ಅದ್ಧೂರಿ ಆಚರಣೆಗೆ ನೀತಿ ಸಂಹಿತೆ ಅಡ್ಡಿ


Team Udayavani, Apr 4, 2019, 3:00 AM IST

adduri

ಕನಕಪುರ: ಪ್ರಸ್ತುತ ಲೋಕಸಭಾ ಚುನಾವಣೆ ನಡೆಯುತ್ತಿರುವುದರಿಂದ ಡಾ. ಬಾಬು ಜಗಜೀವನ ರಾಂ ಜಯಂತಿಯನ್ನು ಏ. 5 ರಂದು ತಾಲೂಕು ಕಚೇರಿಯಲ್ಲಿ ಸರಳವಾಗಿ ಆಚರಣೆ ಮಾಡಲಾಗುವುದು, ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿಯನ್ನು ತಾಪಂ ಸಭಾಂಗಣದಲ್ಲಿ ಏ.14 ರಂದು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಚರಣೆ ಮಾಡುವುದಾಗಿ ತಹಶೀಲ್ದಾರ್‌ ಕೆ.ಕುನಾಲ್‌ ತಿಳಿಸಿದರು.

ನಗರದ ತಾಲೂಕು ಕಚೇರಿಯಲ್ಲಿ ಜಗಜೀವನ ರಾಂ ಜಯಂತಿ ಮತ್ತು ಡಾ. ಬಿ.ಆರ್‌. ಅಂಬೇಡ್ಕರ್‌ ಜಯಂತಿ ಆಚರಣೆ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಸಂಘ ಸಂಸ್ಥೆಯ ಮುಖಂಡರು, ದಲಿತ ಮುಖಂಡರೊಂದಿಗೆ ಚರ್ಚೆ ನಡೆಸಿ ಮಾತನಾಡಿದರು.

ಈ ವೇಳೆ ದಲಿತ ಮುಖಂಡರು ಮಾತನಾಡಿ, ಡಾ.ಬಾಬು ಜಗಜೀವನ ರಾಂ ಜಯಂತಿ ಸಂದರ್ಭದಲ್ಲೇ ಚುನಾವಣೆಗಳು ಬಂದು ಮಾದರಿ ನೀತಿ ಸಂಹಿತೆಯ ನೆಪವೊಡ್ಡಿ ಜಯಂತಿಯನ್ನು ಸರಳವಾಗಿ ಆಚರಿಸಲಾಗುತ್ತದೆ. ಅಂಬೇಡ್ಕರ್‌ ಜಯಂತಿ ಸಂದರ್ಭದಲ್ಲೂ ಶಾಲಾ ಕಾಲೇಜುಗಳ ರಜೆ ಇರುತ್ತದೆ. ಚುನಾವಣೆಯ ಬಂದು ಅವರ ಜಯಂತಿಯನ್ನು ಅರ್ಥಗರ್ಭಿತವಾಗಿ ಎಲ್ಲರೂ ಸೇರಿ ಆಚರಣೆ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದರು.

ನೀತಿ ಸಂಹಿತೆ: ಚುನಾವಣಾ ನೀತಿ ಸಂಹಿತೆಗೂ ಜಗಜೀವನ ರಾಂ ಮತ್ತು ಅಂಬೇಡ್ಕರ್‌ ಜಯಂತಿ ಆಚರಣೆಗೂ ಸಂಬಂಧವಿಲ್ಲ. ನೀತಿ ಸಂಹಿತೆ ಇರುವಾಗ ಚುನಾಯಿತ ಜನಪ್ರತಿನಿ ಗಳು, ರಾಜಕೀಯ ಮುಖಂಡರು ವೇದಿಕೆಗೆ ಬರುವಂತಿಲ್ಲ. ಆದರೆ ಇಬ್ಬರು ನಾಯಕರ ಜಯಂತಿಯನ್ನು ಸರ್ಕಾರವು ಆಚರಣ ?ಮಾಡುತ್ತಿರುವುದರಿಂದ ಏನು ತೊಂದರೆ ಎಂದು ಪ್ರಶ್ನಿಸಿದರು.

ರಾಜಕೀಯ ವ್ಯಕ್ತಿಗಳನ್ನು ಹೊರತು ಪಡಿಸಿ ಸಂಘ ಸಂಸ್ಥೆಗಳು, ಇಲಾಖೆ ಅಧಿ ಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ಒಳಗೊಂಡಂತೆ ಜಯಂತಿ ಆಚರಣೆಯನ್ನು ಅಚ್ಚುಕಟ್ಟಾಗಿ ಆಚರಣೆ ಮಾಡಬೇಕೆಂದು ಒತ್ತಾಯಿಸಿದರು.

ಯಾರನ್ನು ಕೇಳುವುದು: ದಲಿತ ಮುಖಂಡರು ನೀವು ಇಂದು ಚುನಾವಣೆಗಾಗಿ ಬಂದಿದ್ದೀರಿ, ಚುನಾವಣೆ ಮುಗಿದ ಮೇಲೆ ಹೋಗುತ್ತೀರಿ, ನಾವು ಯಾರನ್ನು ಕೇಳುವುದೆಂದು ಪ್ರಶ್ನಿಸಿದರು. ನಾವು ಬದಲಾದರೂ ತಹಶೀಲ್ದಾರ್‌ ಯಾರಾದರೊಬ್ಬರು ಇರುತ್ತಾರೆ. ಸಭೆಯಲ್ಲಿ ನಡೆದ ಸಭಾ ನಡವಳಿಕೆಯನ್ನು, ಸಲಹೆ ಸೂಚನೆಗಳನ್ನು ದಾಖಲಿಸಲಾಗುತ್ತದೆ.

ಮುಂದೆ ಆಚರಣೆ ಮಾಡುವ ಬಗ್ಗೆ ಸಂಶಯ ಬೇಡವೆಂದು ತಿಳಿಸಿದರು. ಅಂತಿಮವಾಗಿ ಬಾಬು ಜಗಜೀವನ ರಾಂ ಜಯಂತಿಯನ್ನು ಏ. 5 ರಂದು ಸಾಂಕೇತಿಕವಾಗಿ ಆಚರಣೆ ಮಾಡಿ ಚುನಾವಣೆ ನಂತರದಲ್ಲಿ ಬಹಿರಂಗ ಸಾರ್ವಜನಿಕ ವೇದಿಕೆಯಲ್ಲಿ ಅದ್ಧೂರಿಯಾಗಿ ಆಚರಣೆ ಮಾಡುವ ನಿರ್ಣಯ ತೆಗೆದುಕೊಳ್ಳಲಾಯಿತು.

ಅಂಬೇಡ್ಕರ್‌ ಜಯಂತಿಯನ್ನು 14 ರಂದೇ ತಾಪಂ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮದೊಂದಿಗೆ ಮಾಡುವುದು. ಅಂದು ಅಂಬೇಡ್ಕರ್‌ ವಿಚಾರಧಾರೆಗಳನ್ನು ತಿಳಿಸಿಕೊಡಲು ಯಾರಾದರೂ ಉಪನ್ಯಾಸಕರನ್ನು ಕರೆಸಬೇಕೆಂದು ತೀರ್ಮಾನಿಸಲಾಯಿತು.

ನಗರಸಭೆ ಆಯುಕ್ತೆ ವಿ.ಕೆ.ರಮಾಮಣಿ, ಶಿರಸ್ತೇದಾರ್‌ ಕೆ.ಎಸ್‌.ಶಿವಾನಂದ, ಸಮಾಜ ಕಲ್ಯಾಣ ಇಲಾಖೆ ಅ ಕಾರಿ ರಾಜು, ದಲಿತ ಮುಖಂಡರಾದ ಶಿವಲಿಂಗಯ್ಯ, ಮಲ್ಲಿಕಾರ್ಜುನ್‌, ನೀಲಿ ರಮೇಶ್‌, ಗುರುಮೂರ್ತಿ, ನವೀನ್‌, ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ಸೇರಿದಂತೆ ಸಂಘ ಸಂಸ್ಥೆಯ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ತಮ್ಮ ಸಲಹೆ ಸೂಚನೆಗಳನ್ನು ನೀಡಿದರು.

ಟಾಪ್ ನ್ಯೂಸ್

Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು

Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು

5-kalburgi

PM Modi: ಕಲಬುರಗಿಗೆ ಇಂದು ಪ್ರಧಾನಿ ನರೇಂದ್ರ ಮೋದಿ

4-thekkatte

Crime; ಕ್ಯಾಸನಮಕ್ಕಿ: ಮನೆಗೆ ಬೆಂಕಿ ಹೆಚ್ಚಿ ವ್ಯಕ್ತಿ ಪರಾರಿ

3-madikeri-2

Madikeri: ಪ್ರೌಢ ಶಾಲಾ ವಿದ್ಯಾರ್ಥಿನಿಯ ಕೊಲೆ ಪ್ರಕರಣ; ಆರೋಪಿ ಪತ್ತೆಗೆ ತನಿಖೆ ಚುರುಕು

2-aranthodu

Missing Case: ನಾಪತ್ತೆಯಾಗಿದ್ದ ವಿದ್ಯಾರ್ಥಿನಿ ಸುಳ್ಯದ ಅರಂತೋಡಿನಲ್ಲಿ ಪತ್ತೆ

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್

ಭಾರತಕ್ಕೆ ರಾಜತಾಂತ್ರಿಕ ಗೆಲುವು: ಇಸ್ರೇಲಿ ಹಡಗಿನಿಂದ 5 ಭಾರತೀಯರನ್ನು ಬಿಡುಗಡೆ ಮಾಡಿದ ಇರಾನ್

Tragedy: ಪೈಪ್ ಲೈನ್ ಚೆಕ್ ಮಾಡುವ ವೇಳೆ ದುರಂತ: ನೀರಿನ ಟ್ಯಾಂಕ್ ಗೆ ಬಿದ್ದು ಮೂವರ ದುರ್ಮರಣ

Tragedy: ಪೈಪ್ ಲೈನ್ ತಪಾಸಣೆ ವೇಳೆ ದುರಂತ… ನೀರಿನ ಹೊಂಡಕ್ಕೆ ಬಿದ್ದು ಮೂವರ ದುರ್ಮರಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶಾಸಕ ಇಕ್ಬಾಲ್ ಹುಸೇನ್ ವಿಡಿಯೋ ವೈರಲ್ ಕೇಸ್: ಇಬ್ಬರ ಬಂಧನ

Ramanagara ಶಾಸಕ ಇಕ್ಬಾಲ್ ಹುಸೇನ್ ವಿಡಿಯೋ ವೈರಲ್ ಕೇಸ್: ಇಬ್ಬರ ಬಂಧನ

ಕನಕಪುರದಿಂದ ಬೆಂಗಳೂರಿಗೆ ಹೊರಟಿದ್ದ KSRTC ಬಸ್ ಪಲ್ಟಿ; ನಾಲ್ವರಿಗೆ ಗಾಯ

ಕನಕಪುರದಿಂದ ಬೆಂಗಳೂರಿಗೆ ಹೊರಟಿದ್ದ KSRTC ಬಸ್ ಪಲ್ಟಿ; ನಾಲ್ವರಿಗೆ ಗಾಯ

11

Politics: ಪ್ರಜ್ವಲ್‌ ರೇವಣ್ಣ ಪ್ರಕರಣಕ್ಕೆ ಡಿಕೆಶಿಯೇ ಮಾಸ್ಟರ್ ಮೈಂಡ್; ಸಿ.ಪಿ.ಯೋಗೇಶ್ವರ್

1-wqeqweqeqw

Prajwal Pen Drive: ಡಿಸಿಎಂ ವಿರುದ್ಧ ರಾಮನಗರದಲ್ಲಿ ಜೆಡಿಎಸ್-ಬಿಜೆಪಿ ಪ್ರತಿಭಟನೆ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

Tourist spot: ಪ್ರವಾಸಿಗರ ಡೆತ್‌ಸ್ಪಾಟ್‌ ಆಗಿರುವ ಸಂಗಮ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು

Panambur: ರಿಕ್ಷಾ ಚಾಲಕನ ಮೇಲೆ ಸ್ಥಳೀಯ ರಿಕ್ಷಾ ಚಾಲಕರಿಂದ ಹಲ್ಲೆ… ದೂರು ದಾಖಲು

5-kalburgi

PM Modi: ಕಲಬುರಗಿಗೆ ಇಂದು ಪ್ರಧಾನಿ ನರೇಂದ್ರ ಮೋದಿ

4-thekkatte

Crime; ಕ್ಯಾಸನಮಕ್ಕಿ: ಮನೆಗೆ ಬೆಂಕಿ ಹೆಚ್ಚಿ ವ್ಯಕ್ತಿ ಪರಾರಿ

ಲಾ ಸೇವ್ಯು ಬೇಕರಿ – ಸಂಸ್ಥೆಯಿಂದ ಬೀಡಿನಗುಡ್ಡೆಯಲ್ಲಿ ಮೇ 24-26: “ಆಹಾರ-ವ್ಯಾಪಾರ ಮೇಳ-2024′

ಲಾ ಸೇವ್ಯು ಬೇಕರಿ – ಸಂಸ್ಥೆಯಿಂದ ಬೀಡಿನಗುಡ್ಡೆಯಲ್ಲಿ ಮೇ 24-26: “ಆಹಾರ-ವ್ಯಾಪಾರ ಮೇಳ-2024′

3-madikeri-2

Madikeri: ಪ್ರೌಢ ಶಾಲಾ ವಿದ್ಯಾರ್ಥಿನಿಯ ಕೊಲೆ ಪ್ರಕರಣ; ಆರೋಪಿ ಪತ್ತೆಗೆ ತನಿಖೆ ಚುರುಕು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.