Udupi; ತೃತೀಯ “ಅಷ್ಟಪವಿತ್ರ ನಾಗಮಂಡಲೋತ್ಸವ’ಕ್ಕೆ ಸಜ್ಜು

ಉಡುಪಿ ಕಿದಿಯೂರು ಹೊಟೇಲ್ಸ್‌ನ ಶ್ರೀ ನಾಗ ಸಾನ್ನಿಧ್ಯ

Team Udayavani, Jan 19, 2024, 11:52 PM IST

udupiUdupi; ತೃತೀಯ “ಅಷ್ಟಪವಿತ್ರ ನಾಗಮಂಡಲೋತ್ಸವ’ಕ್ಕೆ ಸಜ್ಜು

ಉಡುಪಿ: ನಗರದ ಸಿಟಿ ಬಸ್‌ನಿಲ್ದಾಣ ಬಳಿ ಕಳೆದ 37 ವರ್ಷಗಳಿಂದ ಗ್ರಾಹಕರ ಮೆಚ್ಚುಗೆಗೆ ಪಾತ್ರವಾದ ಭುವನೇಂದ್ರ ಕಿದಿಯೂರು ಅವರ ಮಾಲಕತ್ವದ ಕಿದಿಯೂರು ಹೊಟೇಲ್ಸ್‌ ಪ್ರೈ.ಲಿ.ನ ಕಾರಣಿಕ ಶ್ರೀ ನಾಗ ಸಾನ್ನಿಧ್ಯದಲ್ಲಿ ಈಗಾಗಲೇ ಎರಡು ಬಾರಿ ಅಷ್ಟಪವಿತ್ರ ನಾಗಮಂಡಲೋತ್ಸವ ನೆರವೇರಿದ್ದು, ತೃತೀಯ ಬಾರಿಗೆ ಜ. 26ರಿಂದ 31ರ ತನಕ ಅಷ್ಟಪವಿತ್ರ ನಾಗಮಂಡಲೋತ್ಸವ ಸಂಪನ್ನಗೊಳ್ಳಲಿದೆ.

ಭುವನೇಂದ್ರ ಕಿದಿಯೂರು ಅವರು ಶಿಕ್ಷಣ ಮುಗಿಸಿ ನೌಕರಿಗಾಗಿ ಮಸ್ಕತ್‌ಗೆ ತೆರಳಿ ಕೆಲವು ವರ್ಷಗಳ ಬಳಿಕ ತಮ್ಮ ಹುಟ್ಟೂರಾದ ಉಡುಪಿಗೆ 1986ರಲ್ಲಿ ಮರಳಿ ಬಂದು ಸ್ವಂತ ವ್ಯಾಪಾರೋದ್ಯಮ ಮಾಡಬೇಕೆಂದು ತೀರ್ಮಾನಿಸಿದರು. ಜೀವನದಲ್ಲಿ ಪ್ರಗತಿ ಸಾಧಿಸುವ ಮತ್ತು ನಿರುದ್ಯೋಗಿಗಳಿಗೆ ಉದ್ಯೋಗ ನೀಡಬೇಕೆನ್ನುವ ಇಚ್ಛೆಯಿಂದ ಉಡುಪಿಯಲ್ಲಿ ಬೋರ್ಡಿಂಗ್‌ ಆ್ಯಂಡ್‌ ಲಾಡಿjಂಗ್‌, ಹೊಟೇಲ್‌ ಪ್ರಾರಂಭಿಸುವ ಇರಾದೆಯಿಂದ ಜಾಗ ಅರಸಲು ಹೊರಟಾಗ ಅವರ ಕಣ್ಣಿಗೆ ಬಿದ್ದಿರುವುದು ಈಗಿನ ನಾಗ ಸಾನ್ನಿಧ್ಯವಿರುವ ಜಾಗ.

1987ರಲ್ಲಿ ಜಾಗ ಖರೀದಿಸಿ ಸ್ಥಳದಲ್ಲಿದ್ದ ನಾಗ ಸಾನ್ನಿಧ್ಯವನ್ನು ಜೀರ್ಣೋದ್ಧಾರ ಮಾಡಿ ಪುನಃಪ್ರತಿಷ್ಠಾಪನೆ ನಡೆಸಿದರು. 11 ತಿಂಗಳಲ್ಲಿ 5 ಮಹಡಿಯ ಕಟ್ಟಡ ನಿರ್ಮಾಣಗೊಂಡಿತು. ಅಂದಿನಿಂದ ಹಿಂದಿರುಗಿ ನೋಡದ ಭುವನೇಂದ್ರರು ಉದ್ಯಮದಲ್ಲಿ ಅಭಿವೃದ್ಧಿ ಸಾಧಿಸುತ್ತ ಯಶಸ್ಸಿನೆಡೆಗೆ ಸಾಗಿದರು. ಉದ್ಯಮ ಆರಂಭಗೊಂಡು ದಶಮಾನೋತ್ಸವ ಪ್ರಯುಕ್ತ ಗುರುಗಳಾದ ಜೋತಿಷ ಕಬಿಯಾಡಿ ಶ್ರೀನಿವಾಸ ಆಚಾರ್ಯ, ಜೋತಿಷ ವಿ| ಕಬಿಯಾಡಿ ಜಯರಾಮ ಆಚಾರ್ಯರ ಮಾರ್ಗದರ್ಶನದಿಂದ 1997ರಲ್ಲಿ ಪವಿತ್ರಾಷ್ಟಕ ನಾಗಮಂಡಲೋತ್ಸವ ನಡೆಸಿದರು. 50 ಸಾವಿರಕ್ಕೂ ಹೆಚ್ಚು ಭಕ್ತರು ಅನ್ನಪ್ರಸಾದ ಸ್ವೀಕರಿಸಿದ್ದರು.

ದ್ವಿತೀಯ ನಾಗಮಂಡಲೋತ್ಸವವು ಕಬಿಯಾಡಿ ಜಯರಾಮ ಆಚಾರ್ಯರ ಮಾರ್ಗದರ್ಶನದಲ್ಲಿ ಸಾನ್ನಿಧ್ಯದ ಬ್ರಹ್ಮಕಲಶೋತ್ಸವದೊಂದಿಗೆ 2012ರ ಫೆ. 6ರಿಂದ 8ರ ತನಕ ನಡೆದಿತ್ತು. 70 ಸಾವಿರ ಭಕ್ತರು ಅನ್ನಪ್ರಸಾದ ಸ್ವೀಕರಿಸಿದ್ದರು.

ಇದೀಗ ತೃತೀಯ ಬಾರಿಗೆ ಶ್ರೀ ನಾಗದೇವರಿಗೆ ನೂತನವಾಗಿ ನಿರ್ಮಿಸಲಾದ ಭವ್ಯ ರಜತ ಮಂಟಪ, ರಜತ ಕವಚಗಳ ಮತ್ತು ಸ್ವರ್ಣ ಲೇಪಿತ ರಜತ ಪ್ರಭಾವಳಿಯಲ್ಲಿ ರಜತ ಬಲಿಮೂರ್ತಿಯ ಸಮರ್ಪಣೆ
ಯೊಂದಿಗೆ “ಅಷ್ಟಪವಿತ್ರ ನಾಗಮಂಡ ಲೋತ್ಸವ’ವು ಕಬಿಯಾಡಿ ಜಯರಾಮ ಆಚಾರ್ಯರ ಮಾರ್ಗದರ್ಶನದಲ್ಲಿ ಜ. 31ರಂದು ಜರಗಲಿದೆ.

ನಾಗಾನುಗ್ರಹ ಪ್ರಾಪ್ತಿ
ನಾಗದೇವರ ಅನುಗ್ರಹದಿಂದ ಉದ್ಯಮ ಯಶಸ್ವಿಯಾಗಿ ಸಾಗುತ್ತಿದೆ. ಈ ಸ್ಥಳದಲ್ಲಿ ನಡೆಯುವ ಎಲ್ಲ ಉದ್ಯಮಗಳ ಮೂಲಕ ಸಾವಿರಾರು ಮಂದಿಗೆ ಉದ್ಯೋಗ ನೀಡಿರುವ ಆತ್ಮತೃಪ್ತಿಯೊಂದಿಗೆ ಶ್ರೀ ನಾಗದೇವರ ಸಂಪೂರ್ಣ ಕೃಪಾಕಟಾಕ್ಷಕ್ಕೆ ಪಾತ್ರರಾಗಿದ್ದೇವೆ ಎನ್ನುವ ಕೃತಜ್ಞತಾಭಾವವಿದೆ. ನಾಗಮಂಡಲೋತ್ಸವದಲ್ಲಿ ಭಕ್ತರಿಗೆ ದೇವರ ಅನುಗ್ರಹ ದೊರೆತು ಲೋಕ ಕಲ್ಯಾಣವಾಗಲಿ ಎಂದು ಕಿದಿಯೂರು ಹೊಟೇಲ್ಸ್‌ನ ಎಂಡಿ ಭುವನೇಂದ್ರ ಕಿದಿಯೂರು ಅವರು ತಿಳಿಸಿದ್ದಾರೆ.

ಟಾಪ್ ನ್ಯೂಸ್

1-sadsdad

Delhi ನೀರಿಗಾಗಿ ಕೋಲಾಹಲ: ಮಡಕೆಗಳಿಂದಲೇ ಜಲಮಂಡಳಿ ಕಚೇರಿ ಧ್ವಂಸ

police crime

Thane; ವಧೆಗಾಗಿ ತಂದ ಮೇಕೆಯ ಮೇಲೆ ದೇವರ ಹೆಸರು: ಆಕ್ರೋಶ

ಏಳನೇ ವೇತನ ಆಯೋಗ ಜಾರಿ ಮಾಡದಿದ್ರೆ ಹೋರಾಟ: ಸಿ.ಎಸ್.ಷಡಾಕ್ಷರಿ

June ಅಂತ್ಯದೊಳಗೆ 7ನೇ ವೇತನ ಆಯೋಗ ಜಾರಿ ಮಾಡದಿದ್ರೆ ಹೋರಾಟ: ಸಿ.ಎಸ್.ಷಡಾಕ್ಷರಿ

Siddaramaiah ಎಲ್ಲ ಜಾತಿಯವರಿಗೆ ಗ್ಯಾರಂಟಿ ಯೋಜನೆ ನೀಡಿದ್ದೇವೆ

Siddaramaiah ಎಲ್ಲ ಜಾತಿಯವರಿಗೆ ಗ್ಯಾರಂಟಿ ಯೋಜನೆ ನೀಡಿದ್ದೇವೆ

Amit Shah

Jammu ಪ್ರದೇಶ ಪ್ರಾಬಲ್ಯ ಶೂನ್ಯ-ಉಗ್ರ ಯೋಜನೆ ಜಾರಿಗೆ ತರಲು ಶಾ ಆದೇಶ

1-asasasa

Darshan; ರೇಣುಕಾಸ್ವಾಮಿ ಕೇಸ್: ಪ್ರತಿಕ್ರಿಯೆ ನೀಡಿದ ಕಿಚ್ಚ ಸುದೀಪ್

15

Road mishap: ಕುಂಬ್ರ ಸಮೀಪದ ಶೇಖಮಲೆ ಬಳಿ ಕಾರುಗಳ ನಡುವೆ ಢಿಕ್ಕಿ; ಇಬ್ಬರು ಸಾವು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

udupi-1

Udupi; ಆದರ್ಶ ಆಸ್ಪತ್ರೆಯ ಹಿರಿಯ ವೈದ್ಯ ಡಾ.ರಾಜಾ ನಿಧನ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

Udupi: ಎಸೆಸೆಲ್ಸಿ ಫ‌ಲಿತಾಂಶ ಶ್ರೇಷ್ಠತೆಗೆ ವಿನೂತನ ಪ್ರಯೋಗ

ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ

ಕಂಬಳಕ್ಕೆ ಸರಕಾರದಿಂದ ಸಿಗದ ಅನುದಾನ:ಇಂದು ತುರ್ತು ಸಭೆ

Udupi ನೇಜಾರು ಕೊಲೆ ಪ್ರಕರಣ ತನಿಖೆ ಮತ್ತಷ್ಟು ವಿಳಂಬ?

Udupi ನೇಜಾರು ಕೊಲೆ ಪ್ರಕರಣ ತನಿಖೆ ಮತ್ತಷ್ಟು ವಿಳಂಬ?

Udupi ಬೈಕ್‌-ಸ್ಕೂಟರ್‌ ಢಿಕ್ಕಿ; ಗಾಯ

Udupi ಬೈಕ್‌-ಸ್ಕೂಟರ್‌ ಢಿಕ್ಕಿ; ಗಾಯ

MUST WATCH

udayavani youtube

ಕೆ‌ಎಸ್‌ಆರ್‌ಟಿಸಿ‌ ಬಸ್- ಬೈಕ್ ಮುಖಾಮುಖಿ ಢಿಕ್ಕಿ ; ಸವಾರ ಮೃತ್ಯು

udayavani youtube

ಇಡ್ಲಿ, ವಡೆ, ಚಟ್ನಿ ಗೆ ತುಂಬಾ ಫೇಮಸ್ ಈ ಹೋಟೆಲ್

udayavani youtube

ಕಾಪು ಸರ್ವೀಸ್ ರಸ್ತೆಯಲ್ಲಿ ರಿಕ್ಷಾ ಚಾಲಕ ಮತ್ತು ಬೈಕ್ ಸವಾರನ ನಡುವೆ ಹೊಡೆದಾಟ

udayavani youtube

ದರ್ಶನ್ ಗ್ಯಾಂಗ್ ಕ್ರೌರ್ಯ ಹೇಗಿತ್ತು ಗೊತ್ತಾ..? ವೈರಲ್ ಆಡಿಯೋ ಇಲ್ಲಿದೆ

udayavani youtube

Udupi: ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿ

ಹೊಸ ಸೇರ್ಪಡೆ

1-sadsdad

Delhi ನೀರಿಗಾಗಿ ಕೋಲಾಹಲ: ಮಡಕೆಗಳಿಂದಲೇ ಜಲಮಂಡಳಿ ಕಚೇರಿ ಧ್ವಂಸ

police crime

Thane; ವಧೆಗಾಗಿ ತಂದ ಮೇಕೆಯ ಮೇಲೆ ದೇವರ ಹೆಸರು: ಆಕ್ರೋಶ

ಏಳನೇ ವೇತನ ಆಯೋಗ ಜಾರಿ ಮಾಡದಿದ್ರೆ ಹೋರಾಟ: ಸಿ.ಎಸ್.ಷಡಾಕ್ಷರಿ

June ಅಂತ್ಯದೊಳಗೆ 7ನೇ ವೇತನ ಆಯೋಗ ಜಾರಿ ಮಾಡದಿದ್ರೆ ಹೋರಾಟ: ಸಿ.ಎಸ್.ಷಡಾಕ್ಷರಿ

Siddaramaiah ಎಲ್ಲ ಜಾತಿಯವರಿಗೆ ಗ್ಯಾರಂಟಿ ಯೋಜನೆ ನೀಡಿದ್ದೇವೆ

Siddaramaiah ಎಲ್ಲ ಜಾತಿಯವರಿಗೆ ಗ್ಯಾರಂಟಿ ಯೋಜನೆ ನೀಡಿದ್ದೇವೆ

Amit Shah

Jammu ಪ್ರದೇಶ ಪ್ರಾಬಲ್ಯ ಶೂನ್ಯ-ಉಗ್ರ ಯೋಜನೆ ಜಾರಿಗೆ ತರಲು ಶಾ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.