ಸರ್ದಾರ್ ವಲ್ಲಭಭಾಯಿ ಪಟೇಲ್ 144ನೇ ಜನ್ಮದಿನ: ಗದಗದಲ್ಲಿ ರಾಷ್ಟ್ರೀಯ ಏಕತಾ ಓಟ

Team Udayavani, Oct 31, 2019, 8:20 AM IST

ಗದಗ: ಸರ್ದಾರ್‌ ವಲ್ಲಭಭಾಯಿ ಪಟೇಲ್‌ ಅವರ 144ನೇ ಜನ್ಮದಿನ ಪ್ರಯುಕ್ತ ಜಿಲ್ಲಾ ಪೊಲೀಸ್ ಇಲಾಖೆ, ಗದಗ- ಬೆಟಗೇರಿ ನಾಗರಿಕರ ಸಹಯೋಗದಲ್ಲಿ ನಗರದಲ್ಲಿ  ರಾಷ್ಟ್ರೀಯ ಏಕತಾ ಓಟ ನಡೆಯಿತು.

ಮಹಾತ್ಮ ಗಾಂಧಿ ವೃತ್ತದಲ್ಲಿ ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಹಸಿರು ನಿಶಾನೆ ತೋರಿಸಿ ಚಾಲನೆ ನೀಡಿದರು.


ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ ಜೋಶಿ, ನಗರದ ಪ್ರಮುಖರಾದ ಸಂಗಮೇಶ ದುಂದೂರು, ಸುಧೀರ್ ಘೋರ್ಪಡೆ. ಎಸ್.ಎನ್.ಬಳ್ಳಾರಿ, ಶರಣಬಸಪ್ಪ ಕುರಡಗಿ, ಚಂದ್ರು ಚವ್ಹಾಣ, ಬಿಪಿಇಡಿ ಪ್ರಶಿಕ್ಷಣಾರ್ಥಿಗಳು, ಹಾಗೂ ಲಾಯನ್ಸ್ ಕ್ಲಬ್, ರೋಟರಿ ಕ್ಲಬ್, ಚೇಂಬರ್ ಆಫ್ ಕಾಮರ್ಸ್, ವಕೀಲರು, ಆಟೋ ಚಾಲಕರು  ಪಾಲ್ಗೊಂಡಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ