ಖಾದ್ಯ ವೈವಿಧ್ಯ; ಅನನಾಸ್‌ ಬರ್ಫಿ

Team Udayavani, Apr 29, 2019, 10:09 AM IST

ಊಟದ ಜತೆಗೊಂದು  ಸೈಡ್‌ ಡಿಶ್‌,ಬಳಿಕ ಒಂದು ಸಿಹಿ ಬೇಕೇ ಬೇಕು. ಆಗಲೇ ಊಟದ ಸವಿ ಹೆಚ್ಚಾ ಗೋದು ಎನ್ನುವ ಮಾತಿದೆ. ಅದಕ್ಕಾಗಿ ಇಲ್ಲಿದೆ ವಿಶೇಷ ಸಿಹಿ ಮತ್ತು ಖಾರ ಮಾಡುವ ವಿಧಗಳು.

ಪುದೀನಾ, ಹೀರೆಕಾಯಿ ಸಿಪ್ಪೆ ಚಟ್ನಿ
ಬೇಕಾಗುವ ಸಾಮಗ್ರಿಗಳು
· ಪುದೀನಾ ಎಲೆ
· ಹೀರೇಕಾಯಿ ಸಿಪ್ಪೆ
· ಕಡಲೆಬೇಳೆ
· ಒಣ ಮೆಣಸಿನಕಾಯಿ
· ಹುಣಸೆಹಣ್ಣು
· ರುಚಿಗೆ ತಕ್ಕಷ್ಟು ಉಪ್ಪು
· ಇಂಗು

ಮಾಡುವ ವಿಧಾನ
ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ ಬಿಸಿ ಮಾಡಿ, ಒಂದು ಚಮಚ ಕಡಲೆಬೇಳೆ, ನಾಲ್ಕೈದು ಒಣ ಮೆಣಸು, ಸಣ್ಣ ಗಾತ್ರದ ಹುಣಸೆ ಹಾಕಿ, ಹೊಂಬಣ್ಣ ಬರುವವರೆಗೆ ಚೆನ್ನಾಗಿ ಬಾಡಿಸಿ. ಅನಂತರ ಎಲ್ಲವನ್ನೂ ಒಂದು ತಟ್ಟೆಗೆ ವರ್ಗಾಯಿಸಿ, ಆರಲು ಬಿಡಿ. ಬಿಸಿಯಿರುವ ಬಾಣಲೆಯಲ್ಲಿ ಎಣ್ಣೆ ಹಾಕದೆ ಪುದೀನಾ ಮತ್ತು ಹೀರೆಕಾಯಿ ಸಿಪ್ಪೆಗಳನ್ನು ಹುರಿದುಕೊಳ್ಳಿ. ತಟ್ಟೆಯಲ್ಲಿತಣ್ಣಗಾದ ಬೇಳೆ ಮತ್ತು ಇತರ ಪದಾರ್ಥಗಳೊಂದಿಗೆ ಹುರಿದ ಪುದೀನಾ ಸೊಪ್ಪು, ಹೀರೇಕಾಯಿ ಸಿಪ್ಪೆ, ಕಲ್ಲುಪ್ಪು ಸೇರಿಸಿ ಅರೆದರೆ ಚಟ್ನಿ ಸಿದ್ಧ. ಇದಕ್ಕೆ ಸಾಸಿವೆ ಒಗ್ಗರಣೆ ಕೊಟ್ಟರೆ ರುಚಿ ಹೆಚ್ಚುತ್ತದೆ.

ಅನನಾಸ್‌ ಬರ್ಫಿ 
ಬೇಕಾಗುವ ಸಾಮಗ್ರಿಗಳು
· ಅನಾನಸ್‌ ಹೋಳು – 5
· ತೆಂಗಿನ ತುರಿ- 2 ಕಪ್‌
· ತುಪ್ಪ- 2 ಚಮಚ
· ಸಕ್ಕರೆ- 1 ಕಪ್‌
· ಏಲಕ್ಕಿ ಪುಡಿ- ಅರ್ಧ ಚಮಚ

ಮಾಡುವ ವಿಧಾನ
ದಪ್ಪ ತಳದ ಪಾತ್ರೆಗೆ ತುಪ್ಪ ಹಾಗೂ ತೆಂಗಿನತುರಿ ಹಾಕಿ ಸಣ್ಣ ಉರಿಯಲ್ಲಿ ಹುರಿಯಿರಿ. ಅನಾನಸ್‌ ಹೋಳುಗಳನ್ನು ಮಿಕ್ಸಿಯಲ್ಲಿ ರುಬ್ಬಿಕೊಂಡು, ಹುರಿದ ತೆಂಗಿನತುರಿಗೆ ಹಾಕಿ. ಇದಕ್ಕೆ ಸಕ್ಕರೆ, ಏಲಕ್ಕಿ ಪುಡಿ ಬೆರೆಸಿ, ಈ ಮಿಶ್ರಣವನ್ನು ಕರಗುವವರೆಗೆ ಕುದಿಸಿ. ಗಟ್ಟಿಯಾಗುವವರೆಗೆ ಕುದಿಸಿದ ಅನಂತರ ತುಪ್ಪ ಹಾಕಿ ತಳ ಹತ್ತದಂತೆ ಕೈಯಾಡಿಸಿ. ಅದನ್ನು ತುಪ್ಪ ಸವರಿದ ತಟ್ಟೆಗೆ ಹಾಕಿ, ತಣ್ಣಗಾದ ಅನಂತರ ಬೇಕಾದ ಆಕಾರಕ್ಕೆ ಕತ್ತರಿಸಿ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ರಜೆ ಸಮಯದಲ್ಲಿ ಮಕ್ಕಳಿಗೆ ಅಥವಾ ಮನೆಯಲ್ಲಿರುವವರಿಗೆ ಏನು ಮಾಡುವುದು ಎಂಬುದೇ ತಲೆನೋವಾಗಿ ಪರಿಣಮಿಸುತ್ತದೆ. ವೀಕೆಂಡ್‌ ಬಂದರೆ ಮನೆಯಲ್ಲಿ ಹೊಸ ಹೊಸ ಅಡುಗೆ ರುಚಿ...

  • ಬೇಕಾಗುವ ಸಾಮಗ್ರಿ ಬಾಸ್ಮತಿ ಅಕ್ಕಿ- 1 ಕಪ್‌ ನುಣ್ಣಗೆ ಕತ್ತರಿಸಿದ ಮೆಂತೆ ಎಲೆ -2 ಕಪ್‌ ಕತ್ತರಿಸಿದ ಮಿಶ್ರಣ ತರಕಾರಿಗಳು: 1 ಕಪ್‌. ನೀರುಳ್ಳಿ- 1ರಿಂದ 2 ಶುಂಠಿ- 3 ಬೆಳ್ಳುಳ್ಳಿ-...

  • ಪೇಥಾ ಆಗ್ರಾದ ಪ್ರಸಿದ್ಧ ಸ್ವೀಟ್‌ ಆಗಿದ್ದು, ಇಲ್ಲಿಯ ಈ ಸ್ವೀಟ್‌ ಸವಿಯಲು ಜನರು ದೂರದ ಊರುಗಳಿಂದ ಬರುತ್ತಾರೆ. ಇದನ್ನು ಕೇವಲ ಅಂಗಡಿಗಳಲ್ಲಿ ಮಾತ್ರವಲ್ಲ ಮನೆಯಲ್ಲಿಯೂ...

  • ಬೇಕಾಗುವ ಸಾಮಗ್ರಿ ಹಸಿ ಮೆಣಸಿನ ಕಾಯಿ-2 ಬ್ರಾಹ್ಮಿ ಎಲೆ-1 ಕಪ್‌ ಉದ್ದಿನ ಬೇಳೆ-ಒಂದೂವರೆ ಚಮಚ ಹುಣಿಸೇ ಬೀಜ-ಸ್ವಲ್ಪ ಉಪ್ಪು-ರುಚಿಗೆ ತಕ್ಕಷ್ಟು ತೆಂಗಿನಕಾಯಿ-ಅರ್ಧ...

  • ಸಿಹಿ ತಿನಿಸು ಹಬ್ಬ, ಆಚರಣೆಯಲ್ಲಿ ಬಹಳ ಪ್ರಾಮುಖ್ಯತೆ ಪಡೆದಿದೆ. ಸಾಮಾನ್ಯವಾಗಿ ಪಾಯಸ, ಹೋಳಿಗೆ ಹಬ್ಬದ ವಿಶೇಷ ಅಡುಗೆ ಪಟ್ಟಿಯಲ್ಲಿ ಸೇರಿದ್ದು ಏನಾದರೂ ಹೊಸತು ಹಬ್ಬದೂಟಕ್ಕೆ...

ಹೊಸ ಸೇರ್ಪಡೆ