ಸ್ಯಾನಿಟೈಸರ್ಗೆ ಅಧಿಕ ಬೆಲೆ: ದಂಡ
Team Udayavani, Apr 25, 2020, 11:27 AM IST
ಹೊಳೆನರಸೀಪುರ: ಕೋವಿಡ್ ಹಿನ್ನೆಲೆ ಯಲ್ಲಿ ಪಟ್ಟಣದಲ್ಲಿ ವ್ಯಾಪಾರ ವಹಿವಾಟನ್ನು ತಾಲೂಕು ಆಡಳಿತ ನಿಯಂತ್ರಣ ಮಾಡಿರುವ ಸಲುವಾಗಿ ಆಹಾರ ಇಲಾಖೆ ಹಾಗು ತೂಕ ಮತ್ತು ಇಲಾಖೆ ಅಧಿಕಾರಿ ಚಂದ್ರಪ್ಪ ಮೆಡಿಕಲ್ ಸ್ಟೋರ್ ಹಾಗು ದಿನದಿ ಅಂಗಡಿ ಮೇಲೆ ದಾಳಿ ನಡೆಸಿ ಅನೇಕ ವರ್ತಕರ ವಿರುದ್ಧ ಕೇಸು ದಾಖಲಿಸಿ 6 ಸಾವಿರ ದಂಡ ವಿಧಿಸಿದರು.
ದಾಳಿ ನಂತರ ಮಾತನಾಡಿದ ಅವರು, ಕೋವಿಡ್ ಹಿನ್ನಲೆಯಲ್ಲಿ ಮೆಡಿಕಲ್ ಸ್ಟೋರ್ ಗಳಲ್ಲಿ ಸ್ಯಾನಿಟೈಸರ್, ಮಾಸ್ಕ್ , ಔಷಧಿಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ದೂರು ಮತ್ತು ದಿನಸಿ ಅಂಗಡಿಗಳಲ್ಲಿ ಸ್ಟಾಕ್ ಲೀಸ್ಟ್ ಮತ್ತು ದರ ಪಟ್ಟಿ ಪ್ರದರ್ಶನ ಪಲಕ ಹಾಕಿಲ್ಲ ಎಂಬ ದೂರಿನ ಮೇಲೆ ಆಹಾರ ಇಲಾಖೆ ಅಧಿಕಾರಿ ರಾಮಚಂದ್ರ, ವೀಣಾ ಅವರ ಜತೆಗೂಡಿ ದಾಳಿ ನಡೆಸಿದ್ದಾಗಿ ತಿಳಿಸಿದರು. ಮೆಡಿಕಲ್ ಸ್ಟೋರ್ಗಳಲ್ಲಿ ಕೋವಿಡ್ ಸಾಂಕ್ರಾಮಿಕ ರೋಗಕ್ಕೆ ಅವಶ್ಯ ವಾಗಿ ಬೇಕಾಗಿ ರುವ ಸ್ಯಾನಿಟೈಸರ್, ಮಾಸ್ಕ್ ಗಳನ್ನು ಅಧಿಕ ಬೆಲೆಗೆ ಮಾರಾಟ ಮಾಡುವುದು ಕಾನೂನು ಬಾಹಿರ ಎಂದು ಅರಿವು ಮೂಡಿಸಿರುವುದಾಗಿ ತಿಳಿಸಿದರು.