ಜಿಲ್ಲೆ ಹಾಟ್‌ಸ್ಪಾಟ್‌ಗೆ ಹೋಗದಂತೆ ಅಗತ್ಯ ಕ್ರಮ

ಹೊಸ ಕೊರೊನಾ ಪ್ರಕರಣಗಳು ಗೋಚರವಾಗದಂತೆ ಜಿಲ್ಲಾ ಡಳಿತದಿಂದ ಕ್ರಮ

Team Udayavani, Apr 18, 2020, 1:13 PM IST

ಜಿಲ್ಲೆ ಹಾಟ್‌ಸ್ಪಾಟ್‌ಗೆ ಹೋಗದಂತೆ ಅಗತ್ಯ ಕ್ರಮ

ಸಾಂದರ್ಭಿಕ ಚಿತ್ರ

ತುಮಕೂರು: ಇಡೀ ವಿಶ್ವವನ್ನೇ ಸಂಕಷ್ಟಕ್ಕೆ ಸಿಲುಕಿಸಿರುವ ಕೋವಿಡ್ -19 ಮಹಾಮಾರಿ ಎಲ್ಲಾ ಕಡೆ ವೇಗವಾಗಿ ಹರಡುತ್ತಿದೆ. ಆದರೆ ಕಲ್ಪತರು ನಾಡಿನಲ್ಲಿ ಡೆಡ್ಲಿ ವೈರಸ್‌ಗೆ ಪ್ರಾರಂಭದಲ್ಲಿ ಒಬ್ಬರು ಮೃತಪಟ್ಟು ಒಬ್ಬರಿಗೆ ಸೋಂಕು ತಗಲಿತು ಮುಂದೆ ತುಮಕೂರು ಕೋವಿಡ್ -19 ಹಾಟ್‌ಸ್ಪಾಟ್‌ಗೆ ಹೋಗದಂತೆ ಜಿಲ್ಲಾಡಳಿತ ಅಗತ್ಯ ಕ್ರಮ ಕೈಗೊಂಡಿದೆ.

ಕೊರೊನಾ ವ್ಯಾಪಕವಾಗಿ ಎಲ್ಲಾಕಡೆ ಹಬ್ಬು ತ್ತಿದೆ ಆರಂಭದಲ್ಲಿ ಜಿಲ್ಲೆಯಲ್ಲಿ ಒಬ್ಬರು ಮೃತ ಪಟ್ಟು ಒಬ್ಬರಲ್ಲಿ ರೋಗದ ಸೋಂಕು ಕಾಣಿಸಿಕೊಂಡಾಗ ಇಡೀ ಜಿಲ್ಲೆ ಆತಂಕ ಗೊಂಡಿತ್ತು. ನಂತರ ಜಿಲ್ಲಾಡಳಿತ ಕೈಗೊಂಡ ಹಲವು ಮುಂಜಾಗ್ರತಾ ಕ್ರಮದಿಂದ ಹೊಸ ಕೊರೊನಾ ಪ್ರಕರಣಗಳು ಗೋಚರ ಗೊಂಡಿಲ್ಲ. ಈಗ ಕೋವಿಡ್ -19 ಸೋಂಕಿತ ವ್ಯಕ್ತಿಯೂ ಗುಣಮುಖರಾಗಿರು ವುದು ಜಿಲ್ಲೆಯ ಜನರಲ್ಲಿ ನೆಮ್ಮದಿ ಮೂಡಿದೆ. ಜಿಲ್ಲೆಗೆ ವಿದೇಶದಿಂದ 480 ಜನ ಬಂದಿದ್ದರೂ ಕೋವಿಡ್‌-19ರ ಹರಡುವಿಕೆಯನ್ನು ನಿಯಂತ್ರಿಸಲು ಸಾಮಾಜಿಕ ಅಂತರ ಮುಖ್ಯ. ಸುರಕ್ಷತಾ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಜಿಲ್ಲಾ ಆರೋಗ್ಯ ಕಾರ್ಯಪಡೆ ಪ್ರತಿ ದಿನ ಸಭೆ ನಡೆಸಲು ಮಾಹಿತಿ ತಂತ್ರಜ್ಞಾನ ವನ್ನು ಸಮರ್ಥವಾಗಿ ಬಳಸಿಕೊಂಡು ವಿದೇಶದಿಂದ ಬಂದವರ ಮೇಲೆ ಮತ್ತು ದೆಹಲಿಯ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಮೇಲೆ ನಿಗಾವಹಿಸಿದರು.

ದೆಹಲಿಗೆ ಹೋಗಿ ಬಂದಿದ್ದ ವೃದ್ಧನಿಗೆ ಮೊದಲು ಸೋಂಕು ಕಂಡು ಬಂದು ಆತ ಮೃತಪಟ್ಟ, ಆ ನಂತರ 13 ವರ್ಷದ ಅವರ ಮಗನಿಗೆ ಸೋಂಕು ಗೋಚರವಾಗಿತ್ತು. ಬೆಂಗಳೂರಿನ ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಿ.84 ರೋಗಿಯೂ ಗುಣಮುಖರಾಗಿದ್ದಾರೆ. ಶಿರಾದಲ್ಲಿ ಯಾವುದೇ ಸೋಂಕು ಪ್ರಕರಣಗಳುನ ಕಂಡು ಬಂದಿಲ್ಲ. ಜಿಲ್ಲೆಯಲ್ಲಿ ಈ ವರೆಗೆ 556 ಜನರ ಗಂಟಲ ಸ್ರಾವ ಮತ್ತು ರಕ್ತ ಮಾದರಿ ತೆಗೆದು ಪರೀಕ್ಷಿಸ ಲಾಗಿ ಈ ವರೆಗೆ 384 ಪ್ರಕರಣಗಳು ನೆಗೆಟೀವ್‌ ಎಂದು ಬಂದಿದ್ದು ಎರಡು ಪ್ರಕರಣಗಳು ಪಾಸಿಟೀವ್‌ ಎಂದು ಬಂದಿದ್ದವು ಅವುಗಳಲ್ಲಿ ಒಬ್ಬರು ಮೃತಪಟ್ಟಿದ್ದರು ಇನೊಬ್ಬ ಸೋಂಕಿತ ಈಗ ಗುಣ ಮುಖರಾಗಿದ್ದಾರೆ ಜಿಲ್ಲೆಯಲ್ಲಿ ಈಗ ಯಾವುದೇ ಸೋಂಕು ಪ್ರಕರಣ ಇಲ್ಲ ಎಂದು ಡಿಎಚ್‌ಒ ಬಿ.ಆರ್‌.ಚಂದ್ರಿಕಾ ತಿಳಿಸಿದ್ದಾರೆ. ನಗರದಲ್ಲಿ ಮಹಾನಗರ ಪಾಲಿಕೆ ವತಿಯಿಂದ ಕೊರೊನಾ ವೈರಸ್‌ ಹಿನ್ನೆಲೆಯಲ್ಲಿ ನಗರದ ಪ್ರಮುಖ ರಸ್ತೆಗಳು ಬಡಾವಣೆಯಲ್ಲಿ ಕ್ರಿಮಿ ನಾಶಕ ಸಿಂಪಡಿಸಿ ನಗರವನ್ನು ಸ್ವಚ್ಛಗೊಳಿಸಿದ್ದಾರೆ.

ಜಿಲ್ಲೆಯಲ್ಲಿಯೂ ಮೇ 3ರ ವರೆಗೆ ಲಾಕ್‌ ಡೌನ್‌ ಮುಂದುವರೆಯಲಿದ್ದು, ಸಾರ್ವಜನಿಕರು ಈ ಲಾಕ್‌ಡೌನ್‌ ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಲಾಕ್‌ಡೌನ್‌ ಉಲ್ಲಂಘನೆ ಕಂಡು ಬಂದಲ್ಲಿ ಅವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡುವುದು. ಮೀತಿ ಮೀರಿದರೆ ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಲಾಗಿದೆ.
●ಡಾ.ಕೆ.ರಾಕೇಶ್‌ ಕುಮಾರ್‌, ಡೀಸಿ

ಜಿಲ್ಲೆಯಲ್ಲಿ 2 ಪಾಸಿಟಿವ್‌ ಕಂಡುಬಂದಿತ್ತು. ಆ ಪೈಕಿ ಒಬ್ಬರು ಮೃತಪಟ್ಟಿದ್ದು, ಮತ್ತೂಬ್ಬರು ಪಿ-84 ಗುಣಮುಖರಾಗಿದ್ದಾರೆ. ಜಿಲ್ಲೆಗೆ ಬಂದಿರುವ 480 ಮಂದಿ
ಯನ್ನು ತೀವ್ರ ನಿಗಾವಣೆಯಲ್ಲಿಡಲಾಗಿದ್ದು, ಈ ಪೈಕಿ 49 ಮಂದಿಯನ್ನು ಹೋಂ ಕ್ವಾರೆಂಟೈನ್‌ನಲ್ಲಿ ಇರಿಸಲಾಗಿದೆ. ಅವರು ಯಾವುದೇ ಕಾರಣಕ್ಕೂ ಮನೆಯಿಂದ ಹೊರ ಬರಬಾರದೆಂದು ಸೂಚಿಸಲಾಗಿದೆ.
●ಡಾ.ಬಿ.ಆರ್‌.ಚಂದ್ರಿಕಾ, ಡಿಎಚ್‌ಒ

ಟಾಪ್ ನ್ಯೂಸ್

1-weeqwe

Chhattisgarh; ಪಿಕಪ್ ವಾಹನ ಕಂದಕಕ್ಕೆ ಪಲ್ಟಿಯಾಗಿ 18 ಮಂದಿ ದಾರುಣ ಅಂತ್ಯ

Road Mishap ಮಂಗಳೂರು: ಕಾರು ಢಿಕ್ಕಿ; ಬೈಕ್ ಸವಾರ ಸಾವು

Road Mishap ಮಂಗಳೂರು: ಕಾರು ಢಿಕ್ಕಿ; ಬೈಕ್ ಸವಾರ ಸಾವು

Four IS terrorists arrested at Ahmedabad airport

Gujarat ATS; ಅಹಮದಾಬಾದ್ ಏರ್ಪೋರ್ಟ್ ನಲ್ಲಿ ನಾಲ್ವರು ಉಗ್ರರನ್ನು ಬಂಧಿಸಿದ ಪೊಲೀಸರು

HD Revanna granted bail in domestic worker abuse case

HD Revanna; ಮನೆ ಕೆಲಸದಾಕೆಗೆ ದೌರ್ಜನ್ಯ ಪ್ರಕರಣದಲ್ಲಿ ರೇವಣ್ಣಗೆ ಜಾಮೀನು ಮಂಜೂರು

8-uv-fusion

Smile: ನಗುವೇ  ನೆಮ್ಮದಿಗೆ ಸ್ಫೂರ್ತಿ, ಗೆಲುವಿನ ಶಕ್ತಿ

ರಾಮಲಿಂಗಾರೆಡ್ಡಿ

Chitradurga; ಸರ್ಕಾರಕ್ಕೆ, ಪಕ್ಷಕ್ಕೆ, ಪೆನ್ ಡ್ರೈವ್ ಗೆ ಯಾವ ಸಂಬಂಧವಿಲ್ಲ:ರಾಮಲಿಂಗಾರೆಡ್ಡಿ

7-uv-fusion

Cleanliness: ಪ್ರವಾಸಿ ತಾಣ ನಮ್ಮ ಆಸ್ತಿ: ಸ್ವಚ್ಛವಾಗಿರಿಸೋಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Minister Parameshwara ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿಲ್ಲ

Minister Parameshwara ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿಲ್ಲ

1-wewqewq

Kunigal: ಗ್ಯಾಸ್ ಸಿಲಿಂಡರ್ ಸ್ಟವ್ ಸ್ಪೋಟ :6 ಮಂದಿಗೆ ತೀವ್ರ ಗಾಯ

1-qwewqewqe

Governor ಸಹಿ ನಕಲಿ ; ಕೋಟ್ಯಂತರ ರೂ. ವಂಚನೆ: ಕೊರಟಗೆರೆಯ ಜುಬೇರ್ ಅರೆಸ್ಟ್

1——-qweweqw

Dr.G. Parameshwara ಹೆಸರು ದುರ್ಬಳಕೆ: ಕಾಂಗ್ರೆಸ್ ನಿಂದ ಮೊಹಮ್ಮದ್ ಜುಬೇರ್ ಉಚ್ಛಾಟನೆ

Kunigal: ಪ್ರತ್ಯೇಕ ಅಪಘಾತ; ಇಬ್ಬರು ಸಾವು

Kunigal: ಪ್ರತ್ಯೇಕ ಅಪಘಾತ; ಇಬ್ಬರು ಸಾವು

MUST WATCH

udayavani youtube

ಬಾವಿಗೆ ಬಿದ್ದು ಒದ್ದಾಡುತ್ತಿದ್ದ ರಾಷ್ಟ್ರಪಕ್ಷಿಯ ರಕ್ಷಣೆ

udayavani youtube

ಮಡಿಕೇರಿಯಲ್ಲೊಂದು ಪಕ್ಕಾ ಉಡುಪಿ ಶೈಲಿಯ ಉಪಹಾರ ಮಂದಿರ

udayavani youtube

ಬಭ್ರುವಾಹನ ಜನ್ಮಸ್ಥಳ ಅರ್ಜುನ ಪ್ರತಿಷ್ಠಾಪಿಸಿದ ಆಂಜನೇಯ ಸ್ವಾಮಿ ದೇವಸ್ಥಾನ

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

ಹೊಸ ಸೇರ್ಪಡೆ

1-weeqwe

Chhattisgarh; ಪಿಕಪ್ ವಾಹನ ಕಂದಕಕ್ಕೆ ಪಲ್ಟಿಯಾಗಿ 18 ಮಂದಿ ದಾರುಣ ಅಂತ್ಯ

Road Mishap ಮಂಗಳೂರು: ಕಾರು ಢಿಕ್ಕಿ; ಬೈಕ್ ಸವಾರ ಸಾವು

Road Mishap ಮಂಗಳೂರು: ಕಾರು ಢಿಕ್ಕಿ; ಬೈಕ್ ಸವಾರ ಸಾವು

sambhavami yuge yuge kannada movie

Kannada Cinema; ರಿಲೀಸ್‌ ಅಖಾಡಕ್ಕೆ ಸಂಭವಾಮಿ ಯುಗೇ ಯುಗೇ..

Four IS terrorists arrested at Ahmedabad airport

Gujarat ATS; ಅಹಮದಾಬಾದ್ ಏರ್ಪೋರ್ಟ್ ನಲ್ಲಿ ನಾಲ್ವರು ಉಗ್ರರನ್ನು ಬಂಧಿಸಿದ ಪೊಲೀಸರು

HD Revanna granted bail in domestic worker abuse case

HD Revanna; ಮನೆ ಕೆಲಸದಾಕೆಗೆ ದೌರ್ಜನ್ಯ ಪ್ರಕರಣದಲ್ಲಿ ರೇವಣ್ಣಗೆ ಜಾಮೀನು ಮಂಜೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.