ಮಳೆಹಾನಿ ಪರಿಹಾರ ವಿತರಣೆಯಲ್ಲಿ ಗೋಲ್‌ಮಾಲ್‌

Team Udayavani, Jan 12, 2019, 7:28 AM IST

12-january-10.jpg

ಮಡಿಕೇರಿ : ಕಳೆದ ಆಗಸ್ಟ್‌ ನಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಗೆ ಸಂಬಂಧಿಸಿದಂತೆ ಸಂತ್ರಸ್ತರಿಗೆ ಪರಿಹಾರ ವಿತರಣೆ ಸಂದರ್ಭ ನಗರಸಭೆೆಯ ಕೆಲವು ಸಿಬಂದಿ ಗೋಲ್‌ಮಾಲ್‌ ಮಾಡಿದ್ದಾರೆ ಎನ್ನುವ ಆರೋಪ ನಗರಸಭೆೆಯ ಸಾಮಾನ್ಯ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಯಿತಲ್ಲದೆ, ಅಧಿಕಾರಿಗಳ ನಡುವಿನ ಹೊಂದಾಣಿಕೆಯ ಕೊರತೆ ಬಹಿರಂಗಗೊಂಡಿತು.

ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅವರ ಅಧ್ಯಕ್ಷತೆಯಲ್ಲಿ ನಗರ ಸಭಾ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾ ಪಿಸಿದ ಕಾಂಗ್ರೆಸ್‌ ಸದಸ್ಯ ಹೆಚ್.ಎಂ.ನಂದ ಕುಮಾರ್‌, ಮಳೆ ಹಾನಿ ಪರಿಹಾರ ವಿತರಣೆಯಲ್ಲಿ ತಾರ ತಮ್ಯ ತೋರಲಾಗಿದೆ. ಅಲ್ಲದೆ, ಸಿಬ್ಬಂದಿಯೊಬ್ಬರು ಪರಿಹಾರದ ಚೆಕ್‌ನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿದರು. ಸಂಬಂಧಿಸಿದ ಸಿಬಂದಿಯನ್ನು ಅಮಾನತು ಗೊಳಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ಮಾತನಾಡಿದ ಪೌರಾಯುಕ್ತ ರಮೇಶ್‌, ಈ ಪ್ರಕರಣ ಜಿಲ್ಲಾಧಿಕಾರಿಗಳ ಗಮನಕ್ಕೂ ಬಂದಿದ್ದು, ಅಧಿಕಾರಿಗೆ ನೋಟಿಸ್‌ ನೀಡಲಾಗಿದೆ ಎಂದರು. ಅಧಿಕಾರಿ ಜೀವನ್‌ ಎಂಬವರು ಕರ್ತವ್ಯ ಲೋಪ ತೋರುತ್ತಿದ್ದು, ಮಳೆಹಾನಿ ಪರಿಹಾರ ಚೆಕ್‌ ವಿತರಣೆ ವಿಚಾರದಲ್ಲಿ ತೊಂದರೆ ನೀಡಿದ್ದಾರೆ. ಮುತ್ತಮ್ಮ ಎಂಬ ಹೆಸರಿನ ಇಬ್ಬರು ಸಂತ್ರಸ್ತರ ಹೆಸರಿನಲ್ಲಿ ಮಂಜೂರಾದ ಚೆಕ್‌ನಲ್ಲಿ ಒಂದು ಚೆಕ್‌ನ್ನು ದುರುಪಯೋಗಪಡಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಈ ಕುರಿತು ಚರ್ಚೆ ನಡೆದ ಸಂದರ್ಭ ಮಾತನಾಡಿದ ಸ್ಥಾಯಿ ಸಮಿತಿ ಅಧ್ಯಕ್ಷ ಉಣ್ಣಿಕೃಷ್ಣನ್‌ ಸಂಬಂಧಿಸಿದ ಸಿಬಂದಿ ಗಳನ್ನು ಸಭೆಗೆ ಕರೆಯಿಸುವಂತೆ ಒತ್ತಾಯಿ ಸಿದರು. ಸಭೆಗೆ ಸಿಬಂದಿ ಆಗಮಿಸಿದ ನಂತರ ಪೌರಾಯುಕ್ತರು ಜೀವನ್‌ ವಿರುದ್ಧ ಗಂಭೀರ ಆರೋಪ ಗಳನ್ನು ಮಾಡಿದರು. ಸದಸ್ಯ ನಂದ ಕುಮಾರ್‌ ಕೂಡ ಸಿಬಂದಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಈ ಸಂದರ್ಭ ಮಾತನಾಡಿದ ಸಿಬಂದಿ ಜೀವನ್‌, ಪರಿಹಾರದ ಚೆಕ್‌ ವಿತರಣೆಯಲ್ಲಿ ಯಾವುದೇ ಲೋಪವಾಗಿಲ್ಲ, ನಾನು ಹಣವನ್ನು ಡ್ರಾ ಮಾಡಿಲ್ಲ, ತಹಶೀಲ್ದಾರ್‌ ಸೂಚನೆಯಂತೆ ಕಾರ್ಯ ನಿರ್ವಹಿಸಿದ್ದೇನೆ ಎಂದು ಸಮಜಾಯಿಷಿಕೆ ನೀಡಿದರು.

ಸಿಬಂದಿ ವಿರುದ್ಧ ಆರೋಪ ಪ್ರತ್ಯಾರೋಪಗಳು ನಡೆಯುತ್ತಿದ್ದ ಸಂದ ರ್ಭ ಮಧ್ಯ ಪ್ರವೇಶಿಸಿದ ನಗರಸಭಾ ಕಾರ್ಯದರ್ಶಿ ತಾಹಿರ್‌, ಈ ಬೆಳವಣಿಗೆಯ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು. ಯಾರು ತಪ್ಪು ಮಾಡಿದ್ದಾರೋ ತನಿಖೆ ನಡೆಸಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಗಾಗುವುದು ಎಂದರು.

ಅದೇ ಕಸ, ಅದೇ ರಸ್ತೆ
ಪ್ರತಿ ಸಭೆಯಂತೆ ಈ ಸಭೆಯಲ್ಲಿಯೂ ಕಸ ವಿಲೇವಾರಿ, ಯುಜಿಡಿ ಕಾಮಗಾರಿಯಿಂದ
ಹದಗೆಟ್ಟ ರಸ್ತೆ, ತಡೆಗೋಡೆ ನಿರ್ಮಾಣ ಮಳೆಹಾನಿ ಪರಿಹಾರ ಕಾರ್ಯ ವಿಳಂಬದ ಬಗ್ಗೆ ಸದಸ್ಯರು ಅಧ್ಯಕ್ಷರ ಗಮನ ಸೆಳೆದರು.

ನಗರದೊಳಗೆ ಮೂಲಭೂತ ಸೌಲಭ್ಯಗಳಿಗೆ ಸಂಬಂಧಿಸಿದ ಯಾವುದೇ ಕಾರ್ಯಗಳು
ನಡೆಯುತ್ತಿಲ್ಲ. ಇದಕ್ಕೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳ ಮೇಲೆ ಅಧ್ಯಕ್ಷರಿಗೆ ಹಿಡಿತ ಇಲ್ಲದಿರುವುದೆ ಕಾರಣವೆಂದು ಬಿಜೆಪಿ ಸದಸ್ಯರು ಆರೋಪಿಸಿದರು. ನಗರದ ಕಸವಿಲೇವಾರಿ ಆಗುತ್ತಿರುವ ಸ್ಟೋನ್‌ ಹಿಲ್‌ ಬೆಟ್ಟ ಪ್ರದೇಶದಲ್ಲಿ ಕಸದ ರಾಶಿಯ ಮೇಲೆ ಮಣ್ಣನ್ನು ಸುರಿದಿರುವ ಬಗ್ಗೆ ಸದಸ್ಯ ಪಿ.ಡಿ. ಪೊನ್ನಪ್ಪ ಆಕ್ಷೇಪ ವ್ಯಕ್ತಪಡಿಸಿದರು.

ಟಾಪ್ ನ್ಯೂಸ್

IPL ರಾಜಸ್ಥಾನಕ್ಕೆ ಶರಣಾದ ರಾಯಲ್‌ ಚಾಲೆಂಜರ್

IPL ರಾಜಸ್ಥಾನಕ್ಕೆ ಶರಣಾದ ರಾಯಲ್‌ ಚಾಲೆಂಜರ್

Udupi ರಘುಪತಿ ಭಟ್‌ ಉಚ್ಚಾಟನೆಗೆ ಜಿಲ್ಲಾ ಬಿಜೆಪಿ ಶಿಫಾರಸು

Udupi ರಘುಪತಿ ಭಟ್‌ ಉಚ್ಚಾಟನೆಗೆ ಜಿಲ್ಲಾ ಬಿಜೆಪಿ ಶಿಫಾರಸು

Belthangady ಶಾಸಕ ಹರೀಶ್‌ ಪೂಂಜ ಠಾಣೆಗೆ ಹಾಜರು; ಜಾಮೀನು

Belthangady ಶಾಸಕ ಹರೀಶ್‌ ಪೂಂಜ ಠಾಣೆಗೆ ಹಾಜರು; ಜಾಮೀನು

Congress ಅಧಿಕಾರಕ್ಕೆ ಬಂದ ತಿಂಗಳಲ್ಲೇ ಅದಾನಿ ಹಗರಣ ತನಿಖೆಗೆ ಜೆಪಿಸಿ ರಚನೆ

Congress ಅಧಿಕಾರಕ್ಕೆ ಬಂದ ತಿಂಗಳಲ್ಲೇ ಅದಾನಿ ಹಗರಣ ತನಿಖೆಗೆ ಜೆಪಿಸಿ ರಚನೆ

PM Modi ವಿಪಕ್ಷಗಳು ಜನಧನ ಖಾತೆ ಮುಚ್ಚಿ ಹಣ ದೋಚಲಿವೆ

PM Modi ವಿಪಕ್ಷಗಳು ಜನಧನ ಖಾತೆ ಮುಚ್ಚಿ ಹಣ ದೋಚಲಿವೆ

ಮಗನ ಮನವೊಲಿಸಿ ಅಮ್ಮನನ್ನು ಮನೆಗೆ ಸೇರಿಸಿದ ತಹಶೀಲ್ದಾರ್‌

ಮಗನ ಮನವೊಲಿಸಿ ಅಮ್ಮನನ್ನು ಮನೆಗೆ ಸೇರಿಸಿದ ತಹಶೀಲ್ದಾರ್‌

Panambur ಫಿನಾಯಿಲ್‌ ಸೇವಿಸಿ ಇಬ್ಬರು ಕಾರ್ಮಿಕರ ಆತ್ಮಹತ್ಯೆ ಯತ್ನ

Panambur ಫಿನಾಯಿಲ್‌ ಸೇವಿಸಿ ಇಬ್ಬರು ಕಾರ್ಮಿಕರ ಆತ್ಮಹತ್ಯೆ ಯತ್ನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kodagu ಜಿಲ್ಲೆಯಲ್ಲಿ ಮಳೆ; ಮರೆಯಾದ ಬರದ ಛಾಯೆ; ಪ್ರವಾಸಿಗರ ದಾಂಗುಡಿ

Kodagu ಜಿಲ್ಲೆಯಲ್ಲಿ ಮಳೆ; ಮರೆಯಾದ ಬರದ ಛಾಯೆ; ಪ್ರವಾಸಿಗರ ದಾಂಗುಡಿ

Madikeri ಪ್ರೀತಿಸಿದ ಯುವಕನ ಮೇಲೆ ಬಿಸಿನೀರು: ಆಸ್ಪತ್ರೆಗೆ ದಾಖಲು

Madikeri ಪ್ರೀತಿಸಿದ ಯುವಕನ ಮೇಲೆ ಬಿಸಿನೀರು: ಆಸ್ಪತ್ರೆಗೆ ದಾಖಲು

Madikeri ಕಾಳು ಮೆಣಸು ಕಳವು ಪ್ರಕರಣ: 24 ಗಂಟೆಗಳಲ್ಲಿ ಆರೋಪಿಗಳ ಬಂಧನ

Madikeri ಕಾಳು ಮೆಣಸು ಕಳವು ಪ್ರಕರಣ: 24 ಗಂಟೆಗಳಲ್ಲಿ ಆರೋಪಿಗಳ ಬಂಧನ

Rain ಕೊಡಗಿನಲ್ಲಿ ಉತ್ತಮ ಮಳೆ: ಅಂಗಡಿ, ಮನೆಗಳಿಗೆ ನುಗ್ಗಿದ ನೀರು

Rain ಕೊಡಗಿನಲ್ಲಿ ಉತ್ತಮ ಮಳೆ: ಅಂಗಡಿ, ಮನೆಗಳಿಗೆ ನುಗ್ಗಿದ ನೀರು

1-wewewqe

Madikeri; ಕಾಡುಕೋಣ ಬೇಟೆ: 549 ಕೆ.ಜಿ ಮಾಂಸ ಸೇರಿ ಓರ್ವನ ಬಂಧನ

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

IPL ರಾಜಸ್ಥಾನಕ್ಕೆ ಶರಣಾದ ರಾಯಲ್‌ ಚಾಲೆಂಜರ್

IPL ರಾಜಸ್ಥಾನಕ್ಕೆ ಶರಣಾದ ರಾಯಲ್‌ ಚಾಲೆಂಜರ್

Udupi ರಘುಪತಿ ಭಟ್‌ ಉಚ್ಚಾಟನೆಗೆ ಜಿಲ್ಲಾ ಬಿಜೆಪಿ ಶಿಫಾರಸು

Udupi ರಘುಪತಿ ಭಟ್‌ ಉಚ್ಚಾಟನೆಗೆ ಜಿಲ್ಲಾ ಬಿಜೆಪಿ ಶಿಫಾರಸು

Belthangady ಶಾಸಕ ಹರೀಶ್‌ ಪೂಂಜ ಠಾಣೆಗೆ ಹಾಜರು; ಜಾಮೀನು

Belthangady ಶಾಸಕ ಹರೀಶ್‌ ಪೂಂಜ ಠಾಣೆಗೆ ಹಾಜರು; ಜಾಮೀನು

Congress ಅಧಿಕಾರಕ್ಕೆ ಬಂದ ತಿಂಗಳಲ್ಲೇ ಅದಾನಿ ಹಗರಣ ತನಿಖೆಗೆ ಜೆಪಿಸಿ ರಚನೆ

Congress ಅಧಿಕಾರಕ್ಕೆ ಬಂದ ತಿಂಗಳಲ್ಲೇ ಅದಾನಿ ಹಗರಣ ತನಿಖೆಗೆ ಜೆಪಿಸಿ ರಚನೆ

PM Modi ವಿಪಕ್ಷಗಳು ಜನಧನ ಖಾತೆ ಮುಚ್ಚಿ ಹಣ ದೋಚಲಿವೆ

PM Modi ವಿಪಕ್ಷಗಳು ಜನಧನ ಖಾತೆ ಮುಚ್ಚಿ ಹಣ ದೋಚಲಿವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.