ಉದ್ಯಾವರದ ಅಯ್ಯಪ್ಪ ಮಾಲಾಧಾರಿ ಶಬರಿಮಲೆಯಲ್ಲಿ ಹೃದಯಾಘಾತದಿಂದ ಸಾವು
Team Udayavani, Jan 16, 2022, 5:49 PM IST
ಕಟಪಾಡಿ: ಉಡುಪಿ ಜಿಲ್ಲೆ ಉದ್ಯಾವರದ ಅಯ್ಯಪ್ಪ ಸ್ವಾಮಿ ಮಂದಿರದ ಸದಸ್ಯ ಅಯ್ಯಪ್ಪ ಮಾಲಾಧಾರಿ ಸುರೇಶ್ ಬಂಗೇರ ಅವರು ಶಬರಿಮಲೆ ಯಾತ್ರೆಯ ವೇಳೆ ಹೃದಯಾಘಾತದಿಂದ ಜ.16ರಂದು ಅಸುನೀಗಿದ್ದಾರೆ.
ಜ.14ರಂದು ಉದ್ಯಾವರದ ಮಂದಿರದಲ್ಲಿ ಪೂಜೆಯನ್ನು ಮುಗಿಸಿ ಸುಮಾರು 14 ಜನ ಅಯ್ಯಪ್ಪ ಮಾಲಾಧಾರಿಗಳ ತಂಡವು ಶಬರಿಮಲೆ ಯಾತ್ರೆಯನ್ನು ಕೈಗೊಂಡಿತ್ತು. ಸುರೇಶ್ ಬಂಗೇರ ಅವರು ಸುಮಾರು 28 ಬಾರಿ ಶಬರಿಮಲೆ ಯಾತ್ರೆಯನ್ನು ಯಶಸ್ವಿಯಾಗಿ ಪೂರೈಸಿದ್ದರು. ಈ ಬಾರಿಯ ಯಾತ್ರೆಯ ವೇಳೆ ಶಬರಿಮಲೆಯ ಗಣೇಶ ಬೆಟ್ಟ ಹತ್ತುವ ವೇಳೆ ಹೃದಯಾಘಾತ ಕ್ಕೊಳಗಾಗಿದ್ದು, ಕೂಡಲೇ ಪಂಪೆಯ ಚಿಕಿತ್ಸಾ ಕೇಂದ್ರಕ್ಕೆ ಕೊಂಡೊಯ್ಯ ಲಾಗಿದ್ದು, ಬಳಿಕ ಅಲ್ಲಿಂದ ಪಲ್ಲತ್ತಿಟ್ಟು ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿರುತ್ತದೆ. ಜ.17ರಂದು ಪಾರ್ಥಿವ ಶರೀರ ಉದ್ಯಾವರಕ್ಕೆ ತಲುಪುವ ಸಾಧ್ಯತೆ ಇದೆ ಎಂದು ಜೊತೆಗಿದ್ದವರು ಮಾಹಿತಿ ನೀಡಿದ್ದಾರೆ.
ಉದ್ಯಾವರ ಸಂಪಿಗೆನಗರದ ನಿವಾಸಿಯಾಗಿರುವ ಅಯ್ಯಪ್ಪ ವೃತಧಾರಿ ಸುರೇಶ್ ಬಂಗೇರ ಅವರು ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಜನರ ಸಮಸ್ಯೆಗೆ ತತ್ಕ್ಷಣ ಸ್ಪಂದನೆ: ಸ್ಥಳೀಯ ಅಧಿಕಾರಿಗಳಿಗೆ ಕೂರ್ಮಾರಾವ್ ಸೂಚನೆ
ಉದಯವಾಣಿ-ಎಂಐಟಿ ಮಳೆ ನೀರು ಕೊಯ್ಲು ಕಾರ್ಯಾಗಾರ: ಸಮಸ್ಯೆಗೆ ಮೊದಲೇ ಪರಿಹಾರ: ಡಾ| ರಾಣ ಕರೆ
ಮದುವೆ ಹಾಲ್ನಲ್ಲಿ ಕಣ್ಮರೆಯಾದ ಚಿನ್ನದ ಸರ ದೈವ ಸನ್ನಿಧಿಯಲ್ಲಿ ಪತ್ತೆ!
ಅಗರಬತ್ತಿ ಉದ್ಯಮಕ್ಕೆ ಅಗತ್ಯದ ವಿನಾಯಿತಿ: ಶೋಭಾ ಕರಂದ್ಲಾಜೆ
ಪಿಯುಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ: ಉಜ್ವಲ ಭವಿಷ್ಯಕ್ಕಾಗಿ T.A.T