬಿಜೆಪಿಯಿಂದ ರಸ್ತೆ ತಡೆದು ಪ್ರತಿಭಟನೆ

Udupi: ಪೆಟ್ರೋಲ್, ಡೀಸೆಲ್ ದರ ಏರಿಕೆ ಖಂಡಿಸಿ ಬಿಜೆಪಿಯಿಂದ ರಸ್ತೆ ತಡೆದು ಪ್ರತಿಭಟನೆ

7-

Gundlupete: ಕುಡಿದ ಮತ್ತಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ

Kanchanjunga Express ರೈಲಿಗೆ ಗೂಡ್ಸ್ ರೈಲು ಡಿಕ್ಕಿ; 5 ಮೃತ್ಯು, 25ಕ್ಕೂ ಹೆಚ್ಚು ಗಾಯ

Kanchanjunga Express ರೈಲಿಗೆ ಗೂಡ್ಸ್ ರೈಲು ಡಿಕ್ಕಿ; 5 ಮೃತ್ಯು, 25ಕ್ಕೂ ಹೆಚ್ಚು ಗಾಯ

b-c-patil

Price Hike; ಸರ್ಕಾರ ಜನರನ್ನು ನೇರವಾಗಿ ಸುಲಿಗೆ ಮಾಡುತ್ತಿದೆ…: ಬಿ.ಸಿ.ಪಾಟೀಲ್ ಆಕ್ರೋಶ

Renukaswamy Case; ಪಾರದರ್ಶಕ ವಿಚಾರಣೆಯಾಗಲಿ…: ದರ್ಶನ್ ಬಂಧನದ ಬಗ್ಗೆ ಉಪೇಂದ್ರ ಮಾತು

Renukaswamy Case; ಪಾರದರ್ಶಕ ವಿಚಾರಣೆಯಾಗಲಿ…: ದರ್ಶನ್ ಬಂಧನದ ಬಗ್ಗೆ ಉಪೇಂದ್ರ ಮಾತು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bakrid 2024;

Bakrid 2024; ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರಿಂದ ಸಾಮೂಹಿಕ ಪ್ರಾರ್ಥನೆ

ಪ್ರಹ್ಲಾದ ಜೋಶಿ

Hubli: ದಿವಾಳಿಯಾದ ಸರ್ಕಾರ ಜನರಿಗೆ ಬೆಲೆ ಏರಿಕೆಯ ಬರೆ ಹಾಕಿದೆ: ಪ್ರಹ್ಲಾದ ಜೋಶಿ

Politics: ಕಾಂಗ್ರೆಸ್ ಜನರ ಕೈಗೆ ಬೆಲೆ ಏರಿಕೆಯ ಚೊಂಬು ಕೊಟ್ಟಿದೆ; ಅರವಿಂದ ಬೆಲ್ಲದ ವಾಗ್ದಾಳಿ

Politics: ಕಾಂಗ್ರೆಸ್ ಜನರ ಕೈಗೆ ಬೆಲೆ ಏರಿಕೆಯ ಚೊಂಬು ಕೊಟ್ಟಿದೆ; ಅರವಿಂದ ಬೆಲ್ಲದ ವಾಗ್ದಾಳಿ

Hubli; ದರ್ಶನ್ ಅವರನ್ನು ರಾಯಭಾರಿಯಾಗಿ ನೇಮಿಸಿದ್ದು ಸರ್ಕಾರದ ತಪ್ಪು: ಪ್ರಹ್ಲಾದ ಜೋಶಿ

Hubli; ದರ್ಶನ್ ಅವರನ್ನು ರಾಯಭಾರಿಯಾಗಿ ನೇಮಿಸಿದ್ದು ಸರ್ಕಾರದ ತಪ್ಪು: ಪ್ರಹ್ಲಾದ ಜೋಶಿ

Dharwad: ಗೋವು ರಕ್ಷಕರ ಮೇಲೆ ಮುಸ್ಲಿಂ ಯುಕರಿಂದ ಹಲ್ಲೆ… ಭಜರಂಗದಳ ಪ್ರತಿಭಟನೆ

Dharwad: ಗೋವು ರಕ್ಷಕರ ಮೇಲೆ ಮುಸ್ಲಿಂ ಯುವಕರಿಂದ ಹಲ್ಲೆ… ಭಜರಂಗದಳ ಪ್ರತಿಭಟನೆ

MUST WATCH

udayavani youtube

ಗಂಗೊಳ್ಳಿಯಲ್ಲಿ ಈದ್ ಅಲ್ ಅಝ್ಹಾ ಆಚರಣೆ

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

ಹೊಸ ಸೇರ್ಪಡೆ

Tata Nexon: ಟಾಟಾ ನೆಕ್ಸಾನ್‌ SUV ಏಳು ವರ್ಷಗಳಲ್ಲಿ ಭರ್ಜರಿ 7 ಲಕ್ಷ ಮಾರಾಟ!

Tata Nexon: ಟಾಟಾ ನೆಕ್ಸಾನ್‌ SUV ಏಳು ವರ್ಷಗಳಲ್ಲಿ ಭರ್ಜರಿ 7 ಲಕ್ಷ ಮಾರಾಟ!

9-bantwala

Bantwala: ಚರಂಡಿಯಲ್ಲಿ ಪ್ರಾಣಿಯ ಅವಶೇಷಗಳು ಪತ್ತೆ

Gadag; ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

Gadag; ತೈಲ ಬೆಲೆ ಏರಿಕೆ ಖಂಡಿಸಿ ಬಿಜೆಪಿ ಪ್ರತಿಭಟನೆ

8-

Lokapura: ಬಕ್ರೀದ್ ಹಬ್ಬದ ನಿಮಿತ್ತ ಮುಸ್ಲಿಂ ಬಾಂಧವರಿಂದ ವಿಶೇಷ ಪ್ರಾರ್ಥನೆ

Bakrid 2024;

Bakrid 2024; ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದವರಿಂದ ಸಾಮೂಹಿಕ ಪ್ರಾರ್ಥನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.