ಎತ್ತಿನಹೊಳೆ ನೀರು ಕುಲುಷಿತ ತಡೆಗೆ ರೈತಸಂಘ ಆಗ್ರಹ


Team Udayavani, Mar 14, 2020, 4:24 PM IST

kolar-tdy-1

ಸಾಂದರ್ಭಿಕ ಚಿತ್ರ

ಕೋಲಾರ: ಬೆಂಗಳೂರು ಬಿಬಿಎಂಪಿ ವ್ಯಾಪ್ತಿಯ ಕಸವನ್ನು ದೊಡ್ಡಬಳ್ಳಾಪುರ ತಾಲೂಕು ಗುಂಡ್ಲಹಳ್ಳಿ ಟರ್ರಾ ಫಾರಂ ಬಳಿಯ ಕಸ ವಿಲೇವಾರಿ ಘಟಕ ಮತ್ತು ಚಿಗ ರೇನಹಳ್ಳಿಯ ಎಂಎಸ್‌ಜಿಪಿ ಕಸ ವಿಲೇವಾರಿ ಘಟಕಗಳಿಗೆ ಹಾಕುತ್ತಿರುವುದರಿಂದ ಈ ಭಾಗದಲ್ಲಿ ಹರಿಯುವ ಎತ್ತಿನಹೊಳೆ ಕುಡಿಯುವ ನೀರು ಕಲುಷಿತವಾಗುವುದನ್ನು ತಡೆಯಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಜಿಲ್ಲಾಧಿಕಾರಿ ಸಿ. ಸತ್ಯಭಾಮಾರಿಗೆ ಮನವಿ ಸಲ್ಲಿಸಲಾಯಿತು.

ಬಿಬಿಎಂಪಿ ಕಸ ವಿಲೇವಾರಿಯಿಂದ ನೀರು ಕಲುಷಿತ: ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯ ಕಸವನ್ನು ದೊಡ್ಡಬಳ್ಳಾಪುರ ತಾಲೂಕು ಗುಂಡ್ಲಹಳಿ ಟರ್ರಾಫಾರಂ ಬಳಿ ಕಸ ವಿಲೇವಾರಿ ಘಟಕ ಮತ್ತು ಚಿಗರೇನಹಳ್ಳಿಯ ಎಂಎಸ್‌ ಜಿಪಿ ಕಸ ವಿಲೇವಾರಿ ಘಟಕಗಳಿಗೆ ಸುರಿಸುತ್ತಿದ್ದಾರೆ. ಎತ್ತಿನ ಹೊಳೆ ನೀರು ಸಂಗ್ರಹಿಸಲು ನಿರ್ಮಿಸಲಾಗುತ್ತಿರುವ ಭೈರ ಗೊಂಡ್ಲು ಜಲಾಶಯವೂ ಇದೇ ಪ್ರದೇಶದಲ್ಲಿ ಇರುತ್ತದೆ. ಮಳೆ ಗಾಲದಲ್ಲಿ ನೀರು ಹರಿದು ಹೋಗುವ ಜಲಾ ನಯನ ಪ್ರದೇಶದ ಬಹುತೇಖ ಭಾಗ ಇರುವುದೇ ಎಂಎಸ್‌ಜಿಪಿ ಮತ್ತು ಟರ್ರಾಫಾರಂ ಘಟಕಗಳ ವ್ಯಾಪ್ತಿ ಯಲ್ಲಿ ಕಸ ವಿಲೇವಾರಿ ಘಟಕಗಳಿಗೆ

ಸುತ್ತಲಿನ ಕೆರೆಗಳ ಮುಖ್ಯ ಜಲಾನಯನ ಪ್ರದೇಶ ಇರುವುದರಿಂದ ನೀರು ಸಂಗ್ರಹಿಸುವ ಭೈರಗೊಂಡ್ಲು ಜಲಾಶಯಕ್ಕೆ ಸೇರುತ್ತದೆ. ಕಸ, ತ್ಯಾಜ್ಯದಲ್ಲಿ ಪ್ಲಾಸ್ಟಿಕ್‌ ಹಾಗೂ ವಿಷಯುಕ್ತ ರಾಸಾ ಯನಿಕಗಳು ಇರುವುದರಿಂದ ಇವು ನೀರಿನಲ್ಲಿ ಬೆರೆತು, ಆ ನೀರನ್ನು ಕುಡಿಯುವುದರಿಂದ ನೇರವಾಗಿ ಮನುಷ್ಯನ ಹಾಗೂ ಜಾನುವಾರು, ಪ್ರಾಣಿಪಕ್ಷಿಗಳ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದರಿಂದ ರೋಗರುಜಿನು ಉಂಟಾಗಿ ಪ್ರಾಣಾಪಾಯ ಸಂಭವಿಸ ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷ ಟಿ.ಎನ್‌ ರಾಮೇಗೌಡ ಮಾತನಾಡಿ, ಕಸ ವಿಲೇವಾರಿ ಮಾಡದಂತೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ತಾತ್ಕಾಲಿಕವಾಗಿ ಕಸ ತರುವುದನ್ನು ನಿಲ್ಲಿಸಲಾಗಿತ್ತು. ಈಗ ಮತ್ತೆ ಕಸ ತಂದು ಈ ಘಟಕಗಳಿಗೆ ಸುರಿಯುತ್ತಿದ್ದಾರೆ. ಈ ವಿಚಾರವನ್ನು ಸ್ಥಳೀಯರು ಕೇಳಿದಕ್ಕೆ ಇದು ಬಿಬಿಎಂಪಿ ಆಯುಕ್ತರ ಆದೇಶ ನಾವು ಪಾಲಿ ಸುತ್ತಿದ್ದೇವೆ. ನಾವು ಏನು ಮಾಡಲಾಗುವುದಿಲ್ಲ ಎಂದು ಕಸ ವಿಲೇವಾರಿ ಗುತ್ತಿಗೆ ಪಡೆದಿರುವವರು ಹೇಳುತ್ತಿದ್ದಾರೆ ಎಂದು ಆರೋಪಿಸಿದರು.

ಹೀಗಾಗಿ ತಾವುಗಳು ಕೂಡಲೇ ಎತ್ತಿನಹೊಳೆ ನೀರು ಸಂಗ್ರಹಗೊಳ್ಳುವ ಜಲಾನಯನ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಬೆಂಗಳೂರು ಕಸ ವಿಲೇವಾರಿ ಮಾಡದಂತೆ ಬಿಬಿಎಂಪಿ ಆಯುಕ್ತರಿಗೆ ಹಾಗೂ ಗುತ್ತಿಗೆದಾರರಿಗೆ ಸೂಚಿಸಿ ತಡೆಯಬೇಕು. ಮತ್ತೆ ವಿಲೇವಾರಿಗೆ ಯತ್ನಿಸಿದರೆ ಮುಂದಾದರೆ ಸ್ಥಳೀಯರು ಹಾಗೂ ಬಯಲು ಸೀಮೆಯ ಜಿಲ್ಲೆಯ ರೈತರು ಮತ್ತು ಸಾರ್ವಜನಿಕರು ತೀವ್ರ ಸ್ವರೂಪದ ಪ್ರತಿಭಟನೆ ಹಮ್ಮಿಕೊಳ್ಳ  ಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ನಿಯೋಗದಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಉಪಾಧ್ಯಕ್ಷರಾದ ಚಂದ್ರಪ್ಪ, ಲಕ್ಷ್ಮಣ, ಮಾಲೂರು ತಾಲೂಕು ಅಧ್ಯಕ್ಷ ಕೆ.ನರಸಿಂಹಯ್ಯ, ಮುನೇಗೌಡ, ಗೋಪಾಲಯ್ಯ ಕೆ.ಆರ್‌, ಶಿವಶಂಕರ್‌, ಮಂಜುನಾಥ್‌, ಬಿ.ಜಿ ಯಲ್ಲಪ್ಪ, ಮುನಿವೆಂಕಟಪ್ಪ, ನಾಗರಾಜ್‌, ವೆಂಕಟರಾಮಗೌಡ, ಗೋಪಿ, ಗೋಪಾಲ್‌, ನಾಗರಾಜ್‌, ವೆಂಕಟಾಚಲಪತಿ ಉಪಸ್ಥಿತರಿದ್ದರು.

ಟಾಪ್ ನ್ಯೂಸ್

ಬಂಡೀಪುರ: ನುರಿತ ಐಸಿಟಿ ಪದವೀಧರರು, ಅರಣ್ಯಾಧಿಕಾರಿಗಳಿಂದ ಹುಲಿ ಗಣತಿ

ಬಂಡೀಪುರ: ನುರಿತ ಐಸಿಟಿ ಪದವೀಧರರು, ಅರಣ್ಯಾಧಿಕಾರಿಗಳಿಂದ ಹುಲಿ ಗಣತಿ

ರಸ್ತೆ ಸೌಕರ್ಯವಿಲ್ಲದೆ ತೆಪ್ಪದಲ್ಲೇ ಮೃತದೇಹ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬ

ರಸ್ತೆ ಸೌಕರ್ಯವಿಲ್ಲದೆ ತೆಪ್ಪದಲ್ಲೇ ಮೃತದೇಹ ಸಾಗಿಸಿ ಅಂತ್ಯಸಂಸ್ಕಾರ ನೆರವೇರಿಸಿದ ಕುಟುಂಬ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹೆಸರುನಲ್ಲಿ ಮರ ಕಡಿತ : ಪರಸರವಾದಿಗಳ ಪ್ರತಿಭಟನೆ

ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಹೆಸರಿನಲ್ಲಿ ಮರ ಕಡಿತ : ಪರಸರವಾದಿಗಳ ಪ್ರತಿಭಟನೆ

ಸರ್ಕಾರಿ ಶಾಲೆ ವಿದ್ಯಾರ್ಥಿ…ಅಪ್ಪಟ ಹಳ್ಳಿ ಪ್ರತಿಭೆ ರಾಜ್ಯಕ್ಕೆ ಎರಡನೇ ರ್‍ಯಾಂಕ್‌

ಸರ್ಕಾರಿ ಶಾಲೆ ವಿದ್ಯಾರ್ಥಿ…ಅಪ್ಪಟ ಹಳ್ಳಿ ಪ್ರತಿಭೆ ರಾಜ್ಯಕ್ಕೆ ಎರಡನೇ ರ್‍ಯಾಂಕ್‌

ನಾಗರಹೊಳೆ ಉದ್ಯಾನದಲ್ಲಿ ಬೆಂಕಿ ನಿಯಂತ್ರಣಕ್ಕೆ ಫೈರ್‌ಲೈನ್ ನಿರ್ಮಾಣ

ನಾಗರಹೊಳೆ ಉದ್ಯಾನದಲ್ಲಿ ಬೆಂಕಿ ನಿಯಂತ್ರಣಕ್ಕೆ ಫೈರ್‌ಲೈನ್ ನಿರ್ಮಾಣ

ಚಿಕಿತ್ಸೆಗೆಂದು ಬಂದ ರೋಗಿಯಿಂದ ಲಂಚದ ಬೇಡಿಕೆಯಿಟ್ಟ ವೈದ್ಯ ,ಡಿಗ್ರೂಪ್ ನೌಕರ ಎಸಿಬಿ ಬಲೆಗೆ

ಚಿಕಿತ್ಸೆಗೆಂದು ಬಂದ ರೋಗಿಯಿಂದ ಲಂಚದ ಬೇಡಿಕೆಯಿಟ್ಟ ವೈದ್ಯ ,ಡಿಗ್ರೂಪ್ ನೌಕರ ಎಸಿಬಿ ಬಲೆಗೆ

1-dads

ಗಣರಾಜ್ಯೋತ್ಸವಕ್ಕೆ ಕರ್ನಾಟಕದ ಸ್ತಬ್ದಚಿತ್ರ ಆಯ್ಕೆ: ವಿಶೇಷತೆಗಳೇನು ನೋಡಿಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ವಿಶ್ವಕರ್ಮ ಸಮುದಾಯಕ್ಕೆ ಅನುದಾನ ಸೀಮಿತ: ಖಂಡನೆ

ವಿಶ್ವಕರ್ಮ ಸಮುದಾಯಕ್ಕೆ ಅನುದಾನ ಸೀಮಿತ: ಖಂಡನೆ

3 ಸಾವಿರಕ್ಕೂ ಅಧಿಕ ಮಂದಿಗೆ ಮನೆಯಲ್ಲೇ ಚಿಕಿತ್ಸೆ : ‌ ಮನೆಗಳಿಗೆ ಔಷಧಿ ವಿತರಿಸಲು ಸೂಚನೆ

3 ಸಾವಿರಕ್ಕೂ ಅಧಿಕ ಮಂದಿಗೆ ಮನೆಯಲ್ಲೇ ಚಿಕಿತ್ಸೆ : ‌ ಮನೆಗಳಿಗೆ ಔಷಧಿ ವಿತರಿಸಲು ಸೂಚನೆ

ಅತಿಥಿ ಉಪನ್ಯಾಸಕರ ಪರ ಅವೈಜ್ಞಾನಿಕ ಆದೇಶ

ಅತಿಥಿ ಉಪನ್ಯಾಸಕರ ಪರ ಅವೈಜ್ಞಾನಿಕ ಆದೇಶ

ಬಿತ್ತನೆ ಆಲೂಗಡ್ಡೆಯಲ್ಲಿ ಕಲಬೆರಕೆ: ಕ್ರಮಕ್ಕೆ ಆಗ್ರಹ

ಬಿತ್ತನೆ ಆಲೂಗಡ್ಡೆಯಲ್ಲಿ ಕಲಬೆರಕೆ: ಕ್ರಮಕ್ಕೆ ಆಗ್ರಹ

ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿ

ಸರ್ಕಾರಿ ಜಮೀನಿಗೆ ನಕಲಿ ದಾಖಲೆ ಸೃಷ್ಟಿ

MUST WATCH

udayavani youtube

ಮಧ್ವರಾಜ್ ಮನದಾಳದ ಮಾತು

udayavani youtube

ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ ಆರೋಪ ! ನ್ಯಾಯಾಲಯದ ಮೊರೆ ಸಲ್ಲು

udayavani youtube

ಅಮಿತ್ ಶಾರಿಂದ ಮನೆ ಮನೆ ಪ್ರಚಾರ

udayavani youtube

ಗಣರಾಜ್ಯೋತ್ಸವ paradeಗಾಗಿ ಭಾರತೀಯ ನೌಕಾಪಡೆ ಉತ್ಸಾಹದಿಂದ ತಯಾರಿ ನಡೆಸುತ್ತಿದೆ

udayavani youtube

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

ಹೊಸ ಸೇರ್ಪಡೆ

ಷಅದಗಹಜಹಬವಚಷಱ

ಶರಣರು ಜಾತಿ-ಮತಕ್ಕೆ ಸೀಮಿತರಲ್ಲ

ಅಕ್ರಮ ಅಕ್ಕಿ ಜಪ್ತಿ: ಓರ್ವನ ಬಂಧನ

ಅಕ್ರಮ ಅಕ್ಕಿ ಜಪ್ತಿ: ಓರ್ವನ ಬಂಧನ

್ಹಗಹ್ದಗದಅಸದ

ಚೌಡಯ್ಯ-ಸಿದ್ದ ಗಂಗಾ ಶ್ರೀಗೆ ನಮನ

ವಿರುಪಾಪುರ ಸ್ಮಶಾನದಲ್ಲಿ ವೀರಮಾಸ್ತಿಗಲ್ಲು ಪತ್ತೆ 

ವಿರುಪಾಪುರ ಸ್ಮಶಾನದಲ್ಲಿ ವೀರಮಾಸ್ತಿಗಲ್ಲು ಪತ್ತೆ 

ಕಾವಿ ತೊಟ್ಟವರೆಲ್ಲ ಸ್ವಾಮೀಜಿಗಳಲ್ಲ : ಶಾಂತಿ ನೆಲಸುವವರು ಸ್ವಾಮೀಜಿಗಳು : ಶ್ರೀಕಂಠಯ್ಯ

ಕಾವಿ ತೊಟ್ಟವರೆಲ್ಲ ಸ್ವಾಮೀಜಿಗಳಲ್ಲ : ಶಾಂತಿ ನೆಲಸುವವರು ಸ್ವಾಮೀಜಿಗಳು : ಶ್ರೀಕಂಠಯ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.